< 1 Samuel 22 >
1 Daudi nowuok Gath moringo odhi e rogo mar Adulam. Kane owetene kod joodgi duto owinjo wachno, negidhi ire kuno.
೧ದಾವೀದನು ಅಕೀಷ ರಾಜನಿಂದ ತಪ್ಪಿಸಿಕೊಂಡು ಅದುಲ್ಲಾಮ್ ಎಂಬ ಗವಿಗೆ ಹೋದನು. ಈ ವರ್ತಮಾನವು ಅವನ ಅಣ್ಣಂದಿರಿಗೂ, ಬೇರೆ ಎಲ್ಲಾ ಸಂಬಂಧಿಕರಿಗೂ ಮುಟ್ಟಲಾಗಿ, ಅವರೂ ಬಂದು ಅವನನ್ನು ಸೇರಿಕೊಂಡರು.
2 Ji duto mane nigi chandruok kata mane nigi gowi kata nigi ngʼur moro amora nochokore modhi ire, mine obet jatendgi. Ne gin chwo madirom mia angʼwen mane ni kode.
೨ಇದಲ್ಲದೆ ಕುಗ್ಗಿದವರೂ, ಸಾಲಗಾರರೂ, ಮನನೊಂದವರೂ, ಆಗಿರುವ ಸರ್ವಜನರೂ ಬಂದು ಅವನನ್ನು ಆಶ್ರಯಿಸಿಕೊಳ್ಳಲು, ಅವನು ಸುಮಾರು ನಾನೂರು ಜನರಿಗೆ ನಾಯಕನಾದನು.
3 Ka Daudi noa kanyo nodhi Mizpa e piny Moab mowachone ruoth Moab niya, “Bende diyie mondo wuora gi minwa obi odag kodi nyaka angʼe gima Nyasaye biro timona?”
೩ಅನಂತರ ದಾವೀದನು ತನ್ನ ತಂದೆತಾಯಿಗಳನ್ನು ಮೋವಾಬ್ ದೇಶದ ಮಿಚ್ಪೆ ಎಂಬಲ್ಲಿಗೆ ಕರೆದುಕೊಂಡು ಹೋಗಿ ಅಲ್ಲಿಯ ಅರಸನಿಗೆ, “ದೇವರು ನನಗೆ ಮಾರ್ಗತೋರಿಸುವವರೆಗೆ ನನ್ನ ತಂದೆತಾಯಿಗಳು ನಿನ್ನ ಬಳಿಯಲ್ಲಿರುವುದಕ್ಕೆ ಅಪ್ಪಣೆಯಾಗಬೇಕು” ಎಂದು ಬೇಡಿಕೊಂಡು, ಅವರನ್ನು ಅವನ ಬಳಿಯಲ್ಲಿ ಬಿಟ್ಟನು.
4 Omiyo noweyogi gi ruodh Moab mine gidak kode e ndalo duto mane Daudi ni kar pondo.
೪ದಾವೀದನು ದುರ್ಗದಲ್ಲಿದ್ದ ಕಾಲವೆಲ್ಲಾ ಅವನ ತಂದೆತಾಯಿಗಳು ಈ ಅರಸನ ಬಳಿಯಲ್ಲಿ ವಾಸವಾಗಿದ್ದರು.
5 Janabi Gad nowachone Daudi niya, “We dak kar pondo, dhi e piny Juda.” Omiyo Daudi nowuok modhi e bungu man Hereth.
೫ಗಾದ್ ಪ್ರವಾದಿಯು ದಾವೀದನಿಗೆ, “ನೀನು ಈ ದುರ್ಗದಲ್ಲಿರಬಾರದು, ಇದನ್ನು ಬಿಟ್ಟು ಯೆಹೂದ ದೇಶಕ್ಕೆ ಹೋಗು” ಎಂದು ಹೇಳಿದ್ದರಿಂದ ಅವನು ಹೆರೆತ್ ಅರಣ್ಯಕ್ಕೆ ಹೋದನು.
6 Koro Saulo nowinjo ni osefweny kuma Daudi gi joge nitie. To Saulo noyudo obet piny e tiend yath moro ewi got man Gibea kotingʼo tongʼ e lwete kolwore gi jodonge.
೬ಒಂದು ದಿನ ಸೌಲನು ತನ್ನ ಎಲ್ಲಾ ಪರಿವಾರದವರ ನಡುವೆ ಕೈಯಲ್ಲಿ ಬರ್ಜಿಯನ್ನು ಹಿಡಿದುಕೊಂಡು, ಗಿಬೆಯ ಗುಡ್ಡದ ಪಿಚುಲ ವೃಕ್ಷದ ಕೆಳಗೆ ಕುಳಿತುಕೊಂಡಿರಲು ದಾವೀದನೂ ಅವನ ಜನರೂ ಅಡಗಿಕೊಂಡಿರುವ ಸ್ಥಳವು ತಿಳಿದುಬಂದಿದೆ ಎಂಬ ಸುದ್ದಿಯು ಅವನಿಗೆ ಮುಟ್ಟಿತು.
7 Saulo nowachonegi niya, “Winjuru, un jo-Benjamin! Bende wuod Jesse nomiu puothe gi puoth mzabibu? Bende enoketu jotend jolweny alufe kata jatend jolweny miche?
೭ಆಗ ಅವನು ತನ್ನ ಸುತ್ತಲೂ ನಿಂತಿದ್ದ ಪರಿವಾರದವರಿಗೆ, “ಬೆನ್ಯಾಮೀನನ ಮಕ್ಕಳೇ ಕೇಳಿರಿ. ನೀವೆಲ್ಲರೂ ನನಗೆ ಒಳಸಂಚು ಮಾಡುವುದೇಕೆ? ಇಷಯನ ಮಗನು ನಿಮ್ಮೆಲ್ಲರಿಗೂ ಹೊಲಗಳನ್ನು, ದ್ರಾಕ್ಷಿತೋಟಗಳನ್ನು ಕೊಡುವನೋ? ಎಲ್ಲರನ್ನು ಸಹಸ್ರಾಧಿಪತಿಗಳನ್ನಾಗಲಿ, ಶತಾಧಿಪತಿಗಳನ್ನಾಗಲಿ ಮಾಡುವನೋ?
8 Kare mano emomiyo uduto useriworuna? Onge ngʼato angʼata manyisa ka wuoda timo singruok gi wuod Jesse. Onge ngʼama dewo gima timorena kata manyisa ni wuoda osethuwo jatija mondo obutna ka rita kaka koro otimoni.”
೮ನನ್ನ ಮಗನು ಇಷಯನ ಮಗನೊಡನೆ ಒಡಂಬಡಿಕೆ ಮಾಡಿಕೊಂಡದ್ದನ್ನು ನಿಮ್ಮಲ್ಲಿ ಒಬ್ಬನಾದರೂ ನನಗೆ ತಿಳಿಸಲಿಲ್ಲವಲ್ಲಾ. ನನ್ನ ಸೇವಕನು ನನಗೆ ವಿರೋಧವಾಗಿ ಒಳಸಂಚುಮಾಡುವ ಹಾಗೆ ನನ್ನ ಮಗನೇ, ಅವನನ್ನು ಎಬ್ಬಿಸಿದ್ದಾನೆಂಬುದನ್ನು ಒಬ್ಬನಾದರೂ ನನಗೆ ಯಾಕೆ ತಿಳಿಸಲಿಲ್ಲ? ನೀವು ನನ್ನ ಚಿಂತೆಯನ್ನೇ ಬಿಟ್ಟಿದ್ದೀರಿ” ಅಂದನು
9 Eka Doeg ja-Edom, manoyudo ochungʼ gi jodong Saulo, nowacho niya, “Ne aneno ka wuod Jesse odhi ir Ahimelek wuod Ahitub man Nob.
೯ಆಗ ಸೌಲನ ಸೇವಕರ ಬಳಿಯಲ್ಲಿ ನಿಂತಿದ್ದ ಎದೋಮ್ಯನಾದ ದೋಯೇಗನು, “ಇಷಯನ ಮಗನು ನೋಬದಲ್ಲಿರುವ ಅಹೀಟೂಬನ ಮಗನಾದ ಅಹೀಮೆಲೆಕನ ಬಳಿಗೆ ಬಂದದ್ದನ್ನು ಕಂಡೆನು.
10 Ahimelek nopenjone wach kuom Jehova Nyasaye, nomiye chiemo bende gi ligangla mar Goliath ja-Filistia.”
೧೦ಅವನು ಇವನಿಗೆ ಯೆಹೋವನ ಚಿತ್ತವನ್ನು ತಿಳಿಸಿ, ಆಹಾರವನ್ನೂ, ಫಿಲಿಷ್ಟಿಯನಾದ ಗೊಲ್ಯಾತನ ಕತ್ತಿಯನ್ನೂ ಕೊಟ್ಟನು” ಎಂದು ಹೇಳಿದನು.
11 Eka ruoth nooro joote mondo oom Ahimelek jadolo ma wuod Ahitub kaachiel gi joodgi duto, mane gin jodolo e Nob, kendo giduto negibiro ir ruoth.
೧೧ಕೂಡಲೆ ಸೌಲನು ಅಹೀಟೂಬನ ಮಗನೂ ಯಾಜಕನೂ ಆಗಿದ್ದ ಅಹೀಮೆಲೆಕನನ್ನೂ, ಅವನ ಕುಟುಂಬಕ್ಕೆ ಸೇರಿದ ನೋಬದ ಬೇರೆ ಎಲ್ಲಾ ಯಾಜಕರೊಡನೆ ಕರೆದುಕೊಂಡು ಬರುವಂತೆ ಕಳುಹಿಸಿದನು. ಅವರೆಲ್ಲರೂ ಅರಸನ ಸನ್ನಿಧಿಗೆ ಬರಲು,
12 Saulo nowacho niya, “Koro winji wuod Ahitub.” Nodwoke niya, “Ruodha awinjo.”
೧೨ಸೌಲನು, “ಅಹೀಟೂಬನ ಮಗನೇ ಕೇಳು” ಅಂದನು. ಅದಕ್ಕೆ ಅವನು, “ಒಡೆಯಾ ಅಪ್ಪಣೆಯಾಗಲಿ” ಎಂದು ಉತ್ತರಕೊಟ್ಟನು.
13 Saulo nopenje niya, “Marangʼo useriworuna, in kod wuod Jesse, ka imiye makati, kod ligangla kendo ka ipenjone wach kuom Nyasaye, mi koro osengʼanyona kendo obuto korita, mana kaka otimo kawuononi?”
೧೩ಆಗ ಸೌಲನು ಅವನಿಗೆ, “ನೀನು ನನಗೆ ವಿರೋಧವಾಗಿ ಇಷಯನ ಮಗನೊಡನೆ ಒಳಸಂಚುಮಾಡಿದ್ದೇಕೆ? ಅವನು ನನಗೆ ವಿರೋಧವಾಗಿ ಎದ್ದು ನನ್ನ ಜೀವಕ್ಕಾಗಿ ಹೊಂಚುಹಾಕುವಂತೆ ನೀನು ಅವನಿಗೆ ರೊಟ್ಟಿಕತ್ತಿಗಳನ್ನು ಕೊಟ್ಟು, ದೈವೋತ್ತರವನ್ನು ತಿಳಿಸಿದ್ದೇಕೆ?” ಎಂದು ಕೇಳಿದನು
14 Ahimelek nodwoko ruoth niya, “Ere ngʼat ma ja-adiera kuom jotiji duto machal gi Daudi ori ma jatend joma riti, kendo mogen moloyo e odi mangima?
೧೪ಅವನು, “ನಿನ್ನ ಎಲ್ಲಾ ಸೇವಕರಲ್ಲಿ ಅರಸನ ಅಳಿಯನಾಗಿರುವ ದಾವೀದನಂತೆ ನಂಬಿಗಸ್ತನಾದವನು ಯಾವನಿದ್ದಾನೆ? ಅವನು ನಿನ್ನ ಆಲೋಚಕರಲ್ಲೊಬ್ಬನು, ನಿನ್ನ ಮನೆಯಲ್ಲಿ ಗೌರವಸ್ಥನೂ ಆಗಿದ್ದನಲ್ಲವೇ?
15 Iparo ni mano e odiechiengʼ mokwongo mapenjonee Nyasaye wach? Ooyo ok en kamano! Ruoth kik iketne jatichni bura kata joodgi bura, nikech jatichni ok ongʼeyo gima dhi nyime ka.”
೧೫ನಾನು ಅವನಿಗೋಸ್ಕರ ದೇವರ ಸನ್ನಿಧಿಯಲ್ಲಿ ವಿಚಾರಮಾಡಿದ್ದು ಇದೇ ಮೊದಲನೆಯ ಸಾರಿಯೋ? ಇದು ನನಗೆ ದೂರವಾಗಿರಲಿ. ಅರಸನು ತನ್ನ ಸೇವಕರ ಮೇಲೆ ಅವನ ಮನೆಯವರ ಮೇಲೆ ಇಂಥ ಮಾತನ್ನು ಹೊರಿಸಬಾರದು. ಈ ವಿಷಯದಲ್ಲಿ ನಿನ್ನ ಸೇವಕನಿಗೆ ಸ್ವಲ್ಪವೂ ಗೊತ್ತಿರಲಿಲ್ಲ” ಎಂದು ಉತ್ತರ ಕೊಟ್ಟನು.
16 To ruoth nowacho niya, “Nyaka itho, in Ahimelek gi joodu duto.”
೧೬ಆಗ ಅರಸನು ಅವನಿಗೆ, “ಅಹೀಮೆಲೆಕನೇ ನೀನೂ ನಿನ್ನ ಮನೆಯವರೂ ಸಾಯಲೇ ಬೇಕು” ಎಂದು ಹೇಳಿ ತನ್ನ ಬಳಿಯಲ್ಲಿದ್ದ
17 Eka ruoth nowachone joritne mane ni bute niya, “Lokreuru mondo uneg jodolo mag Jehova Nyasaye, nikech gisedok jokor Daudi. Negingʼeyo ni oringo to negitamore nyisa.” To jodong ruoth ne ok oyie mondo gineg jodolo mag Jehova Nyasaye.
೧೭ಸಿಪಾಯಿಗಳಿಗೆ, “ನೀವು ಯೆಹೋವನ ಈ ಯಾಜಕರನ್ನು ಕೊಲ್ಲಿರಿ. ದಾವೀದನು ಓಡಿಹೋದದ್ದು ಗೊತ್ತಿದ್ದರೂ ನನಗೆ ತಿಳಿಸದೇ ಅವನಿಗೆ ಸಹಾಯ ಮಾಡಿದ್ದಾರೆ” ಎಂದು ಹೇಳಿ ಅವರನ್ನು ಕೊಲ್ಲಲು ಆಜ್ಞಾಪಿಸಿದನು. ಆದರೆ ಅರಸನ ಸಿಪಾಯಿಗಳು ಯಾಜಕರ ಮೇಲೆ ಕೈಹಾಕುವುದಕ್ಕೆ ಮನಸ್ಸು ಮಾಡಲಿಲ್ಲ.
18 Omiyo ruoth nochiko Doeg niya, “Lokri mondo ineg jodolo.” Omiyo Doeg ja-Edom nonegogi. Chiengʼno nonego joma orwako lewni mayom mag dolo miluongo ni efod maromo ji piero aboro gabich.
೧೮ಆದ್ದರಿಂದ ಸೌಲನು ಎದೋಮ್ಯನಾದ ದೋಯೇಗನಿಗೆ, “ನೀನು ಹೋಗಿ ಅವರನ್ನು ಕೊಲ್ಲು” ಎಂದು ಆಜ್ಞಾಪಿಸಲು, ಅವನು ನಾರು ಬಟ್ಟೆಯ ಎಪೋದನ್ನು ಧರಿಸಿಕೊಂಡಿದ್ದ ಎಂಭತ್ತೈದು ಯಾಜಕರನ್ನು ಆ ದಿನ ಕೊಂದುಹಾಕಿದನು.
19 Eka nodhi Nob, e dala mar jodolo kendo kanyo nonegoe chwo, mon, nyithindo nyaka madhoth, dhok, punde kod rombe. Magi duto nonego gi ligangla.
೧೯ಅನಂತರ ಅವನು ಯಾಜಕರ ಪಟ್ಟಣವಾದ ನೋಬಕ್ಕೆ ಹೋಗಿ ಅಲ್ಲಿನ ಸ್ತ್ರೀಪುರುಷರನ್ನೂ, ಶಿಶುಬಾಲಕರನ್ನೂ ದನ, ಕುರಿ, ಕತ್ತೆಗಳನ್ನು, ಕತ್ತಿಯಿಂದ ಸಂಹರಿಸಿದನು.
20 To Abiathar wuod Ahimelek ma wuod Ahitub notony moringo odhi ir Daudi.
೨೦ಅಹೀಟೂಬನ ಮಗನಾದ ಅಹೀಮೆಲೆಕನ ಮಕ್ಕಳಲ್ಲೊಬ್ಬನಾದ ಎಬ್ಯಾತಾರನೆಂಬುವನು ತಪ್ಪಿಸಿಕೊಂಡು ದಾವೀದನ ಬಳಿಗೆ ಓಡಿಬಂದು,
21 Abiathar nonyiso Daudi ni Saulo osenego jodolo mag Jehova Nyasaye.
೨೧ಸೌಲನು ಯೆಹೋವನ ಯಾಜಕರನ್ನು ಕೊಲ್ಲಿಸಿದ ಸಂಗತಿಯನ್ನು ಅವನಿಗೆ ತಿಳಿಸಿದನು.
22 Eka Daudi nowachone Abiathar niya, “E odiechiengʼno ka Doeg ja-Edom ne ni kanyo ne angʼeyo adier ni nyaka ne onyis Saulo. An ema akelo tho ne joka wuonu duto.
೨೨ದಾವೀದನು ಎದೋಮ್ಯನಾದ ದೋಯೇಗನನ್ನು, “ನಾನು ಅಲ್ಲಿ ಕಂಡಾಗಲೇ ಇವನು ಸೌಲನಿಗೆ ಹೇಗೂ ಈ ಸಂಗತಿಯನ್ನು ತಿಳಿಸುವನೆಂದು ತಿಳಿದುಕೊಂಡೆನು. ನಿನ್ನ ಸಂಬಂಧಿಕರ ಸಾವಿಗೆ ನಾನೇ ಕಾರಣನಾದೆನಲ್ಲಾ.
23 Bed koda ka; kik iluor; ngʼato madwaro negino an bende odwaro nega. Onge gima nohinyi ka in koda.”
೨೩ನೀನಾದರೋ ಹೆದರದೆ ನನ್ನ ಸಂಗಡ ಇರು. ನನ್ನ ಪ್ರಾಣವನ್ನು ತೆಗೆಯಬೇಕೆಂದಿರುವವನೇ ನಿನ್ನ ಪ್ರಾಣವನ್ನೂ ತೆಗೆಯಬೇಕೆಂದಿರುತ್ತಾನೆ. ನೀನು ನನ್ನ ಜೊತೆಯಲ್ಲಿರುವುದಾದರೆ ಸುರಕ್ಷಿತನಾಗಿರುವಿ” ಎಂದನು.