< 1 Ruodhi 11 >
1 Kata kamano Ruoth Solomon nohero nyi pinje mamoko mangʼeny; mane omedo bangʼ nyar Farao kaka nyi jo-Moab gi jo-Amon gi jo-Edom gi jo-Sidon kod nyi jo-Hiti.
೧ಅರಸನಾದ ಸೊಲೊಮೋನನು ಫರೋಹನ ಮಗಳನ್ನಲ್ಲದೆ ಮೋವಾಬ್ಯರು, ಅಮ್ಮೋನಿಯರು, ಎದೋಮ್ಯರು, ಚೀದೋನ್ಯರು ಮತ್ತು ಹಿತ್ತಿಯರು ಎಂಬ ಜನಾಂಗಗಳ ಸ್ತ್ರೀಯರನ್ನು ಮೋಹಿಸಿದನು.
2 Negia e ogendini mane Jehova Nyasaye okwero jo-Israel kawacho niya, “Kik ukendru kodgi, nikech adier ginilok chunyu ma uluw nyisechegi.” Kata kamano, Solomon nomoko kuomgi gihera.
೨ಯೆಹೋವನು ಈ ಜನಾಂಗಗಳ ವಿಷಯದಲ್ಲಿ ಇಸ್ರಾಯೇಲರಿಗೆ, “ನಿಮಗೂ ಅವರಿಗೂ ಕೊಡುವುದು ತೆಗೆದುಕೊಳ್ಳುವುದು ನಡೆಯಬಾರದು, ಅದು ನಡೆಯುವುದಾದರೆ ಅವರು ನಿಮ್ಮ ಮನಸ್ಸನ್ನು ತಮ್ಮ ದೇವತೆಗಳ ಕಡೆಗೆ ತಿರುಗಿಸಾರು” ಎಂದು ಆಜ್ಞಾಪಿಸಿದ್ದರೂ ಸೊಲೊಮೋನನು ಅವರ ಸ್ತ್ರೀಯರಲ್ಲಿ ಅನುರಕ್ತನಾಗಿದ್ದನು.
3 Ne en-gi mon mia abiriyo monywol e ut ruodhi kod mon moketo mia adek, kendo mondego nowite.
೩ಅವನಿಗೆ ರಾಜವಂಶದವರಾದ ಏಳುನೂರು ಮಂದಿ ಪತ್ನಿಯರಲ್ಲದೆ ಮುನ್ನೂರು ಜನರು ಉಪಪತ್ನಿಯರಿದ್ದರು. ಈ ಸ್ತ್ರೀಯರು ಅವನ ಮನಸ್ಸನ್ನು ಕೆಡಿಸಿಬಿಟ್ಟರು.
4 Kaka Solomon ne medo bedo moti, monde noloko chunye moluwo nyiseche mamoko kendo chunye ne ok ochiwore chuth ni Jehova Nyasaye ma Nyasache, kaka chuny Daudi wuon-gi ne en.
೪ಅವನು ವೃದ್ಧನಾದಾಗ ಇವರು ಅವನ ಹೃದಯವನ್ನು ಅನ್ಯದೇವತೆಗಳ ಕಡೆಗೆ ತಿರುಗಿಸಿದರು. ಈ ಕಾರಣದಿಂದ ಅವನು ತನ್ನ ದೇವರಾದ ಯೆಹೋವನಲ್ಲಿಟ್ಟಿದ್ದ ಪ್ರಾಮಾಣಿಕವಾದ ಭಕ್ತಿಯನ್ನು ಕಳೆದುಕೊಂಡನು. ತನ್ನ ತಂದೆಯಾದ ದಾವೀದನಂತೆ ನಡೆಯಲಿಲ್ಲ.
5 Noluwo nyasaye madhako mar jo-Sidon miluongo ni Ashtoreth kod nyasach dwanyruok mar jo-Amon miluongo ni Molek.
೫ಅವನು ಚೀದೋನ್ಯರ ಅಷ್ಟೋರೆತ್ ದೇವತೆಯನ್ನೂ, ಅಮ್ಮೋನಿಯರ ಮಿಲ್ಕೋಮ್ ಎಂಬ ಅಸಹ್ಯ ವಿಗ್ರಹವನ್ನು ಆರಾಧಿಸತೊಡಗಿ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು.
6 Omiyo Solomon notimo richo e nyim Jehova Nyasaye, ne ok oluwo Jehova Nyasaye gi chunye duto kaka Daudi wuon-gi notimo.
೬ಅವನ ತಂದೆಯಾದ ದಾವೀದನು ಪೂರ್ಣಮನಸ್ಸಿನಿಂದ ಯೆಹೋವನನ್ನು ಸೇವಿಸಿದಂತೆ ಅವನು ಸೇವಿಸಲಿಲ್ಲ.
7 Ewi got moro yo wuok chiengʼ mar Jerusalem, Solomon nogero kama otingʼore gi malo ni nyasach dwanyruok mar Moab miluongo ni Kemosh kod nyasach dwanyruok mar jo-Amon miluongo ni Molek.
೭ಅವನು ಯೆರೂಸಲೇಮಿನ ಮೂಡಲಲ್ಲಿರುವ ಗುಡ್ಡದಲ್ಲಿ ಮೋವಾಬ್ಯರ ಕೆಮೋಷ್ ಎಂಬ ಅಸಹ್ಯ ವಿಗ್ರಹಕ್ಕೂ ಮತ್ತು ಅಮ್ಮೋನಿಯರ ಮೋಲೆಕ್ ಎಂಬ ಅಸಹ್ಯ ವಿಗ್ರಹಕ್ಕೂ ಪೂಜಾಸ್ಥಳಗಳನ್ನು ಕಟ್ಟಿಸಿದನು.
8 Notimo kamano ni monde mag pinje mamoko mane wangʼo ubani kendo ne chiwo misango ni nyisechegigo.
೮ಈ ರೀತಿಯಾಗಿ ಅನ್ಯಜನಾಂಗಗಳಿಂದ ಬಂದ ತನ್ನ ಹೆಂಡತಿಯರು ತಮ್ಮ ದೇವತೆಗಳಿಗೆ ಧೂಪಹಾಕುವುದಕ್ಕೂ ಮತ್ತು ಯಜ್ಞವರ್ಪಿಸುವುದಕ್ಕೂ ಅನುಕೂಲ ಮಾಡಿಕೊಟ್ಟನು.
9 Jehova Nyasaye iye nowangʼ gi Solomon nikech chunye noselokore moa kuom Jehova Nyasaye Nyasach Israel mane osefwenyorene nyadiriyo.
೯ಇಸ್ರಾಯೇಲ್ ದೇವರಾದ ಯೆಹೋವನು ಸೊಲೊಮೋನನಿಗೆ ಎರಡು ಸಾರಿ ಕಾಣಿಸಿಕೊಂಡು,
10 Kata obedo ni notamo Solomon e luwo nyiseche mamoko Solomon ne ok orito chik Jehova Nyasaye.
೧೦ಅನ್ಯದೇವತೆಗಳನ್ನು ಸೇವಿಸಲೇ ಬಾರದೆಂದು ಆಜ್ಞಾಪಿಸಿದ್ದರೂ ಅವನು ಆತನ ಆಜ್ಞೆಗಳನ್ನು ಮೀರಿದ್ದರಿಂದ ಆತನು ಅವನ ಮೇಲೆ ಕೋಪಗೊಂಡನು.
11 Omiyo Jehova Nyasaye nowacho ni Solomon niya, “Nikech ma en pachi kendo ok iserito singruokna gi buchena mane achiki, chutho abiro pogo lochni kendo abiro miyo achiel kuom jotichni.
೧೧ಯೆಹೋವನು ಅವನಿಗೆ, “ನೀನು ಈ ರೀತಿಯಾಗಿ ಮಾಡಿ ನನ್ನ ವಿಧಿನಿಬಂಧನೆಗಳನ್ನು ಮೀರಿದ್ದರಿಂದ ನಿನ್ನ ರಾಜ್ಯವನ್ನು ನಿನ್ನಿಂದ ಕಿತ್ತುಕೊಂಡು ನಿನ್ನ ಸೇವಕನಿಗೆ ಕೊಡುವೆನು.
12 Kata kamano, ok abi time e kindeni, nikech Daudi wuonu. To abiro poge e kinde wuodi.
೧೨ಆದರೂ ನಾನು ನಿನ್ನ ತಂದೆಯಾದ ದಾವೀದನನ್ನು ನೆನಸಿ ನಿನ್ನ ಕಾಲದಲ್ಲಿ ಇದನ್ನು ಮಾಡುವುದಿಲ್ಲ. ನಿನ್ನ ಮಗನ ಕೈಯಿಂದ ಅದನ್ನು ಕಿತ್ತುಕೊಳ್ಳುವೆನು.
13 To ok anamaye pinyruoth duto, to abiro miye dhoot achiel nikech Daudi jatichna kendo nikech Jerusalem, ma aseyiero.”
೧೩ಆದರೆ ರಾಜ್ಯವನ್ನೆಲ್ಲಾ ಕಿತ್ತುಕೊಳ್ಳುವುದಿಲ್ಲ. ನನ್ನ ಸೇವಕನಾದ ದಾವೀದನಿಗೋಸ್ಕರವೂ ನಾನು ಆರಿಸಿಕೊಂಡ ಯೆರೂಸಲೇಮ್ ಪಟ್ಟಣಕ್ಕೋಸ್ಕರವೂ ನಿನ್ನ ಮಗನಿಗೆ ಒಂದು ಕುಲವನ್ನು ಉಳಿಸುವೆನು” ಎಂದು ಹೇಳಿದನು.
14 Eka Jehova Nyasaye nomiyo Solomon obedo gi jasigu ma ne en Hadad ja-Edom mane owuok e dhood joka ruoth mar Edom.
೧೪ಯೆಹೋವನು ಎದೋಮ್ಯನೂ, ರಾಜಪುತ್ರನೂ ಆದ ಹದದನನ್ನು ಸೊಲೊಮೋನನಿಗೆ ವಿರುದ್ಧವಾಗಿ ಎಬ್ಬಿಸಿದನು.
15 E kinde motelo kane Daudi kedo gi Edom, Joab mane jatend lweny mane odhi mondo oyik joma otho, nonego chwo duto mantie e Edom.
೧೫ದಾವೀದನಿಗೂ ಎದೋಮಿನವರಿಗೂ ಯುದ್ಧ ನಡೆಯುತ್ತಿರುವಾಗ ಸೇನಾಪತಿಯಾದ ಯೋವಾಬನು ಇಸ್ರಾಯೇಲ್ ಸರ್ವಸೈನ್ಯದೊಡನೆ ಅಲ್ಲಿಗೆ ಹೋಗಿ, ಹತರಾದ ಇಸ್ರಾಯೇಲರನ್ನು ಸಮಾಧಿಮಾಡಿದನು.
16 Joab kod jo-Israel duto nobedo kuno kuom dweche auchiel, nyaka negitieko chwo duto Edom.
೧೬ಯೋವಾಬನು ಮತ್ತು ಎಲ್ಲಾ ಇಸ್ರಾಯೇಲರು ಆರು ತಿಂಗಳು ಅಲ್ಲಿಯೇ ಇದ್ದು, ಎದೋಮ್ಯರ ಎಲ್ಲಾ ಗಂಡಸರನ್ನು ಸಂಹರಿಸಿದರು.
17 To Hadad, mane pod rawera matin, noringo odhi Misri gi jodong Edom moko, mane osetiyo ni wuon-gi.
೧೭ಆ ಸಮಯದಲ್ಲಿ ಬಾಲಕನಾದ ಹದದನು ತನ್ನ ತಂದೆಯ ಸೇವಕರಾದ ಕೆಲವು ಜನರು ಎದೋಮ್ಯರ ಜೊತೆಯಲ್ಲಿ ಐಗುಪ್ತಕ್ಕೆ ಓಡಿಹೋಗಬೇಕೆಂದು ಹೊರಟನು.
18 Ne giwuok Midian kendo negidhi Paran. Bangʼ kawo chwo mag Paran kodgi negidhi Misri, ir Farao ruodh Misri, mane omiyo Hadad ot gi lowo kod chiemo.
೧೮ಅವರು ಮೊದಲು ಮಿದ್ಯಾನಿಗೂ, ಆ ಮೇಲೆ ಪಾರಾನಿಗೂ ಬಂದರು. ಅಲ್ಲಿಂದ ಕೆಲವು ಜನರು ಪಾರಾನಿನ ಜನರನ್ನು ತಮ್ಮ ಜೊತೆಯಲ್ಲಿ ಕರೆದುಕೊಂಡು ಐಗುಪ್ತದ ಅರಸನಾದ ಫರೋಹನ ಬಳಿಗೆ ಬಂದರು. ಫರೋಹನು ಹದದನಿಗೆ ಆಹಾರವನ್ನು, ಮನೆಯನ್ನೂ ಮತ್ತು ಭೂಮಿಯನ್ನೂ ಕೊಟ್ಟನು.
19 Farao ne mor ahinya gi Hadad, omiyo nokawo nyamin Tapenes ma en ruoth madhako kendo ma jaod Farao mondo obed chiege.
೧೯ಹದದನು ಫರೋಹನ ವಿಶೇಷ ದಯೆಗೆ ಪಾತ್ರನಾದುದರಿಂದ ಫರೋಹನನು ತನ್ನ ಹೆಂಡತಿಯೂ ರಾಣಿಯೂ ಆದ ತಖ್ಪೆನೇಸ್ ಎಂಬಾಕೆಯ ತಂಗಿಯನ್ನು ಅವನಿಗೆ ಮದುವೆಮಾಡಿಕೊಟ್ಟನು.
20 Nyamin Tapenes nonywolone wuowi miluongo ni Genubath mane Tapenes opidho e dala ruoth maduongʼ. Kanyo Genubath nodak gi nyithind Farao.
೨೦ಆಕೆಯಲ್ಲಿ ಅವನಿಗೆ ಗೆನುಬತ್ ಎಂಬ ಮಗನು ಹುಟ್ಟಿದನು. ತಖ್ಪೆನೆಸಳು ಈ ಹುಡುಗನನ್ನು ಫರೋಹನ ಮನೆಯಲ್ಲೇ ಸಾಕಿದಳು. ಅಲ್ಲಿ ಅವನು ಫರೋಹನ ಕುಮಾರರ ಜೊತೆಯಲ್ಲಿದ್ದನು.
21 Kane ne en Misri, Hadad nowinjo ni Daudi noyweyo gi kwerene kendo ni Joab jatend jolweny bende nosetho. Eka Hadad nowachone Farao niya, “We adhi mondo adogi e pinywa.”
೨೧ದಾವೀದನು ಪೂರ್ವಿಕರ ಬಳಿಗೆ ಸೇರಿದನೆಂದೂ ಸೇನಾಧಿಪತಿಯಾದ ಯೋವಾಬನು ಮೃತನಾದನೆಂದೂ ಐಗುಪ್ತದಲ್ಲಿದ್ದ ಹದದನು ಕೇಳಿ ಫರೋಹನನಿಗೆ, “ನಾನು ಸ್ವದೇಶಕ್ಕೆ ಹೋಗಬೇಕೆಂದಿರುತ್ತೇನೆ, ನನಗೆ ಅಪ್ಪಣೆ ಕೊಡು” ಅಂದನು.
22 To Farao nopenje niya, “Angʼo michando kae momiyo idwaro dok e pinyu?” Hadad to nodwoke niya, “Onge, to yie iweya aweya adhi!”
೨೨ಫರೋಹನು ಅವನನ್ನು, “ನನ್ನ ಬಳಿಯಲ್ಲಿ ನೀನಗೇನು ಕೊರತೆಯಾಯಿತು. ಸ್ವದೇಶಕ್ಕೆ ಹೋಗಬೇಕೆಂದು ಯಾಕೆ ಬಯಸುತ್ತೀ?” ಎಂದು ಕೇಳಿದನು. ಅದಕ್ಕೆ ಹದದನು, “ಏನೂ ಕೊರತೆಯಾಗಿರುವುದಿಲ್ಲ. ಆದರೂ ನನಗೆ ಹೋಗುವುದಕ್ಕೆ ಅಪ್ಪಣೆಯಾಗಬೇಕು” ಎಂದು ಕೇಳಿಕೊಂಡನು.
23 Kendo Nyasaye nochako omiyo Rezon wuod Eliada mane oringo oa ir ruodhe ma Hadadezer ruoth Zoba obedo jasik Solomon.
೨೩ದೇವರು ಸೊಲೊಮೋನನಿಗೆ ವಿರೋಧವಾಗಿ ಎಬ್ಬಿಸಿದ ಎರಡನೆಯ ವೈರಿಯು ಎಲ್ಯಾದಾವನ ಮಗನಾದ ರೆಜೋನ್ ಎಂಬುವನು.
24 Nochoko chwo ire kendo nobedo jatend oganda kane Daudi tieko jolweny Zoba. Ogandago nodhi Damaski kuma negidakie mi giloche.
೨೪ದಾವೀದನು ಚೋಬದವರನ್ನು ಸಂಹರಿಸಿದಾಗ ಅವನು ಚೋಬದ ಅರಸನೂ ಒಡೆಯನೂ ಆದ ಹದದೆಜೆರನನ್ನು ಬಿಟ್ಟು ಓಡಿಹೋಗಿ ಕೆಲವು ಜನರನ್ನು ಕೂಡಿಸಿಕೊಂಡು ತಾನು ಅವರ ನಾಯಕನಾಗಿ ಅವರೊಡನೆ ದಮಸ್ಕಕ್ಕೆ ಬಂದು ಅಲ್ಲಿ ಅರಸನಾದನು.
25 E kinde ngima Solomon duto Rezon nobedo jasik Israel, komedore gi chandruok mane Hadad okelo. Kamano Rezon nobedo ruodh Aram kendo noger gi jo-Israel.
೨೫ಸೊಲೊಮೋನನ ಜೀವಮಾನದಲ್ಲೆಲ್ಲಾ ಇಸ್ರಾಯೇಲರಿಗೆ ಮಹಾಬಾಧಕನಾದ ಹದದನಲ್ಲದೆ ಅವನೂ ವೈರಿಯಾಗಿದ್ದನು. ಅವನು ಅರಾಮ್ ದೇಶದಲ್ಲಿ ಆಳುವವನಾಗಿ ಇಸ್ರಾಯೇಲರನ್ನು ಬಹಳವಾಗಿ ದ್ವೇಷಿಸಿದನು.
26 Jeroboam wuod Nebat ma ja-Efraim moa Zereda kendo ma min mare niluongo ni Zeruya ne en dhako ma chwore otho bende nongʼanyo ni ruoth. Ne en achiel kuom jodong Solomon.
೨೬ಅರಸನಾದ ಸೊಲೊಮೋನನಿಗೆ ವಿರುದ್ಧವಾಗಿ ಎದ್ದವರಲ್ಲಿ ಅವನ ಸೇವಕನೂ ಚರೇದ ಊರಿನ ಎಫ್ರಾಯೀಮ್ಯನಾದ ನೆಬಾಟನ ಮಗನಾದ ಯಾರೊಬ್ಬಾಮನೆಂಬವನು ಮತ್ತೊಬ್ಬನು. ಚೆರೂಗಳೆಂಬ ವಿಧವೆಯು ಅವನ ತಾಯಿ.
27 Ma e kaka nongʼanyo ni ruoth: Solomon nosegero ohinga kendo nosedino otuchi duto mane ni e kor ohinga e dala maduongʼ Daudi wuon-gi
೨೭ಅವನು ತಿರುಗಿ ಬಿದ್ದದ್ದು ಹೇಗೆಂದರೆ, ಸೊಲೊಮೋನನು ಮಿಲ್ಲೋ ಕೋಟೆಯನ್ನು ಕಟ್ಟಿಸಿ ತನ್ನ ತಂದೆಯಾದ ದಾವೀದನ ಪಟ್ಟಣದ ದುರ್ಬಲ ಸ್ಥಳಗಳನ್ನು ಭದ್ರಪಡಿಸುತ್ತಿರುವಾಗ,
28 Koro Jeroboam ne en ngʼat momi luor kendo kane Solomon oneno kaka ngʼat matin-no timo tichne maber, nokete jatend jotich duto ma od Josef.
೨೮ಯೌವನಸ್ಥನಾದ ಯಾರೊಬ್ಬಾಮನು ಬಹು ಸಾಮರ್ಥ್ಯದಿಂದ ಕೆಲಸಮಾಡುತ್ತಿರುವುದನ್ನು ಕಂಡು ಅವನನ್ನು ಯೋಸೇಫ್ಯರ ಎಲ್ಲಾ ಆಳುಗಳ ಮೇಲೆ ಮೇಸ್ತ್ರಿಯನ್ನಾಗಿ ನೇಮಿಸಿದನು.
29 E kindeno Jeroboam ne dhi oko mar Jerusalem kendo Ahija janabi moa Shilo noromo kode e yo korwako law manyien: Kargi ji ariyogo ne gin kendgi oko mar dala,
೨೯ಒಂದು ದಿನ ಯಾರೊಬ್ಬಾಮನು ಯೆರೂಸಲೇಮಿನಿಂದ ಎಲ್ಲಿಗೋ ಹೋಗುತ್ತಿರುವಾಗ ಅಡವಿಯಲ್ಲಿ ಶಿಲೋವಿನವನಾದ ಅಹೀಯನೆಂಬ ಪ್ರವಾದಿಯು ಅವನಿಗೆ ಎದುರಾದನು. ಅವನು ಹೊಸ ಬಟ್ಟೆಯನ್ನು ಹೊದ್ದುಕೊಂಡಿದ್ದನು. ಅಲ್ಲಿ ಇವರಿಬ್ಬರ ಹೊರತಾಗಿ ಬೇರೆ ಯಾರೂ ಇರಲಿಲ್ಲ.
30 kendo Ahija nokawo law mane orwako moyieche nyadipar gariyo.
೩೦ಆಗ ಅಹೀಯನು ತಾನು ಹೊದ್ದುಕೊಂಡಿದ್ದ ಹೊಸ ಬಟ್ಟೆಯನ್ನು ತೆಗೆದುಕೊಂಡು ಹರಿದು ಹನ್ನೆರಡು ತುಂಡು ಮಾಡಿದನು.
31 Eka nowacho ni Jeroboam niya, “Kaw migepe apar obed magi nikech ma e gima Jehova Nyasaye Nyasach Israel wacho: ‘Ne adhi pogo loch Solomon kendo adhi miyi dhoudi apar.
೩೧ಅವನು ಯಾರೊಬ್ಬಾಮನಿಗೆ, “ನೀನು ಇವುಗಳಲ್ಲಿ ಹತ್ತು ತುಂಡುಗಳನ್ನು ತೆಗೆದುಕೋ. ಇಸ್ರಾಯೇಲ್ ದೇವರಾದ ಯೆಹೋವನು ರಾಜ್ಯವನ್ನು ಸೊಲೊಮೋನನಿಂದ ಕಿತ್ತುಕೊಂಡು,
32 To nikech Daudi jatichna kod dala mar Jerusalem maseyiero e kind dhoudi duto mag Israel, obiro bedo gi dhoot achiel.
೩೨ತನ್ನ ಸೇವಕನಾದ ದಾವೀದನ ನಿಮಿತ್ತವಾಗಿಯೂ, ತಾನು ಇಸ್ರಾಯೇಲರ ಎಲ್ಲಾ ಕುಲಗಳಿಂದ ಆರಿಸಿಕೊಂಡ ಯೆರೂಸಲೇಮ್ ಪಟ್ಟಣದ ನಿಮಿತ್ತವಾಗಿಯೂ ಅವನಿಗೆ ಒಂದೇ ಕುಲವನ್ನು ಉಳಿಸಿ, ಬೇರೆ ಹತ್ತು ಕುಲಗಳನ್ನು ನಿನಗೆ ಕೊಡುತ್ತೇನೆ” ಎಂದು ಹೇಳುತ್ತಾನೆ.
33 Abiro timo gini nikech gisejwangʼa mi gilamo Ashtoreth nyasaye madhako mar jo-Sidon gi Kemosh nyasach jo-Moab kod Molek nyasach jo-Amon kendo ok gisewuotho e yorena; kata timo gima kare e nyima, kata rito buchena kod chikena kaka Daudi, wuon Solomon notimo.
೩೩ಇದಲ್ಲದೆ ಆತನು ನಿನಗೆ, “ಸೊಲೊಮೋನನೂ ಅವರ ಮನೆಯವರೂ ನನ್ನನ್ನು ಬಿಟ್ಟು ಚೀದೋನ್ಯರ ದೇವತೆಯಾದ ಅಷ್ಟೋರೆತ್, ಮೋವಾಬ್ಯರ ದೇವತೆಯಾದ ‘ಕೆಮೋಷ್’ ಮತ್ತು ಅಮ್ಮೋನಿಯರ ‘ಮಿಲ್ಕೋಮ್’ ಇವುಗಳನ್ನು ಆರಾಧಿಸಿದ್ದೂ ಮತ್ತು ಅವರ ತಂದೆಯಾದ ದಾವೀದನು ನನ್ನ ನೇಮವಿಧಿಗಳನ್ನು ಕೈಕೊಂಡು ನನ್ನನ್ನು ಮೆಚ್ಚಿಸಿ ನಡೆದಂತೆ ಅವರು ನಡೆಯದೆ ಹೋದದ್ದೇ ಇದಕ್ಕೆ ಕಾರಣ.
34 “‘To ok anagol loch duto e lwet Solomon, asekete jatelo ndalo duto mag ngimane nikech Daudi jatichna, mane ayiero kendo mane orito chikena kod buchena.
೩೪ಆದರೂ ನಾನು ಸೊಲೊಮೋನನ ಕೈಯಿಂದ ರಾಜ್ಯವನ್ನೆಲ್ಲಾ ಕಿತ್ತುಕೊಳ್ಳುವುದಿಲ್ಲ. ನನ್ನ ಆಜ್ಞಾವಿಧಿಗಳನ್ನು ಕೈಕೊಂಡವನೂ, ನಾನು ಆರಿಸಿಕೊಂಡ ಸೇವಕನೂ ಆದ ದಾವೀದನ ನಿಮಿತ್ತವಾಗಿ ಅವನನ್ನು ಅವನ ಜೀವಮಾನದಲ್ಲೆಲ್ಲಾ ಅರಸನನ್ನಾಗಿಯೇ ಇರಿಸುವೆನು.
35 Abiro kawo loch e lwet wuode kendo anamiyi dhoudi apar.
೩೫ಆದರೆ ಅದನ್ನು ಅವನ ಮಗನ ಕೈಯಿಂದ ಕಿತ್ತುಕೊಂಡು ನಿನಗೆ ಹತ್ತು ಕುಲಗಳನ್ನು ಕೊಡುವೆನು.
36 Abiro miyo wuode dhoot achiel mondo Daudi jatichna obed gi taya e nyima ndalo duto e Jerusalem, dala maduongʼ mane ayiero mondo aketie Nyinga.
೩೬ನಾನು ನನ್ನ ಹೆಸರಿಗೋಸ್ಕರ ಆರಿಸಿಕೊಂಡ ಯೆರೂಸಲೇಮ್ ಪಟ್ಟಣದಲ್ಲಿ ನನ್ನ ಸೇವಕನಾದ ದಾವೀದನ ದೀಪವು ನನ್ನ ಸನ್ನಿಧಿಯಲ್ಲಿ ಉರಿಯುತ್ತಲೇ ಇರುವಂತೆ ಅವನ ಮಗನಿಗೆ ಒಂದು ಕುಲವನ್ನು ಉಳಿಸುವೆನು.
37 Kata kamano, nikech in, abiro kawi kendo ibiro locho kuom mago duto ma chunyi dwaro, ibiro bedo ruoth kuom Israel.
೩೭ನಾನು ನಿನ್ನನ್ನು ಇಸ್ರಾಯೇಲರ ಅರಸನನ್ನಾಗಿ ನೇಮಿಸುವೆನು. ನೀನು ಅವರನ್ನು ನಿನ್ನ ಇಷ್ಟದ ಪ್ರಕಾರ ಆಳಬಹುದು.
38 Kitimo duto machiki kendo iwuotho e yorena mitimo gima kare e nyima kirito buchena kod chikena, kaka Daudi jatichna notimo, to abiro bedo kodi. Abiro geroni anywola mosiko kaka nagero ni Daudi kendo anamiyi Israel.
೩೮ನನ್ನ ಸೇವಕನಾದ ದಾವೀದನು ನನ್ನ ಆಜ್ಞಾವಿಧಿಗಳನ್ನು ಕೈಕೊಂಡಂತೆ ನೀನೂ ನನ್ನ ಆಜ್ಞೆಗಳನ್ನು ಕೈಕೊಂಡು ನನ್ನ ಮಾರ್ಗದಲ್ಲಿ ನಡೆದು ನನ್ನನ್ನು ಮೆಚ್ಚಿಸುವುದಾದರೆ ನಾನು ನಿನ್ನ ಸಂಗಡ ಇದ್ದು ದಾವೀದನ ಸಂತಾನದಂತೆ ನಿನ್ನ ಸಂತಾನವನ್ನೂ ಸ್ಥಿರಪಡಿಸುವೆನು. ಇಸ್ರಾಯೇಲ್ ರಾಜ್ಯವು ನಿನ್ನ ಪಾಲಾಗುವುದು.
39 Abiro boyo oganda mar Daudi nikech ma, to ok nyaka chiengʼ.’”
೩೯ದಾವೀದನ ಸಂತಾನದವರನ್ನು ಅವರ ಪಾಪದ ನಿಮಿತ್ತ ತಲೆತಗ್ಗಿಸುವಂತೆ ಮಾಡಿ ಕುಗ್ಗಿಸುವೆನು. ಆದರೆ ಸದಾಕಾಲಕ್ಕೂ ಅದು ಮುಂದುವರಿಯುವುದಿಲ್ಲ” ಎಂದು ಹೇಳಿದನು.
40 Solomon notemo nego Jeroboam, to Jeroboam noringo odhi Misri ir ruoth Shishak, mobedo kuno nyaka tho Solomon.
೪೦ಸೊಲೊಮೋನನು ಯಾರೊಬ್ಬಾಮನನ್ನು ಕೊಲ್ಲುವುದಕ್ಕೆ ಪ್ರಯತ್ನಿಸಿದಾಗ ಅವನು ತಪ್ಪಿಸಿಕೊಂಡು ಐಗುಪ್ತದ ಅರಸನಾದ ಶೀಶಕನ ಬಳಿಗೆ ಹೋಗಿ ಸೊಲೊಮೋನನು ಜೀವದಿಂದಿರುವ ವರೆಗೆ ಅಲ್ಲಿಯೇ ಇದ್ದನು.
41 Weche moko duto mag loch Solomon kaka mago mane otimo gi rieko mane onyiso donge ondikgi e kitap timbe mag Solomon?
೪೧ಸೊಲೊಮೋನನ ಉಳಿದ ಎಲ್ಲಾ ಕೃತ್ಯಗಳನ್ನೂ, ಅವನ ಜ್ಞಾನವನ್ನೂ ಕುರಿತು ಸೊಲೊಮೋನನ ಚರಿತ್ರೆ ಎಂಬ ಗ್ರಂಥದಲ್ಲಿ ಬರೆದಿರುತ್ತದೆ.
42 Solomon nobedo ruodh jo-Israel duto ka en Jerusalem kuom higni piero angʼwen.
೪೨ಅವನು ಯೆರೂಸಲೇಮಿನಲ್ಲಿದ್ದುಕೊಂಡು ಎಲ್ಲಾ ಇಸ್ರಾಯೇಲರನ್ನು ನಲ್ವತ್ತು ವರ್ಷ ಆಳಿದ ನಂತರ,
43 Eka notho moyweyo gi kwerene mi noyike e dala Daudi wuon-gi. Rehoboam wuode nobedo ruoth kare.
೪೩ಪೂರ್ವಿಕರ ಬಳಿಗೆ ಸೇರಿದನು. ಅವನ ಶವವನ್ನು ತಂದೆಯಾದ ದಾವೀದನ ಪಟ್ಟಣದಲ್ಲಿ ಸಮಾಧಿಮಾಡಿದರು. ಅವನ ನಂತರ ಅವನ ಮಗನಾದ ರೆಹಬ್ಬಾಮನು ಅರಸನಾದನು.