< 1 Weche Mag Ndalo 16 >
1 Negikelo Sandug Muma mar Nyasaye mi gikete ei hema mane Daudi ogurone, bangʼe negitimo misengini miwangʼo pep kod misengini mag lalruok e nyim Nyasaye.
೧ಅವರು ದೇವರ ಮಂಜೂಷವನ್ನು ತಂದು ದಾವೀದನು ಅದಕ್ಕೋಸ್ಕರ ಮಾಡಿಸಿದ್ದ ಗುಡಾರದಲ್ಲಿಟ್ಟು ದೇವರಿಗೋಸ್ಕರ ಸರ್ವಾಂಗಹೋಮಗಳನ್ನೂ, ಸಮಾಧಾನಯಜ್ಞಗಳನ್ನೂ ಸಮರ್ಪಿಸಿದರು.
2 Kane Daudi osetieko chiwo misango miwangʼo pep kod misango mar lalruok, ne ogwedho jo-Israel ka oluongo nying Jehova Nyasaye.
೨ಆ ಯಜ್ಞಗಳು, ಹೋಮಗಳು ಸಮರ್ಪಣೆಯಾದ ನಂತರ ದಾವೀದನು ಇಸ್ರಾಯೇಲರನ್ನು ಯೆಹೋವನ ಹೆಸರಿನಿಂದ ಆಶೀರ್ವದಿಸಿದನು.
3 Bangʼe ngʼato ka ngʼato ma ja-Israel, dhako kata dichwo nomiyo makati achiel, gi ringʼo mayom kod olembe motwo mongʼin.
೩ಹಾಗೂ ಅವರಲ್ಲಿ ಪ್ರತಿಯೊಬ್ಬ ಪುರುಷ ಹಾಗು ಸ್ತ್ರೀಗೂ ಒಂದು ರೊಟ್ಟಿಯನ್ನೂ, ಒಂದು ತುಂಡು ಬೇಯಿಸಿದ ಮಾಂಸವನ್ನೂ ಮತ್ತು ದ್ರಾಕ್ಷಿಹಣ್ಣಿನ ಒಂದು ಗೊಂಚಲನ್ನೂ ಕೊಡಿಸಿದನು.
4 Noyiero jo-Lawi moko mondo oti e nyim Sandug Muma mar Jehova Nyasaye, mondo olem kendo ogo erokamano ka gipako Jehova Nyasaye ma Nyasach Israel.
೪ಯೆಹೋವನ ಮಂಜೂಷದ ಮುಂದೆ ದೇವರಾಧನೆ ನಡಿಸುವುದಕ್ಕೋಸ್ಕರ ದಾವೀದನು ಕೆಲವು ಲೇವಿಯರನ್ನು ನೇಮಿಸಿದನು. ಇಸ್ರಾಯೇಲಿನ ದೇವರಾದ ಯೆಹೋವನನ್ನು ಸ್ತುತಿಸುವುದೂ, ಹಾಡಿ ಹರಸುವುದೂ ಅವರ ಕರ್ತವ್ಯವಾಗಿತ್ತು.
5 Asaf ne jatendgi, Zekaria jalupne, kiluwogi kod Jeyel, Shemiramoth, Jehiel, Matithia, Eliab, Benaya, Obed-Edom gi Jeyel mane jogo orutu gi nyatiti ka Asaf to ne dwongʼo ongengʼo
೫ಅವರಲ್ಲಿ ಆಸಾಫನು ಪ್ರಧಾನನು. ಜೆಕರ್ಯನು ಎರಡನೆಯವನು. ಯೆಗೀಯೇಲ್, ಶೆಮೀರಾಮೋತ್, ಯೆಹೀಯೇಲ್, ಮತ್ತಿತ್ಯ, ಎಲೀಯಾಬ್, ಬೆನಾಯ, ಓಬೇದೆದೋಮ್, ಯೆಗೀಯೇಲ್ ಇವರು ಸ್ವರಮಂಡಲ, ಕಿನ್ನರಿ ಮೊದಲಾದ ವಾದ್ಯಗಳನ್ನು ನುಡಿಸುವವರು, ಆಸಾಫನು ಕೈತಾಳ ಹಾಕುವುದಕ್ಕೆ ನೇಮಿಸಲಾಯಿತು.
6 to Benaya kod Jahaziel ma jodolo to ne goyo turumbete e sa ka sa e nyim sanduk singruok mar Nyasaye.
೬ಬೆನಾಯ, ಯೆಹಜೀಯೇಲ್ ಎಂಬ ಯಾಜಕರು ದೇವರ ಒಡಂಬಡಿಕೆ ಮಂಜೂಷದ ಮುಂದೆ ನಿತ್ಯವೂ ತುತ್ತೂರಿಗಳನ್ನು ಊದುವುದಕ್ಕೆ ನೇಮಕವಾದರು.
7 Chiengʼno ema ne Daudi omiyo Asaf kod jowetene zaburini mar goyo erokamano ni Jehova Nyasaye kama:
೭ದಾವೀದನು ಆಸಾಫನನ್ನೂ, ಅವನ ಸಹೋದರರನ್ನೂ ಯೆಹೋವನನ್ನು ಕೊಂಡಾಡಿ ಕೀರ್ತಿಸುವುದಕ್ಕಾಗಿ ಸ್ತೋತ್ರಗೀತೆಗಳನ್ನು ಹಾಡುವುದಕ್ಕಾಗಿ ಆ ದಿನದಲ್ಲೇ ಮೊದಲು ನೇಮಿಸಿದನು. ಅವರು ಹಾಡಿದ್ದೇನಂದರೆ;
8 Pakuru Jehova Nyasaye, luonguru nyinge, landuru ne ogendini duto gima osetimo.
೮“ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ. ಆತನ ನಾಮದ ಮಹತ್ವವನ್ನು ವರ್ಣಿಸಿರಿ. ಜನಾಂಗಗಳಲ್ಲಿ ಆತನ ಸತ್ಕಾರ್ಯಗಳನ್ನು ಪ್ರಸಿದ್ಧಪಡಿಸಿರಿ.
9 Werneuru, pakeuru gi wende, nyisuru kuom tijene duto miwuoro.
೯ಆತನನ್ನು ಕೀರ್ತಿಸಿರಿ, ಭಜಿಸಿರಿ; ಆತನ ಅದ್ಭುತಕೃತ್ಯಗಳನ್ನೆಲ್ಲಾ ಧ್ಯಾನಿಸಿರಿ.
10 Nyinge maler nigi duongʼ, chuny joma manyo Jehova Nyasaye mondo obed mamor.
೧೦ಆತನ ಪರಿಶುದ್ಧನಾಮದಲ್ಲಿ ಸಂತೋಷಪಡಿರಿ; ಯೆಹೋವನ ದರ್ಶನವನ್ನು ಕೋರುವವರ ಹೃದಯವು ನಿತ್ಯವೂ ಅಪೇಕ್ಷಿಸಿ ಹರ್ಷಿಸಲಿ.
11 Ranguru Jehova Nyasaye gi tekone, dwaruru wangʼe kinde duto.
೧೧ಯೆಹೋವನನ್ನೂ ಮತ್ತು ಆತನ ಬಲವನ್ನೂ ಆಶ್ರಯಿಸಿರಿ; ನಿತ್ಯವೂ ಆತನ ದರ್ಶನವನ್ನು ಅಪೇಕ್ಷಿಸಿರಿ.
12 Paruru gik miwuoro mosetimo, honni mage kod buche mosengʼado,
೧೨ಆತನ ಸೇವಕನಾದ ಇಸ್ರಾಯೇಲಿನ ಸಂತತಿಯವರೇ, ಆತನು ಆರಿಸಿಕೊಂಡ ಯಾಕೋಬನ ವಂಶದವರೇ, ಆತನ ಅದ್ಭುತ ಕಾರ್ಯಗಳನ್ನು,
13 yaye, un nyikwa Israel jatichne, yaye, un yawuot Jakobo joge moyiero.
೧೩ಮಹತ್ಕಾರ್ಯಗಳನ್ನು, ನ್ಯಾಯ ನಿರ್ಣಯಗಳನ್ನು ಸ್ಮರಿಸಿರಿ.
14 En e Jehova Nyasaye ma Nyasachwa; buchene ni e piny duto.
೧೪ಯೆಹೋವನೆಂಬಾತನು ನಮ್ಮ ದೇವರು, ಆತನ ನ್ಯಾಯವಿಧಿಗಳು ಭೂಲೋಕದಲ್ಲೆಲ್ಲಾ ಇವೆ.
15 Oparo singruokne nyaka chiengʼ, weche mane osingo e tienge tara,
೧೫ಆತನು ಸಾವಿರಾರು ತಲೆಮಾರಿನವರೆಗೂ ಇರುವಂತೆ ಮಾಡಿದ ವಾಗ್ದಾನ ಮತ್ತು ಆತನ ಒಡಂಬಡಿಕೆ ಇವುಗಳನ್ನು ನಿತ್ಯವೂ ನೆನಪಿನಲ್ಲಿಟ್ಟುಕೊಳ್ಳಿರಿ.
16 Singruok mane otimo gi Ibrahim, muma mane okwongʼorego ni Isaka.
೧೬ಆತನು ಆ ಒಡಂಬಡಿಕೆಯನ್ನು ಅಬ್ರಹಾಮನ ಸಂಗಡ ಮಾಡಿಕೊಂಡನು ಮತ್ತು ಇಸಾಕನಿಗಾಗಿ ವಾಗ್ದಾನ ಮಾಡಿ ಭರವಸೆ ನೀಡಿದನು.
17 Ne ogure ne Jakobo kaka chik, kendo nogure ni Israel kaka singruok mochwere:
೧೭ಅದು ರಾಜಶಾಸನದಂತಿರುವುದು ಎಂದು ಯಾಕೋಬನಿಗೂ ಶಾಶ್ವತವಾದ ಒಡಂಬಡಿಕೆಯಾಗಿರುವುದೆಂದು ಇಸ್ರಾಯೇಲರಿಗೂ ಮಾತುಕೊಟ್ಟನು.
18 Nowacho niya, “Anamiyi piny Kanaan kaka girkeni mari.”
೧೮ನೀವು ಇನ್ನೂ ಬಹು ಜನರು ಕಾನಾನ್ ದೇಶದಲ್ಲಿ ಪ್ರವಾಸಿಗಳು ಆಗಿರುವಾಗಲೇ
19 Kane pod gin ji manok e kar rombgi, ne ginok ahinya kendo ne gin welo e pinyno,
೧೯ಆತನು, ‘ನಿಮಗೆ ಈ ದೇಶವನ್ನು ಕೊಡುವೆನು ಅದು ನಿಮ್ಮ ಸಂತತಿಯವರಿಗೆ ಸ್ವತ್ತಾಗಿರುವುದು’ ಎಂದು ವಾಗ್ದಾನ ಮಾಡಿದನು.
20 ne giwuotho e kind ogendini mopogore, ka gidhi e pinyruodhi mopogore opogore.
೨೦ಅವರು ದೇಶದಿಂದ ದೇಶಕ್ಕೂ ರಾಜ್ಯದಿಂದ ರಾಜ್ಯಕ್ಕೂ ಹೋಗುತ್ತಿರುವಲ್ಲಿ
21 Ne ok oyie mondo ngʼato osandgi, nokwero ruodhi kowachonegi niya,
೨೧ಅವರಿಗೆ ಯಾರಿಂದಲೂ ಅನ್ಯಾಯವಾಗಲಿ, ಅಪಾಯವಾಗಲಿ ಆಗಲು ಬಿಡಲಿಲ್ಲ. ಆತನು ಅವರ ವಿಷಯದಲ್ಲಿ ಅರಸನನ್ನು ಗದರಿಸಿ,
22 “Kik umul joga ma awiro, kik uhiny jonabi maga.”
೨೨‘ನಾನು ಅಭಿಷೇಕಿಸಿದವರನ್ನು ಮುಟ್ಟಬಾರದು. ನನ್ನ ಪ್ರವಾದಿಗಳಿಗೆ ಯಾವ ಕೇಡನ್ನು ಮಾಡಬಾರದು’ ಎಂದು ಹೇಳಿದನು.
23 Weruru ne Jehova Nyasaye un ji duto modak e piny, landuru warruokne odiechiengʼ kodiechiengʼ.
೨೩ಎಲ್ಲಾ ಭೂನಿವಾಸಿಗಳೇ ಯೆಹೋವನಿಗೆ ಕೀರ್ತನೆಯನ್ನು ಹಾಡಿರಿ. ಆತನ ರಕ್ಷಣೆಯನ್ನು ಪ್ರತಿನಿತ್ಯವೂ ಸಾರಿಹೇಳಿರಿ.
24 Huluru duongʼne e kind ogendini kendo landuru tijene miwuoro ne ji duto.
೨೪ಜನಾಂಗಗಳಲ್ಲಿ ಆತನ ಘನತೆಯನ್ನು ಎಲ್ಲಾ ಜನರಲ್ಲಿ ಆತನ ಅದ್ಭುತಕೃತ್ಯಗಳನ್ನೂ ಪ್ರಸಿದ್ಧಿಪಡಿಸಿರಿ.
25 Nimar Jehova Nyasaye duongʼ kendo owinjore gi pak; onego omiye luor moloyo nyiseche mamoko duto.
೨೫ಯೆಹೋವನು ದೊಡ್ಡವನು, ಬಹಳವಾಗಿ ಸ್ತುತಿಗೆ ಪಾತ್ರನು ಆಗಿದ್ದಾನೆ. ಎಲ್ಲಾ ದೇವತೆಗಳಲ್ಲಿ ಆತನೇ ಅದ್ಭುತನಾದವನು.
26 Nikech nyiseche duto mag ogendini gin mana gik ma dhano oloso, to Jehova Nyasaye ema nochweyo polo.
೨೬ಜನಾಂಗಗಳ ದೇವತೆಗಳೆಲ್ಲಾ ಬರೀ ಬೊಂಬೆಗಳೇ. ಯೆಹೋವನಾದರೋ ಗಗನಮಂಡಲವನ್ನು ನಿರ್ಮಿಸಿದವನು.
27 Duongʼ kod pak nitiere e nyime; teko kod mor nitiere kar dakne.
೨೭ಆತನ ಸಾನ್ನಿಧ್ಯದಲ್ಲಿ ಮಾನ ಮಹಿಮೆಗಳು ಆತನ ಪವಿತ್ರಾಲಯದಲ್ಲಿ ಮಹಿಮೆ, ಸ್ತುತಿಸ್ತೋತ್ರಗಳು, ಸಂತೋಷಗಳೂ ಇರುತ್ತವೆ.
28 Pakuru Jehova Nyasaye, yaye ogendini manie piny, wachuru ni Jehova Nyasaye duongʼ kendo en gi teko.
೨೮ಭೂಜನಾಂಗಗಳೇ, ಬಲಪ್ರಭಾವಗಳು ಯೆಹೋವನವೇ ಯೆಹೋವನವೇ ಎಂದು ಹೇಳಿ ಆತನನ್ನು ಘನಪಡಿಸಿರಿ.
29 Miuru Jehova Nyasaye duongʼ mowinjore gi nyinge. Keluru chiwo kendo ubi ire mondo. Ulam Jehova Nyasaye e lerne marieny mar berne.
೨೯ಯೆಹೋವನ ನಾಮಕ್ಕೆ ಯೋಗ್ಯವಾದ ಘನವನ್ನು ಸಲ್ಲಿಸಿರಿ. ಕಾಣಿಕೆ ಸಹಿತ ಆತನ ಸನ್ನಿಧಿಗೆ ಬನ್ನಿರಿ. ಪರಿಶುದ್ಧತ್ವವೆಂಬ ಭೂಷಣದೊಡನೆ ಯೆಹೋವನಿಗೆ ನಮಸ್ಕರಿಸಿರಿ.
30 Un ji duto manie piny, beduru gi e nyime! Piny osegur motegno kendo ok noyienge.
೩೦ಎಲ್ಲಾ ಭೂನಿವಾಸಿಗಳೇ, ಆತನ ಮುಂದೆ ಸಾಷ್ಟಾಂಗವೆರಗಿ ನಮಸ್ಕರಿಸಿರಿ. ಭೂಮಿಯು ಸ್ಥಿರವಾಗಿರುವುದು, ಕದಲುವುದಿಲ್ಲ,
31 Polo mondo obed moil, piny mondo obed mamor, we mondo giwachne e dier ogendini niya, “Jehova Nyasaye olocho!”
೩೧ಗಗನಮಂಡಲವು ಹರ್ಷಿಸಲಿ; ಭೂಲೋಕವು ಸಂತೋಷಿಸಲಿ; ಯೆಹೋವನು ರಾಜ್ಯಾಧಿಕಾರವನ್ನು ವಹಿಸಿದ್ದಾನೆಂದು ಜನಾಂಗಗಳಲ್ಲಿ ಪ್ರಸಿದ್ಧಪಡಿಸಿರಿ.
32 Nam kod gik moko duto man e iye bende omor, beduru mamor un pewe kod gik manie iwu.
೩೨ಭೂನಿವಾಸಿಗಳಿಗೆ ನ್ಯಾಯತೀರಿಸುವುದಕ್ಕೆ ಬರುವನೆಂದು ಯೆಹೋವನ ಮುಂದೆ ಸಮುದ್ರವೂ ಅದರಲ್ಲಿರುವುದೆಲ್ಲವೂ ಘೋಷಿಸಲಿ.
33 Bangʼe yiende manie bungu nower, giniwer gi mor e nyim Jehova Nyasaye, nikech obiro ngʼadone piny bura.
೩೩ಹೊಲಗಳೂ, ಅವುಗಳ ಪೈರುಗಳೂ ಉಲ್ಲಾಸಿಸಲಿ; ಮತ್ತು ವನದ ಮರಗಳು ಉತ್ಸಾಹ ಧ್ವನಿ ಮಾಡಲಿ.
34 Gouru erokamano ne Jehova Nyasaye nikech ober; kendo herane osiko manyaka chiengʼ.
೩೪ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ; ಆತನು ಒಳ್ಳೆಯವನು; ಆತನ ಕೃಪೆಯು ಶಾಶ್ವತವಾಗಿರುವುದು.
35 Ywaguru niya, “Reswa aa Nyasaye ma Jawarwa, chokwa kendo reswa kuom ogendini, mondo mi wadwok erokamano ne nyingi maler kendo wabed mamor kwapaki.”
೩೫ನಮ್ಮ ಸಹಾಯಕನಾಗಿರುವ ದೇವರೇ, ನಮ್ಮನ್ನು ರಕ್ಷಿಸು; ಅನ್ಯಜನಗಳಲ್ಲಿ ಚದುರಿಹೋಗಿರುವ ನಮ್ಮನ್ನು ಬಿಡಿಸಿ ಒಟ್ಟುಗೂಡಿಸು; ಆಗ ನಿನ್ನ ಪರಿಶುದ್ಧ ನಾಮವನ್ನು ಕೊಂಡಾಡುವೆವು; ನಿನ್ನ ಸ್ತೋತ್ರದಲ್ಲಿ ಹೆಚ್ಚಳಪಡುವೆವು ಅನ್ನಿರಿ.
36 Pakuru Jehova Nyasaye, ma Nyasach Israel mochwere manyaka chiengʼ. Eka ji duto nowacho niya, “Amin” kendo ni “Opak Jehova Nyasaye.”
೩೬ಇಸ್ರಾಯೇಲ್ ದೇವರಾದ ಯೆಹೋವನಿಗೆ ಯುಗಯುಗಾಂತರಗಳವರೆಗೂ ಕೊಂಡಾಟವಾಗಲಿ” ಎಂದು ಹಾಡಿದರು. ಅವರು ಹೀಗೆ ಹಾಡಿದಾಗ ಸರ್ವಜನರೂ ಆಮೆನ್ ಎಂದು ಯೆಹೋವನನ್ನು ಸ್ತುತಿಸಿದರು.
37 Daudi ne oweyo Asaf kod jotich kaachiel kode e nyim Sandug Singruok mar Jehova Nyasaye mondo giti kanyo ndalo duto mana kaka ne dwarore pile ka pile kendo odiechiengʼ ka odiechiengʼ.
೩೭ದಾವೀದನು ಯೆಹೋವನ ಒಡಂಬಡಿಕೆ ಮಂಜೂಷದ ಮುಂದೆ ಪ್ರತಿದಿನವೂ ಆರಾಧನೆ ನಡಿಸುವುದಕ್ಕೆ ಆಸಾಫನನ್ನೂ, ಅವನ ಸಹೋದರರನ್ನೂ ಬಾಗಿಲನ್ನು ಕಾಯುವುದಕ್ಕಾಗಿ,
38 Ne oweyo bende Obed-Edom kod jowetene piero auchiel gaboro mondo joti kodgi. Obed-Edom wuod Jeduthun to gi Hosa bende ne jorit rangeye.
೩೮ಯೆದುತೂನನ ಮಗನಾದ ಓಬೇದೆದೋಮ್ ಮತ್ತು ಹೋಸ ಇವರನ್ನು, ಅವರ ಆರುವತ್ತೆಂಟು ಸಹೋದರರನ್ನೂ ಅಲ್ಲೇ ಇರಿಸಿದನು.
39 Daudi noweyo Zadok jadolo kod jowetene ma jodolo e nyim hekalu mar Jehova Nyasaye e kama otingʼore gi malo man Gibeon,
೩೯ಯಾಜಕನಾದ ಚಾದೋಕನನ್ನೂ, ಅವನ ಸಹೋದರರನ್ನೂ ಗಿಬ್ಯೋನಿನ ಪೂಜಾಸ್ಥಳಗಳಲ್ಲಿದ್ದ ಯೆಹೋವನ ಗುಡಾರದ ಬಳಿಯಲ್ಲಿ ಇರಿಸಿದನು.
40 mondo gichiwne Jehova Nyasaye misengini pile pile e kendo mar misango miwangʼo pep, gitim kamano okinyi kod odhiambo mana kaka ondikgi duto e Chik Jehova Nyasaye mano mi jo-Israel.
೪೦ಅವರು ಪ್ರತಿದಿನವೂ ಪ್ರಾತಃಕಾಲ ಮತ್ತು ಸಾಯಂಕಾಲಗಳಲ್ಲಿ ಯೆಹೋವನಿಗೋಸ್ಕರ ಯಜ್ಞವೇದಿಯ ಮೇಲೆ ಸರ್ವಾಂಗಹೋಮಗಳನ್ನು ಮಾಡಿ ಯೆಹೋವನ ಧರ್ಮಶಾಸ್ತ್ರದಲ್ಲಿ ಇಸ್ರಾಯೇಲರಿಗೆ ವಿಧಿತವಾದದ್ದೆಲ್ಲವನ್ನೂ ನೆರವೇರಿಸಬೇಕಾಯಿತು.
41 Kaachiel kodgi ne gin Heman gi Jeduthun kod joma moko manoyier kendo oluong gi nyingegi mondo gi dwokne Jehova Nyasaye erokamano, “nikech herane osiko manyaka chiengʼ.”
೪೧ಅವರ ಬಳಿಯಲ್ಲಿ ಯೆಹೋವನನ್ನು, ಆತನ ಶಾಶ್ವತವಾದ ಕೃಪೆಗೋಸ್ಕರ ಸ್ತುತಿಸುವುದಕ್ಕೆ ಹೇಮಾನ್, ಯೆದುತೂನ ಮತ್ತು ಹೆಸರು ಹೆಸರಾಗಿ ನೇಮಿಸಲ್ಪಟ್ಟ ಬೇರೆ ಜನರೂ ಇದ್ದರು.
42 Heman kod Jeduthun to ne tijgi en goyo turumbete kod ongengʼo kod goyo thumbe mamoko mag wend Nyasaye. Yawuot Jeduthun to ne rito rangach.
೪೨ಹೇಮಾನ್ ಮತ್ತು ಯೆದುತೂನರ ಹತ್ತಿರ ವಾದ್ಯಗಾರರಿಗಾಗಿ ತುತ್ತೂರಿ, ತಾಳ ಮೊದಲಾದ ವಾದ್ಯಗಳೂ ಮತ್ತು ದೇವಕೀರ್ತನಾ ಸಾಹಿತ್ಯಗಳಿದ್ದವು. ಯೆದುತೂನನ ಮಕ್ಕಳು ದ್ವಾರಪಾಲಕರಾಗಿ ನೇಮಿಸಲ್ಪಟ್ಟರು.
43 Eka ji duto noa ka ngʼato ka ngʼato dok e dalane, kendo Daudi bende nodhi dalane mondo ogwedh joge.
೪೩ತರುವಾಯ ಜನರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೋದರು. ದಾವೀದನು ತನ್ನ ಕುಟುಂಬದವರನ್ನು ಆಶೀರ್ವದಿಸುವುದಕ್ಕಾಗಿ ಹೋದನು.