< Žalmy 115 >
1 Ne nám, Hospodine, ne nám, ale jménu svému dej čest, pro milosrdenství své a pro pravdu svou.
೧ದಾವೀದನ ಕೀರ್ತನೆ. ನಮ್ಮನ್ನಲ್ಲ, ಯೆಹೋವನೇ, ನಮ್ಮನ್ನಲ್ಲ, ನಿನ್ನ ಪ್ರೀತಿ, ಸತ್ಯತೆಗಳ ನಿಮಿತ್ತವಾಗಿ ನಿನ್ನ ಹೆಸರನ್ನೇ ಘನಪಡಿಸು.
2 Proč mají říkati pohané: Kdež jest nyní Bůh jejich?
೨“ಅವರ ದೇವರು ಎಲ್ಲಿದ್ದಾನೆ?” ಎಂದು ಅನ್ಯರು ಏಕೆ ಹೇಳಬೇಕು?
3 Ješto Bůh náš jest na nebi, čině všecko, což se mu líbí.
೩ನಮ್ಮ ದೇವರು ಪರಲೋಕದಲ್ಲಿದ್ದಾನೆ; ಆತನು ತನಗೆ ಬೇಕಾದುದನ್ನೆಲ್ಲಾ ಮಾಡುತ್ತಾನೆ.
4 Modly pak jejich jsou stříbro a zlato, dílo rukou lidských.
೪ಅವರ ವಿಗ್ರಹಗಳೋ ಬೆಳ್ಳಿ ಬಂಗಾರದವುಗಳೇ; ಅವು ಮನುಷ್ಯರ ಕೈಕೆಲಸವಷ್ಟೇ.
5 Ústa mají, a nemluví, oči mají, a nevidí.
೫ಅವು ಬಾಯಿದ್ದರೂ ಮಾತನಾಡುವುದಿಲ್ಲ; ಕಣ್ಣಿದ್ದರೂ ನೋಡುವುದಿಲ್ಲ.
6 Uši mají, a neslyší, nos mají, a nečijí.
೬ಕಿವಿಯಿದ್ದರೂ ಕೇಳುವುದಿಲ್ಲ; ಮೂಗಿದ್ದರೂ ಮೂಸುವುದಿಲ್ಲ.
7 Ruce mají, a nemakají, nohy mají, a nechodí, aniž volati mohou hrdlem svým.
೭ಕೈಯುಂಟು ಮುಟ್ಟುವುದಿಲ್ಲ; ಕಾಲುಂಟು ನಡೆಯುವುದಿಲ್ಲ; ಅವುಗಳ ಗಂಟಲಲ್ಲಿ ಶಬ್ದವೇ ಇಲ್ಲ.
8 Nechať jsou jim podobni, kteříž je dělají, a kdožkoli v nich doufají.
೮ಅವುಗಳನ್ನು ಮಾಡುವವರೂ, ಅವುಗಳಲ್ಲಿ ಭರವಸವಿಡುವವರೂ ಅವುಗಳಂತೆಯೇ.
9 Izraeli, doufej v Hospodina, nebo spomocníkem a štítem takových on jest.
೯ಇಸ್ರಾಯೇಲರೇ, ಯೆಹೋವನಲ್ಲಿ ಭರವಸವಿಡಿರಿ. ಅವರ ಸಹಾಯಕನು, ಗುರಾಣಿಯು ಆತನೇ.
10 Dome Aronův, doufej v Hospodina, spomocníkem a štítem takových on jest.
೧೦ಆರೋನನ ಮನೆತನದವರೇ, ಯೆಹೋವನಲ್ಲಿ ಭರವಸವಿಡಿರಿ. ಅವರ ಸಹಾಯಕನು, ಗುರಾಣಿಯು ಆತನೇ.
11 Kteříž se bojíte Hospodina, doufejte v Hospodina, spomocníkem a štítem takových on jest.
೧೧ಯೆಹೋವನ ಭಕ್ತರೇ, ಯೆಹೋವನಲ್ಲಿ ಭರವಸವಿಡಿರಿ. ಅವರ ಸಹಾಯಕನು, ಗುರಾಣಿಯು ಆತನೇ.
12 Hospodin rozpomena se na nás, požehná; požehná domu Izraelovu, požehná i domu Aronovu.
೧೨ಯೆಹೋವನು ನಮ್ಮನ್ನು ನೆನಪುಮಾಡಿಕೊಂಡಿದ್ದಾನೆ; ಸಣ್ಣವರು ಮೊದಲುಗೊಂಡು ದೊಡ್ಡವರ ವರೆಗೆ ಎಲ್ಲರನ್ನೂ ಆಶೀರ್ವದಿಸುವನು.
13 Požehná bojícím se Hospodina, malým, i velikým.
೧೩ಇಸ್ರಾಯೇಲನ ಮನೆತನದವರನ್ನು ಆಶೀರ್ವದಿಸುವನು; ಆರೋನನ ಮನೆತನದವರನ್ನು ಆಶೀರ್ವದಿಸುವನು. ತನ್ನ ಭಕ್ತರನ್ನು ಆಶೀರ್ವದಿಸುವನು.
14 Rozmnoží Hospodin vás, vás i syny vaše.
೧೪ಯೆಹೋವನು ನಿಮ್ಮನ್ನೂ, ನಿಮ್ಮ ಮಕ್ಕಳನ್ನೂ ಅಭಿವೃದ್ಧಿಪಡಿಸಲಿ;
15 Požehnaní vy od Hospodina, kterýž učinil nebesa i zemi.
೧೫ಯೆಹೋವನಿಂದ ನಿಮಗೆ ಆಶೀರ್ವಾದವಾಗಲಿ. ಆತನು ಭೂಪರಲೋಕಗಳನ್ನು ಉಂಟುಮಾಡಿದ್ದಾನೆ.
16 Nebesa jsou nebesa Hospodinova, zemi pak dal synům lidským.
೧೬ಪರಲೋಕವು ಯೆಹೋವನದು; ಭೂಲೋಕವನ್ನು ಮಾನವ ಸಂತಾನಕ್ಕೆ ಕೊಟ್ಟಿದ್ದಾನೆ.
17 Ne mrtví chváliti budou Hospodina, ani kdo ze všech těch, kteříž sstupují do místa mlčení,
೧೭ಸತ್ತವರು ಯೆಹೋವನನ್ನು ಸ್ತುತಿಸುವುದಿಲ್ಲ; ಮೌನಲೋಕವನ್ನು ಸೇರಿದವರಲ್ಲಿ ಯಾರೂ ಆತನನ್ನು ಕೀರ್ತಿಸುವುದಿಲ್ಲ.
18 Ale my dobrořečiti budeme Hospodinu od tohoto času až na věky. Halelujah.
೧೮ನಾವೋ ಇಂದಿನಿಂದ ಸದಾಕಾಲವೂ ಯೆಹೋವನನ್ನು ಕೊಂಡಾಡುವೆವು. ಯೆಹೋವನಿಗೆ ಸ್ತೋತ್ರ!