< Izaiáš 56 >
1 Toto praví Hospodin: Ostříhejte soudu, a čiňte spravedlnost; nebo brzo spasení mé přijde, a spravedlnost má zjevena bude.
೧ಯೆಹೋವನು ಹೀಗೆನ್ನುತ್ತಾನೆ, “ನ್ಯಾಯವನ್ನು ಅನುಸರಿಸಿ, ಧರ್ಮವನ್ನು ಆಚರಿಸಿರಿ; ಏಕೆಂದರೆ ನನ್ನ ವಿಮೋಚನಕ್ರಿಯೆಯು ಬೇಗನೆ ಬರುವುದು, ನನ್ನ ರಕ್ಷಣಾಧರ್ಮದ ಕಾರ್ಯವು ಶೀಘ್ರವಾಗಿ ವ್ಯಕ್ತವಾಗುವುದು.
2 Blahoslavený člověk, kterýž činí to, a syn člověka, kterýž se přídrží toho, ostříhaje soboty, aby jí nepoškvrňoval, a ostříhaje ruky své, aby nic zlého neučinila.
೨ಈ ವಿಧಿಯನ್ನು ಕೈಕೊಳ್ಳುವ ಮನುಷ್ಯನು ಧನ್ಯನು; ಇದನ್ನೇ ಭದ್ರವಾಗಿ ಹಿಡಿದು, ಸಬ್ಬತ್ ದಿನವನ್ನು ಹೊಲೆಮಾಡದೆ ದೇವರ ದಿನವೆಂದು ಆಚರಿಸುತ್ತಾ ಯಾವ ಕೇಡಿಗೂ ಕೈಹಾಕದ ಮಾನವನು ಭಾಗ್ಯವಂತನು.
3 Nechť tedy nemluví cizozemec, kterýž se připojuje k Hospodinu, říkaje: Jistě odloučil mne Hospodin od lidu svého. Též ať neříká kleštěnec: Aj, já jsem dřevo suché.
೩ಯೆಹೋವನನ್ನು ಅವಲಂಬಿಸಿದ ವಿದೇಶೀಯನು, ‘ಯೆಹೋವನು ತನ್ನ ಜನರಿಂದ ನನ್ನನ್ನು ಖಂಡಿತವಾಗಿ ಅಗಲಿಸುವನು’ ಎಂದು ಮಾತನಾಡದಿರಲಿ; ಮತ್ತು ನಪುಂಸಕನು, ‘ಅಯ್ಯೋ, ನಾನು ಗೊಡ್ಡುಮರ’” ಎಂದು ಅಂದುಕೊಳ್ಳದಿರಲಿ.
4 Nebo toto praví Hospodin o kleštěncích, kteříž by ostříhali sobot mých, a zvolili to, což mi se líbí, a drželi smlouvu mou:
೪ಯೆಹೋವನು ಹೀಗೆನ್ನುತ್ತಾನೆ, “ಸಬ್ಬತ್ ದಿನಗಳನ್ನು ನನ್ನ ದಿನಗಳೆಂದು ಆಚರಿಸಿ ನನಗೆ ಮೆಚ್ಚಿಕೆಯಾದುದನ್ನು ಕೈಕೊಂಡು ನನ್ನ ಒಡಂಬಡಿಕೆಯನ್ನು ಭದ್ರವಾಗಿ
5 Že dám jim v domě svém a mezi zdmi svými místo, a jméno lepší nežli synů a dcer. Jméno věčné dám jim, kteréž nebude vyhlazeno.
೫ಹಿಡಿದುಕೊಂಡಿರುವ ಮಂಗಳಮುಖಿಯರಿಗೆ ನನ್ನ ಪ್ರಾಕಾರಗಳೊಳಗೆ ನನ್ನ ಆಲಯದಲ್ಲಿ ಅವರ ಜ್ಞಾಪಕಾರ್ಥವಾಗಿ ಶಿಲೆಯನ್ನಿಟ್ಟು ಹೆಣ್ಣುಗಂಡು ಮಕ್ಕಳಿಗಿಂತ ಮೇಲಾದ ಹೆಸರನ್ನು ದಯಪಾಲಿಸುವೆನು; ಹೌದು, ಎಂದಿಗೂ ಅಳಿಯದ ಶಾಶ್ವತನಾಮವನ್ನು ಅನುಗ್ರಹಿಸುವೆನು.
6 Cizozemce pak, kteříž by se připojili k Hospodinu, aby sloužili jemu, a milovali jméno Hospodinovo, jsouce u něho za služebníky, všecky ostříhající soboty, aby jí nepoškvrňovali, a držící smlouvu mou,
೬ಅನ್ಯದೇಶೀಯರಲ್ಲಿ ಯಾರು ಯೆಹೋವನೆಂಬ ನನ್ನನ್ನು ಅವಲಂಬಿಸಿ ಸೇವಿಸಿ ನನ್ನ ನಾಮವನ್ನು ಪ್ರೀತಿಸಿ ನನಗೆ ದಾಸರಾಗಿ ಸಬ್ಬತ್ ದಿನವನ್ನು ಹೊಲೆಮಾಡದೆ ನನ್ನ ದಿನವೆಂದು ಆಚರಿಸಿ ನನ್ನ ಒಡಂಬಡಿಕೆಯನ್ನು ಭದ್ರವಾಗಿ ಹಿಡಿಯುತ್ತಾರೋ
7 Ty přivedu k hoře svatosti své, a obveselím je v domě svém modlitebném. Zápalové jejich a oběti jejich příjemné mi budou na oltáři mém; nebo dům můj dům modlitby slouti bude u všech národů.
೭ಅವರೆಲ್ಲರನ್ನೂ ನಾನು ನನ್ನ ಪವಿತ್ರಪರ್ವತಕ್ಕೆ ಬರಮಾಡಿ ನನ್ನ ಪ್ರಾರ್ಥನಾಲಯದಲ್ಲಿ ಉಲ್ಲಾಸಗೊಳಿಸುವೆನು; ನನ್ನ ಯಜ್ಞವೇದಿಯಲ್ಲಿ ಅವರು ಅರ್ಪಿಸುವ ಸರ್ವಾಂಗಹೋಮಗಳೂ, ಯಜ್ಞಗಳೂ ನನಗೆ ಮೆಚ್ಚಿಗೆಯಾಗುವವು; ನನ್ನ ಆಲಯವು ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯ ಎನಿಸಿಕೊಳ್ಳುವುದು.
8 Pravíť Panovník Hospodin, kterýž shromažďuje rozehnané Izraelovy: Ještěť shromáždím k němu a k shromážděným jeho.
೮ಇಸ್ರಾಯೇಲಿನ ದೇಶಭ್ರಷ್ಟರನ್ನು ಕೂಡಿಸಿಕೊಳ್ಳುವ ಕರ್ತನಾದ ಯೆಹೋವನ ನುಡಿಯೇನೆಂದರೆ, ‘ನಾನು ಕೂಡಿಸಿದ ಇಸ್ರಾಯೇಲರೊಂದಿಗೆ ಇನ್ನೂ ಹಲವರನ್ನು ಕೂಡಿಸುವೆನು’” ಎಂಬುದೇ.
9 Všecka zvířata polní poďte žráti, i všecka zvířata lesní.
೯ಅರಣ್ಯದ ಸಕಲ ಮೃಗಗಳೇ, ಕಾಡಿನ ಎಲ್ಲಾ ಜಂತುಗಳೇ, ನುಂಗಿಬಿಡುವುದಕ್ಕೆ ಬನ್ನಿರಿ!
10 Strážní jeho jsou slepí, všickni napořád nic neznají, všickni jsou psi němí, aniž mohou štěkati; jsou ospalci, leží, milujíce dřímotu.
೧೦ಇವರ ಕಾವಲುಗಾರರು ಕುರುಡರು, ಇವರಲ್ಲಿ ಯಾರಿಗೂ ತಿಳಿವಳಿಕೆಯಿಲ್ಲ; ಇವರೆಲ್ಲರೂ ಬೊಗಳಲಾರದ ಮೂಕ ನಾಯಿಗಳು, ನಿದ್ರೆಯನ್ನಾಶಿಸಿ ಮಲಗಿಕೊಂಡು ಕನವರಿಸುವ ನಾಯಿಗಳು.
11 Nadto jsou psi obžerní, nevědí, kdy jsou syti; pročež sami se pasou. Neumějí učiti, všickni k cestám svým patří, jeden každý k zisku svému po své straně.
೧೧ಇವು ಹೊಟ್ಟೆಬಾಕ ನಾಯಿಗಳು, ಇವುಗಳಿಗೆ ಎಂದಿಗೂ ಸಾಕು ಎನಿಸದು. ಇಂಥವರು ಕುರಿಗಳನ್ನು ಕಾಯತಕ್ಕವರೋ! ಬುದ್ಧಿಹೀನರಾಗಿದ್ದಾರೆ, ಇವರಲ್ಲಿ ಯಾರೂ ತಪ್ಪದೆ ಪ್ರತಿಯೊಬ್ಬನೂ ಕೊಳ್ಳೆಹೊಡೆಯಬೇಕೆಂದು ತನ್ನ ತನ್ನ ಮಾರ್ಗಕ್ಕೆ ತಿರುಗಿಕೊಂಡಿದ್ದಾನೆ.
12 Poďte, naberu vína, a opojíme se nápojem opojným, a bude rovně zítřejší jako dnešní den, nýbrž větší a mnohem hojnější.
೧೨“ಬನ್ನಿರಿ, ನಾನು ದ್ರಾಕ್ಷಾರಸವನ್ನು ತರಿಸುವೆನು, ಬೇಕಾದಷ್ಟು ಮದ್ಯವನ್ನು ಕುಡಿಯುವ; ನಾಳೆಯೂ ಈ ದಿನದಂತೆ ಕೇವಲ ಅತ್ಯಂತ ವಿಶೇಷ ದಿನವಾಗಿರುವುದು” ಎಂದು ಹರಟೆ ಕೊಚ್ಚಿಕೊಳ್ಳುವರು.