< Mudre Izreke 22 >
1 Dobro je ime bolje od velika bogatstva, i bolja je naklonost od srebra i zlata.
೧ಬಹುಧನಕ್ಕಿಂತಲೂ ಒಳ್ಳೆಯ ಹೆಸರು ಉತ್ತಮ, ಬೆಳ್ಳಿ, ಬಂಗಾರಕ್ಕಿಂತಲೂ ಸತ್ಕೀರ್ತಿಯು ಅಮೂಲ್ಯ.
2 Bogataš se i siromah sreću: obojicu ih Jahve stvori.
೨ಬಡವರು ಮತ್ತು ಸಿರಿವಂತರು ಸ್ಥಿತಿಯಲ್ಲಿ ಎದುರುಬದುರಾಗಿದ್ದಾರೆ, ಯೆಹೋವನೇ ಅವರನ್ನೆಲ್ಲಾ ಸೃಷ್ಟಿಸಿದನು.
3 Pametan čovjek vidi zlo i skrije se, a glupaci idu bezbrižno i trpe kaznu.
೩ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು, ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು.
4 Nagrada je poniznosti strah Gospodnji, bogatstvo, čast i život.
೪ಧನ, ಮಾನ ಮತ್ತು ಜೀವಗಳು ದೀನಭಾವಕ್ಕೂ, ಯೆಹೋವನ ಭಯಕ್ಕೂ ಫಲ.
5 Trnje i zamke su na putu varalici: tko čuva život svoj, daleko je od oboga.
೫ವಕ್ರಬುದ್ಧಿಯುಳ್ಳವನ ಮಾರ್ಗದಲ್ಲಿ ಮುಳ್ಳುಗಳೂ, ಉರುಲುಗಳೂ ತುಂಬಿವೆ, ತನ್ನನ್ನು ರಕ್ಷಿಸಿಕೊಳ್ಳುವವನು ಅವುಗಳಿಗೆ ದೂರವಾಗಿರುವನು.
6 Upućuj dijete prema njegovu putu, pa kad i ostari, neće odstupiti od njega.
೬ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಮಕ್ಕಳನ್ನು ಶಿಕ್ಷಿಸು, ಮುಪ್ಪಿನಲ್ಲಿಯೂ ಓರೆಯಾಗರು.
7 Bogataš vlada nad siromasima, a dužnik je sluga vjerovniku.
೭ಬಲ್ಲಿದನು ಬಡವನಿಗೆ ಒಡೆಯ, ಸಾಲಗಾರನು ಸಾಲಕೊಟ್ಟವನಿಗೆ ಸೇವಕ.
8 Tko sije nepravdu, žanje nesreću, i šiba njegova gnjeva udarit će njega samog.
೮ಕೆಟ್ಟತನವನ್ನು ಬಿತ್ತುವವನು ಕೇಡನ್ನೇ ಕೊಯ್ಯುವನು, ಹೆಮ್ಮೆಯಿಂದ ಹಿಡಿದ ದಂಡವು ಅವನ ಕೈಯಿಂದ ಬಿದ್ದುಹೋಗುವುದು.
9 Milostivo se oko blagoslivlje, jer daje od svog kruha siromahu.
೯ದಯಾದೃಷ್ಟಿಯವನು ಆಶೀರ್ವಾದವನ್ನು ಪಡೆಯುವನು, ತನ್ನ ಆಹಾರವನ್ನು ಬಡವರಿಗೆ ಕೊಡುತ್ತಾನಲ್ಲವೆ.
10 Otjeraj podsmjevača i prestat će svađe i nestat će nesloga i pogrda.
೧೦ಧರ್ಮನಿಂದಕನನ್ನು ಓಡಿಸಿಬಿಟ್ಟರೆ ಜಗಳವು ತೊಲಗುವುದು, ಹೌದು, ವ್ಯಾಜ್ಯವು ತೀರಿ ಅವಮಾನವು ಇಲ್ಲವಾಗುವುದು.
11 Jahve ljubi čisto srce, i tko je ljubeznih usana, kralj mu je prijatelj.
೧೧ಹೃದಯಶುದ್ಧಿಯನ್ನು ಅಪೇಕ್ಷಿಸುವ ಮತ್ತು ಸವಿಮಾತನಾಡುವ ಮನುಷ್ಯನಿಗೆ ರಾಜನ ಸ್ನೇಹವು ದೊರೆಯುವುದು.
12 Pogled Jahvin čuva znanje, Jahve pomućuje riječi bezbožnika.
೧೨ಯೆಹೋವನ ಕಣ್ಣು ತಿಳಿವಳಿಕೆಗೆ ಕಾವಲು, ಆತನು ವಂಚಕನ ಮಾತುಗಳನ್ನು ಕೆಡವಿಬಿಡುವನು.
13 Lijenčina veli: “Lav je vani, nasred trga poginuo bih.”
೧೩“ಹೊರಗೆ ಸಿಂಹವಿದೆ, ನನ್ನನ್ನು ಬೀದಿಯಲ್ಲಿ ಕೊಂದ್ದಿತು” ಎಂಬುದು ಸೋಮಾರಿಯ ನೆವ.
14 Duboka jama usta su preljubnice, i na koga se Jahve srdi, pada onamo.
೧೪ಜಾರಸ್ತ್ರೀಯ ಬಾಯಿ ಆಳವಾದ ಹಳ್ಳ, ಯೆಹೋವನಿಗೆ ಸಿಟ್ಟನ್ನೆಬ್ಬಿಸಿದವನು ಅದರಲ್ಲಿ ಬೀಳುವನು.
15 Ludost prianja uza srce djetinje: šiba pouke otklanja je od njega.
೧೫ಮೂರ್ಖತನವು ಮಕ್ಕಳ ಮನಸ್ಸಿಗೆ ಸಹಜ, ಆದರೆ ಶಿಕ್ಷಕನ ಬೆತ್ತವು ಅದನ್ನು ತೊಲಗಿಸುವುದು.
16 Tko tlači siromaha, taj mu koristi; tko daje bogatašu, samo mu šteti.
೧೬ಸ್ವಂತ ಲಾಭಕ್ಕಾಗಿ ಬಡವರನ್ನು ಹಿಂಸಿಸುವವನಿಗೂ, ಸಿರಿವಂತರಿಗೆ ಲಂಚಕೊಡುವವನಿಗೂ ಕೊರತೆಯೇ ಗತಿ.
17 Riječi mudraca: Prigni uho svoje i čuj riječi moje i upravi svoje srce mojem znanju,
೧೭ಕಿವಿಗೊಟ್ಟು ಜ್ಞಾನಿಗಳ ಮಾತುಗಳನ್ನು ಕೇಳು, ನನ್ನ ಜ್ಞಾನಬೋಧೆಗೆ ಮನಸ್ಸು ಕೊಡು.
18 jer milina je ako ih čuvaš u nutrini svojoj, i kad ti budu sve spremne na usnama tvojim.
೧೮ನೀನು ಆ ಮಾತುಗಳನ್ನು ಅಂತರಂಗದಲ್ಲಿ ಕಾಪಾಡುತ್ತಾ, ತುಟಿಗಳಲ್ಲಿ ಸಿದ್ಧಪಡಿಸಿಕೊಂಡಿದ್ದರೆ ಎಷ್ಟೋ ರಮ್ಯ.
19 Da bi uzdanje tvoje bilo u Jahvi, upućujem danas i tebe.
೧೯ನೀನು ಯೆಹೋವನಲ್ಲಿ ಭರವಸವಿಡಬೇಕೆಂದು, ಅವುಗಳನ್ನು ಈ ದಿನ ನಿನಗೇ ತಿಳಿಯಪಡಿಸಿದ್ದೇನೆ.
20 Napisah ti trideset što savjeta što pouka
೨೦ಸತ್ಯವಚನಗಳು ಎಷ್ಟೋ ಯಥಾರ್ಥವೆಂದು ನೀನು ತಿಳಿದುಕೊಂಡು, ನಿನ್ನನ್ನು ಕಳುಹಿಸಿದವರಿಗೆ ಸತ್ಯವಚನಗಳನ್ನೇ ಅರಿಕೆ ಮಾಡುವಂತೆ,
21 da te poučim riječima istine, da uzmogneš pouzdanim riječima odgovoriti onomu tko te zapita.
೨೧ಸತ್ಯ, ತಿಳಿವಳಿಕೆಯ ವಿಷಯವಾಗಿ ಇದಕ್ಕೆ ಮೊದಲೇ ನಿನಗಾಗಿ ಬರೆದಿರುವೆನಲ್ಲಾ.
22 Nemoj pljačkati siromaha zato što je siromah i ne gazi ubogoga na sudu.
೨೨ಬಡವರಿಗೆ ದಿಕ್ಕಿಲ್ಲವೆಂದು ತಿಳಿದು ಅವರನ್ನು ಸೂರೆ ಮಾಡಬೇಡ, ನ್ಯಾಯಸ್ಥಾನದಲ್ಲಿ ದರಿದ್ರರನ್ನು ತುಳಿಯಬೇಡ.
23 Jer će Jahve parbiti parbu njihovu i otet će život onima koji ga njima otimlju.
೨೩ಯೆಹೋವನೇ ಅವರ ವ್ಯಾಜ್ಯವನ್ನು ನಡೆಸಿ, ಹಾಳುಮಾಡಿದವರ ಜೀವವನ್ನು ಹಾಳುಮಾಡುವನು.
24 Ne druži se sa srditim i ne idi s čovjekom jedljivim
೨೪ಕೋಪಿಷ್ಠನ ಸಂಗಡ ಸ್ನೇಹ ಬೆಳಸಬೇಡ, ಸಿಟ್ಟುಗಾರನ ಸಹವಾಸ ಮಾಡಬೇಡ.
25 da se ne bi privikao na staze njegove i namjestio zamku duši svojoj.
೨೫ಮಾಡಿದರೆ ಅವನ ದುರ್ನಡತೆಯನ್ನು ಅನುಸರಿಸಿ, ನಿನ್ನ ಆತ್ಮವನ್ನು ಉರುಲಿಗೆ ಸಿಕ್ಕಿಸಿಕೊಳ್ಳುವಿ ನೋಡಿಕೋ.
26 Ne budi među onima koji daju ruku, koji jamče za dugove:
೨೬ಮಾತುಕೊಟ್ಟು ಸಾಲಕ್ಕೆ ಹೊಣೆಯಾಗುವವರಲ್ಲಿ, ನೀನೂ ಒಬ್ಬನಾಗಬೇಡ,
27 ako nemaš čime nadoknaditi, zašto da ti oduzmu i postelju ispod tebe?
೨೭ಆ ಸಾಲವನ್ನು ತೀರಿಸುವುದಕ್ಕೆ ನಿನ್ನಿಂದಾಗದಿರಲು, ಸಾಲಕೊಟ್ಟವನು ನಿನ್ನ ಕೆಳಗಿನ ಹಾಸಿಗೆಯನ್ನು ಕಿತ್ತುಹಾಕುವುದು ಬೇಕೇ?
28 Ne pomiči prastare međe koju su postavili oci tvoji.
೨೮ನಿನ್ನ ಪೂರ್ವಿಕರು ಹಾಕಿದ ಪೂರ್ವಕಾಲದ ಮೇರೆಯನ್ನು ದಾಟಬೇಡ.
29 Jesi li vidio čovjeka vična poslu svom: takav ima pristup kraljevima i ne služi prostacima.
೨೯ತನ್ನ ಕೆಲಸದಲ್ಲಿ ಚಾತುರ್ಯವುಳ್ಳವನನ್ನು ನೋಡು, ಇಂಥವನು ರಾಜನ ಸನ್ನಿಧಿಯಲ್ಲಿ ನಿಲ್ಲುವನೇ ಹೊರತು, ಸಾಮಾನ್ಯ ಜನರ ಮುಂದೆ ಅಲ್ಲ.