< 詩篇 121 >

1 上行之詩。 我要向山舉目; 我的幫助從何而來?
ಯಾತ್ರಾ ಗೀತೆ. ನಾನು ಕಣ್ಣೆತ್ತಿ ಪರ್ವತಗಳ ಕಡೆಗೆ ನೋಡುತ್ತೇನೆ; ನನ್ನ ಸಹಾಯವು ಎಲ್ಲಿಂದ ಬರುವುದು?
2 我的幫助 從造天地的耶和華而來。
ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದ ಯೆಹೋವ ದೇವರಿಂದಲೇ ನನ್ನ ಸಹಾಯವು ಬರುತ್ತದೆ.
3 他必不叫你的腳搖動; 保護你的必不打盹!
ದೇವರು ನಿಮ್ಮ ಪಾದಗಳನ್ನು ಕದಲಗೊಡಿಸುವುದಿಲ್ಲ; ನಿಮ್ಮನ್ನು ಕಾಪಾಡುವ ದೇವರು ತೂಕಡಿಸುವುದೂ ಇಲ್ಲ.
4 保護以色列的, 也不打盹也不睡覺。
ಇಗೋ, ಇಸ್ರಾಯೇಲನ್ನು ಕಾಪಾಡುವ ದೇವರು ತೂಕಡಿಸುವುದಿಲ್ಲ, ನಿದ್ರಿಸುವುದಿಲ್ಲ.
5 保護你的是耶和華; 耶和華在你右邊蔭庇你。
ಯೆಹೋವ ದೇವರು ನಿಮ್ಮನ್ನು ಕಾಪಾಡುವವರಾಗಿದ್ದಾರೆ; ಯೆಹೋವ ದೇವರು ನಿಮ್ಮ ಬಲಗಡೆಯಲ್ಲಿ ನೆರಳಿನಂತೆ ಇದ್ದಾರೆ.
6 白日,太陽必不傷你; 夜間,月亮必不害你。
ಹಗಲಲ್ಲಿ ಸೂರ್ಯನೂ ನಿಮ್ಮನ್ನು ಹಾನಿಮಾಡುವುದಿಲ್ಲ. ರಾತ್ರಿಯಲ್ಲಿ ಚಂದ್ರನೂ ನಿಮ್ಮನ್ನು ಬಾಧಿಸುವುದಿಲ್ಲ.
7 耶和華要保護你,免受一切的災害; 他要保護你的性命。
ಯೆಹೋವ ದೇವರು ಎಲ್ಲಾ ಕೇಡಿನಿಂದ ನಿಮ್ಮನ್ನು ಕಾಪಾಡುವರು, ನಿಮ್ಮ ಪ್ರಾಣವನ್ನೂ ಕಾಪಾಡುವರು.
8 你出你入,耶和華要保護你, 從今時直到永遠。
ಯೆಹೋವ ದೇವರು, ನೀವು ಹೋಗುವಾಗಲೂ ಬರುವಾಗಲೂ ಇಂದಿಗೂ ಎಂದೆಂದಿಗೂ ನಿಮ್ಮನ್ನು ಕಾಪಾಡುವರು.

< 詩篇 121 >