< 耶利米書 33 >
1 耶利米還囚在護衛兵的院內,耶和華的話第二次臨到他說:
೧ಯೆರೆಮೀಯನು ಕಾರಾಗೃಹದ ಅಂಗಳದಲ್ಲಿ ಸೆರೆಯಾಗಿದ್ದಾಗ ಅವನಿಗೆ ಯೆಹೋವನು ಈ ಎರಡನೆಯ ವಾಕ್ಯವನ್ನು ಅನುಗ್ರಹಿಸಿದನು.
2 「成就的是耶和華,造作、為要建立的也是耶和華;耶和華是他的名。他如此說:
೨“ಕಾರ್ಯವನ್ನು ಸಾಧಿಸಿಕೊಳ್ಳುವ, ಉದ್ದೇಶಿಸಿ ನೆರವೇರಿಸುವ ಯೆಹೋವನಾಮಾಂಕಿತನು ಇಂತೆನ್ನುತ್ತಾನೆ,
3 你求告我,我就應允你,並將你所不知道、又大又難的事指示你。
೩‘ನನ್ನನ್ನು ಕೇಳಿಕೋ, ನಾನು ನಿನಗೆ ಸದುತ್ತರವನ್ನು ದಯಪಾಲಿಸಿ, ನಿನಗೆ ತಿಳಿಯದ ಮಹತ್ತಾದ ಗೂಢಾರ್ಥಗಳನ್ನು ಗೋಚರಪಡಿಸುವೆನು.
4 論到這城中的房屋和猶大王的宮室,就是拆毀為擋敵人高壘和刀劍的,耶和華-以色列的上帝如此說:
೪ದಿಬ್ಬಗಳಿಗೂ ಮತ್ತು ಕತ್ತಿಗಳಿಗೂ ಅಡ್ಡವಾಗಿ ಗೋಡೆಯನ್ನು ಕಟ್ಟಲು ಕೆಡವಿರುವ ಈ ಊರಿನವರ ಮನೆಗಳ ವಿಷಯವಾಗಿಯೂ, ಯೆಹೂದದ ಅರಸರ ಉಪ್ಪರಿಗೆಗಳ ವಿಷಯವಾಗಿಯೂ ಇಸ್ರಾಯೇಲರ ದೇವರಾದ ಯೆಹೋವನು ಇಂತೆನ್ನುತ್ತಾನೆ,
5 人要與迦勒底人爭戰,正是拿死屍充滿這房屋,就是我在怒氣和忿怒中所殺的人,因他們的一切惡,我就掩面不顧這城。
೫ಈ ಊರಿನವರು ಕಸ್ದೀಯರನ್ನು ಪ್ರತಿಭಟಿಸುವುದಕ್ಕೆ ಹೊರಟರೆ ಏನು? ತಮ್ಮ ಹೆಣಗಳಿಂದ ಅವರನ್ನು ತೃಪ್ತಿಪಡಿಸುವರು; ಇವರ ಅಧರ್ಮವನ್ನು ಕಂಡು ಈ ಪಟ್ಟಣಕ್ಕೆ ವಿಮುಖನಾಗಿ ಕೋಪ ರೋಷಭರಿತನಾದ ನಾನೇ ಇವರನ್ನು ಹತಿಸುವೆನು.
6 看哪,我要使這城得以痊癒安舒,使城中的人得醫治,又將豐盛的平安和誠實顯明與他們。
೬ಇಗೋ, ನಾನು ಈ ಪಟ್ಟಣವನ್ನು ಜೀರ್ಣೋದ್ಧಾರಮಾಡಿ, ಅದಕ್ಕೆ ಸಮಾಧಾನವನ್ನು ಕೊಟ್ಟು, ನಿವಾಸಿಗಳನ್ನು ಗುಣಪಡಿಸುವೆನು. ಸ್ಥೈರ್ಯ ಸಮಾಧಾನಗಳನ್ನು ಸಮೃದ್ಧಿಯಾಗಿ ಅವರ ಅನುಭವಕ್ಕೆ ತರುವೆನು.
7 我也要使猶大被擄的和以色列被擄的歸回,並建立他們和起初一樣。
೭ಯೆಹೂದದ ಮತ್ತು ಇಸ್ರಾಯೇಲಿನ ದುರವಸ್ಥೆಯನ್ನು ತಪ್ಪಿಸಿ ಮೊದಲಿನಂತೆಯೇ ಅವುಗಳನ್ನು ಉದ್ಧರಿಸುವೆನು.
8 我要除淨他們的一切罪,就是向我所犯的罪;又要赦免他們的一切罪,就是干犯我、違背我的罪。
೮ಅವರು ನನ್ನ ವಿರುದ್ಧವಾಗಿ ಮಾಡಿರುವ ಅಧರ್ಮವನ್ನೆಲ್ಲಾ ತೊಲಗಿಸಿ ಅವರನ್ನು ಶುದ್ಧೀಕರಿಸುವೆನು; ಅವರು ನನಗೆ ಪಾಪದ್ರೋಹಗಳನ್ನು ಮಾಡಿ ನಡೆಸಿರುವ ಅಪರಾಧಗಳನ್ನೆಲ್ಲಾ ಕ್ಷಮಿಸುವೆನು.
9 這城要在地上萬國人面前使我得頌讚,得榮耀,名為可喜可樂之城。萬國人因聽見我向這城所賜的福樂、所施的恩惠平安,就懼怕戰兢。」
೯ನಾನು ಈ ಜನರಿಗೆ ಅನುಗ್ರಹಿಸುವ ಎಲ್ಲಾ ಮೇಲುಗಳ ಸುದ್ದಿಯನ್ನು ಕೇಳಿ ನಾನು ಈ ಪಟ್ಟಣಕ್ಕೆ ಉಂಟುಮಾಡುವ ಸುಖ ಸಮಾಧಾನಗಳನ್ನು ನೋಡಿ ಹೆದರಿ ನಡುಗುವ ಸಕಲ ಭೂರಾಜ್ಯಗಳ ಮುಂದೆ ಈ ಪಟ್ಟಣವು ನನ್ನ ಕೀರ್ತಿಯೂ, ಮಹಿಮೆಯೂ ಮತ್ತು ಆನಂದದ ಬಿರುದು ಆಗುವುದು.’”
10 耶和華如此說:「你們論這地方,說是荒廢無人民無牲畜之地,但在這荒涼無人民無牲畜的猶大城邑和耶路撒冷的街上,
೧೦ಯೆಹೋವನು ಇಂತೆನ್ನುತ್ತಾನೆ, “ಜನ ಮತ್ತು ಪಶುಗಳಿಲ್ಲದೆ ಹಾಳಾಗಿದೆ ಎಂದು ನೀವು ಹೇಳುವ ಈ ಸ್ಥಳದಲ್ಲಿ, ಅಂದರೆ ಜನ, ಪಶುರಹಿತವಾಗಿ ನಿವಾಸಿಗಳಿಲ್ಲದೆ ಹಾಳುಬಿದ್ದಿರುವ ಯೆಹೂದದ ಊರುಗಳಲ್ಲಿ, ಯೆರೂಸಲೇಮಿನ ಬೀದಿಗಳಲ್ಲಿ,
11 必再聽見有歡喜和快樂的聲音、新郎和新婦的聲音,並聽見有人說: 要稱謝萬軍之耶和華, 因耶和華本為善; 他的慈愛永遠長存! 又有奉感謝祭到耶和華殿中之人的聲音;因為我必使這地被擄的人歸回,和起初一樣。這是耶和華說的。」
೧೧ಹರ್ಷಧ್ವನಿ, ಉಲ್ಲಾಸ ಕೋಲಾಹಲ, ವಧೂವರರ ಸ್ವರ ಇವುಗಳು ಕೇಳಿಬರುವವು.”
12 萬軍之耶和華如此說:「在這荒廢無人民無牲畜之地,並其中所有的城邑,必再有牧人的住處;他們要使羊群躺臥在那裏。
೧೨ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ಜನ, ಪಶುಗಳಿಲ್ಲದೆ ಹಾಳಾಗಿರುವ ಈ ಪ್ರಾಂತ್ಯವೂ, ಇಲ್ಲಿನ ಎಲ್ಲಾ ಊರುಗಳೂ ಕುರುಬರು ತಮ್ಮ ಹಿಂಡುಗಳನ್ನು ತಂಗಿಸುವುದಕ್ಕೆ ಪುನಃ ಆಸರೆಯಾಗುವವು.
13 在山地的城邑、高原的城邑、南地的城邑、便雅憫地、耶路撒冷四圍的各處,和猶大的城邑必再有羊群從數點的人手下經過。這是耶和華說的。」
೧೩ಬೆಟ್ಟದ ಊರುಗಳು, ಇಳಕಲಿನ ಊರುಗಳು, ದಕ್ಷಿಣ ಪ್ರಾಂತ್ಯದ ಊರುಗಳು, ಬೆನ್ಯಾಮೀನ್ ಸೀಮೆ, ಯೆರೂಸಲೇಮಿನ ಸುತ್ತಣ ಪ್ರದೇಶಗಳು, ಯೆಹೂದದ ಊರುಗಳು, ಈ ಎಲ್ಲಾ ಸ್ಥಳಗಳಲ್ಲಿ ಹಿಂಡುಗಳು ಎಣಿಸುವವನ ಕೈಗೆ ಲೆಕ್ಕವಾಗುವಂತೆ ಮತ್ತೆ ಹಾದುಹೋಗುವವು. ಇದು ಯೆಹೋವನ ನುಡಿ” ಎಂಬುದೇ.
14 耶和華說:「日子將到,我應許以色列家和猶大家的恩言必然成就。
೧೪ಯೆಹೋವನು ಇಂತೆನ್ನುತ್ತಾನೆ, “ಆಹಾ, ನಾನು ಇಸ್ರಾಯೇಲ್ ಮತ್ತು ಯೆಹೂದ ವಂಶಗಳ ವಿಷಯವಾಗಿ ನುಡಿದಿರುವ ಶುಭವಾಕ್ಯವನ್ನು ನೆರವೇರಿಸುವ ದಿನಗಳು ಬರುವವು.
15 當那日子,那時候,我必使大衛公義的苗裔長起來;他必在地上施行公平和公義。
೧೫ಆ ದಿನಗಳಲ್ಲಿ, ಆ ಕಾಲದಲ್ಲಿ, ದಾವೀದನೆಂಬ ಮೂಲದಿಂದ ಸದ್ಧರ್ಮಿಯಾದ ಮೊಳಕೆಯನ್ನು ಚಿಗುರಿಸುವೆನು; ಅವನು ದೇಶದಲ್ಲಿ ನೀತಿ ಮತ್ತು ನ್ಯಾಯಗಳನ್ನು ನಿರ್ವಹಿಸುವನು.
16 在那日子猶大必得救,耶路撒冷必安然居住,他的名必稱為『耶和華-我們的義』。
೧೬ಆಗ ಯೆಹೂದ್ಯರು ಸುರಕ್ಷಿತವಾಗಿರುವರು, ಯೆರೂಸಲೇಮಿನವರು ನೆಮ್ಮದಿಯಾಗಿ ವಾಸಿಸುವರು; ‘ಯೆಹೋವ ಚಿದ್ಕೇನು’ ಅಂದರೆ ಯೆಹೋವನೇ ‘ನಮ್ಮ ಸದ್ಧರ್ಮ’ ಎಂಬ ಹೆಸರು ಈ ಪಟ್ಟಣಕ್ಕೆ ಸಲ್ಲುವುದು.”
17 「因為耶和華如此說:大衛必永不斷人坐在以色列家的寶座上;
೧೭ಯೆಹೋವನು ಇಂತೆನ್ನುತ್ತಾನೆ, “ದಾವೀದನ ವಂಶವು ನಿಂತು ಹೋಗದೆ ಆ ಸಂತಾನದವರು ಇಸ್ರಾಯೇಲರ ಸಿಂಹಾಸನದಲ್ಲಿ ತಪ್ಪದೆ ಆಸೀನರಾಗುತ್ತಾ ಬರುವರು.
18 祭司、利未人在我面前也不斷人獻燔祭、燒素祭,時常辦理獻祭的事。」
೧೮ನನ್ನ ಸನ್ನಿಧಿಯಲ್ಲಿ ನಿರಂತರವಾಗಿ ಸರ್ವಾಂಗಹೋಮ, ನೈವೇದ್ಯ, ಯಜ್ಞ ಇವುಗಳನ್ನು ಮಾಡಲು ಲೇವಿಯರಾದ ಯಾಜಕರು ಇದ್ದೇ ಇರುವರು.”
೧೯ಯೆಹೋವನು ಯೆರೆಮೀಯನಿಗೆ ಈ ಮಾತನ್ನು ದಯಪಾಲಿಸಿದನು,
20 「耶和華如此說:你們若能廢棄我所立白日黑夜的約,使白日黑夜不按時輪轉,
೨೦“ಯೆಹೋವನು ಇಂತೆನ್ನುತ್ತಾನೆ, ನೀವು ಹಗಲಿರುಳೆಂಬ ನನ್ನ ನಿಬಂಧನೆಗಳನ್ನು ನಿಲ್ಲಿಸಿ ಹಗಲನ್ನು, ಇರುಳನ್ನು ಅದರದರ ಸಮಯದಲ್ಲಿ ಉಂಟಾಗದಂತೆ ಮಾಡಬಹುದಾದರೆ,
21 就能廢棄我與我僕人大衛所立的約,使他沒有兒子在他的寶座上為王,並能廢棄我與事奉我的祭司、利未人所立的約。
೨೧ಆಗ ನನ್ನ ದಾಸನಾದ ದಾವೀದನಿಗೂ, ನನ್ನ ಸೇವಕರಾಗಿರುವ ಲೇವಿಯರಾದ ಯಾಜಕರಿಗೂ ನಾನು ಮಾಡಿದ ನಿಬಂಧನೆಯು ನಿಂತು ಹೋಗಿ ದಾವೀದನ ಸಿಂಹಾಸನಾಸೀನನಾಗಿ ಆಳತಕ್ಕ ಅವನ ಸಂತಾನದವನೊಬ್ಬನೂ ಉಳಿಯದೆ ಹೋದಾನು.
22 天上的萬象不能數算,海邊的塵沙也不能斗量;我必照樣使我僕人大衛的後裔和事奉我的利未人多起來。」
೨೨ನಾನು ನನ್ನ ದಾಸನಾದ ದಾವೀದನ ಸಂತಾನವನ್ನು ಅಸಂಖ್ಯಾತವಾದ ನಕ್ಷತ್ರಗಣದಷ್ಟು ಹೆಚ್ಚಿಸುವೆನು; ನನ್ನ ಸೇವೆಮಾಡುವ ಲೇವಿಯರ ಸಂಖ್ಯೆಯನ್ನು ಅಳೆಯಲಾಗದ ಸಮುದ್ರತೀರದ ಉಸುಬಿನಷ್ಟು ವೃದ್ಧಿಪಡಿಸುವೆನು.”
೨೩ಇದಲ್ಲದೆ ಯೆಹೋವನು ಯೆರೆಮೀಯನಿಗೆ ಈ ವಾಕ್ಯವನ್ನು ದಯಪಾಲಿಸಿದನು,
24 「你沒有揣摩這百姓的話嗎?他們說:『耶和華所揀選的二族,他已經棄絕了。』他們這樣藐視我的百姓,以為不再成國。
೨೪“ಯೆಹೋವನು ತಾನು ಆರಿಸಿಕೊಂಡ ಎರಡು ವಂಶಗಳನ್ನು ನಿರಾಕರಿಸಿಬಿಟ್ಟಿದ್ದಾನೆ ಎಂದು ಈ ಜನರು ಆಡಿಕೊಳ್ಳುವ ಮಾತು ನಿನ್ನ ಲಕ್ಷ್ಯಕ್ಕೆ ಬರಲಿಲ್ಲವೇ? ಇವರು ಜನಾಂಗವೇ ಅಲ್ಲ ಎನ್ನುವಷ್ಟು ನನ್ನ ಜನರನ್ನು ಅಸಡ್ಡೆಮಾಡುತ್ತಾರಲ್ಲಾ.
25 耶和華如此說:若是我立白日黑夜的約不能存住,若是我未曾安排天地的定例,
೨೫ಯೆಹೋವನು ಇಂತೆನ್ನುತ್ತಾನೆ, ಹಗಲಿರುಳೆಂಬ ನನ್ನ ನಿಬಂಧನೆಯು ಸ್ಥಿರವಾಗಿ ನಿಲ್ಲದಿದ್ದರೆ, ಭೂಮ್ಯಾಕಾಶಗಳ ಕಟ್ಟಳೆಗಳನ್ನು ನಾನು ವಿಧಿಸಿದವನಲ್ಲದಿದ್ದರೆ,
26 我就棄絕雅各的後裔和我僕人大衛的後裔,不使大衛的後裔治理亞伯拉罕、以撒、雅各的後裔;因為我必使他們被擄的人歸回,也必憐憫他們。」
೨೬ಆಗ ನಾನು ಯಾಕೋಬನ ಸಂತಾನದವರನ್ನು ತ್ಯಜಿಸಿ ಅಬ್ರಹಾಮ, ಇಸಾಕ, ಯಾಕೋಬ, ಇವರ ಸಂತತಿಯನ್ನು ಆಳತಕ್ಕ ಒಡೆಯರನ್ನು ನನ್ನ ದಾಸನಾದ ದಾವೀದನ ವಂಶದಿಂದ ಆರಿಸದೆ ಆ ವಂಶದವರನ್ನು ನಿರಾಕರಿಸಿಬಿಟ್ಟೆನು. ನಾನು ಅವರನ್ನು ದುರವಸ್ಥೆಯಿಂದ ತಪ್ಪಿಸಿ ಕರುಣಿಸೇ ಕರುಣಿಸುವೆನು.”