< 诗篇 90 >

1 神人摩西的祈祷。 主啊,你世世代代作我们的居所。
ಪಾಪಾತ್ಮರಿಗೆ ದೇವರ ದಯವೇ ಆಶ್ರಯ ಕರ್ತನೇ, ತಲತಲಾಂತರಗಳಿಂದಲೂ ನಮ್ಮ ಆಶ್ರಯಸ್ಥಾನವು ನೀನೇ.
2 诸山未曾生出, 地与世界你未曾造成, 从亘古到永远,你是 神。
ಬೆಟ್ಟಗಳು ಉಂಟಾಗುವುದಕ್ಕಿಂತ ಮೊದಲೇ, ಭೂಮಿಯೂ ಅದರ ದೇಶಗಳೂ ನಿರ್ಮಾಣವಾಗುವುದಕ್ಕಿಂತ ಮೊದಲೇ, ಯುಗಯುಗಾಂತರಗಳಲ್ಲಿಯೂ ನೀನೇ ದೇವರು.
3 你使人归于尘土,说: 你们世人要归回。
“ಮನುಷ್ಯರೇ, ಸಾಯಿರಿ” ಎಂದು ಆಜ್ಞಾಪಿಸಿ, ಅವರನ್ನು ಪುನಃ ಮಣ್ಣಿಗೆ ಸೇರಿಸುತ್ತೀ.
4 在你看来,千年如已过的昨日, 又如夜间的一更。
ಸಾವಿರ ವರ್ಷಗಳು ನಿನ್ನ ದೃಷ್ಟಿಯಲ್ಲಿ ಗತಿಸಿಹೋದ ನಿನ್ನೆಯ ದಿನದಂತೆಯೂ, ರಾತ್ರಿಯ ಜಾವದಂತೆಯೂ ಇವೆ.
5 你叫他们如水冲去; 他们如睡一觉。 早晨,他们如生长的草,
ನೀನು ಮನುಷ್ಯರನ್ನು ಪ್ರವಾಹದಿಂದ ಬಡಿದುಕೊಂಡು ಹೋಗುತ್ತೀ; ಅವರು ನಿದ್ರೆಗೆ ಸಮಾನರೇ. ಅವರು ಹೊತ್ತಾರೆಯಲ್ಲಿ ಚಿಗುರುವ ಹುಲ್ಲಿನಂತಿದ್ದಾರೆ.
6 早晨发芽生长, 晚上割下枯干。
ಅದು ಮುಂಜಾನೆಯಲ್ಲಿ ಬೆಳೆದು ಹೂಬಿಡುತ್ತದೆ; ಸಂಜೆಯಲ್ಲಿ ಕೊಯ್ಯಲ್ಪಟ್ಟು ಒಣಗಿಹೋಗುತ್ತದೆ.
7 我们因你的怒气而消灭, 因你的忿怒而惊惶。
ನಿನ್ನ ಕೋಪದಿಂದ ನಾವು ಇಲ್ಲವಾದೆವು; ನಿನ್ನ ರೌದ್ರದಿಂದ ತಲ್ಲಣಗೊಂಡೆವು.
8 你将我们的罪孽摆在你面前, 将我们的隐恶摆在你面光之中。
ನಮ್ಮ ದ್ರೋಹಗಳನ್ನು ನಿನ್ನ ಮುಂದೆಯೂ, ನಮ್ಮ ಗುಪ್ತಪಾಪಗಳನ್ನು ನಿನ್ನ ತೇಜೋದೃಷ್ಟಿಯಲ್ಲಿಯೂ ಇಟ್ಟುಕೊಂಡಿದ್ದಿ.
9 我们经过的日子都在你震怒之下; 我们度尽的年岁好像一声叹息。
ನಿನ್ನ ರೋಷದಿಂದ ನಮ್ಮ ಕಾಲವೆಲ್ಲಾ ಕಳೆದು ಹೋಯಿತು; ನಮ್ಮ ವರ್ಷಗಳು ನಿಟ್ಟುಸಿರಿನಂತೆ ತೀರಿಹೋದವು.
10 我们一生的年日是七十岁, 若是强壮可到八十岁; 但其中所矜夸的不过是劳苦愁烦, 转眼成空,我们便如飞而去。
೧೦ನಮ್ಮ ಆಯುಷ್ಕಾಲವು ಎಪ್ಪತ್ತು ವರ್ಷ, ಬಲ ಹೆಚ್ಚಿದರೆ ಎಂಭತ್ತು; ಕಷ್ಟಸಂಕಟಗಳೇ ಅದರ ಆಡಂಬರ. ಅದು ಬೇಗನೆ ಗತಿಸಿಹೋಗುತ್ತದೆ; ನಾವು ಹಾರಿ ಹೋಗುತ್ತೇವೆ.
11 谁晓得你怒气的权势? 谁按着你该受的敬畏晓得你的忿怒呢?
೧೧ನಿನ್ನ ಕೋಪದ ಬಲವನ್ನೂ, ಭಯಭಕ್ತಿಗೆ ಕಾರಣವಾಗಿರತಕ್ಕ ನಿನ್ನ ರೌದ್ರವನ್ನೂ ಗ್ರಹಿಸುವವರಾರು?
12 求你指教我们怎样数算自己的日子, 好叫我们得着智慧的心。
೧೨ನಮ್ಮ ದಿನಗಳು ಕೊಂಚವೇ ಎಂದು ಎಣಿಸಿಕೊಳ್ಳುವ ಹಾಗೆ ನಮಗೆ ಕಲಿಸು; ಆಗ ಜ್ಞಾನದ ಹೃದಯವನ್ನು ಪಡೆದುಕೊಳ್ಳುವೆವು.
13 耶和华啊,我们要等到几时呢? 求你转回,为你的仆人后悔。
೧೩ಯೆಹೋವನೇ, ಮನಸ್ಸನ್ನು ಬೇರೆ ಮಾಡಿಕೋ; ಎಷ್ಟರವರೆಗೆ ಕೋಪ ಮಾಡುವಿ? ನಿನ್ನ ಸೇವಕರ ಮೇಲೆ ಕರುಣೆಯಿರಲಿ.
14 求你使我们早早饱得你的慈爱, 好叫我们一生一世欢呼喜乐。
೧೪ಮುಂಜಾನೆಯಲ್ಲಿ ನಿನ್ನ ಕೃಪೆಯಿಂದ ನಮ್ಮನ್ನು ಸಂತೃಪ್ತಿಪಡಿಸು; ಆಗ ಜೀವಮಾನದಲ್ಲೆಲ್ಲಾ ಉಲ್ಲಾಸಿಸಿ ಹರ್ಷಿಸುವೆವು.
15 求你照着你使我们受苦的日子, 和我们遭难的年岁,叫我们喜乐。
೧೫ನೀನು ನಮ್ಮನ್ನು ಕುಗ್ಗಿಸಿದ ದಿನಗಳಿಗೂ, ನಾವು ಕೇಡನ್ನು ಅನುಭವಿಸಿದ ವರ್ಷಗಳಿಗೂ ತಕ್ಕಂತೆ ನಮ್ಮನ್ನು ಸಂತೋಷಪಡಿಸು.
16 愿你的作为向你仆人显现; 愿你的荣耀向他们子孙显明。
೧೬ನಿನ್ನ ಸೇವಕರಿಗೆ ನಿನ್ನ ರಕ್ಷಣಾ ಕಾರ್ಯವೂ, ಅವರ ಮಕ್ಕಳಿಗೋಸ್ಕರ ನಿನ್ನ ಮಹತ್ತೂ ಪ್ರಕಟವಾಗಲಿ.
17 愿主—我们 神的荣美归于我们身上。 愿你坚立我们手所做的工; 我们手所做的工,愿你坚立。
೧೭ನಮ್ಮ ಯೆಹೋವ ದೇವರ ಪ್ರಸನ್ನತೆಯು ನಮ್ಮ ಮೇಲೆ ಇರಲಿ. ನಾವು ಕೈ ಹಾಕಿದ ಕೆಲಸವನ್ನು ನಮಗೆ ಸಫಲಪಡಿಸು; ನಾವು ಕೈಹಾಕಿದ ಕೆಲಸವನ್ನು ಸಫಲ ವಾಗುವಂತೆ ಮಾಡು.

< 诗篇 90 >