< 诗篇 79 >

1 亚萨的诗。 神啊,外邦人进入你的产业, 污秽你的圣殿,使耶路撒冷变成荒堆,
ಆಸಾಫನ ಕೀರ್ತನೆ. ದೇವರೇ, ಮ್ಲೇಚ್ಛರು ನಿನ್ನ ಸ್ವತ್ತನ್ನು ಹೊಕ್ಕು, ನಿನ್ನ ಪರಿಶುದ್ಧಾಲಯವನ್ನು ಹೊಲೆಮಾಡಿದರು; ಯೆರೂಸಲೇಮ್ ಪಟ್ಟಣವನ್ನು ಹಾಳು ದಿಬ್ಬಗಳನ್ನಾಗಿ ಮಾಡಿಬಿಟ್ಟರು.
2 把你仆人的尸首交与天空的飞鸟为食, 把你圣民的肉交与地上的野兽,
ಅವರು ನಿನ್ನ ಸೇವಕರ ಹೆಣಗಳನ್ನು ಆಕಾಶದ ಪಕ್ಷಿಗಳಿಗೆ ಆಹಾರಮಾಡಿದರು; ನಿನ್ನ ಭಕ್ತರ ದೇಹವನ್ನು ಕಾಡುಮೃಗಗಳಿಗೆ ಹಾಕಿದರು.
3 在耶路撒冷周围流他们的血如水, 无人葬埋。
ಯೆರೂಸಲೇಮಿನ ಸುತ್ತಲೂ ಅವರ ರಕ್ತವನ್ನು ನೀರಿನ ಹಾಗೆ ಚೆಲ್ಲಿದರು; ಅವರನ್ನು ಹೂಣಿಡುವವರು ಯಾರೂ ಇರಲಿಲ್ಲ.
4 我们成为邻国的羞辱, 成为我们四围人的嗤笑讥刺。
ನಾವು ನಮ್ಮ ನೆರೆಹೊರೆಯ ಜನಾಂಗಗಳಿಗೆ ನಿಂದಾಸ್ಪದರಾದೆವು; ಸುತ್ತಣ ಜನರ ಪರಿಹಾಸ್ಯ ಮತ್ತು ತಿರಸ್ಕಾರಕ್ಕೆ ಗುರಿಯಾದೆವು.
5 耶和华啊,这到几时呢? 你要动怒到永远吗? 你的愤恨要如火焚烧吗?
ಯೆಹೋವನೇ, ಇನ್ನೆಷ್ಟರವರೆಗೆ ಕೋಪವುಳ್ಳವನಾಗಿರುವಿ? ನಿನ್ನ ರೋಷಾಗ್ನಿಯು ಸದಾಕಾಲವೂ ಉರಿಯುತ್ತಲಿರಬೇಕೋ?
6 愿你将你的忿怒倒在那不认识你的外邦 和那不求告你名的国度。
ನಿನ್ನನ್ನು ಅರಿಯದ ಮ್ಲೇಚ್ಛರ ಮೇಲೆಯೂ, ನಿನ್ನ ನಾಮವನ್ನು ಉಚ್ಚರಿಸದ ರಾಜ್ಯಗಳ ಮೇಲೆಯೂ, ನಿನ್ನ ರೌದ್ರವನ್ನು ಸುರಿದುಬಿಡು.
7 因为他们吞了雅各, 把他的住处变为荒场。
ಅವರು ಯಾಕೋಬ್ ವಂಶದವರನ್ನು ನುಂಗಿಬಿಟ್ಟು, ಅವರ ವಾಸಸ್ಥಳಗಳನ್ನು ಹಾಳುಮಾಡಿದ್ದಾರೆ.
8 求你不要记念我们先祖的罪孽,向我们追讨; 愿你的慈悲快迎着我们, 因为我们落到极卑微的地步。
ಪೂರ್ವಿಕರ ಅಪರಾಧಗಳನ್ನು ನಮ್ಮ ಹಾನಿಗಾಗಿ ನೆನಪಿಸಿಕೊಳ್ಳಬೇಡ. ಬೇಗನೆ ನಿನ್ನ ಕನಿಕರವು ನಮ್ಮನ್ನು ಎದುರುಗೊಳ್ಳಲಿ; ಬಹಳವಾಗಿ ಕುಗ್ಗಿಹೋಗಿದ್ದೇವೆ.
9 拯救我们的 神啊,求你因你名的荣耀帮助我们! 为你名的缘故搭救我们,赦免我们的罪。
ನಮ್ಮನ್ನು ರಕ್ಷಿಸುವ ದೇವರೇ, ನಿನ್ನ ನಾಮದ ಘನತೆಗೋಸ್ಕರ ಸಹಾಯಮಾಡು; ನಿನ್ನ ಹೆಸರಿಗೆ ತಕ್ಕಂತೆ ರಕ್ಷಿಸಿ ನಮ್ಮ ಪಾಪಗಳನ್ನು ಅಳಿಸಿಬಿಡು.
10 为何容外邦人说“他们的 神在哪里”呢? 愿你使外邦人知道你在我们眼前 伸你仆人流血的冤。
೧೦ಮ್ಲೇಚ್ಛರು, “ಅವರ ದೇವರು ಎಲ್ಲಿ?” ಎಂದು ಕೇಳುವುದೇಕೆ? ನಿನ್ನ ಸೇವಕರ ರಕ್ತವನ್ನು ಸುರಿಸಿದವರಿಗೆ ನಮ್ಮ ಮುಂದೆಯೇ ದಂಡನೆಯಾದದ್ದು, ಜನಾಂಗಗಳಿಗೆ ಗೊತ್ತಾಗಲಿ.
11 愿被囚之人的叹息达到你面前; 愿你按你的大能力存留那些将要死的人。
೧೧ಸೆರೆಹೋದವರ ನರಳುವಿಕೆಯು ನಿನ್ನ ಲಕ್ಷ್ಯಕ್ಕೆ ಬರಲಿ; ಸಾಯಲಿರುವವರನ್ನು ನಿನ್ನ ಭುಜಮಹತ್ತಿನಿಂದ ಉಳಿಸು.
12 主啊,愿你将我们邻邦所羞辱你的羞辱 加七倍归到他们身上。
೧೨ಸ್ವಾಮಿಯೇ, ನಿನ್ನನ್ನು ನಿಂದಿಸಿದ ಸುತ್ತಣ ಜನಾಂಗಗಳ ಉಡಿಲಲ್ಲಿ, ಏಳರಷ್ಟು ನಿಂದನೆ ತುಂಬಿರುವಂತೆ ಮಾಡು.
13 这样,你的民,你草场的羊, 要称谢你,直到永远; 要述说赞美你的话,直到万代。
೧೩ನಿನ್ನ ಪ್ರಜೆಯೂ, ನೀನು ಪಾಲಿಸುವ ಮಂದೆಯೂ ಆಗಿರುವ ನಾವಾದರೋ, ಸದಾ ನಿನ್ನನ್ನು ಸ್ತುತಿಸುವವರಾಗಿ, ಮುಂದಣ ಸಂತಾನದವರೆಲ್ಲರಿಗೂ ನಿನ್ನ ಮಹತ್ತನ್ನು ವರ್ಣಿಸುತ್ತಾ ಹೋಗುವೆವು.

< 诗篇 79 >