< 诗篇 62 >

1 大卫的诗,照耶杜顿的作法,交与伶长。 我的心默默无声,专等候 神; 我的救恩是从他而来。
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಯೆದುತೂನನ ರೀತಿಯಲ್ಲಿ ಹಾಡತಕ್ಕದ್ದು; ದಾವೀದನ ಕೀರ್ತನೆ. ದೇವರಲ್ಲಿಯೇ ನನ್ನ ಪ್ರಾಣಕ್ಕೆ ಶಾಂತಿ, ನನ್ನ ರಕ್ಷಣೆಯು ದೇವರಿಂದಲೇ.
2 惟独他是我的磐石,我的拯救; 他是我的高台,我必不很动摇。
ದೇವರು ಮಾತ್ರವೇ ನನ್ನ ಬಂಡೆಯೂ ನನ್ನ ರಕ್ಷಣೆಯೂ, ನನ್ನ ಕೋಟೆಯೂ ಆಗಿದ್ದಾರೆ. ನಾನೆಂದಿಗೂ ಕದಲೆನು.
3 你们大家攻击一人,把他毁坏, 如同毁坏歪斜的墙、将倒的壁,要到几时呢?
ಹಾನಿಮಾಡುವವರೇ, ಎಷ್ಟರವರೆಗೆ ನೀವು ದಾಳಿಮಾಡುವಿರಿ. ಬಾಗುವ ಗೋಡೆಯಂತೆಯೂ, ಅಲ್ಲಾಡುವ ಬೇಲಿಯಂತೆಯೂ ನನ್ನನ್ನು ಕೆಡವಲು ಯತ್ನಿಸುವಿರಾ?
4 他们彼此商议,专要从他的尊位上把他推下; 他们喜爱谎话,口虽祝福,心却咒诅。 (细拉)
ಅವರು ನನ್ನನ್ನು ಉನ್ನತ ಸ್ಥಾನದಿಂದ ದಬ್ಬುವುದಕ್ಕೆ ಆಲೋಚಿಸುತ್ತಿದ್ದಾರೆ. ಅವರು ಸುಳ್ಳನ್ನು ಇಷ್ಟಪಡುತ್ತಾರೆ; ತಮ್ಮ ಬಾಯಿಂದ ಆಶೀರ್ವದಿಸಿ, ಹೃದಯದಲ್ಲಿ ಶಪಿಸುತ್ತಾರೆ.
5 我的心哪,你当默默无声,专等候 神, 因为我的盼望是从他而来。
ಹೌದು, ದೇವರಲ್ಲಿಯೇ ನನ್ನ ಪ್ರಾಣಕ್ಕೆ ಶಾಂತಿ. ನನ್ನ ನಿರೀಕ್ಷೆಯು ದೇವರಿಂದಲೇ.
6 惟独他是我的磐石,我的拯救; 他是我的高台,我必不动摇。
ದೇವರೇ ನನ್ನ ಬಂಡೆಯೂ ನನ್ನ ರಕ್ಷಣೆಯೂ, ನನ್ನ ಕೋಟೆಯೂ ಆಗಿದ್ದಾರೆ. ನಾನೆಂದಿಗೂ ಕದಲೆನು.
7 我的拯救、我的荣耀都在乎 神; 我力量的磐石、我的避难所都在乎 神。
ದೇವರು ನನ್ನ ರಕ್ಷಣೆಗೂ ನನ್ನ ಗೌರವಕ್ಕೂ ಆಧಾರವಾಗಿದ್ದಾರೆ. ದೇವರು ನನ್ನ ಬಲವಾದ ಬಂಡೆಯೂ ನನ್ನ ಆಶ್ರಯವೂ ಆಗಿದ್ದಾರೆ.
8 你们众民当时时倚靠他, 在他面前倾心吐意; 神是我们的避难所。 (细拉)
ಜನರೇ, ಎಲ್ಲಾ ಕಾಲದಲ್ಲಿಯೂ ದೇವರಲ್ಲಿ ಭರವಸೆ ಇಡಿರಿ. ನಿಮ್ಮ ಹೃದಯವನ್ನು ದೇವರ ಮುಂದೆ ಒಯ್ಯಿರಿ. ದೇವರು ನಮಗೆ ಆಶ್ರಯವಾಗಿದ್ದಾರೆ.
9 下流人真是虚空; 上流人也是虚假; 放在天平里就必浮起; 他们一共比空气还轻。
ಸಾಮಾನ್ಯ ಜನರು ಬರೀ ಉಸಿರೇ, ಉನ್ನತ ಜನರು ಬರೀ ಸುಳ್ಳೇ. ತಕ್ಕಡಿಯಲ್ಲಿ ತೂಗಿದರೆ ಅವರೇನೂ ಇಲ್ಲ, ಎಲ್ಲರೂ ಬರೀ ಉಸಿರೇ.
10 不要仗势欺人, 也不要因抢夺而骄傲; 若财宝加增,不要放在心上。
ಅನ್ಯಾಯದ ಸುಲಿಗೆಯಲ್ಲಿ ಭರವಸೆ ಇಡಬೇಡಿರಿ. ಸೂರೆಮಾಡಿದ್ದರಲ್ಲಿ ಗರ್ವಪಡಬೇಡಿರಿ. ಆಸ್ತಿಯು ಹೆಚ್ಚಾದರೆ ಅದರ ಮೇಲೆ ಮನಸ್ಸಿಡಬೇಡಿರಿ.
11 神说了一次、两次,我都听见: 就是能力都属乎 神。
ಒಂದು ಸಾರಿ ದೇವರು ಮಾತನಾಡಿದ್ದಾರೆ. ನಾನು ಎರಡು ಸಾರಿ ಇದನ್ನು ಹೀಗೆಂದು ಕೇಳಿದ್ದೇನೆ: “ದೇವರೇ, ಶಕ್ತಿಯು ನಿಮಗೇ ಸೇರಿದೆ.
12 主啊,慈爱也是属乎你, 因为你照着各人所行的报应他。
ಯೆಹೋವ ದೇವರೇ, ನಿಮ್ಮಲ್ಲಿ ಒಡಂಬಡಿಕೆಯ ಪ್ರೀತಿ ಇದೆ. ನೀವು ಪ್ರತಿ ಮನುಷ್ಯನಿಗೂ ಅವನ ಕೃತ್ಯಕ್ಕೆ ತಕ್ಕ ಪ್ರತಿಫಲ ಕೊಡುತ್ತೀರಿ.”

< 诗篇 62 >