< 诗篇 21 >

1 大卫的诗,交与伶长。 耶和华啊,王必因你的能力欢喜; 因你的救恩,他的快乐何其大!
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನ ಕೀರ್ತನೆ. ಯೆಹೋವನೇ, ನಿನ್ನ ಪರಾಕ್ರಮದಲ್ಲಿ ಅರಸನು ಸಂತೋಷಿಸುತ್ತಾನೆ; ನೀನು ಉಂಟುಮಾಡಿದ ಜಯಕ್ಕಾಗಿ ಎಷ್ಟೋ ಆನಂದಪಡುತ್ತಾನೆ.
2 他心里所愿的,你已经赐给他; 他嘴唇所求的,你未尝不应允。 (细拉)
ನೀನು ಅವನ ಪ್ರಾರ್ಥನೆಯನ್ನು ನಿರಾಕರಿಸದೆ, ಅವನ ಇಷ್ಟಾರ್ಥವನ್ನು ನೆರವೇರಿಸಿದಿಯಲ್ಲಾ. (ಸೆಲಾ)
3 你以美福迎接他, 把精金的冠冕戴在他头上。
ನಾನಾ ಶುಭಗಳೊಡನೆ ನೀನೇ ಅವನನ್ನು ಎದುರುಗೊಂಡಿಯಲ್ಲಾ; ಅವನ ತಲೆಯ ಮೇಲೆ ಸುವರ್ಣ ಕಿರೀಟವನ್ನು ಇಟ್ಟಿದ್ದೀ.
4 他向你求寿,你便赐给他, 就是日子长久,直到永远。
ಅವನು ದೀರ್ಘಾಯುಷ್ಯವನ್ನು ಬೇಡಿಕೊಳ್ಳಲು, ನೀನು ಅವನಿಗೆ ಯುಗಯುಗಾಂತರಗಳ ಆಯುಷ್ಯವನ್ನು ಅನುಗ್ರಹಿಸಿದ್ದೀ.
5 他因你的救恩大有荣耀; 你又将尊荣威严加在他身上。
ನಿನ್ನ ರಕ್ಷಣಕಾರ್ಯದಿಂದ ಅವನ ಗೌರವ ಬಹು ವೃದ್ಧಿಯಾಯಿತು; ಘನತೆ ಮತ್ತು ವೈಭವಗಳನ್ನು ಅವನಿಗೆ ಅನುಗ್ರಹಿಸಿದ್ದೀ.
6 你使他有洪福,直到永远, 又使他在你面前欢喜快乐。
ಅವನಿಗೆ ಶಾಶ್ವತವಾದ ಸೌಭಾಗ್ಯನಿಧಿಯನ್ನು ದಯಪಾಲಿಸಿದ್ದೀ; ಅವನನ್ನು ನಿನ್ನ ಸನ್ನಿಧಿಯಲ್ಲಿ ಅತ್ಯಾನಂದಪಡಿಸಿದ್ದೀ.
7 王倚靠耶和华, 因至高者的慈爱必不摇动。
ಅರಸನು ಯೆಹೋವನಲ್ಲಿಯೇ ಭರವಸವಿಟ್ಟಿದ್ದಾನೆ; ಪರಾತ್ಪರನಾದ ದೇವರ ಶಾಶ್ವತ ಪ್ರೀತಿಯ ನಿಮಿತ್ತ ಅವನು ಕದಲುವುದೇ ಇಲ್ಲ.
8 你的手要搜出你的一切仇敌; 你的右手要搜出那些恨你的人。
ಶತ್ರುಗಳೆಲ್ಲರು ನಿನಗೆ ಸಿಕ್ಕುವರು; ಭುಜಬಲದಿಂದ ನಿನ್ನ ಹಗೆಗಳನ್ನು ಹಿಡಿಯುವಿ.
9 你发怒的时候,要使他们如在炎热的火炉中。 耶和华要在他的震怒中吞灭他们; 那火要把他们烧尽了。
ನೀನು ಪ್ರತ್ಯಕ್ಷನಾಗುವಾಗ ಉರಿಯುವ ಕುಲುಮೆಯಂತಿದ್ದು ಅವರನ್ನು ಬೂದಿ ಮಾಡುವಿ. ಯೆಹೋವನು ಮಹಾಕೋಪದಿಂದ ಅವರನ್ನು ನಾಶ ಮಾಡುವನು; ಆತನ ಕೋಪಾಗ್ನಿ ಅವರನ್ನು ದಹಿಸಿಬಿಡುವುದು.
10 你必从世上灭绝他们的子孙, 从人间灭绝他们的后裔。
೧೦ನೀನು ಅವರನ್ನು ಸಂಹರಿಸಿ, ಭೂಮಿಯ ಮೇಲೆ ಅವರ ಸಂತತಿಯೇ ಇಲ್ಲದಂತೆ ಮಾಡುವಿ; ಅವರ ವಂಶದವರು ಮನುಷ್ಯರೊಳಗೆ ಉಳಿಯುವುದೇ ಇಲ್ಲ.
11 因为他们有意加害于你; 他们想出计谋,却不能作成。
೧೧ಅವರು ತಂತ್ರೋಪಾಯಗಳನ್ನು ಕಲ್ಪಿಸಿ, ನಿನಗೆ ಕೇಡನ್ನು ಮಾಡಬೇಕೆಂದು ಆಲೋಚಿಸಿದರೂ ಅದು ನಡೆಯುವುದಿಲ್ಲ.
12 你必使他们转背逃跑, 向他们的脸搭箭在弦。
೧೨ನೀನು ನಿನ್ನ ಬಾಣಗಳನ್ನು ಬಿಲ್ಲಿಗೆ ಹೂಡಿ, ಅವರ ಮುಖಗಳ ಮೇಲೆ ಎಸೆದು, ಅವರು ಬೆನ್ನುತೋರಿಸಿ ಓಡಿಹೋಗುವಂತೆ ಮಾಡುವಿ.
13 耶和华啊,愿你因自己的能力显为至高! 这样,我们就唱诗,歌颂你的大能。
೧೩ಯೆಹೋವನೇ, ಪರಾಕ್ರಮದಿಂದ ನಿನ್ನನ್ನು ಘನಪಡಿಸಿಕೋ; ನಾವು ಗಾಯನಮಾಡುತ್ತಾ ನಿನ್ನ ಶೂರತ್ವವನ್ನು ಕೊಂಡಾಡುವೆವು.

< 诗篇 21 >