< 诗篇 122 >

1 大卫上行之诗。 人对我说:我们往耶和华的殿去, 我就欢喜。
ದಾವೀದನ ಯಾತ್ರಾ ಗೀತೆ. “ಯೆಹೋವ ದೇವರ ಆಲಯಕ್ಕೆ ಹೋಗೋಣ,” ಎಂದು ಜನರು ನನ್ನನ್ನು ಕರೆದಾಗ, ನನಗೆ ಸಂತೋಷವಾಯಿತು.
2 耶路撒冷啊, 我们的脚站在你的门内。
ಯೆರೂಸಲೇಮೇ, ನಮ್ಮ ಪಾದಗಳು ನಿನ್ನ ಬಾಗಿಲುಗಳಲ್ಲಿ ತಲುಪಿದೆ.
3 耶路撒冷被建造, 如同连络整齐的一座城。
ಯೆರೂಸಲೇಮು, ಗಂಭೀರವಾಗಿಯೂ ಗಟ್ಟಿಯಾಗಿಯೂ ಕಟ್ಟಿರುವ ಪಟ್ಟಣವಾಗಿದೆ.
4 众支派,就是耶和华的支派,上那里去, 按以色列的常例称赞耶和华的名。
ಅಲ್ಲಿಗೆ ಗೋತ್ರಗಳು, ಯೆಹೋವ ದೇವರು ಇಸ್ರಾಯೇಲಿಗೆ ಕೊಟ್ಟ ಕಟ್ಟಳೆಗಳ ಪ್ರಕಾರ ಯೆಹೋವ ದೇವರ ಹೆಸರನ್ನು ಕೊಂಡಾಡುವುದಕ್ಕೆ ಗೋತ್ರಗಳು ಯಾತ್ರೆಯಾಗಿ ಬರುತ್ತಿದ್ದವು.
5 因为在那里设立审判的宝座, 就是大卫家的宝座。
ಏಕೆಂದರೆ ಅಲ್ಲಿ ನ್ಯಾಯ ನಿರ್ಣಯಕ್ಕೆ ಸಿಂಹಾಸನಗಳೂ, ಅಂದರೆ, ದಾವೀದನ ಮನೆಯ ಸಿಂಹಾಸನಗಳೂ ಇರುತ್ತವೆ.
6 你们要为耶路撒冷求平安! 耶路撒冷啊,爱你的人必然兴旺!
ಯೆರೂಸಲೇಮಿನ ಸಮಾಧಾನಕ್ಕಾಗಿ ಪ್ರಾರ್ಥನೆಮಾಡಿರಿ. “ಯೆರೂಸಲೇಮೇ, ನಿನ್ನನ್ನು ಪ್ರೀತಿಸುವವರಿಗೆ ಅಭಿವೃದ್ಧಿಯಾಗಲಿ.
7 愿你城中平安! 愿你宫内兴旺!
ನಿನ್ನ ಪ್ರಾಕಾರದಲ್ಲಿ ಸಮಾಧಾನವಿರಲಿ, ನಿನ್ನ ಅರಮನೆಗಳಲ್ಲಿ ಅಭಿವೃದ್ಧಿಯೂ ಇರಲಿ.”
8 因我弟兄和同伴的缘故,我要说: 愿平安在你中间!
ನನ್ನ ಸಹೋದರರ ನಿಮಿತ್ತವೂ ನನ್ನ ಸ್ನೇಹಿತರ ನಿಮಿತ್ತವೂ “ನಿನ್ನಲ್ಲಿ ಸಮಾಧಾನವಿರಲಿ,” ಎಂದು ಈಗ ಹೇಳುತ್ತೇನೆ.
9 因耶和华—我们 神殿的缘故, 我要为你求福!
ನಮ್ಮ ದೇವರಾದ ಯೆಹೋವ ದೇವರ ಆಲಯದ ನಿಮಿತ್ತ ನಿನಗೆ ಸಮೃದ್ಧಿಯಾಗಲಿ ಎಂದು ಹಾರೈಸುತ್ತೇನೆ.

< 诗篇 122 >