< 尼希米记 7 >

1 城墙修完,我安了门扇,守门的、歌唱的,和利未人都已派定。
ನಾನು ಗೋಡೆಯನ್ನು ಪುನಃ ಕಟ್ಟಿಸಿ, ಬಾಗಿಲುಗಳನ್ನು ನಿಲ್ಲಿಸಿ, ತರುವಾಯ ಬಾಗಿಲು ಕಾಯುವವರನ್ನು, ಹಾಡುಗಾರರನ್ನು, ಲೇವಿಯರನ್ನು ನೇಮಿಸಿದೆನು.
2 我就派我的弟兄哈拿尼和营楼的宰官哈拿尼雅管理耶路撒冷;因为哈拿尼雅是忠信的,又敬畏 神过于众人。
ಆಮೇಲೆ ನಾನು ನನ್ನ ಸಹೋದರನಾದ ಹನಾನೀ ಮತ್ತು ಅರಮನೆಯ ಅಧಿಪತಿಯಾದ ಹನನ್ಯ ಇವರಿಗೆ ಯೆರೂಸಲೇಮಿನ ಜವಾಬ್ದಾರಿಕೆಯನ್ನು ಒಪ್ಪಿಸಿದೆನು. ಏಕೆಂದರೆ ಇವನು ಸತ್ಯವಂತನಾಗಿಯೂ, ಅನೇಕರಿಗಿಂತ ಹೆಚ್ಚಾಗಿ ದೇವರಿಗೆ ಭಯಪಡುವವನಾಗಿಯೂ ಇದ್ದನು.
3 我吩咐他们说:“等到太阳上升才可开耶路撒冷的城门;人尚看守的时候就要关门上闩;也当派耶路撒冷的居民各按班次看守自己房屋对面之处。”
ಆಗ ನಾನು ಅವರಿಗೆ, “ಬಿಸಿಲು ಏರುವುದಕ್ಕಿಂತ ಮೊದಲೇ ಯೆರೂಸಲೇಮಿನ ಬಾಗಿಲುಗಳನ್ನು ತೆರೆಯಬಾರದು. ಇದಲ್ಲದೆ ನೀವು ಸಮೀಪದಲ್ಲಿ ನಿಂತಿರುವಾಗ, ಕದಗಳನ್ನು ಮುಚ್ಚಿ ಅಗುಳಿಗಳನ್ನು ಹಾಕಿರಿ. ಯೆರೂಸಲೇಮಿನ ನಿವಾಸಿಗಳಲ್ಲಿ ಪ್ರತಿ ಮನುಷ್ಯನು ತನ್ನ ಮನೆಗೆ ಎದುರಾಗಿ ಕಾವಲಾಗಿರಲು ನೇಮಿಸಿರಿ,” ಎಂದು ಹೇಳಿದೆನು.
4 城是广大,其中的民却稀少,房屋还没有建造。
ಪಟ್ಟಣವು ವಿಸ್ತಾರವಾಗಿಯೂ, ದೊಡ್ಡದಾಗಿಯೂ ಇತ್ತು. ಆದರೆ ಅದರಲ್ಲಿರುವ ಜನರು ಕೊಂಚವಾಗಿದ್ದರು. ಮನೆಗಳನ್ನು ಇನ್ನೂ ಕಟ್ಟಿರಲಿಲ್ಲ.
5 我的 神感动我心,招聚贵胄、官长,和百姓,要照家谱计算。我找着第一次上来之人的家谱,其上写着:
ತರುವಾಯ ಅವರು ವಂಶಾವಳಿಯಿಂದ ಲೆಕ್ಕಿಸುವ ಹಾಗೆ ಶ್ರೇಷ್ಠರನ್ನೂ, ಅಧಿಕಾರಸ್ಥರನ್ನೂ, ಸಾಮಾನ್ಯ ಜನರನ್ನೂ ಸಭೆಯಾಗಿಸೇರಲು, ನನ್ನ ದೇವರು ನನ್ನ ಹೃದಯದಲ್ಲಿ ಪ್ರೇರೇಪಿಸಿದರು. ಆಗ ನಾನು ಮೊದಲು ಬಂದವರ ವಂಶಾವಳಿಯ ಪಟ್ಟಿಯನ್ನು ಕಂಡೆನು. ಅದರಲ್ಲಿ ಬರೆದದ್ದೇನೆಂದರೆ:
6 巴比伦王尼布甲尼撒从前掳去犹大省的人,现在他们的子孙从被掳到之地回耶路撒冷和犹大,各归本城。
ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಂದ ಸೆರೆಯಾಗಿ ಹೋಗಿ, ಅನಂತರ ಬಂಧನದಿಂದ ಬಿಡುಗಡೆಯಾಗಿ ಯೆರೂಸಲೇಮಿಗೂ, ಯೆಹೂದಕ್ಕೂ, ತಮ್ಮ ತಮ್ಮ ಪಟ್ಟಣಗಳಿಗೂ
7 他们是同着所罗巴伯、耶书亚、尼希米、亚撒利雅、拉米、拿哈玛尼、末底改、必珊、米斯毗列、比革瓦伊、尼宏、巴拿回来的。
ಜೆರುಬ್ಬಾಬೆಲನ ಸಂಗಡ ಹಿಂದಿರುಗಿದವರು ಯಾರೆಂದರೆ: ಯೇಷೂವ, ನೆಹೆಮೀಯ, ಅಜರ್ಯ, ರಗಮ್ಯ, ನಹಮಾನೀ, ಮೊರ್ದೆಕೈ, ಬಿಲ್ಷಾನ್, ಮಿಸ್ಪೆರೆತ್, ಬಿಗ್ವೈ, ನೆಹೂಮ್, ಬಾಣ. ಇಸ್ರಾಯೇಲ್ ಜನಾಂಗದ ಪುರುಷರ ಸಂಖ್ಯೆ:
8 以色列人民的数目记在下面:巴录的子孙二千一百七十二名;
ಪರೋಷನ ವಂಶಜರು 2,172 ಮಂದಿ ಇದ್ದರು.
9 示法提雅的子孙三百七十二名;
ಶೆಫಟ್ಯನ ವಂಶಜರು 372 ಮಂದಿ ಇದ್ದರು.
10 亚拉的子孙六百五十二名;
ಆರಹನ ವಂಶಜರು 652 ಮಂದಿ ಇದ್ದರು.
11 巴哈·摩押的后裔,就是耶书亚和约押的子孙二千八百一十八名;
ಯೇಷೂವ, ಯೋವಾಬ್ ಎಂಬವರ ಮಕ್ಕಳಲ್ಲಿ ಪಹತ್ ಮೋವಾಬನ ವಂಶಜರು 2,818 ಮಂದಿ ಇದ್ದರು.
12 以拦的子孙一千二百五十四名;
ಏಲಾಮನ ವಂಶಜರು 1,254 ಮಂದಿ ಇದ್ದರು.
13 萨土的子孙八百四十五名;
ಜತ್ತೂವಿನ ವಂಶಜರು 845 ಮಂದಿ ಇದ್ದರು.
14 萨改的子孙七百六十名;
ಜಕ್ಕೈನ ವಂಶಜರು 760 ಮಂದಿ ಇದ್ದರು.
15 宾内的子孙六百四十八名;
ಬಿನ್ನೂಯನ ವಂಶಜರು 648 ಮಂದಿ ಇದ್ದರು.
16 比拜的子孙六百二十八名;
ಬೇಬೈನ ವಂಶಜರು 628 ಮಂದಿ ಇದ್ದರು.
17 押甲的子孙二千三百二十二名;
ಅಜ್ಗಾದನ ವಂಶಜರು 2,322 ಮಂದಿ ಇದ್ದರು.
18 亚多尼干的子孙六百六十七名;
ಅದೋನೀಕಾಮಿನ ವಂಶಜರು 667 ಮಂದಿ ಇದ್ದರು.
19 比革瓦伊的子孙二千零六十七名;
ಬಿಗ್ವೈ ವಂಶಜರು 2,067 ಮಂದಿ ಇದ್ದರು.
20 亚丁的子孙六百五十五名;
ಅದೀನನ ವಂಶಜರು 655 ಮಂದಿ ಇದ್ದರು.
21 亚特的后裔,就是希西家的子孙九十八名;
ಹಿಜ್ಕೀಯನ ಮಗನಾದ ಆಟೇರ್ ವಂಶಜರು 98 ಮಂದಿ ಇದ್ದರು.
22 哈顺的子孙三百二十八名;
ಹಾಷುಮನ ವಂಶಜರು 328 ಮಂದಿ ಇದ್ದರು.
23 比赛的子孙三百二十四名;
ಬೇಚೈಯ ವಂಶಜರು 324 ಮಂದಿ ಇದ್ದರು.
24 哈拉的子孙一百一十二名;
ಹಾರೀಫನ ವಂಶಜರು 112 ಮಂದಿ ಇದ್ದರು.
25 基遍人九十五名;
ಗಿಬ್ಯೋನನ ವಂಶಜರು 95 ಮಂದಿ ಇದ್ದರು.
26 伯利恒人和尼陀法人共一百八十八名;
ಬೇತ್ಲೆಹೇಮಿನವರೂ ನೆಟೋಫದವರೂ 188 ಮಂದಿ ಇದ್ದರು.
27 亚拿突人一百二十八名;
ಅನಾತೋತ್ ಊರಿನವರು 128 ಮಂದಿ ಇದ್ದರು.
28 伯·亚斯玛弗人四十二名;
ಬೇತ್ ಅಜ್ಮಾವೆತಿನವರು 42 ಮಂದಿ ಇದ್ದರು.
29 基列·耶琳人、基非拉人、比录人共七百四十三名;
ಕಿರ್ಯತ್ ಯಾರೀಮ್, ಕೆಫೀರಾ, ಬೇರೋತ್ ಎಂಬ ಪಟ್ಟಣದವರು 743 ಮಂದಿ ಇದ್ದರು.
30 拉玛人和迦巴人共六百二十一名;
ರಾಮಾ ಗೆಬ ಎಂಬ ಪಟ್ಟಣದವರು 621 ಮಂದಿ ಇದ್ದರು.
31 默玛人一百二十二名;
ಮಿಕ್ಮಾಷದ ಜನರು 122 ಮಂದಿ ಇದ್ದರು.
32 伯特利人和艾人共一百二十三名;
ಬೇತೇಲ್ ಮತ್ತು ಆಯಿ ಎಂಬ ಪಟ್ಟಣದವರು 123 ಮಂದಿ ಇದ್ದರು.
33 别的尼波人五十二名;
ಮತ್ತೊಂದು ನೆಬೋ ಊರಿನವರು 52 ಮಂದಿ ಇದ್ದರು.
34 别的以拦子孙一千二百五十四名;
ಮತ್ತೊಬ್ಬ ಏಲಾಮನ ವಂಶಜರು 1,254 ಮಂದಿ ಇದ್ದರು.
35 哈琳的子孙三百二十名;
ಹಾರಿಮನ ವಂಶಜರು 320 ಮಂದಿ ಇದ್ದರು.
36 耶利哥人三百四十五名;
ಯೆರಿಕೋವಿನ ವಂಶಜರು 345 ಮಂದಿ ಇದ್ದರು.
37 罗德人、哈第人、阿挪人共七百二十一名;
ಲೋದ್, ಹಾದೀದ್, ಓನೋ ಎಂಬ ಊರಿನ ಜನರು 721 ಮಂದಿ ಇದ್ದರು.
38 西拿人三千九百三十名。
ಸೆನಾಹನ ವಂಶಜರು 3,930 ಮಂದಿ ಇದ್ದರು.
39 祭司:耶书亚家,耶大雅的子孙九百七十三名;
ಯಾಜಕರು: ಯೇಷೂವನ ಕುಟುಂಬದವರಾದ ಯೆದಾಯನ ವಂಶಜರು 973.
40 音麦的子孙一千零五十二名;
ಇಮ್ಮೇರನ ವಂಶಜರು 1,052.
41 巴施户珥的子孙一千二百四十七名;
ಪಷ್ಹೂರನ ವಂಶಜರು 1,247.
42 哈琳的子孙一千零一十七名。
ಹಾರಿಮನ ವಂಶಜರು 1,017.
43 利未人:何达威的后裔,就是耶书亚和甲篾的子孙七十四名。
ಲೇವಿಯರು: ಹೋದವ್ಯನ ಸಂತತಿಯಾದ ಯೇಷೂವನ, ಕದ್ಮಿಯೇಲನ ವಂಶಜರು 74.
44 歌唱的:亚萨的子孙一百四十八名。
ಹಾಡುಗಾರರು: ಆಸಾಫನ 148 ವಂಶಜರು.
45 守门的:沙龙的子孙、亚特的子孙、达们的子孙、亚谷的子孙、哈底大的子孙、朔拜的子孙,共一百三十八名。
ದೇವಾಲಯದ ದ್ವಾರಪಾಲಕರಾದ, ಶಲ್ಲೂಮ್, ಆಟೇರ್, ಟಲ್ಮೋನ್, ಅಕ್ಕೂಬ್, ಹಟೀಟ, ಶೋಬೈ ಮುಂತಾದವರ ಮಕ್ಕಳು 138.
46 尼提宁:西哈的子孙、哈苏巴的子孙、答巴俄的子孙、
ದೇವಾಲಯದ ಸೇವಕರು: ಜೀಹ, ಹಸೂಫ, ಟಬ್ಬಾವೋತ್,
47 基绿的子孙、西亚的子孙、巴顿的子孙、
ಕೆರೋಸ್, ಸೀಯ, ಪದೋನ್,
48 利巴拿的子孙、哈迦巴的子孙、萨买的子孙、
ಲೆಬಾನ, ಹಗಾಬ, ಶಲ್ಮೈ,
49 哈难的子孙、吉德的子孙、迦哈的子孙、
ಹಾನಾನ್, ಗಿದ್ದೇಲ್, ಗಹರ್,
50 利亚雅的子孙、利汛的子孙、尼哥大的子孙、
ರೆವಾಯ, ರೆಚೀನ್, ನೆಕೋದ,
51 迦散的子孙、乌撒的子孙、巴西亚的子孙、
ಗಜ್ಜಾಮ್, ಉಜ್ಜ, ಪಾಸೇಹ,
52 比赛的子孙、米乌宁的子孙、尼普心的子孙、
ಬೇಸೈ, ಮೆಯನೀಮ್, ನೆಫೀಸೀಮ್,
53 巴卜的子孙、哈古巴的子孙、哈忽的子孙、
ಬಕ್ಬೂಕ್, ಹಕ್ಕೂಫ, ಹರ್ಹೂರ್,
54 巴洗律的子孙、米希大的子孙、哈沙的子孙、
ಬಚ್ಲೂತ್, ಮೆಹೀದ, ಹರ್ಷ,
55 巴柯的子孙、西西拉的子孙、答玛的子孙、
ಬರ್ಕೋಸ್, ಸೀಸೆರ, ತೆಮಹ,
56 尼细亚的子孙、哈提法的子孙。
ನೆಚೀಹ, ಹಟೀಫ, ಇವರ ವಂಶಜರು.
57 所罗门仆人的后裔,就是琐太的子孙、琐斐列的子孙、比路大的子孙、
ಸೊಲೊಮೋನನ ಸೇವಕರ ವಂಶಜರು: ಸೋಟೈ, ಸೋಫೆರೆತ್, ಪೆರೀದ,
58 雅拉的子孙、达昆的子孙、吉德的子孙、
ಯಾಲ, ದರ್ಕೋನ್, ಗಿದ್ದೇಲ್,
59 示法提雅的子孙、哈替的子孙、玻黑列·哈斯巴音的子孙、亚们的子孙。
ಶೆಫಟ್ಯ, ಹಟ್ಟೀಲ್, ಪೋಕೆರೆತ್ ಹಚ್ಚೆಬಾಯೀಮ್, ಆಮೋನ್ ಮುಂತಾದವರ ಮಕ್ಕಳು.
60 尼提宁和所罗门仆人的后裔共三百九十二名。
ದೇವಾಲಯದ ಸೇವಕರ ಹಾಗೂ ಸೊಲೊಮೋನನ ಸೇವಕರ ವಂಶಜರು ಒಟ್ಟು 392 ಮಂದಿ.
61 从特米拉、特哈萨、基绿、亚顿、音麦上来的,不能指明他们的宗族谱系是以色列人不是;
ತೇಲ್ಮೆಲಹ, ತೇಲ್ಹರ್ಷ, ಕೆರೂಬ್, ಅದ್ದಾನ್, ಇಮ್ಮೇರ್ ಎಂಬ ಊರುಗಳಿಂದ ಹೊರಟುಬಂದವರಾಗಿದ್ದು, ತಮ್ಮ ಗೋತ್ರವಂಶಾವಳಿಗಳನ್ನು ತೋರಿಸಿ, ತಾವು ಇಸ್ರಾಯೇಲರೆಂಬುದನ್ನು ರುಜುಪಡಿಸಲಾಗದೇ ಇದ್ದವರು ಯಾರೆಂದರೆ:
62 他们是第莱雅的子孙、多比雅的子孙、尼哥大的子孙,共六百四十二名。
ದೆಲಾಯ, ಟೋಬೀಯ, ನೆಕೋದ ಇವರ ಸಂತಾನದವರು ಒಟ್ಟು 642 ಮಂದಿ.
63 祭司中,哈巴雅的子孙、哈哥斯的子孙、巴西莱的子孙;因为他们的先祖娶了基列人巴西莱的女儿为妻,所以起名叫巴西莱。
ಯಾಜಕರಲ್ಲಿ, ಹಬಯ್ಯ, ಹಕ್ಕೋಚ್, ಬರ್ಜಿಲ್ಲೈ ಇವರ ಸಂತಾನದವರು. ಈ ಬರ್ಜಿಲ್ಲೈ ಎಂಬವನು ಗಿಲ್ಯಾದ್ಯನಾದ ಬರ್ಜಿಲ್ಲೈಯನ ಪುತ್ರಿಯರಲ್ಲಿ ಒಬ್ಬಳನ್ನು ಮದುವೆಮಾಡಿಕೊಂಡ ಕಾರಣ ಅವನ ಹೆಸರನ್ನು ಇಟ್ಟುಕೊಂಡನು.
64 这三家的人在族谱之中寻查自己的谱系,却寻不着,因此算为不洁,不准供祭司的职任。
ಇವರು ತಮ್ಮ ವಂಶಾವಳಿಯ ದಾಖಲಾತಿಗಳಲ್ಲಿ ತಮ್ಮ ಹೆಸರುಗಳನ್ನು ಹುಡುಕಿದರು, ಆದರೆ ಅವು ಸಿಕ್ಕದೆ ಹೋದದ್ದರಿಂದ ಅವರು ಅಶುದ್ಧರೆಂದು ಪರಿಗಣಿಸಿ ಯಾಜಕ ಉದ್ಯೋಗದಿಂದ ಬಹಿಷ್ಕಾರವಾದರು.
65 省长对他们说:“不可吃至圣的物,直到有用乌陵和土明决疑的祭司兴起来。”
ಆದ್ದರಿಂದ ಊರೀಮ್, ತುಮ್ಮೀಮ್ ಮುಖಾಂತರ ದೈವನಿರ್ಣಯವನ್ನು ತಿಳಿಸಬಲ್ಲ ಯಾಜಕನು ದೊರೆಯುವ ತನಕ, ಇವರು ಮಹಾಪರಿಶುದ್ಧವಾದ ಪದಾರ್ಥಗಳನ್ನು ತಿನ್ನಬಾರದೆಂದು ರಾಜ್ಯಪಾಲನು ಆದೇಶಿಸಿದನು.
66 会众共有四万二千三百六十名。
ಸಭೆ ಸೇರಿದ ಸರ್ವಸಮೂಹದ ಒಟ್ಟು ಸಂಖ್ಯೆ 42,360.
67 此外,还有他们的仆婢七千三百三十七名,又有歌唱的男女二百四十五名。
ಅವರ ಹೊರತಾಗಿ ಅವರ ದಾಸರೂ ದಾಸಿಯರೂ 7,337 ಮಂದಿಯೂ, ಅವರ ಹಾಡುಗಾರರೂ, ಹಾಡುಗಾರ್ತಿಯರೂ 245 ಮಂದಿಯೂ ಇದ್ದರು.
68 他们有马七百三十六匹,骡子二百四十五匹,
ಅವರ 736 ಕುದುರೆಗಳು, ಅವರ 245 ಹೇಸರಕತ್ತೆಗಳು.
69 骆驼四百三十五只,驴六千七百二十匹。
435 ಒಂಟೆಗಳು, 6,720 ಕತ್ತೆಗಳು ಇದ್ದವು.
70 有些族长为工程捐助。省长捐入库中的金子一千达利克,碗五十个,祭司的礼服五百三十件。
ಕುಟುಂಬಗಳ ಕೆಲವು ಮುಖ್ಯಸ್ಥರು ಕೆಲಸಕ್ಕೆ ಕಾಣಿಕೆಗಳನ್ನು ಕೊಟ್ಟರು. ರಾಜ್ಯಪಾಲನು ಬೊಕ್ಕಸಕ್ಕೆ 8.4 ಕಿಲೋಗ್ರಾಂ ಬಂಗಾರದ ನಾಣ್ಯಗಳನ್ನೂ, 50 ಪಾತ್ರೆಗಳನ್ನೂ, 530 ಯಾಜಕರ ಅಂಗಿಗಳನ್ನೂ ಕೊಟ್ಟನು.
71 又有族长捐入工程库的金子二万达利克,银子二千二百弥拿。
ಇದಲ್ಲದೆ ಮುಖ್ಯವಾದ ಪಿತೃಗಳಲ್ಲಿ ಕೆಲವರು ಕೆಲಸದ ಬೊಕ್ಕಸಕ್ಕೆ 170 ಕಿಲೋಗ್ರಾಂ ಬಂಗಾರದ ನಾಣ್ಯಗಳನ್ನೂ, 1.2 ಮೆಟ್ರಿಕ್ ಟನ್ ಬೆಳ್ಳಿಯನ್ನು ಕೊಟ್ಟರು.
72 其余百姓所捐的金子二万达利克,银子二千弥拿,祭司的礼服六十七件。
ಮಿಕ್ಕಾದ ಜನರು ಕೊಟ್ಟದ್ದೇನೆಂದರೆ: 170 ಕಿಲೋಗ್ರಾಂ ಬಂಗಾರದ ನಾಣ್ಯಗಳನ್ನೂ 1.1 ಮೆಟ್ರಿಕ್ ಟನ್ ಬೆಳ್ಳಿಯನ್ನೂ, 67 ಯಾಜಕರ ಅಂಗಿಗಳನ್ನೂ ಕೊಟ್ಟರು.
73 于是祭司、利未人、守门的、歌唱的、民中的一些人、尼提宁,并以色列众人,各住在自己的城里。
ಹೀಗೆಯೇ ಯಾಜಕರೂ, ಲೇವಿಯರೂ, ದ್ವಾರಪಾಲಕರೂ, ಹಾಡುಗಾರರೂ, ಸಾಮಾನ್ಯ ಜನರೂ, ದೇವಾಲಯದ ಸೇವಕರೂ, ಸಮಸ್ತ ಇಸ್ರಾಯೇಲರೂ ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು. ಏಳನೆಯ ತಿಂಗಳು ಬಂದಾಗ ಇಸ್ರಾಯೇಲರು ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು.

< 尼希米记 7 >