< 约书亚记 17 >
1 玛拿西是约瑟的长子,他的支派拈阄所得之地记在下面。至于玛拿西的长子基列之父玛吉,因为是勇士就得了基列和巴珊。
ಇದಲ್ಲದೆ ಮನಸ್ಸೆಯ ಗೋತ್ರಕ್ಕೂ ಭಾಗ ದೊರೆಯಿತು. ಏಕೆಂದರೆ ಅವನು ಯೋಸೇಫನಿಗೆ ಚೊಚ್ಚಲ ಮಗನಾಗಿದ್ದನು. ಮನಸ್ಸೆಯ ಹಿರಿಯ ಮಗ ಗಿಲ್ಯಾದನ ತಂದೆಯಾದ ಮಾಕೀರನು ಶೂರನಾದುದರಿಂದ ಗಿಲ್ಯಾದ್, ಬಾಷಾನ್ ಎಂಬ ಪ್ರಾಂತ್ಯಗಳು ಅವನ ಪಾಲಿಗೆ ಬಂದವು.
2 玛拿西其余的子孙,按着宗族拈阄分地,就是亚比以谢子孙,希勒子孙,亚斯列子孙,示剑子孙,希弗子孙,示米大子孙;这些按着宗族,都是约瑟儿子玛拿西子孙的男丁。
ಮನಸ್ಸೆಯ ಉಳಿದವರಿಗೆ ಅಬೀಯೆಜೆರನ ಮಕ್ಕಳಿಗೂ ಹೇಲೆಕ್‌ನ ಮಕ್ಕಳಿಗೂ ಅಸ್ರೀಯೇಲನ ಮಕ್ಕಳಿಗೂ ಶೆಕೆಮ್ ಮಕ್ಕಳಿಗೂ ಹೇಫೆರನ ಮಕ್ಕಳಿಗೂ ಶೆಮೀದಾನನ ಮಕ್ಕಳಿಗೂ ಅವರ ಕುಟುಂಬಗಳಿಗೆ ತಕ್ಕ ಸೊತ್ತು ದೊರೆಯಿತು. ಇವರು ತಮ್ಮ ಕುಟುಂಬಗಳ ಪ್ರಕಾರ ಯೋಸೇಫನ ಮಗನಾದ ಮನಸ್ಸೆಯ ಗಂಡು ಮಕ್ಕಳಾಗಿದ್ದವರು.
3 玛拿西的玄孙,玛吉的曾孙,基列的孙子,希弗的儿子西罗非哈没有儿子,只有女儿。他的女儿名叫玛拉、挪阿、曷拉、密迦、得撒;
ಆದರೆ ಮನಸ್ಸೆಗೆ ಹುಟ್ಟಿದ ಮಾಕೀರನ ಮರಿಮಗನೂ, ಗಿಲ್ಯಾದನ ಮೊಮ್ಮಗನೂ, ಹೇಫೆರನ ಮಗನೂ ಆದ ಚಲ್ಪಹಾದನಿಗೆ ಪುತ್ರರಿರಲಿಲ್ಲ. ಆದರೆ ಮಹ್ಲಾ, ನೋವಾ, ಹೊಗ್ಲಾ, ಮಿಲ್ಕಾ, ತಿರ್ಚಾ ಎಂಬ ಹೆಸರುಳ್ಳ ಪುತ್ರಿಯರು ಇದ್ದರು.
4 她们来到祭司以利亚撒和嫩的儿子约书亚并众首领面前,说:“耶和华曾吩咐摩西在我们弟兄中分给我们产业。”于是约书亚照耶和华所吩咐的,在她们伯叔中,把产业分给她们。
ಇವರು ಯಾಜಕನಾದ ಎಲಿಯಾಜರನ ಬಳಿಗೂ ನೂನನ ಮಗ ಯೆಹೋಶುವನ ಬಳಿಗೂ ಪ್ರಧಾನರುಗಳ ಬಳಿಗೂ ಬಂದು ಅವರಿಗೆ, “ನಮ್ಮ ಸಹೋದರರಲ್ಲಿ ನಮಗೂ ಸೊತ್ತನ್ನು ಕೊಡುವಂತೆ ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ್ದರು,” ಎಂದರು. ಆದ್ದರಿಂದ ಅವರ ತಂದೆಗಳ ಸಹೋದರರ ಜೊತೆಗೆ ಅವರಿಗೂ ಯೆಹೋವ ದೇವರ ವಾಕ್ಯದ ಪ್ರಕಾರ ಸೊತ್ತನ್ನು ಕೊಟ್ಟನು.
5 除了约旦河东的基列和巴珊地之外,还有十分地归玛拿西,
ಯೊರ್ದನ್ ನದಿ ಆಚೆಯಲ್ಲಿರುವ ಗಿಲ್ಯಾದ್, ಬಾಷಾನ್ ಎಂಬ ಪ್ರಾಂತ್ಯಗಳ ಜೊತೆಗೆ ಮನಸ್ಸೆಗೆ ಬಿದ್ದ ಚೀಟಿನಲ್ಲಿ ಈಚೆಯಲ್ಲಿಯೂ ಹತ್ತು ಪಾಲು ಸಿಕ್ಕಿದವು.
6 因为玛拿西的孙女们在玛拿西的孙子中得了产业。基列地是属玛拿西其余的子孙。
ಏಕೆಂದರೆ ಮನಸ್ಸೆಯ ಪುತ್ರಿಯರು ಸಹ ಅವನ ಪುತ್ರರಲ್ಲಿ ಸೊತ್ತನ್ನು ಹೊಂದಿದ್ದರು. ಆದರೆ ಉಳಿದ ಮನಸ್ಸೆಯ ಪುತ್ರರಿಗೆ ಗಿಲ್ಯಾದ್ ನಾಡು ದೊರೆಯಿತು.
7 玛拿西的境界:从亚设起,到示剑前的密米他,往北到隐·他普亚居民之地。
ಮನಸ್ಸೆಯ ಮೇರೆ, ಆಶೇರಿನಿಂದ ಶೆಕೆಮಿನ ಮುಂದಿರುವ ಮಿಕ್ಮೆತಾತಿನವರೆಗೂ ಇತ್ತು. ಅಲ್ಲಿಂದ ದಕ್ಷಿಣ ಕಡೆಯಿರುವ ಎನ್ ತಪ್ಪೂಹದ ನಿವಾಸಗಳಿಗೆ ಹೋಗುತ್ತದೆ.
8 他普亚地归玛拿西,只是玛拿西境界上的他普亚城归以法莲子孙。
ತಪ್ಪೂಹದ ಭೂಮಿ ಮನಸ್ಸೆಯದಾಗಿತ್ತು. ಆದರೆ ಮನಸ್ಸೆಯ ಮೇರೆಯಲ್ಲಿರುವ ತಪ್ಪೂಹ ಎಫ್ರಾಯೀಮನ ಮಕ್ಕಳದ್ದಾಗಿತ್ತು.
9 其界下到加拿河的南边。在玛拿西城邑中的这些城邑都归以法莲。玛拿西的地界是在河北直通到海为止;
ಮೇರೆ ಕಾನಾ ನದಿಯ ದಕ್ಷಿಣಕ್ಕೆ ನದಿಯವರೆಗೂ ಇಳಿದುಹೋಗುವುದು. ಅಲ್ಲಿರುವ ಮನಸ್ಸೆಯ ಪಟ್ಟಣಗಳಲ್ಲಿ ಕೆಲವು ಪಟ್ಟಣಗಳು ಎಫ್ರಾಯೀಮನದಾಗಿದ್ದವು. ಮನಸ್ಸೆಯ ಮೇರೆಯು ನದಿಯ ಉತ್ತರಕ್ಕಿರುವ ಮೆಡಿಟೆರೆನಿಯನ್ ಸಮುದ್ರದವರೆಗೂ ಹೋಗಿರುವುದು.
10 南归以法莲,北归玛拿西,以海为界;北边到亚设,东边到以萨迦。
ನದಿಯ ದಕ್ಷಿಣ ಸೀಮೆ ಎಫ್ರಾಯೀಮನದು; ಉತ್ತರ ಸೀಮೆ ಮನಸ್ಸೆಯದು, ಮೆಡಿಟೆರೆನಿಯನ್ ಸಮುದ್ರವು ಅದರ ಮೇರೆಯಾಗಿರುವುದು. ಉತ್ತರಕ್ಕೆ ಇರುವ ಆಶೇರ್ ಗೋತ್ರದವರ ಪ್ರಾಂತವೂ ಪೂರ್ವಕ್ಕೆ ಇರುವ ಇಸ್ಸಾಕಾರ್ ಗೋತ್ರವೂ ಇರುವುದು.
11 玛拿西在以萨迦和亚设境内,有伯·善和属伯·善的镇市,以伯莲和属以伯莲的镇市,多珥的居民和属多珥的镇市;又有三处山冈,就是隐·多珥和属隐·多珥的镇市;他纳的居民和属他纳的镇市,米吉多的居民和属米吉多的镇市。
ಇಸ್ಸಾಕಾರನ ಮಧ್ಯದಲ್ಲಿಯೂ ಆಶೇರನ ಮಧ್ಯದಲ್ಲಿಯೂ ಇರುವ ಸೀಮೆಗಳಾದ ಬೇತ್ ಷೆಯಾನ, ಅದರ ಗ್ರಾಮಗಳೂ ಇಬ್ಲೆಯಾಮ್ ಅದರ ಗ್ರಾಮಗಳೂ ದೋರ್ ಎಂಬ ಪಟ್ಟಣಗಳೂ ಅವುಗಳ ಗ್ರಾಮಗಳೂ ಎಂದೋರ್, ತಾನಕ್, ಮೆಗಿದ್ದೋ ಎಂಬ ಪಟ್ಟಣಗಳೂ ಅವುಗಳ ಗ್ರಾಮಗಳೂ ಮನಸ್ಸೆಗೆ ಸೇರಿದವು. ಮೂರನೆಯ ಊರು ನಾಫೋತ್ ಆಗಿರುತ್ತದೆ.
12 只是玛拿西子孙不能赶出这些城的居民,迦南人偏要住在那地。
ಆದರೆ ಮನಸ್ಸೆಯ ಸಂತತಿಯರಿಗೆ ಆ ಪಟ್ಟಣಗಳ ನಿವಾಸಿಗಳಾದ ಕಾನಾನ್ಯರನ್ನು ಹೊರಡಿಸುವುದಕ್ಕಾಗದೆ ಹೋಯಿತು. ಕಾನಾನ್ಯರು ಆ ಸೀಮೆಯಲ್ಲೇ ವಾಸವಾಗಿರಲು ನಿರ್ಧರಿಸಿದ್ದರು.
13 及至以色列人强盛了,就使迦南人做苦工,没有把他们全然赶出。
ಆದರೆ ಇಸ್ರಾಯೇಲರು ಬಲಗೊಂಡಾಗ, ಕಾನಾನ್ಯರನ್ನು ಹೊರಡಿಸದೆ ಅವರನ್ನು ಜೀತದಾಳುಗಳನ್ನಾಗಿ ಮಾಡಿಕೊಂಡರು.
14 约瑟的子孙对约书亚说:“耶和华到如今既然赐福与我们,我们也族大人多,你为什么仅将一阄一段之地分给我们为业呢?”
ಯೋಸೇಫನ ಸಂತತಿಯರು ಯೆಹೋಶುವನಿಗೆ, “ಯೆಹೋವ ದೇವರು ನಮ್ಮನ್ನು ಈವರೆಗೂ ಆಶೀರ್ವದಿಸುತ್ತಾ ಬಂದದ್ದರಿಂದ, ನಾವು ಮಹಾ ಜನಾಂಗವಾಗಿದ್ದೇವೆ. ಹೀಗಿರುವಾಗ ನೀವು ನಮಗೆ ಸೊತ್ತಾಗಿ ಒಂದೇ ಒಂದು ಭಾಗವನ್ನು ಮಾತ್ರ ಪಾಲನ್ನಾಗಿ ಕೊಟ್ಟಿದ್ದು ಏಕೆ?” ಎಂದು ಕೇಳಿದರು.
15 约书亚说:“你们如果族大人多,嫌以法莲山地窄小,就可以上比利洗人、利乏音人之地,在树林中砍伐树木。”
ಅದಕ್ಕೆ ಯೆಹೋಶುವನು ಉತ್ತರವಾಗಿ ಅವರಿಗೆ, “ನೀವು ಹೆಚ್ಚು ಜನರಾಗಿದ್ದರೆ ಮತ್ತು ನಿಮಗೆ ಎಫ್ರಾಯೀಮ್ ಪರ್ವತವು ಸಾಲದಿದ್ದರೆ, ನೀವು ಪೆರಿಜೀಯರ ಮತ್ತು ರೆಫಾಯರ ನಾಡುಗಳಿಗೆ ಹೋಗಿ ಅಲ್ಲಿನ ಕಾಡನ್ನು ಕಡಿದು ನಿಮಗೆ ಸ್ಥಳಮಾಡಿಕೊಳ್ಳಿರಿ,” ಎಂದನು.
16 约瑟的子孙说:“那山地容不下我们,并且住平原的迦南人,就是住伯·善和属伯·善的镇市,并住耶斯列平原的人,都有铁车。”
ಅದಕ್ಕೆ ಯೋಸೇಫನ ಸಂತತಿಯರು, “ಆ ಪರ್ವತವು ನಮಗೆ ಸಾಲದು. ಇದಲ್ಲದೆ ತಗ್ಗಿನ ಸೀಮೆಯಲ್ಲಿರುವ ಬೇತ್ ಷೆಯಾನ್‌ನಲ್ಲಿಯೂ ಇಜ್ರೆಯೇಲ್ ಕಣಿವೆಯಲ್ಲಿಯೂ ವಾಸಿಸಿರುವ ಸಮಸ್ತ ಕಾನಾನ್ಯರ ಬಳಿಯಲ್ಲಿ ಕಬ್ಬಿಣದ ರಥಗಳು ಇವೆ,” ಎಂದರು.
17 约书亚对约瑟家,就是以法莲和玛拿西人,说:“你是族大人多,并且强盛,不可仅有一阄之地,
ಆಗ ಯೆಹೋಶುವನು ಯೋಸೇಫನ ಮಕ್ಕಳಾದ ಎಫ್ರಾಯೀಮನಿಗೂ ಮನಸ್ಸೆಗೂ, “ನೀವು ಮಹಾಜನಾಂಗವೂ ಬಹು ಬಲವುಳ್ಳವರೂ ಆಗಿರುವಿರಿ. ಒಂದೇ ಭಾಗ ನಿಮಗೆ ಇರಬಾರದು. ಆದರೆ ಪರ್ವತವು ನಿಮ್ಮದಾಗಿರುವುದು.
18 山地也要归你,虽是树林,你也可以砍伐;靠近之地必归你。迦南人虽有铁车,虽是强盛,你也能把他们赶出去。”
ಏಕೆಂದರೆ ಅದು ಅಡವಿಯಾಗಿದೆ. ಅದನ್ನು ನೀವು ಕಡಿಯಬೇಕು. ಅದರ ಅಂತ್ಯಗಳವರೆಗೂ ನಿಮ್ಮದಾಗಿರುವುದು. ಕಬ್ಬಿಣದ ರಥಗಳಿದ್ದರೂ ಅವರು ಬಲಿಷ್ಠರಾಗಿದ್ದರೂ ನೀವು ಅವರನ್ನು ಹೊರಡಿಸಿಬಿಡಲು ನಿಮಗೆ ಸಾಧ್ಯ,” ಎಂದನು.