< 约书亚记 12 >

1 以色列人在约旦河外向日出之地击杀二王,得他们的地,就是从亚嫩谷直到黑门山,并东边的全亚拉巴之地。
ಇಸ್ರಾಯೇಲರು ಯೊರ್ದನ್ ನದಿಯ ಆಚೆ ಸೂರ್ಯನು ಉದಯಿಸುವ ದಿಕ್ಕಿನಲ್ಲಿ ಅರ್ನೋನ್ ಕಣಿವೆಯಿಂದ ಹೆರ್ಮೋನ್ ಬೆಟ್ಟದವರೆಗೂ ಅರಾಬಾ ಎಲ್ಲಾ ಪೂರ್ವ ಭಾಗಗಳನ್ನು ಒಳಗೊಂಡಂತೆ ಭೂಪ್ರದೇಶವನ್ನು ಸ್ವಾಧೀನ ಮಾಡಿಸಿಕೊಂಡ ದೇಶಗಳ ಅರಸರು ಯಾರಾರೆಂದರೆ:
2 这二王,有住希实本、亚摩利人的王西宏。他所管之地是从亚嫩谷边的亚罗珥和谷中的城,并基列一半,直到亚扪人的境界,雅博河
ಅವರಲ್ಲಿ ಮೊದಲನೆಯವನು ಹೆಷ್ಬೋನಿನಲ್ಲಿದ್ದ ಅಮೋರಿಯರ ಅರಸ ಸೀಹೋನ್ ಎಂಬವನು. ಅವನು ಅರ್ನೋನ್ ಕಣಿವೆಯ ಮಧ್ಯಭಾಗದ ದಾರಿಯ ಬಳಿಯಲ್ಲಿ ಇರುವ ಅರೋಯೇರ್ ನಗರದಿಂದ, ಅರ್ಧ ಗಿಲ್ಯಾದಿನಿಂದಲೂ ಅಮ್ಮೋನಿಯರ ಮೇರೆಯಾದ ಯಬ್ಬೋಕ್ ನದಿಯವರೆಗೆ ಆಳುತ್ತಿದ್ದನು.
3 与约旦河东边的亚拉巴,直到基尼烈海,又到亚拉巴的海,就是盐海,通伯·耶西末的路,以及南方,直到毗斯迦的山根。
ಯೊರ್ದನ್ ನದಿಯ ಪೂರ್ವದಲ್ಲಿ ಕಿನ್ನೆರೆತ್ ಸಮುದ್ರದಿಂದ ಲವಣ ಸಮುದ್ರವೆನಿಸಿಕೊಳ್ಳುವ ಅರಾಬಾ ಸಮುದ್ರದ ಹತ್ತಿರವಿರುವ ಬೇತ್ ಯೆಷೀಮೋತನವರೆಗೂ ದಕ್ಷಿಣದಲ್ಲಿರುವ ಪಿಸ್ಗಾ ಬೆಟ್ಟದ ಬುಡದವರೆಗೂ ಇರುವ ತಗ್ಗಾದ ಪ್ರದೇಶವು ಸಹ ಅವನ ರಾಜ್ಯವಾಗಿತ್ತು.
4 又有巴珊王噩。他是利乏音人所剩下的,住在亚斯他录和以得来。
ಅಷ್ಟಾರೋತ್ ಮತ್ತು ಎದ್ರೈ ಎಂಬ ಊರುಗಳಲ್ಲಿ ವಾಸಮಾಡಿದ್ದ ರೆಫಾಯರ ವಂಶಸ್ಥನೂ ಬಾಷಾನಿನ ಅರಸನೂ ಆದ ಓಗನು ಎರಡನೆಯವನು.
5 他所管之地是黑门山、撒迦、巴珊全地,直到基述人和玛迦人的境界,并基列一半,直到希实本王西宏的境界。
ಅವನು ಹೆರ್ಮೋನ್ ಬೆಟ್ಟವನ್ನೂ ಸಲ್ಕಾ ನಗರವನ್ನೂ ಗೆಷೂರಿಯರ ಮತ್ತು ಮಾಕಾತೀಯರ ಮೇರೆಯವರೆಗೂ ಇದ್ದ ಇಡೀ ಬಾಷಾನ್ ನಾಡನ್ನು ಆಳುತ್ತಿದ್ದನು. ಹೆಷ್ಬೋನಿನ ಅರಸನಾದ ಸೀಹೋನನ ಮೇರೆಯವರೆಗಿದ್ದ ಗಿಲ್ಯಾದಿನ ಅರ್ಧ ಪ್ರಾಂತ್ಯದವರೆಗೂ ಅವನು ಆಳಿಕೊಂಡಿದ್ದನು.
6 这二王是耶和华仆人摩西和以色列人所击杀的;耶和华仆人摩西将他们的地赐给吕便人、迦得人,和玛拿西半支派的人为业。
ಯೆಹೋವ ದೇವರ ಸೇವಕನಾದ ಮೋಶೆಯೂ ಇಸ್ರಾಯೇಲರೂ ಅವರನ್ನು ಸೋಲಿಸಿ, ಅವರ ರಾಜ್ಯವನ್ನು ರೂಬೇನ್ಯರಿಗೂ ಗಾದ್ಯರಿಗೂ ಮನಸ್ಸೆ ಕುಲದ ಅರ್ಧ ಗೋತ್ರದವರಿಗೂ ಸೊತ್ತಾಗಿ ಕೊಟ್ಟನು.
7 约书亚和以色列人在约旦河西击杀了诸王。他们的地是从黎巴嫩平原的巴力·迦得,直到上西珥的哈拉山。约书亚就将那地按着以色列支派的宗族分给他们为业,
ಯೆಹೋಶುವನು ಇಸ್ರಾಯೇಲರ ಸಮೇತ ಯೊರ್ದನ್ ನದಿಯ ಪಶ್ಚಿಮದಲ್ಲಿ ಲೆಬನೋನ್ ಕಣಿವೆಯಲ್ಲಿದ್ದ ಬಾಲ್ಗಾದಿನಿಂದ ಸೇಯೀರಿನ ದಾರಿಯಲ್ಲಿದ್ದ ಹಾಲಾಕ್ ಪರ್ವತದವರೆಗೂ ವಿಸ್ತರಿಸಿಕೊಂಡಿದ್ದ ಮಲೆನಾಡಿನ ಪ್ರದೇಶದ ಅರಸರನ್ನೂ,
8 就是赫人、亚摩利人,迦南人、比利洗人、希未人、耶布斯人的山地、高原亚拉巴、山坡、旷野,和南地。
ಇಳಿಜಾರಿನ ಪ್ರದೇಶ, ಬೆಟ್ಟದ ಪ್ರದೇಶ, ತಪ್ಪಲು ಪ್ರದೇಶ, ಮರುಭೂಮಿ ಹಾಗೂ ದಕ್ಷಿಣ ಪ್ರಾಂತ್ಯ ಇವುಗಳನ್ನು ಆಳುತ್ತಿದ್ದ ಹಿತ್ತಿಯ, ಅಮೋರಿಯ, ಕಾನಾನ್, ಪೆರಿಜೀಯ, ಹಿವ್ವಿಯ ಹಾಗೂ ಯೆಬೂಸಿಯ ಅರಸರನ್ನೂ ಸೋಲಿಸಿ, ಅವರ ನಾಡುಗಳನ್ನು ಇಸ್ರಾಯೇಲ್ ಕುಲಗಳಿಗೆ ಶಾಶ್ವತ ಸೊತ್ತಾಗಿ ಕೊಟ್ಟನು. ಆ ಅರಸರ ಪಟ್ಟಿ ಹೀಗಿದೆ:
9 他们的王:一个是耶利哥王,一个是靠近伯特利的艾城王,
ಯೆರಿಕೋವಿನ ಅರಸನು ಬೇತೇಲ್ ಬಳಿಯಲ್ಲಿರುವ ಆಯಿ ಪಟ್ಟಣದ ಅರಸನು.
10 一个是耶路撒冷王,一个是希伯 王,
ಯೆರೂಸಲೇಮಿನ ಅರಸನು. ಹೆಬ್ರೋನಿನ ಅರಸನು.
11 一个是耶末王,一个是拉吉王,
ಯರ್ಮೂತಿನ ಅರಸನು. ಲಾಕೀಷಿನ ಅರಸನು.
12 一个是伊矶伦王,一个是基色王,
ಎಗ್ಲೋನಿನ ಅರಸನು. ಗೆಜೆರಿನ ಅರಸನು.
13 一个是底璧王,一个是基德王,
ದೆಬೀರಿನ ಅರಸನು. ಗೆದೆರಿನ ಅರಸನು.
14 一个是何珥玛王,一个是亚拉得王,
ಹೊರ್ಮಾದ ಅರಸನು. ಅರಾದಿನ ಅರಸನು.
15 一个是立拿王,一个是亚杜兰王,
ಲಿಬ್ನದ ಅರಸನು. ಅದುಲ್ಲಾಮಿನ ಅರಸನು.
16 一个是玛基大王,一个是伯特利王,
ಮಕ್ಕೇದದ ಅರಸನು. ಬೇತೇಲಿನ ಅರಸನು.
17 一个是他普亚王,一个是希弗王,
ತಪ್ಪೂಹದ ಅರಸನು. ಹೇಫೆರಿನ ಅರಸನು.
18 一个是亚弗王,一个是拉沙 王,
ಅಫೇಕದ ಅರಸನು. ಲಷ್ಷಾರೋನಿನ ಅರಸನು.
19 一个是玛顿王,一个是夏琐王,
ಮಾದೋನಿನ ಅರಸನು. ಹಾಚೋರಿನ ಅರಸನು.
20 一个是伸 ·米 王,一个是押煞王,
ಶಿಮ್ರೋನ್ ಮೆರೋನಿನ ಅರಸನು. ಅಕ್ಷಾಫಿನ ಅರಸನು.
21 一个是他纳王,一个是米吉多王,
ತಾನಕದ ಅರಸನು. ಮೆಗಿದ್ದೋವಿನ ಅರಸನು.
22 一个是基低斯王,一个是靠近迦密的约念王,
ಕೆದೆಷಿನ ಅರಸನು. ಕರ್ಮೆಲ್ ಬೆಟ್ಟದ ಯೊಕ್ನೆಯಾಮದ ಅರಸನು.
23 一个是多珥山冈的多珥王,一个是吉甲的戈印王,
ನೆಪೊತ್ ದೋರ್ ಪ್ರಾಂತದ ದೋರಿನ ಅರಸನು. ಗಿಲ್ಗಾಲದಲ್ಲಿಯ ಗೊಯ್ಮದ ಅರಸನು.
24 一个是得撒王;共计三十一个王。
ತಿರ್ಚದ ಅರಸನು. ಹೀಗೆ ಒಟ್ಟು ಮೂವತ್ತೊಂದು ಮಂದಿ ಅರಸರು ಅಪಜಯಗೊಂಡರು.

< 约书亚记 12 >