< 约伯记 32 >

1 于是这三个人,因约伯自以为义就不再回答他。
ಯೋಬನು ತಾನು ನೀತಿವಂತನೆಂದು ಸಾಧಿಸಿದ್ದನು. ಆದ್ದರಿಂದ ಆ ಮೂರು ಸ್ನೇಹಿತರು ಯೋಬನಿಗೆ ಉತ್ತರ ಕೊಡುವುದನ್ನು ನಿಲ್ಲಸಿಬಿಟ್ಟರು.
2 那时有布西人兰族巴拉迦的儿子以利户向约伯发怒;因约伯自以为义,不以 神为义。
ಆಗ ರಾಮ ಗೋತ್ರದ ಬೂಜ್ಯನಾದ ಬರಕೇಲನ ಮಗ ಎಲೀಹು, ಯೋಬನ ಮೇಲೆ ಬಹು ಕೋಪಗೊಂಡನು. ಯೋಬನು ದೇವರಿಗಿಂತ ತನ್ನನ್ನು ನ್ಯಾಯವಂತನೆಂದು ಸ್ಥಾಪಿಸಿದ್ದರಿಂದ, ಎಲೀಹು ಅವನ ಮೇಲೆ ಕೋಪಗೊಂಡನು.
3 他又向约伯的三个朋友发怒;因为他们想不出回答的话来,仍以约伯为有罪。
ಯೋಬನ ಮೂವರು ಸ್ನೇಹಿತರ ಮೇಲೆಯೂ ಎಲೀಹು ಕೋಪಗೊಂಡನು. ಅವರು ಉತ್ತರ ಕಂಡುಕೊಳ್ಳದೆ, ಯೋಬನನ್ನು ಖಂಡಿಸಿದ್ದರಿಂದ ಎಲೀಹುವಿನ ಕೋಪ ಉರಿಯಿತು.
4 以利户要与约伯说话,就等候他们,因为他们比自己年老。
ಎಲೀಹು, ಯೋಬನ ಮಾತುಗಳು ಮುಗಿಯುವವರೆಗೂ ಕಾದಿದ್ದನು. ಏಕೆಂದರೆ ಅವನಿಗಿಂತ ಅವರೆಲ್ಲರೂ ಹಿರಿಯರಾಗಿದ್ದರು.
5 以利户见这三个人口中无话回答,就怒气发作。
ಆ ಮೂವರ ಮಾತಿನಲ್ಲಿ ಏನೂ ಉತ್ತರವಿಲ್ಲವೆಂದು ಎಲೀಹು ನೋಡಿದಾಗ, ಅವನ ಕೋಪ ಮತ್ತಷ್ಟು ಉರಿಯಿತು.
6 布西人巴拉迦的儿子以利户回答说: 我年轻,你们老迈; 因此我退让,不敢向你们陈说我的意见。
ಆಗ ಬೂಜ್ಯನಾದ ಬರಕೇಲನ ಮಗ ಎಲೀಹು ಹೇಳಿದ್ದೇನೆಂದರೆ: “ನಾನು ಪ್ರಾಯದಲ್ಲಿ ಯುವಕನು, ನೀವು ಪ್ರಾಯಸ್ಥರು. ಆದ್ದರಿಂದ ನಾನು ಸಂಕೋಚಗೊಂಡು ನನ್ನ ಅಭಿಪ್ರಾಯವನ್ನು ನಿಮಗೆ ತಿಳಿಸುವುದಕ್ಕೆ ಭಯಪಟ್ಟೆನು.
7 我说,年老的当先说话; 寿高的当以智慧教训人。
‘ದಿನ ಗತಿಸಿದವರು ಮಾತನಾಡಲಿ, ಬಹಳ ವರ್ಷದವರು ಜ್ಞಾನವನ್ನು ಬೋಧಿಸಲಿ,’ ಎಂದುಕೊಂಡೆನು.
8 但在人里面有灵; 全能者的气使人有聪明。
ಆದರೆ ಮನುಷ್ಯನಲ್ಲಿ ಒಂದು ಆತ್ಮ ಉಂಟು; ಸರ್ವಶಕ್ತರ ಶ್ವಾಸವು ಅವನಿಗೆ ತಿಳುವಳಿಕೆಯನ್ನು ಕೊಡುತ್ತದೆ.
9 尊贵的不都有智慧; 寿高的不都能明白公平。
ದೊಡ್ಡ ಮನುಷ್ಯರೇ ಬುದ್ಧಿವಂತರಲ್ಲ; ಮುದುಕರೇ ನ್ಯಾಯವನ್ನು ಬಲ್ಲವರಲ್ಲ.
10 因此我说:你们要听我言; 我也要陈说我的意见。
“ಆದಕಾರಣ, ನಾನು ಹೇಳುತ್ತಿದ್ದೇನೆ: ನನ್ನ ಮಾತನ್ನು ಕೇಳಿಸಿಕೊಳ್ಳಿರಿ, ನನಗೆ ಗೊತ್ತಿದ್ದನ್ನು ನಾನು ತಿಳಿಸುತ್ತೇನೆ.
11 你们查究所要说的话; 那时我等候你们的话, 侧耳听你们的辩论,
ನೀವು ಮಾತಾಡಿ ಮುಗಿಸುವ ತನಕ ನಾನು ಕಾದಿದ್ದೆ. ನೀವು ಹೇಳುತ್ತಿದ್ದ ಕಾರಣಗಳನ್ನೂ, ಏನು ಹೇಳಬೇಕೆಂದು ಹುಡುಕುತ್ತಿದ್ದ ಪದಗಳನ್ನೂ ನಾನು ಕೇಳುತ್ತಿದ್ದೆನು.
12 留心听你们; 谁知你们中间无一人折服约伯, 驳倒他的话。
ನಾನು ನಿಮ್ಮ ಮಾತಿಗೆ ಪೂರ್ಣ ಲಕ್ಷ್ಯವಿಟ್ಟಿದ್ದೆನು. ಆದರೆ, ನಿಮ್ಮಲ್ಲಿ ಯೋಬನ ತಪ್ಪನ್ನು ರುಜುಪಡಿಸುವವರೂ, ಯೋಬನ ವಾದಗಳಿಗೆ ಸರಿಯಾಗಿ ಉತ್ತರ ಕೊಡುವವರೂ ನಿಮ್ಮಲ್ಲಿ ಯಾರೂ ಇಲ್ಲ.
13 你们切不可说:我们寻得智慧; 神能胜他,人却不能。
‘ನಾವು ಯೋಬನಲ್ಲಿ ಜ್ಞಾನವನ್ನು ಕಂಡುಕೊಂಡಿದ್ದೇವೆ ದೇವರೇ ಅವನನ್ನು ಖಂಡಿಸಿಬಿಡಲಿ, ಇದು ಮನುಷ್ಯನಿಂದಾಗುವುದಿಲ್ಲ,’ ಎಂಬುದಾಗಿ ಅಂದುಕೊಳ್ಳಬೇಡಿರಿ.
14 约伯没有向我争辩; 我也不用你们的话回答他。
ಯೋಬನು ನನಗೆ ವಿರೋಧವಾಗಿ ನುಡಿಗಳನ್ನು ಪ್ರಯೋಗ ಮಾಡಲಿಲ್ಲ; ನಿಮ್ಮ ವಾದಗಳಿಂದ ನಾನು ಅವನಿಗೆ ಉತ್ತರ ಕೊಡುವುದಿಲ್ಲ.
15 他们惊奇不再回答, 一言不发。
“ಯೋಬನೇ, ಇವರು ವಿಸ್ಮಯಗೊಂಡು ಇನ್ನು ಉತ್ತರ ಕೊಡದವರಾಗಿದ್ದಾರೆ; ಇವರಿಗೆ ಮಾತನಾಡಲು ಪದಗಳೇ ಸಿಕ್ಕುತ್ತಾಯಿಲ್ಲ.
16 我岂因他们不说话, 站住不再回答,仍旧等候呢?
ಇವರು ಇನ್ನು ಉತ್ತರ ಕೊಡದೆ ಮೌನವಾಗಿ ಸುಮ್ಮನೆ ನಿಂತಿದ್ದರೆ, ನಾನೂ ಕಾದುಕೊಂಡಿರಬೇಕೋ?
17 我也要回答我的一分话, 陈说我的意见。
ನಾನು ನನ್ನ ಪಾಲಿನ ಉತ್ತರವನ್ನು ಹೇಳುವೆನು, ನಾನೇ ನನ್ನ ಅಭಿಪ್ರಾಯವನ್ನು ತಿಳಿಸುವೆನು.
18 因为我的言语满怀; 我里面的灵激动我。
ಏಕೆಂದರೆ ಅನೇಕ ವಿಷಯಗಳಿಂದ ನಾನು ತುಂಬಿದ್ದೇನೆ; ನನ್ನೊಳಗಿನ ಆತ್ಮವು ನನ್ನನ್ನು ಒತ್ತಾಯಪಡಿಸುತ್ತಿದೆ.
19 我的胸怀如盛酒之囊没有出气之缝, 又如新皮袋快要破裂。
ನನ್ನ ಅಂತರಾತ್ಮವು ತೆರೆಯದ ದ್ರಾಕ್ಷಾರಸದ ಹಾಗೆ ಇದೆ; ಒಡೆದು ಹೋಗುವ ಹೊಸ ಬುದ್ದಲಿಗಳ ಹಾಗೆಯೂ ಇದೆ.
20 我要说话,使我舒畅; 我要开口回答。
ನೆಮ್ಮದಿಯಿಂದಿರಲು ನಾನು ಮಾತಾಡಲೇಬೇಕು; ನನ್ನ ತುಟಿಗಳನ್ನು ತೆರೆದು ಉತ್ತರಕೊಡುವೆನು.
21 我必不看人的情面, 也不奉承人。
ನಾನು ಯಾವ ಮನುಷ್ಯನ ಮುಖದಾಕ್ಷಿಣ್ಯ ನೋಡೆನು; ನಾನು ಯಾವ ಮನುಷ್ಯನನ್ನು ಹೊಗಳೆನು.
22 我不晓得奉承; 若奉承,造我的主必快快除灭我。
ಹೊಗಳುವುದರಲ್ಲಿ ನಾನು ಪ್ರವೀಣನಾಗಿದ್ದರೆ, ನನ್ನ ಸೃಷ್ಟಿಕರ್ತ ಆಗಿರುವವರು ನನ್ನನ್ನು ಬೇಗ ತೆಗೆದುಕೊಂಡು ಹೋಗಲಿ.

< 约伯记 32 >