< 以西结书 48 >

1 众支派按名所得之地记在下面:从北头,由希特伦往哈马口,到大马士革地界上的哈萨·以难。北边靠着哈马地(各支派的地都有东西的边界),是但的一分。
“ಗೋತ್ರಗಳ ಹೆಸರುಗಳು ಯಾವುವೆಂದರೆ: “ಉತ್ತರದ ಕೊನೆಯಿಂದ ಹೆತ್ಲೋನಿನ ಮಾರ್ಗದ ಮೇರೆಯೂ ಹಾಮಾತಿಗೆ ಹೋಗುವ ಮಾರ್ಗವಾಗಿ ಹಚರ್ ಏನಾನಿನ ಉತ್ತರದ ಕಡೆಗಿರುವ ದಮಸ್ಕದ ಮೇರೆಯೂ ಹಮಾತಿನ ಬಳಿಯಲ್ಲಿ ಇರುವ ಪೂರ್ವ, ಪಶ್ಚಿಮ ಇವೇ ಅದರ ಕಡೆಗಳು, ದಾನ್ ಗೋತ್ರಕ್ಕೆ ಒಂದು ಭಾಗವಾಗಿದೆ.
2 挨着但的地界,从东到西,是亚设的一分。
ದಾನಿನ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದವರೆಗೂ ಆಶೇರನಿಗೆ ಒಂದು ಭಾಗವಾಗಿದೆ.
3 挨着亚设的地界,从东到西,是拿弗他利的一分。
ಆಶೇರನ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯವರೆಗೆ ನಫ್ತಾಲಿಗೆ ಒಂದು ಭಾಗವಾಗಿದೆ.
4 挨着拿弗他利的地界,从东到西,是玛拿西的一分。
ನಫ್ತಾಲಿಯ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯವರೆಗೆ ಮನಸ್ಸೆಗೆ ಒಂದು ಭಾಗ.
5 挨着玛拿西的地界,从东到西,是以法莲的一分。
ಮನಸ್ಸೆಯ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯವರೆಗೂ ಎಫ್ರಾಯೀಮಿಗೆ ಒಂದು ಭಾಗ.
6 挨着以法莲的地界,从东到西,是吕便的一分。
ಎಫ್ರಾಯೀಮ್ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದವರೆಗೆ ರೂಬೇನ್ ಗೆ ಒಂದು ಭಾಗ.
7 挨着吕便的地界,从东到西,是犹大的一分。
ರೂಬೇನಿನ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ, ಪಶ್ಚಿಮದ ಕಡೆಯವರೆಗೂ ಯೆಹೂದಕ್ಕೆ ಒಂದು ಭಾಗ.
8 挨着犹大的地界,从东到西,必有你们所当献的供地,宽二万五千肘。从东界到西界,长短与各分之地相同,圣地当在其中。
“ಯೆಹೂದದ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯವರೆಗೂ ಇಪ್ಪತ್ತೈದು ಸಾವಿರ ಮೊಳ ಅಗಲವಾದಂತ ನೀವು ಅರ್ಪಿಸುವಂತ ಕಾಣಿಕೆ ಪೂರ್ವದಿಂದ ಪಶ್ಚಿಮದ ಕಡೆಯವರೆಗೂ ಇರಬೇಕು.
9 你们献与耶和华的供地要长二万五千肘,宽一万肘。
“ನೀವು ಯೆಹೋವ ದೇವರಿಗೆ ಅರ್ಪಿಸುವಂತಹ ಕಾಣಿಕೆ ಇಪ್ಪತ್ತೈದು ಸಾವಿರ ಉದ್ದವೂ ಹತ್ತು ಸಾವಿರ ಮೊಳ ಅಗಲವೂ ಆಗಿರಬೇಕು.
10 这圣供地要归与祭司,北长二万五千肘,西宽一万肘,东宽一万肘,南长二万五千肘。耶和华的圣地当在其中。
ಅವರಿಗಾಗಿ ಎಂದರೆ ಯಾಜಕರಿಗಾಗಿ ಇದೇ ಪರಿಶುದ್ಧ ಕಾಣಿಕೆ ಆಗಿರಬೇಕು. ಅದು ಉತ್ತರಕ್ಕೆ ಇಪ್ಪತ್ತೈದು ಸಾವಿರ, ಪಶ್ಚಿಮಕ್ಕೆ ಹತ್ತು ಸಾವಿರ ಅಗಲವೂ ಪೂರ್ವಕ್ಕೆ ಹತ್ತು ಸಾವಿರ ಅಗಲವೂ ದಕ್ಷಿಣಕ್ಕೆ ಇಪ್ಪತ್ತೈದು ಸಾವಿರ ಉದ್ದವೂ ಇರಬೇಕು. ಅದರ ಮಧ್ಯದಲ್ಲಿ ಯೆಹೋವ ದೇವರ ಪರಿಶುದ್ಧ ಸ್ಥಳವೂ ಇರಬೇಕು.
11 这地要归与撒督的子孙中成为圣的祭司,就是那守我所吩咐的。当以色列人走迷的时候,他们不像那些利未人走迷了。
ಇದು ನನಗೆ ನಂಬಿಗಸ್ತರಾಗಿ ನಡೆದುಕೊಂಡ ಚಾದೋಕನ ಪುತ್ರರಲ್ಲಿ ಪ್ರತಿಷ್ಠಿತರಾಗಿರುವ ಯಾಜಕರದಾಗಿರಬೇಕು; ಇಸ್ರಾಯೇಲರು ತಪ್ಪಿಹೋದಾಗ, ಲೇವಿಯರೂ ತಪ್ಪಿಹೋದ ಪ್ರಕಾರ ಚಾದೋಕಿನವರು ತಪ್ಪಿಹೋಗಲಿಲ್ಲ.
12 这要归与他们为供地,是全地中至圣的。供地挨着利未人的地界。
ಮೀಸಲಾಗಿರುವ ಈ ನಾಡಿನ ವಿಶೇಷ ಕಾಣಿಕೆಯು ಲೇವಿಯರ ಮೇರೆಯ ಬಳಿಯಲ್ಲಿಯೇ ಅತಿ ಪರಿಶುದ್ಧವಾದದ್ದಾಗಿರಬೇಕು.
13 利未人所得的地要长二万五千肘,宽一万肘,与祭司的地界相等,都长二万五千肘,宽一万肘。
“ಯಾಜಕರ ಮೇರೆಗೆ ಎದುರಾಗಿ ಲೇವಿಯರಿಗೆ ಇಪ್ಪತ್ತೈದು ಸಾವಿರ ಉದ್ದವೂ ಹತ್ತು ಸಾವಿರ ಅಗಲವೂ ಆಗಬೇಕು. ಒಟ್ಟು ಉದ್ದ ಇಪ್ಪತ್ತೈದು ಸಾವಿರ ಮತ್ತು ಅಗಲವು ಹತ್ತು ಸಾವಿರ.
14 这地不可卖,不可换,初熟之物也不可归与别人,因为是归耶和华为圣的。
ಅವರು ಅದರಲ್ಲಿ ಏನನ್ನೂ ಮಾರಬಾರದು, ಏನನ್ನೂ ಬದಲಾಯಿಸಬಾರದು. ದೇಶದ ಪ್ರಥಮ ಫಲವನ್ನು ಯಾರಿಗೂ ಕೊಡಬಾರದು. ಏಕೆಂದರೆ ಅದು ಯೆಹೋವ ದೇವರಿಗೆ ಪರಿಶುದ್ಧವಾಗಿದೆ.
15 这二万五千肘前面所剩下五千肘宽之地要作俗用,作为造城盖房郊野之地。城要在当中。
“ಸುಮಾರು ಎರಡೂವರೆ ಕಿಲೋಮೀಟರ್ ಅಗಲ ಮತ್ತು ಸುಮಾರು ಹದಿಮೂರು ಕಿಲೋಮೀಟರ್ ಉದ್ದದ ಉಳಿದ ಪ್ರದೇಶವು ನಗರದ ಸಾಮಾನ್ಯ ಬಳಕೆಗಾಗಿ, ಇದು ಮನೆಗಳು ಮತ್ತು ಹುಲ್ಲುಗಾವಲುಗಳನ್ನು ಹೊಂದಿರುತ್ತದೆ. ನಗರವು ಅದರ ಮಧ್ಯದಲ್ಲಿ ಇರುತ್ತದೆ;
16 城的尺寸乃是如此:北面四千五百肘,南面四千五百肘,东面四千五百肘,西面四千五百肘。
ಮತ್ತು ಅದರ ಅಳತೆಯು ಈ ರೀತಿ ಇರುತ್ತದೆ: ಉತ್ತರದ ಕಡೆಗೆ ಸುಮಾರು ಎರಡೂವರೆ ಕಿಲೋಮೀಟರ್, ದಕ್ಷಿಣದ ಕಡೆಗೆ ಸುಮಾರು ಎರಡೂವರೆ ಕಿಲೋಮೀಟರ್, ಪೂರ್ವಕ್ಕೆ ಸುಮಾರು ಎರಡೂವರೆ ಕಿಲೋಮೀಟರ್, ಪಶ್ಚಿಮಕ್ಕೆ ಸುಮಾರು ಎರಡೂವರೆ ಕಿಲೋಮೀಟರ್.
17 城必有郊野,向北二百五十肘,向南二百五十肘,向东二百五十肘,向西二百五十肘。
ಪಟ್ಟಣದ ಹುಲ್ಲುಗಾವಲು ಹೀಗಿರಬೇಕು. ಉತ್ತರದಲ್ಲಿ 135 ಮೀಟರ್ ದಕ್ಷಿಣದಲ್ಲಿ 135 ಮೀಟರ್ ಪೂರ್ವದಲ್ಲಿ 135 ಮೀಟರ್; ಪಶ್ಚಿಮದಲ್ಲಿ 135 ಮೀಟರ್.
18 靠着圣供地的余地,东长一万肘,西长一万肘,要与圣供地相等;其中的土产要作城内工人的食物。
ಕಾಣಿಕೆಯಾದ ಪರಿಶುದ್ಧಭಾಗಕ್ಕೆ ಎದುರಾಗಿರುವಂಥದ್ದೂ ಉದ್ದದಲ್ಲಿ ಉಳಿದ ಭೂಮಿಯು ಪೂರ್ವಕ್ಕೆ ಹತ್ತು ಸಾವಿರ ಮೊಳವಾಗಿಯೂ ಪಶ್ಚಿಮಕ್ಕೆ ಹತ್ತು ಸಾವಿರ ಮೊಳವಾಗಿಯೂ ಇರಬೇಕು. ಅದು ಕಾಣಿಕೆಯ ಪರಿಶುದ್ಧಭಾಗಕ್ಕೆ ಎದುರಾಗಿರಬೇಕು. ಅದರ ಆದಾಯವು ಪಟ್ಟಣದಲ್ಲಿ ಸೇವೆಮಾಡುವವರ ಆಹಾರಕ್ಕಾಗುವಷ್ಟು ಇರಬೇಕು.
19 所有以色列支派中,在城内做工的,都要耕种这地。
ಪಟ್ಟಣದಲ್ಲಿ ಸೇವೆಮಾಡುವವರು ಇಸ್ರಾಯೇಲಿನ ಎಲ್ಲಾ ಗೋತ್ರಗಳಿಂದಲೇ ಅದರಲ್ಲಿಯೇ ಸೇವೆಮಾಡಬೇಕು.
20 你们所献的圣供地连归城之地,是四方的:长二万五千肘,宽二万五千肘。
ಎಲ್ಲಾ ಕಾಣಿಕೆಯ ಸ್ಥಳವು ಇಪ್ಪತ್ತೈದು ಸಾವಿರ ಮೊಳ ಉದ್ದವಾಗಿಯೂ ಇಪ್ಪತ್ತೈದು ಸಾವಿರ ಮೊಳ ಅಗಲವಾಗಿಯೂ ಇರಬೇಕು. ನೀವು ಪರಿಶುದ್ಧ ವಿಶೇಷ ಕಾಣಿಕೆಯನ್ನು ಚಚ್ಚೌಕವಾಗಿ ಪಟ್ಟಣದ ಸೊತ್ತಿನ ಸಂಗಡ ಅರ್ಪಿಸಬೇಕು.
21 圣供地连归城之地,两边的余地要归与王。供地东边,南北二万五千肘,东至东界,西边南北二万五千肘,西至西界,与各分之地相同,都要归王。圣供地和殿的圣地要在其中,
“ಪರಿಶುದ್ಧ ಭಾಗವೂ ಪಟ್ಟಣದ ಸೊತ್ತಿಗೂ ಈ ಕಡೆಗೂ ಆ ಕಡೆಗೂ ಉಳಿದ ಭೂಮಿಯು ಕಾಣಿಕೆಯ ಇಪ್ಪತ್ತೈದು ಸಾವಿರ ಮೊಳಕ್ಕೆ ಎದುರಾಗಿ ಪೂರ್ವದ ಮೇರೆಯಲ್ಲಿರುವಂಥದ್ದೂ ಪಶ್ಚಿಮದಲ್ಲಿ ಇಪ್ಪತ್ತೈದು ಸಾವಿರ ಮೊಳಕ್ಕೆ ಎದುರಾಗಿ ಪಶ್ಚಿಮದ ಮೇರೆಯಲ್ಲಿರುವಂಥದ್ದೂ ಪ್ರಧಾನನಿಗಾದ ಪಾಲಿಗೆ ಎದುರಾಗಿಯೂ ಇರಬೇಕು. ಮೀಸಲಾದ ಪವಿತ್ರ ಕ್ಷೇತ್ರವೂ ಪವಿತ್ರಾಲಯವೂ ಅದರ ಮಧ್ಯದಲ್ಲಿರುವುವು.
22 并且利未人之地,与归城之地的东西两边延长之地(这两地在王地中间),就是在犹大和便雅悯两界中间,要归与王。
ಇದಲ್ಲದೆ ಲೇವಿಯರ ಸೊತ್ತಿನಿಂದ ಮೊದಲುಗೊಂಡು ಪಟ್ಟಣದ ಸೊತ್ತಿನಿಂದ ಪ್ರಧಾನನ ನಡುವೆ ಇರುವಂಥದ್ದು ಯೆಹೂದದ ಮೇರೆಗೂ ಬೆನ್ಯಾಮೀನನ ಮೇರೆಗೂ ಮಧ್ಯದಲ್ಲಿರುವಂಥದ್ದೂ ಪ್ರಧಾನನಿಗೆ ಸಲ್ಲಬೇಕು.
23 论到其余的支派,从东到西,是便雅悯的一分。
“ಮಿಕ್ಕ ಗೋತ್ರಗಳ ವಿಷಯವೇನೆಂದರೆ: “ಪೂರ್ವದ ಕಡೆಯಿಂದ ಪಶ್ಚಿಮದವರೆಗೂ ಬೆನ್ಯಾಮೀನನ ಒಂದು ಭಾಗವಾಗಿದೆ.
24 挨着便雅悯的地界,从东到西,是西缅的一分。
ಬೆನ್ಯಾಮೀನನ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದವರೆಗೂ ಸಿಮೆಯೋನ್ ಒಂದು ಭಾಗವಾಗಿದೆ.
25 挨着西缅的地界,从东到西,是以萨迦的一分。
ಸಿಮೆಯೋನ್ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯವರೆಗೂ ಇಸ್ಸಾಕಾರ್ ನ ಒಂದು ಭಾಗವಾಗಿದೆ.
26 挨着以萨迦的地界,从东到西,是西布伦的一分。
ಇಸ್ಸಾಕಾರ್ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯವರೆಗೂ ಜೆಬುಲೂನ್ ನ ಒಂದು ಭಾಗವಾದೆ;
27 挨着西布伦的地界,从东到西,是迦得的一分。
ಜೆಬುಲೂನ್ ನ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯವರೆಗೂ ಗಾದ್ ನ ಒಂದು ಭಾಗವಾಗಿದೆ.
28 迦得地的南界是从他玛到米利巴·加低斯的水,延到埃及小河,直到大海。
ಗಾದಿನ ಮೇರೆಯ ಬಳಿಯಲ್ಲಿ ದಕ್ಷಿಣದ ಕಡೆಯಲ್ಲಿ ದಕ್ಷಿಣದ ಮೇರೆಯು ತಾಮಾರ್ ಮೊದಲುಗೊಂಡು ಮೆರೀಬಾ ಕಾದೇಶಿನ ಹಳ್ಳದ ಮೇಲೆ ಈಜಿಪ್ಟಿನ ಮುಂದಿರುವ, ತೊರೆಯ ಮಾರ್ಗವಾಗಿ ದೊಡ್ಡ ಸಮುದ್ರದವರೆಗೆ ಇರುವುದು.
29 这就是你们要拈阄分给以色列支派为业之地,乃是他们各支派所得之分。这是主耶和华说的。
“ನೀವು ಇಸ್ರಾಯೇಲಿನ ಗೋತ್ರಗಳಿಗೆ ಚೀಟುಹಾಕಿ ಬಾಧ್ಯವಾಗಿ ಹಂಚಿಕೊಡಬೇಕಾದ ದೇಶವು ಇದೆ. ಅದರ ಭಾಗಗಳು ಇವೇ,” ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
30 城的北面四千五百肘。出城之处如下;
“ಪಟ್ಟಣದ ಹೊರಗೆ ನಿರ್ಗಮನ ಹೀಗಿರಬೇಕು: “ಉತ್ತರದ ಕಡೆಯಲ್ಲಿ ನಾಲ್ಕು ಸಾವಿರದ ಐನೂರು ಅಳತೆಗಳು.
31 城的各门要按以色列支派的名字。北面有三门,一为吕便门,一为犹大门,一为利未门;
ಪಟ್ಟಣದ ಬಾಗಿಲುಗಳು ಇಸ್ರಾಯೇಲಿನ ಗೋತ್ರಗಳ ಹೆಸರುಗಳ ಪ್ರಕಾರ ಇರಬೇಕು. ಉತ್ತರಕ್ಕೆ ಮೂರು ಬಾಗಿಲುಗಳು: ರೂಬೇನ್ ಬಾಗಿಲು ಒಂದು, ಯೆಹೂದ ಬಾಗಿಲು ಒಂದು, ಲೇವಿ ಬಾಗಿಲು ಒಂದು.
32 东面四千五百肘,有三门,一为约瑟门,一为便雅悯门,一为但门;
ಸುಮಾರು ಎರಡೂವರೆ ಕಿಲೋಮೀಟರ್ ಉದ್ದವಿರುವ ಪೂರ್ವದಲ್ಲಿ ಮೂರು ಬಾಗಿಲುಗಳಿರುತ್ತವೆ: ಯೋಸೇಫ್ ಬಾಗಿಲು ಒಂದು, ಬೆನ್ಯಾಮೀನನ ಬಾಗಿಲು, ಒಂದು ದಾನ್ ಬಾಗಿಲು ಒಂದು.
33 南面四千五百肘,有三门,一为西缅门,一为以萨迦门,一为西布伦门;
ಸುಮಾರು ಎರಡೂವರೆ ಕಿಲೋಮೀಟರ್ ಉದ್ದವಿರುವ ದಕ್ಷಿಣದಲ್ಲಿ ಮೂರು ಬಾಗಿಲುಗಳಿರುತ್ತವೆ: ಒಂದು ಸಿಮೆಯೋನ್ ಬಾಗಿಲು, ಒಂದು ಇಸ್ಸಾಕಾರ್ ನ ಬಾಗಿಲು, ಒಂದು ಜೆಬುಲೂನ್ ನ ಬಾಗಿಲು.
34 西面四千五百肘,有三门,一为迦得门,一为亚设门,一为拿弗他利门。
ಸುಮಾರು ಎರಡೂವರೆ ಕಿಲೋಮೀಟರ್ ಉದ್ದವಿರುವ ಪಶ್ಚಿಮದಲ್ಲಿ ಮೂರು ಬಾಗಿಲುಗಳಿರುತ್ತವೆ: ಒಂದು ಗಾದ್ ಬಾಗಿಲು, ಇನ್ನೊಂದು ಆಶೇರ್ ಬಾಗಿಲು, ಮತ್ತೊಂದು ನಫ್ತಾಲಿ ಬಾಗಿಲು.
35 城四围共一万八千肘。从此以后,这城的名字必称为“耶和华的所在”。
“ಸುತ್ತಲೂ ಹದಿನೆಂಟು ಸಾವಿರ ಅಳತೆಗಳು. “ಆ ದಿನದಿಂದ ಆ ಪಟ್ಟಣದ ಹೆಸರು, ‘ಯೆಹೋವ ದೇವರ ನೆಲೆ’” ಎಂಬುದೇ ಆಗಿರುವುದು.

< 以西结书 48 >