< 历代志上 2 >
1 以色列的儿子是吕便、西缅、利未、犹大、以萨迦、西布伦、
೧ಇಸ್ರಾಯೇಲನ ಮಕ್ಕಳು ಯಾರೆಂದರೆ ರೂಬೇನ್, ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಜೆಬುಲೂನ್,
೨ದಾನ್, ಯೋಸೇಫ್, ಬೆನ್ಯಾಮೀನ್, ನಫ್ತಾಲಿ, ಗಾದ್ ಮತ್ತು ಆಶೇರ್.
3 犹大的儿子是珥、俄南、示拉,这三人是迦南人书亚女儿所生的。犹大的长子珥在耶和华眼中看为恶,耶和华就使他死了。
೩ಯೆಹೂದನಿಗೆ ಏರ್, ಓನಾನ್ ಮತ್ತು ಶೇಲಾಹ ಎಂಬ ಮೂರು ಮಕ್ಕಳು ಶೂನನ ಮಗಳಾದ ಕಾನಾನಳಿಂದ ಹುಟ್ಟಿದರು. ಯೆಹೂದನ ಚೊಚ್ಚಲ ಮಗನಾದ ಏರನು ಯೆಹೋವನ ಚಿತ್ತಕ್ಕೆ ವಿರೋಧವಾಗಿ ನಡೆದುಕೊಂಡದ್ದರಿಂದ ಯೆಹೋವನು ಅವನನ್ನು ಕೊಂದು ಹಾಕಿದನು.
4 犹大的儿妇她玛给犹大生法勒斯和谢拉。犹大共有五个儿子。
೪ಯೆಹೂದನ ಸೊಸೆಯಾದ ತಾಮಾರಳು ಅವನಿಂದ ಪೆರೆಚ್ ಮತ್ತು ಜೆರಹ ಎಂಬವರನ್ನು ಹೆತ್ತಳು.
೫ಯೆಹೂದನಿಗೆ ಐದು ಮಕ್ಕಳು. ಪೆರೆಚನ ಮಕ್ಕಳು ಹೆಚ್ರೋನ್ ಮತ್ತು ಹಮೂಲ್.
6 谢拉的儿子是心利、以探、希幔、甲各、大拉,共五人。
೬ಜೆರಹನ ಐದು ಮಕ್ಕಳು ಜಿಮ್ರಿ, ಏತಾನ್, ಹೇಮಾನ್, ಕಲ್ಕೋಲ್ ಮತ್ತು ದಾರಾ.
7 迦米的儿子是亚干,这亚干在当灭的物上犯了罪,连累了以色列人。
೭ಯೆಹೋವನಿಗೆ ಮೀಸಲಾದ ವಸ್ತುಗಳನ್ನು ಕದ್ದುಕೊಂಡು ಇಸ್ರಾಯೇಲ್ಯರನ್ನು ಆಪತ್ತಿಗೆ ಗುರಿಮಾಡಿದ ಆಕಾರನು ಕರ್ಮೀಯನ ಮಗನು.
೯ಹೆಚ್ರೋನನ ಮಕ್ಕಳು ಯೆರಹ್ಮೇಲನು, ರಾಮ್ ಮತ್ತು ಕೆಲೂಬಾಯ್ ಎಂಬುವರು.
10 兰生亚米拿达;亚米拿达生拿顺。拿顺作犹大人的首领。
೧೦ರಾಮನು ಅಮ್ಮೀನಾದಾಬನನ್ನು ಪಡೆದನು; ಅಮ್ಮಿನಾದಾಬನು ಯೆಹೂದ ಕುಲದ ಪ್ರಭುವಾದ ನಹಶೋನನ್ನು ಪಡೆದನು.
೧೧ನಹಶೋನನು ಸಲ್ಮನನ್ನು ಪಡೆದನು; ಸಲ್ಮನು ಬೋವಜನನ್ನು ಪಡೆದನು.
೧೨ಬೋವಜನು ಓಬೇದನನ್ನು ಪಡೆದನು; ಓಬೇದನು ಇಷಯನನ್ನು ಪಡೆದನು.
13 耶西生长子以利押,次子亚比拿达,三子示米亚,
೧೩ಇಷಯನ ಚೊಚ್ಚಲ ಮಗನು ಎಲೀಯಾಬ್, ಎರಡನೆಯ ಮಗ ಅಬೀನಾದಾಬ್,
೧೪ಮೂರನೆಯವನು ಶಿಮ್ಮ, ನಾಲ್ಕನೆಯವನು ನೆತನೇಲ್, ಐದನೆಯವನು ರದ್ದೈ.
೧೫ಆರನೆಯವನು ಓಚೆಮ್, ಏಳನೆಯವನು ದಾವೀದ್.
16 他们的姊妹是洗鲁雅和亚比该。洗鲁雅的儿子是亚比筛、约押、亚撒黑,共三人。
೧೬ಚೆರೂಯ ಮತ್ತು ಅಬೀಗೈಲರು ಅವರ ಸಹೋದರಿಯರು. ಅಬ್ಷೈ, ಯೋವಾಬ ಮತ್ತು ಅಸಾಹೇಲ್ ಎಂಬವರು ಚೆರೂಯಳ ಮಕ್ಕಳು.
17 亚比该生亚玛撒;亚玛撒的父亲是以实玛利人益帖。
೧೭ಅಬೀಗೈಲಳು ಅಮಾಸನ ತಾಯಿ. ಇಷ್ಮಾಯೇಲನಾದ ಯೆತೆರ್ ಎಂಬವನು ಅವನ ತಂದೆ.
18 希斯 的儿子迦勒娶阿苏巴和耶略为妻,阿苏巴的儿子是耶设、朔罢、押墩。
೧೮ಹೆಚ್ರೋನನ ಮಗ ಕಾಲೇಬ. ಇವನು ತನ್ನ ಹೆಂಡತಿ ಅಜೂಬಳಿಂದಲೂ ಮತ್ತು ಯೆರ್ಯೋತಳಿಂದಲೂ ಮಕ್ಕಳನ್ನು ಪಡೆದನು. ಆಕೆಯಲ್ಲಿ ಅವನಿಗೆ ಹುಟ್ಟಿದ ಮಕ್ಕಳು ಯೇಷೆರ್, ಶೋಬಾಬ್ ಮತ್ತು ಅರ್ದೋನ್ ಎಂಬವರು.
೧೯ಅಜೂಬಳು ಸತ್ತ ಮೇಲೆ ಕಾಲೇಬನು ಎಫ್ರಾತಳನ್ನು ಮದುವೆಮಾಡಿಕೊಂಡನು. ಆಕೆಯಲ್ಲಿ ಅವನಿಗೆ ಹೂರನು ಹುಟ್ಟಿದನು.
೨೦ಹೂರನು ಊರಿಯನನ್ನು ಪಡೆದನು; ಊರಿಯನು ಬೆಚಲೇಲನನ್ನು ಪಡೆದನು.
21 希斯 正六十岁娶了基列父亲玛吉的女儿,与她同房;玛吉的女儿生了西割;
೨೧ಹೆಚ್ರೋನನು ಅರವತ್ತು ವರ್ಷದವನಾದಾಗ ಗಿಲ್ಯಾದ್ಯರ ಮೂಲಪುರುಷನಾದ ಮಾಕೀರನ ಮಗಳನ್ನು ಮದುವೆಮಾಡಿಕೊಂಡನು. ಆಕೆಯು ಅವನಿಂದ ಸೆಗೂಬನನ್ನು ಪಡೆದಳು.
೨೨ಸೆಗೂಬನು ಯಾಯೀರನನ್ನು ಪಡೆದನು; ಇವನಿಗೆ ಗಿಲ್ಯಾದ್ ದೇಶದಲ್ಲಿ ಇಪ್ಪತ್ತ್ಮೂರು ಪಟ್ಟಣಗಳು ಇದ್ದವು.
23 后来基述人和亚兰人夺了睚珥的城邑,并基纳和其乡村,共六十个。这都是基列父亲玛吉之子的。
೨೩ಗೆಷೂರ್ಯರು ಮತ್ತು ಅರಾಮ್ಯರು ಯಾಯೀರನ ಸಂತಾನದವರಿಂದ ಯಾಯೀರಿನ ಗ್ರಾಮಗಳನ್ನೂ ಕೆನತ್ ಪ್ರಾಂತ್ಯದ ಗ್ರಾಮಗಳನ್ನು, ಒಟ್ಟು ಅರವತ್ತು ಸಂಸ್ಥಾನಗಳನ್ನು ಗೆದ್ದುಕೊಂಡರು. ಈ ಸಂಸ್ಥಾನದವರೆಲ್ಲರೂ ಗಿಲ್ಯಾದ್ಯರ ಮೂಲಪುರುಷನಾದ ಮಾಕೀರನ ಗೋತ್ರದವರು.
24 希斯 在迦勒·以法他死后,他的妻亚比雅给他生了亚施户;亚施户是提哥亚的父亲。
೨೪ಹೆಚ್ರೋನನು ಕಾಲೇಬನ ಎಫ್ರಾತದಲ್ಲಿ ಮರಣಹೊಂದಿದ ನಂತರ ಅವನ ಹೆಂಡತಿಯಾದ ಅಬೀಯ ಎಂಬಾಕೆಯು ಅಷ್ಹೂರನನ್ನು ಹೆತ್ತಳು. ಇವನು ತೆಕೋವದವರ ಮೂಲಪುರುಷನು.
25 希斯 的长子耶拉篾生长子兰,又生布拿、阿连、阿鲜、亚希雅。
೨೫ಹೆಚ್ರೋನನ ಚೊಚ್ಚಲಮಗನಾದ ಯೆರಹ್ಮೇಲನಿಗೆ ಐದು ಮಕ್ಕಳು: ರಾಮ್ ಚೊಚ್ಚಲು ಮಗನು ಹಾಗೆಯೇ ಬೂನ, ಓರೆನ್, ಓಚೆಮ್, ಅಹೀಯ ಎಂಬುವರು ಅನಂತರ ಹುಟ್ಟಿದವರು.
೨೬ಯೆರಹ್ಮೇಲನಿಗೆ ಅಟಾರ ಎಂಬ ಇನ್ನೊಬ್ಬ ಹೆಂಡತಿಯಿದ್ದಳು. ಈಕೆಯು ಓನಾಮನ ತಾಯಿ.
೨೭ಯೆರಹ್ಮೇಲನ ಚೊಚ್ಚಲ ಮಗನಾದ ರಾಮನ ಮಕ್ಕಳು ಮಾಚ್, ಯಾಮೀನ್ ಮತ್ತು ಏಕೆರ್ ಇವರೇ.
28 阿南的儿子是沙买、雅大。沙买的儿子是拿答、亚比述。
೨೮ಓನಾಮನ ಮಕ್ಕಳು ಶಮ್ಮೈ ಮತ್ತು ಯಾದ ಎಂಬುವವರು. ಶಮ್ಮೈನ ಮಕ್ಕಳು ನಾದಾಬ್ ಮತ್ತು ಅಬಿಷೂರ್.
29 亚比述的妻名叫亚比孩,亚比孩给他生了亚办和摩利。
೨೯ಅಬಿಷೂರನ ಹೆಂಡತಿಯ ಹೆಸರು ಅಬೀಹೈಲ್. ಈಕೆಯಲ್ಲಿ ಅಹ್ಬಾನ್ ಮತ್ತು ಮೊಲೀದ್ ಎಂಬುವವರು ಹುಟ್ಟಿದರು.
೩೦ನಾದಾಬನ ಮಕ್ಕಳು ಸೆಲೆದ್ ಮತ್ತು ಅಪ್ಪಯಿಮ್ ಎಂಬುವವರು. ಸೇಲೆದನು ಮಕ್ಕಳಿಲ್ಲದೆ ಸತ್ತುಹೋದನು.
31 亚遍的儿子是以示;以示的儿子是示珊;示珊的儿子是亚来。
೩೧ಅಪ್ಪಯಿಮನ ಮಗ ಇಷ್ಷೀ. ಇಷ್ಷೀಯನ ಮಗ ಶೇಷಾನ್. ಶೇಷಾನನ ಮಗ ಅಹ್ಲೈ.
32 沙买兄弟雅大的儿子是益帖、约拿单;益帖死了没有儿子。
೩೨ಶಮ್ಮೈಯ ತಮ್ಮನಾದ ಯಾದನ ಮಕ್ಕಳು ಯೆತೆರ್ ಮತ್ತು ಯೋನಾತಾನ್ ಇವರೇ. ಯೆತೆರನು ಮಕ್ಕಳಿಲ್ಲದೆ ಸತ್ತನು.
33 约拿单的儿子是比勒、撒萨。这都是耶拉篾的子孙。
೩೩ಯೋನಾತಾನನ ಮಕ್ಕಳು ಪೆಲೆತ್ ಮತ್ತು ಜಾಜ ಎಂಬುವವರು. ಇವರೆಲ್ಲರೂ ಯೆರಹ್ಮೇಲನ ಸಂತಾನದವರು.
34 示珊没有儿子,只有女儿。示珊有一个仆人名叫耶哈,是埃及人。
೩೪ಶೇಷಾನನಿಗೆ ಹೆಣ್ಣು ಮಕ್ಕಳಿದ್ದರೇ ಹೊರತು ಗಂಡು ಮಕ್ಕಳಿರಲಿಲ್ಲ. ಇದಲ್ಲದೆ ಅವನಿಗೆ ಯರ್ಹನೆಂಬ ಒಬ್ಬ ಐಗುಪ್ತ ಸೇವಕನಿದ್ದನು.
೩೫ಶೇಷಾನನು ತನ್ನ ಮಗಳನ್ನು ಸೇವಕನಾದ ಯರ್ಹನಿಗೆ ಮದುವೆಮಾಡಿಕೊಟ್ಟನು. ಆಕೆಯು ಅವನಿಂದ ಅತ್ತೈಯನ್ನು ಹೆತ್ತಳು.
೩೬ಅತ್ತೈ ನಾತಾನನನ್ನು ಪಡೆದನು; ನಾತಾನನು ಜಾಬಾದನನ್ನು ಪಡೆದನು.
೩೭ಜಾಬಾದನು ಎಫ್ಲಾಲನನ್ನು ಪಡೆದನು; ಎಫ್ಲಾಲನು ಓಬೇದನನ್ನು ಪಡೆದನು.
೩೮ಓಬೇದನು ಯೇಹೂವನ್ನು ಪಡೆದನು; ಯೇಹೂವು ಅಜರ್ಯನನ್ನು ಪಡೆದನು.
೩೯ಅಜರ್ಯನು ಹೆಲೆಚನನ್ನು ಪಡೆದನು; ಹೆಲೆಚನು ಎಲ್ಲಾಸನನ್ನು ಪಡೆದನು.
೪೦ಎಲ್ಲಾಸನು ಸಿಸ್ಮೈಯನ್ನು ಪಡೆದನು; ಸಿಸ್ಮೈಯು ಶಲ್ಲೂಮನನ್ನು ಪಡೆದನು.
೪೧ಶಲ್ಲೂಮನು ಯೆಕಮ್ಯಾಹನನ್ನು ಪಡೆದನು; ಯೆಕಮ್ಯಾಹನನು ಎಲೀಷಾಮನನ್ನು ಪಡೆದನು.
42 耶拉篾兄弟迦勒的长子米沙,是西弗之祖玛利沙的儿子,是希伯 之祖。
೪೨ಯೆರಹೇಲ್ಮನ ಸಹೋದರನಾದ ಕಾಲೇಬನ ಸಂತಾನದವರು: ಚೊಚ್ಚಲನು ಜೀಫ್ಯರ ಮೂಲಪುರುಷನಾದ ಮೇಷನು, ಎರಡನೆಯವನು ಮಾರೇಷನು.
೪೩ಮಾರೇಷನು ಹೆಬ್ರೋನ್ಯರ ಮೂಲಪುರುಷನು. ಹೆಬ್ರೋನ್ಯರ ಮಕ್ಕಳು ಕೋರಹ, ತಪ್ಪೂಹ, ರೆಕೆಮ್ ಮತ್ತು ಶೆಮ.
೪೪ಶೆಮ್ಯರಿಂದ ರಹಮ್ಯರು, ರಹಮ್ಯರಿಂದ ಯೊರ್ಕೆಯಾಮ್ಯರು ಹುಟ್ಟಿದರು.
೪೫ರೆಕೆಮನು ಶಮ್ಮೈನನ್ನು ಪಡೆದನು. ಶಮ್ಮೈನಿಂದ ಮವೋನ್ಯರು, ಮವೋನ್ಯರಿಂದ ಬೇತ್‌ಚೂರಿನವರು ಹುಟ್ಟಿದರು.
46 迦勒的妾以法生哈兰、摩撒、迦谢;哈兰生迦卸。(
೪೬ಕಾಲೇಬನ ಉಪಪತ್ನಿಯಾದ ಏಫಳಲ್ಲಿ ಹಾರಾನ್, ಮೋಚ ಮತ್ತು ಗಾಜೇಜ್ ಎಂಬುವವರು ಹುಟ್ಟಿದರು.
47 雅代的儿子是利健、约坦、基珊、毗力、以法、沙亚弗。)
೪೭ಹಾರಾನನು ಗಾಜೇಜನನ್ನು ಪಡೆದನು. ಯಾದೈಯಳಲ್ಲಿ ರೆಗೆಮ್, ಯೋತಾಮ್, ಗೇಷಾನ್, ಪೆಲೆಟ್, ಏಫ ಮತ್ತು ಶಾಫ್ ಎಂಬುವವರು ಹುಟ್ಟಿದರು.
೪೮ಕಾಲೇಬನ ಉಪಪತ್ನಿಯಾದ ಮಾಕಳಲ್ಲಿ ಶೆಬೆರ್ ಮತ್ತು ತಿರ್ಹನ್ ಎಂಬುವವರು ಹುಟ್ಟಿದರು.
49 又生麦玛拿之祖沙亚弗、抹比拿和基比亚之祖示法。迦勒的女儿是押撒。
೪೯ಇವಳಲ್ಲಿ ಮದ್ಮನ್ನದವರ ಮೂಲಪುರುಷನಾದ ಶಾಫ್; ಮಕ್ಬೇನಾ ಮತ್ತು ಗಿಬ್ಯ ಪಟ್ಟಣದವರ ಮೂಲಪುರುಷನಾದ ಶೆವ ಇವರು ಹುಟ್ಟಿದರು. ಕಾಲೇಬನ ಮಗಳು ಅಕ್ಷಾ.
50 迦勒的子孙就是以法她的长子、户珥的儿子,记在下面:基列·耶琳之祖朔巴,
೫೦ಕಾಲೇಬನ ಹೆಂಡತಿಯಾದ ಎಫ್ರಾತಳ ಚೊಚ್ಚಲ ಮಗನಾದ ಹೂರನ ಮಕ್ಕಳು ಕಿರ್ಯತ್ಯಾರೀಮರ ಮೂಲಪುರುಷನಾದ ಶೋಬಾಲ್,
೫೧ಬೇತ್ಲೆಹೇಮ್ಯರ ಮೂಲಪುರುಷನಾದ ಸಲ್ಮ ಮತ್ತು ಬೇತ್ಗಾದೇರಿನ ಮೂಲಪುರುಷನಾದ ಹಾರೇಫ್.
52 基列·耶琳之祖朔巴的子孙是哈罗以和一半米努·哈人。
೫೨ಕಿರ್ಯತ್ಯಾರೀಮಿನ ಮೂಲಪುರುಷನಾದ ಶೋಬಾಲನ ಸಂತಾನದವರು ಹಾರೋಯೆ, ಮಾನಹತಿಯರ ಅರ್ಧ ಜನರು,
53 基列·耶琳的诸族是以帖人、布特人、舒玛人、密来人,又从这些族中生出琐拉人和以实陶人来。
೫೩ಕಿರ್ಯತ್ಯಾರೀಮ್ ಕುಟುಂಬಗಳವರು, ಯೆತೆರಿನವರು, ಪೂತ್ಯರು, ಶುಮಾತ್ಯರು ಮತ್ತು ಮಿಷ್ರಾಗ್ಯರು ಇವರೇ. ಇವರಿಂದ ಹುಟ್ಟಿದ ಜನಾಂಗ ಚೊರ್ರಾತ್ಯರೂ ಮತ್ತು ಎಷ್ಟಾವೋಲ್ಯರೂ.
54 萨玛的子孙是伯利恒人、尼陀法人、亚他绿·伯·约押人、一半玛拿哈人、琐利人,
೫೪ಸಲ್ಮನಿಂದ ಬೇತ್ಲೆಹೇಮ್, ನೆಟೋಫಾ, ಅಟರೋತ್, ಬೇತ್ಯೋವಾಬ್ ಊರುಗಳವರೂ, ಚೊರ್ಗದಲ್ಲಿ ವಾಸಿಸುವ ಮಾನಹತಿಯರಲ್ಲಿ ಅರ್ಧ ಜನರೂ ಹುಟ್ಟಿದರು.
55 和住雅比斯众文士家的特拉人、示米押人、苏甲人。这都是基尼人利甲家之祖哈末所生的。
೫೫ಯಾಬೇಚಿನಲ್ಲಿ ವಾಸಿಸುವ ಬರವಣಿಗೆಯಲ್ಲಿ ಮತ್ತು ದಾಖಲೆಗಳನ್ನು ಬರೆಯುವುದರಲ್ಲೂ ಮತ್ತು ಪ್ರತಿಗಳನ್ನು ಮಾಡುವುದರಲ್ಲೂ ಪ್ರವೀಣರಾದ ತಿರ್ರಾತ್ಯರು, ಶಿಮ್ಗಾತ್ಯರು ಮತ್ತು ಸೂಕಾತ್ಯರು, ಇವರು ರೇಕಾಬನ ಮನೆಯವರ ಮೂಲ ಪುರುಷನಾಗಿರುವ ಹಮತನಿಂದ ಹುಟ್ಟಿದ ಕೇನ್ಯರು.