< 詩篇 82 >

1 詠【警告為民長者】阿撒夫的詩歌。 天主親臨眾神的會議,在眾神之中主張公理:
ಆಸಾಫನ ಕೀರ್ತನೆ. ದೇವರು ಮಹಾಸಭೆಯಲ್ಲಿ ಅಧ್ಯಕ್ಷತೆವಹಿಸಿ, ದೇವರುಗಳ ಮಧ್ಯದಲ್ಲಿ ನ್ಯಾಯತೀರಿಸುತ್ತಾರೆ.
2 你們不正義審理,偏袒惡人要到何時? (休止)
“ಎಷ್ಟರವರೆಗೆ ಅನ್ಯಾಯವಾಗಿ ತೀರ್ಪು ನೀಡುವಿರಿ. ಎಲ್ಲಿಯತನಕ ದುಷ್ಟರಿಗೆ ಮುಖದಾಕ್ಷಿಣ್ಯ ಮಾಡುವಿರಿ?
3 你們應保護受苦的人和孤兒,為貧窮與可憐的人主持正義。
ದರಿದ್ರನನ್ನೂ ದಿಕ್ಕಿಲ್ಲದವನನ್ನೂ ಕಾಪಾಡಿರಿ. ದೀನನಿಗೂ, ಬಡವನಿಗೂ ನ್ಯಾಯವನ್ನು ಕೊಡಿರಿ.
4 應拯救弱小及窮苦的人,由惡人的爪牙拯救他們。
ದರಿದ್ರನನ್ನೂ, ಬಡವನನ್ನೂ ತಪ್ಪಿಸಿರಿ. ಅವರನ್ನು ದುಷ್ಟರ ಕೈಯೊಳಗಿಂದ ಬಿಡಿಸಿರಿ.
5 他們原本無知無識,在暗中摸索,卻把大地的一切根基動搖。
“ದೇವರುಗಳು ಅರಿಯರು ಏನೂ, ಅವರು ಗ್ರಹಿಸುವುದಿಲ್ಲ ಏನೂ. ಅವರು ಕತ್ತಲೆಯಲ್ಲಿ ನಡೆದುಕೊಳ್ಳುತ್ತಾರೆ. ಭೂಮಿಯ ಅಸ್ತಿವಾರಗಳೆಲ್ಲಾ ಕದಲುತ್ತಿದೆ.
6 我親自說過:你們都是神,眾人都是至高者的子民。
“ನಾನು ಮುಂದುವರೆಸಿ ಅವರಿಗೆ ಹೇಳಿದ್ದು, ‘ನೀವು ದೇವರುಗಳು, ನೀವೆಲ್ಲರು ಮಹೋನ್ನತ ದೇವರ ಮಕ್ಕಳು,’ ಎಂದು ಹೇಳಿದೆನು.
7 但是你們必要死亡像眾人一樣,必要消失像任何一位王侯一樣。
ಆದರೂ ಕೇವಲ ಮನುಷ್ಯರ ಹಾಗೆ ನೀವು ಸಾಯುವಿರಿ. ಇತರ ನಾಯಕರಂತೆಯೇ ಬಿದ್ದು ಹೋಗುವಿರಿ.”
8 天主,求您起來審判下土,因為萬國都應由您佔據。
ದೇವರೇ, ಬನ್ನಿರಿ ಭೂಮಿಗೆ ನ್ಯಾಯತೀರಿಸಿರಿ. ಏಕೆಂದರೆ ಜನಾಂಗಗಳೆಲ್ಲಾ ನಿಮಗೇ ಸೇರಿರುತ್ತವೆ.

< 詩篇 82 >