< 詩篇 67 >

1 詩歌,交與樂官,和以絃樂。 願天主祝福我們;以祂的慈愛容光照耀我們!
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ತಂತಿವಾದ್ಯದೊಡನೆ ಹಾಡತಕ್ಕ ಕೀರ್ತನೆ, ಒಂದು ಗೀತೆ. ದೇವರು ನಮ್ಮ ಮೇಲೆ ಕರುಣೆಯಿಟ್ಟು, ನಮ್ಮನ್ನು ಆಶೀರ್ವದಿಸಲಿ. ದೇವರು ತಮ್ಮ ಮುಖವನ್ನು ನಮ್ಮ ಮೇಲೆ ಪ್ರಕಾಶಿಸಮಾಡಲಿ.
2 使世人認識天主的道路,萬民得知祂的救援。
ಆಗ ದೇವರೇ, ನಿಮ್ಮ ಮಾರ್ಗಗಳು ಭೂಮಿಯಲ್ಲಿ ಗೊತ್ತಾಗುವುದು. ನಿಮ್ಮ ರಕ್ಷಣೆಯು ಎಲ್ಲಾ ಜನಾಂಗಗಳಲ್ಲಿ ಪ್ರಸಿದ್ಧವಾಗುವುದು.
3 天主,願萬民都稱頌您,願列邦也都讚美您!
ದೇವರೇ, ಜನರು ನಿಮ್ಮನ್ನು ಕೊಂಡಾಡಲಿ, ಸರ್ವ ಜನಾಂಗಗಳು ನಿಮ್ಮನ್ನು ಸ್ತುತಿಸಲಿ.
4 您以正義統治世人,且在地上領導萬民,萬民都要踴躍歡欣。
ಜನಾಂಗಗಳು ಸಂತೋಷಪಟ್ಟು ಉತ್ಸಾಹದಿಂದ ಹಾಡಲಿ. ಏಕೆಂದರೆ ನೀವು ಜನರನ್ನು ನೀತಿಯಿಂದ ನ್ಯಾಯತೀರಿಸಿ, ಜನಾಂಗಗಳನ್ನು ಭೂಮಿಯಲ್ಲಿ ಪರಿಪಾಲಿಸುತ್ತೀರಿ.
5 天主,願萬民都稱頌您,願列邦也都讚美您!
ದೇವರೇ, ಜನರು ನಿಮ್ಮನ್ನು ಕೊಂಡಾಡಲಿ. ಸರ್ವ ಜನಾಂಗಗಳು ನಿಮ್ಮನ್ನು ಸ್ತುತಿಸಲಿ.
6 大地為我們生產百果與五穀;天主,我們的天主給我們賜福。
ಭೂಮಿಯು ತನ್ನ ಬೆಳೆಯನ್ನು ಕೊಡುವುದು. ದೇವರೇ, ಹೌದು, ನಮ್ಮ ದೇವರೇ ನಮ್ಮನ್ನು ಆಶೀರ್ವದಿಸುವರು.
7 願天主給我們祝福,願萬民都敬愛天主!
ದೇವರು ನಮ್ಮನ್ನು ಆಶೀರ್ವದಿಸುವರು. ಭೂಮಿಯಲ್ಲಿರುವ ಎಲ್ಲರೂ ದೇವರಲ್ಲಿ ಭಯಭಕ್ತಿಯುಳ್ಳವರಾಗಿರುವರು.

< 詩篇 67 >