< 詩篇 54 >

1 達味訓誨歌,交與樂官,和以絃樂。 作於齊弗人來對撒烏耳說:「看,達味藏在我們這裡」時。 天主,求你因你的名賜我救援,求你並以你的權能為我伸冤。
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ತಂತಿವಾದ್ಯದೊಡನೆ ಹಾಡತಕ್ಕದ್ದು; ಜಿಫ್ಯರು ಸೌಲನ ಬಳಿಗೆ ಬಂದು ದಾವೀದನು ತಮ್ಮಲ್ಲೇ ಅಡಗಿಕೊಂಡಿದ್ದಾನೆಂದು ತಿಳಿಸಿದಾಗ ದಾವೀದನು ರಚಿಸಿದ ಪದ್ಯ. ದೇವರೇ, ನಿನ್ನ ನಾಮಮಹತ್ತಿನಿಂದ ನನ್ನನ್ನು ರಕ್ಷಿಸು; ನಿನ್ನ ಪರಾಕ್ರಮದಿಂದ ನನ್ನ ನ್ಯಾಯವನ್ನು ಸ್ಥಾಪಿಸು.
2 天主,求你俯聽我的祈求,側耳傾聽我的投訴。
ದೇವರೇ, ನನ್ನ ಪ್ರಾರ್ಥನೆಯನ್ನು ಲಾಲಿಸು; ನನ್ನ ಮಾತುಗಳಿಗೆ ಕಿವಿಗೊಡು.
3 傲慢的人起來向我進攻,蠻橫的人想謀害我的生命,他們沒有把天主放在眼中。(休止)
ಗರ್ವಿಗಳು ನನ್ನ ವಿರುದ್ಧವಾಗಿ ನಿಂತಿದ್ದಾರೆ; ಬಲಾತ್ಕಾರಿಗಳು ನನ್ನ ಪ್ರಾಣವನ್ನು ತೆಗೆಯಬೇಕೆಂದಿದ್ದಾರೆ. ಅವರು ದೇವರನ್ನು ಲಕ್ಷಿಸುವುದೇ ಇಲ್ಲ. (ಸೆಲಾ)
4 請看,天主必定給我助陣,上主必扶持我生命。
ಇಗೋ, ದೇವರೇ ನನಗೆ ಸಹಾಯಕನು; ಕರ್ತನೇ ನನ್ನ ಪ್ರಾಣವನ್ನು ಕಾಪಾಡುವವನು.
5 求你使災禍報應在我的仇讎身上,求你憑你的忠誠將他們消除滅亡。
ನನ್ನ ಕೆಡುಕಿಗೆ ಸಮಯ ನೋಡುವವರು ತಾವೇ ಕೇಡನ್ನು ಅನುಭವಿಸಲಿ. ನೀನು ನಂಬಿಗಸ್ತನಲ್ಲವೇ; ಅವರನ್ನು ನಿರ್ಮೂಲಮಾಡು.
6 我要自願向上主祭獻;上主,我要對你的美名稱讚。
ನಾನು ಸಂತೋಷದಿಂದ ನಿನಗೆ ಯಜ್ಞವನ್ನು ಸಮರ್ಪಿಸುವೆನು; ಉತ್ತಮೋತ್ತಮವಾಗಿರುವ ನಿನ್ನ ಹೆಸರನ್ನು ಕೊಂಡಾಡುವೆನು.
7 因為你救我脫離了一切災難,使我親眼看見我的仇敵潰散。
ಏಕೆಂದರೆ ಯೆಹೋವನೇ, ನೀನು ನನ್ನನ್ನು ಸರ್ವ ಆಪತ್ತುಗಳಿಂದ ಬಿಡಿಸಿ, ನನ್ನ ಕಣ್ಣ ಮುಂದೆಯೇ ನನ್ನ ವೈರಿಗಳನ್ನು ಶಿಕ್ಷಿಸಿದ್ದಿ.

< 詩篇 54 >