< 詩篇 23 >

1 祂使我臥在青綠的草場,又領我走進幽靜的水旁。
ದಾವೀದನ ಕೀರ್ತನೆ. ಯೆಹೋವ ದೇವರು ನನ್ನ ಕುರುಬ ಆಗಿದ್ದಾರೆ, ನನಗೆ ಕೊರತೆಯೇ ಇಲ್ಲ.
2 祂使我的心靈得到舒暢。祂為了自己名號的原由,領我踏上了正義的坦途。
ಅವರು ಹಸಿರುಗಾವಲುಗಳಲ್ಲಿ ನನ್ನನ್ನು ವಿಶ್ರಮಿಸುವಂತೆ ಮಾಡುತ್ತಾರೆ; ಪ್ರಶಾಂತ ಜಲರಾಶಿಯ ಬಳಿಗೆ ನನ್ನನ್ನು ನಡೆಸುತ್ತಾರೆ.
3 縱使我走過陰森的幽谷,我也不怕兇險,因你與我同住。
ಅವರು ನನ್ನ ಪ್ರಾಣವನ್ನು ಚೈತನ್ಯಗೊಳಿಸುತ್ತಾರೆ. ತಮ್ಮ ಹೆಸರಿನ ನಿಮಿತ್ತ ನನ್ನನ್ನು ನೀತಿ ಮಾರ್ಗದಲ್ಲಿ ನಡೆಸುತ್ತಾರೆ.
4 你的牧杖和短棒,是我的安慰舒暢。
ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ, ನೀವು ನನ್ನೊಂದಿಗಿರುವುದರಿಂದ ನಾನು ಕೇಡಿಗೆ ಹೆದರೆನು; ನಿಮ್ಮ ದೊಣ್ಣೆಯೂ ನಿಮ್ಮ ಕೋಲೂ ನನ್ನನ್ನು ಸಂತೈಸುತ್ತವೆ.
5 祂在我對頭前面,為我擺設了筵席;祂在我的頭上傅油,使我的杯爵滿溢。
ನೀವು ನನ್ನ ವೈರಿಗಳ ಮುಂದೆಯೇ ನನಗೊಂದು ಔತಣವನ್ನು ಸಿದ್ಧಮಾಡುತ್ತೀರಿ. ನೀವು ನನ್ನ ತಲೆಗೆ ತೈಲವನ್ನು ಅಭಿಷೇಕಿಸುತ್ತೀರಿ. ನನ್ನ ಪಾತ್ರೆಯು ತುಂಬಿ ಹೊರಸೂಸುತ್ತದೆ.
6 在我一生歲月裏,幸福與慈愛常隨不離;我要住在上主的殿裏,直至悠遠的時日。
ನಿಶ್ಚಯವಾಗಿ ಶುಭವೂ ಪ್ರೀತಿಯೂ ನನ್ನ ಜೀವಮಾನವೆಲ್ಲಾ ನನ್ನನ್ನು ಹಿಂಬಾಲಿಸುತ್ತವೆ; ನಾನು ಯೆಹೋವ ದೇವರ ಮನೆಯಲ್ಲಿ ಸದಾಕಾಲವೂ ವಾಸಿಸುವೆನು.

< 詩篇 23 >