< 詩篇 126 >

1 上主帶領俘虜回到熙雍,我們覺得仿佛是在夢中;
ಯಾತ್ರಾ ಗೀತೆ. ಯೆಹೋವ ದೇವರು ಚೀಯೋನನ್ನು ಸೆರೆಯಿಂದ ಬಿಡಿಸಿದಾಗ ನಾವು ಕನಸು ಕಂಡವರ ಹಾಗಿದ್ದೆವು.
2 那時我們滿口喜氣盈盈,我們雙脣其樂融融。那時外邦異民讚歎不已:上主向他們行了何等奇事!
ಆಗ ನಮ್ಮ ಬಾಯಿ ನಗೆಯಿಂದಲೂ, ನಮ್ಮ ಬಾಯಿ ಉತ್ಸಾಹ ಧ್ವನಿಯಿಂದಲೂ ತುಂಬಿದ್ದವು; ಆಗ ಜನಾಂಗಗಳು, “ಯೆಹೋವ ದೇವರು ಇವರಿಗೆ ಮಹತ್ಕಾರ್ಯಗಳನ್ನು ಮಾಡಿದ್ದಾರೆ,” ಎಂದು ಹೇಳಿದರು.
3 上主向我們行偉大奇蹟,我們的確覺得滿心歡喜。
ಯೆಹೋವ ದೇವರು ನಮಗೆ ಮಹತ್ಕಾರ್ಯಗಳನ್ನು ಮಾಡಿದ್ದಾರೆ; ಆದಕಾರಣ ಸಂತೋಷಿಸುತ್ತಾ ಇದ್ದೇವೆ.
4 上主,求您轉變我們的命運!就像乃革布有流水的澆淋。
ಯೆಹೋವ ದೇವರೇ, ನೆಗೆವನಲ್ಲಿರುವ ಹೊಳೆಗಳ ಹಾಗೆ ಉಳಿದಿರುವವರನ್ನು ಸಹ ಸೆರೆಯಿಂದ ತಿರುಗಿ ಬರಮಾಡಿರಿ.
5 含淚播種的人,必含笑的收成;
ಕಣ್ಣೀರಿನಿಂದ ಬಿತ್ತುವವರು, ಆನಂದ ಗೀತದೊಡನೆ ಕೊಯ್ಯುವರು;
6 他們邊行邊哭,出去播種耕耘,他們載欣載奔,回來背著禾捆。
ಬಿತ್ತಲು ಬೀಜವನ್ನು ಹೊತ್ತುಕೊಂಡು ಅಳುತ್ತಾ ಹೋಗುವವರು, ತಮ್ಮ ಸಿವುಡುಗಳನ್ನು ಹೊತ್ತುಕೊಂಡು ಆನಂದ ಗೀತದೊಡನೆ ತಿರುಗಿ ಬರುವರು.

< 詩篇 126 >