< 詩篇 123 >
1 登聖殿歌。居住在諸天上的大主,我向你仰起我的眼目。
ಯಾತ್ರಾ ಗೀತೆ. ಪರಲೋಕದಲ್ಲಿ ಸಿಂಹಾಸನರಾಗಿರುವವರೇ, ನಿಮ್ಮ ಕಡೆಗೆ ನನ್ನ ಕಣ್ಣುಗಳನ್ನು ಎತ್ತಿದ್ದೇನೆ.
2 看,僕人的眼目,怎樣仰望主人的手,看,婢女的眼目,怎樣注視主婦的手;我們的眼目也就怎樣注視著上主,我們的天主,直到他憐憫我們才止。
ಇಗೋ, ದಾಸರ ಕಣ್ಣುಗಳು ತಮ್ಮ ಯಜಮಾನರ ಕೈಯನ್ನು ನೋಡುವ ಪ್ರಕಾರ, ಮತ್ತು ದಾಸಿಯ ಕಣ್ಣುಗಳು ತನ್ನ ಯಜಮಾನಿಯ ಕೈಯನ್ನೂ ನೋಡುವ ಪ್ರಕಾರ, ನಮ್ಮ ಕಣ್ಣುಗಳು ನಮ್ಮ ಯೆಹೋವ ದೇವರು, ನಮ್ಮನ್ನು ಕರುಣಿಸುವವರೆಗೆ ನಿರೀಕ್ಷೆಯಿಂದ ನೋಡುತ್ತಿರುವುದು.
3 上主,求你矜憐,矜憐我們!因為我們已嘗盡了欺凌;
ನಮ್ಮನ್ನು ಕರುಣಿಸು, ಯೆಹೋವ ದೇವರೇ, ನಮ್ಮನ್ನು ಕರುಣಿಸು; ಏಕೆಂದರೆ ನಾವು ಬಹಳವಾಗಿ ತಿರಸ್ಕಾರವನ್ನು ಅನುಭವಿಸಿದ್ದೇವೆ.
4 我們的心靈已經飽受得太多了:即驕傲人的欺凌,富貴人的恥笑。
ನಾವು ಸುಖಭೋಗಿಗಳ ಗೇಲಿಯನ್ನೂ ಗರ್ವಿಷ್ಠರಿಂದ ತಿರಸ್ಕಾರವನ್ನೂ ಅನುಭವಿಸಿದ್ದೇವೆ.