< 耶利米書 38 >
1 瑪堂的兒子舍法提雅,帕市胡爾的兒子革達里雅,舍肋米雅的兒子猶加耳,瑪耳基雅的兒子帕市胡爾聽見耶肋米亞向全體人民講話說:「
೧ಮತ್ತಾನನ ಮಗನಾದ ಶೆಫತ್ಯ, ಪಷ್ಹೂರನ ಮಗನಾದ ಗೆದಲ್ಯ, ಸೆಲೆಮ್ಯನ ಮಗನಾದ ಯೂಕಲ, ಮಲ್ಕೀಯನ ಮಗನಾದ ಪಷ್ಹೂರ ಇವರು ಯೆರೆಮೀಯನ ಮಾತುಗಳನ್ನು ಕೇಳುತ್ತಿದ್ದರು.
2 上主這樣說:凡留在這城裏的,必死於刀劍、饑荒和瘟疫;凡出降加色丁人的,必能生存:獲得生命如得戰利品一樣,可得生存。
೨ಯೆರೆಮೀಯನು ಸಮಸ್ತ ಜನರಿಗೆ, “ಯೆಹೋವನು ಇಂತೆನ್ನುತ್ತಾನೆ, ಪಟ್ಟಣದಲ್ಲಿ ನಿಲ್ಲುವವನು ಖಡ್ಗ, ಕ್ಷಾಮ ಮತ್ತು ವ್ಯಾಧಿಗಳಿಂದ ಸಾಯುವನು; ಪಟ್ಟಣವನ್ನು ಬಿಟ್ಟುಹೋಗಿ ಕಸ್ದೀಯರನ್ನು ಮೊರೆಹೋಗುವವನು ಬದುಕುವನು, ತನ್ನ ಪ್ರಾಣವೊಂದನ್ನೇ ಉಳಿಸಿಕೊಂಡು ಹೋಗಿ ಬದುಕುವನು.
3 上主這樣說:這座城市必交在巴比倫王軍隊的手中,他必佔領這座城市。」
೩ಬಾಬೆಲಿನ ಅರಸನು ಈ ಪಟ್ಟಣವನ್ನು ಆಕ್ರಮಿಸುವನು; ಅದು ಅವನ ಸೈನ್ಯದ ವಶವಾಗುವುದು ಖಂಡಿತ” ಎಂದು ಸಾರುತ್ತಿದ್ದನು.
4 眾首長就對君王說:「請將這人處死! 因為他說出了這樣使遺留在城裏的戰士和全體人民喪志的話;實在,這人謀求的,不是人民的福利,而是人民的災禍。」
೪ಆ ಮೇಲೆ ಆ ಪ್ರಧಾನರು ಅರಸನಿಗೆ, “ಒಡೆಯಾ, ಇವನಿಗೆ ಮರಣ ದಂಡನೆಯಾಗಬೇಕು. ಇವನು ಪಟ್ಟಣದಲ್ಲಿ ಉಳಿದಿರುವ ಯೋಧರಿಗೂ ಸಕಲ ಜನರಿಗೂ ಇಂಥಾ ಮಾತುಗಳನ್ನು ಸಾರುತ್ತಾ ಅವರನ್ನು ಜೋಲುಗೈಯವರನ್ನಾಗಿ ಮಾಡುತ್ತಾನೆ; ಈ ಜನರ ಕ್ಷೇಮವನ್ನಲ್ಲ, ಹಾನಿಯನ್ನೇ ಹಾರೈಸುತ್ತಾನೆ” ಎಂದು ಹೇಳಿದರು.
5 漆德克雅王答說:「看,他已經在們手中;君王不能反對你們。」
೫ಅದಕ್ಕೆ ಅರಸನಾದ ಚಿದ್ಕೀಯನು, “ಇಗೋ, ಯೆರೆಮೀಯನು ನಿಮ್ಮ ಕೈಯಲ್ಲಿದ್ದಾನೆ; ಅರಸನು ನಿಮಗೆ ಅಡ್ಡಬಂದು ಏನೂ ಮಾಡಬಲ್ಲವನಲ್ಲ” ಎಂದು ಹೇಳಿದನು.
6 他們便將耶肋米亞丟在王子瑪耳基雅在監獄庭院裏有的蓄水池內,用繩將他放下去;池內沒有水,只有污泥;耶肋米亞就陷在污泥裏。
೬ಆಗ ಅವರು ಯೆರೆಮೀಯನನ್ನು ಹಿಡಿದು ಕಾರಾಗೃಹದ ಅಂಗಳದಲ್ಲಿ ರಾಜವಂಶೀಯನಾದ ಮಲ್ಕೀಯನ ಬಾವಿಯೊಳಗೆ ಹಗ್ಗಗಳಿಂದಿಳಿಸಿ ಹಾಕಿಬಿಟ್ಟರು. ಆ ಬಾವಿಯಲ್ಲಿ ನೀರಿರಲಿಲ್ಲ, ಕೆಸರಿತ್ತು; ಅದರೊಳಗೆ ಯೆರೆಮೀಯನು ಸಿಕ್ಕಿಕೊಂಡನು.
7 住在王宮裏的雇士人厄貝得默肋客宦官,聽見人把耶肋米亞放在蓄水池裏。那時君王正坐在本雅明門旁,
೭ಅರಮನೆಯ ಕಂಚುಕಿಯಾದ ಎಬೆದ್ಮೆಲೆಕನೆಂಬ ಕೂಷ್ಯನು ಯೆರೆಮೀಯನನ್ನು ಬಾವಿಯಲ್ಲಿ ಹಾಕಿದ್ದಾರೆಂದು ತಿಳಿದನು.
೮ಆಗ ಅವನು ಅರಮನೆಯಿಂದ ಹೊರಟು ಬೆನ್ಯಾಮೀನಿನ ಬಾಗಿಲಿನಲ್ಲಿ ಕುಳಿತುಕೊಂಡಿದ್ದ ಅರಸನ ಬಳಿಗೆ ಹೋಗಿ,
9 「我主君王! 這些人對先知耶肋米亞作的事,實在毒辣;他們竟將他丟在蓄水池裏,在那裏他必要餓死,因為城中沒有糧食了! 」
೯“ಎನ್ನೊಡೆಯನೇ, ಅರಸನೇ, ಇವರು ಪ್ರವಾದಿಯಾದ ಯೆರೆಮೀಯನಿಗೆ ಮಾಡಿದ್ದೆಲ್ಲಾ ದುಷ್ಟಕಾರ್ಯವೇ ಸರಿ, ಅವನನ್ನು ಬಾವಿಯಲ್ಲಿ ಹಾಕಿದ್ದಾರೆ; ಅವನು ಆಹಾರವಿಲ್ಲದೆ ಬಿದ್ದಲ್ಲೇ ಸಾಯುವುದು ಖಂಡಿತ, ಪಟ್ಟಣದಲ್ಲಿ ಇನ್ನು ರೊಟ್ಟಿಯಿಲ್ಲವಲ್ಲಾ” ಎಂದು ಅರಿಕೆಮಾಡಿದನು.
10 王便命雇士人厄貝得默肋客說:「你立即帶三個人去,將耶肋米亞先知,趁他還沒有死,從蓄水池裏拉出來! 」
೧೦ಅರಸನು ಇದನ್ನು ಕೇಳಿ ಕೂಷ್ಯನಾದ ಎಬೆದ್ಮೆಲೆಕನಿಗೆ, “ನೀನು ಇಲ್ಲಿಂದ ಮೂವತ್ತು ಮಂದಿಯನ್ನು ಕರೆದುಕೊಂಡುಹೋಗಿ ಪ್ರವಾದಿಯಾದ ಯೆರೆಮೀಯನು ಸಾಯುವುದರೊಳಗಾಗಿ ಅವನನ್ನು ಬಾವಿಯಿಂದ ಎತ್ತಿ ರಕ್ಷಿಸು” ಎಂದು ಅಪ್ಪಣೆಕೊಟ್ಟನು.
11 厄貝得默肋客立即帶了一些人,回到王宮,從儲藏室拿了些破舊衣裳和破舊布片,用繩索給在蓄水池裏的耶肋米亞放下去。
೧೧ಕೂಡಲೇ ಕೂಷ್ಯನಾದ ಎಬೆದ್ಮೆಲೆಕನು ಅವರನ್ನು ಕರೆದುಕೊಂಡು ಹೋಗಿ ಅರಮನೆಯನ್ನು ಹೊಕ್ಕು ಖಜಾನೆಯ ಕೆಳಗಿನ ಕೋಣೆಯಿಂದ ಜೀರ್ಣವಾದ ಹರಕು ಚಿಂದಿಬಟ್ಟೆಗಳನ್ನು ತೆಗೆದುಕೊಂಡು ಹಗ್ಗಗಳಂತೆ ಬಾವಿಯೊಳಗೆ ಯೆರೆಮೀಯನಿಗೆ ಮುಟ್ಟಿಸಿ,
12 雇士人厄貝得默肋客對耶肋米亞說:「請把破舊的衣服和布片,放在你兩腋下,然後把繩放在下面。」耶肋米亞就這樣做了。
೧೨“ಜೀರ್ಣವಾದ ಈ ಹರಕು ಚಿಂದಿಗಳನ್ನು ಹಗ್ಗಕ್ಕೆ ಸುತ್ತಿ ಕಂಕುಳಲ್ಲಿ ಇಟ್ಟುಕೋ” ಎನ್ನಲು ಯೆರೆಮೀಯನು ಅದರಂತೆಯೇ ಮಾಡಿದನು.
13 於是他們用繩索將耶肋米亞從蓄水池裏拉上來;這樣,耶肋米亞纔仍能住在拘留所的庭院裏。
೧೩ಈ ಪ್ರಕಾರ ಅವರು ಯೆರೆಮೀಯನನ್ನು ಹಗ್ಗಗಳ ಮೂಲಕ ನೀರು ಸೇದಿಕೊಳ್ಳುವ ಹಾಗೆ ಬಾವಿಯಿಂದ ಮೇಲಕ್ಕೆ ಎತ್ತಿದರು; ಆ ಮೇಲೆ ಯೆರೆಮೀಯನು ಹಿಂದಿನಂತೆ ಕಾರಾಗೃಹದ ಅಂಗಳದಲ್ಲಿ ವಾಸಿಸುತ್ತಿದ್ದನು.
14 漆德克雅王派人帶耶肋米亞先知到上主殿宇第三入口處去見他。君王對耶肋米亞說:「我要問你一件事,你什麼也不可對我隱瞞! 」
೧೪ಹೀಗಿರುವಲ್ಲಿ ಅರಸನಾದ ಚಿದ್ಕೀಯನು ಪ್ರವಾದಿಯಾದ ಯೆರೆಮೀಯನನ್ನು ಯೆಹೋವನ ಆಲಯದ ಮೂರನೆಯ ಬಾಗಿಲಿಗೆ ಕರೆತರಿಸಿ, “ನಾನು ನಿನ್ನನ್ನು ಒಂದು ಮಾತು ಕೇಳುವೆನು, ನನಗೆ ಸ್ವಲ್ಪವೂ ಮರೆಮಾಡಬೇಡ”
15 耶肋米亞答覆漆德克雅說:「我若稟告你,你豈不要將我處死嗎﹖我若給你出主意,你也不會聽從我! 」
೧೫ಎನ್ನಲು ಯೆರೆಮೀಯನು ಚಿದ್ಕೀಯನಿಗೆ, “ನಾನು ನಿನಗೆ ತಿಳಿಸಿದರೆ ನನ್ನನ್ನು ಸಾಯಿಸಿಯೇ ಸಾಯಿಸುವಿ ಅಲ್ಲವೇ? ಆಲೋಚನೆ ಹೇಳಿದರೂ ನೀನು ಕೇಳುವುದಿಲ್ಲ” ಎಂದು ಉತ್ತರಕೊಟ್ಟನು.
16 漆德克雅王對耶肋米亞暗地發誓說:「那賜與我們這生命的上主永在,我決不將你處死,決不將你交在這些圖謀你性命者的手中。」
೧೬ಆಗ ಅರಸನಾದ ಚಿದ್ಕೀಯನು ಯೆರೆಮೀಯನಿಗೆ, “ಈ ಪ್ರಾಣವನ್ನು ನಮಗೆ ದಯಪಾಲಿಸಿದ ಯೆಹೋವನ ಜೀವದಾಣೆ, ನಾನು ನಿನ್ನನ್ನು ಸಾಯಿಸುವುದಿಲ್ಲ, ನಿನ್ನ ಪ್ರಾಣವನ್ನು ಹುಡುಕುವ ಇವರ ಕೈಗೂ ನಿನ್ನನ್ನು ಸಿಕ್ಕಿಸುವುದಿಲ್ಲ” ಎಂದು ರಹಸ್ಯವಾಗಿ ಪ್ರಮಾಣ ಮಾಡಿದನು.
17 於是耶肋米亞對漆德克雅說:「萬軍的天主,以色列的天主上主這樣說:如果你出去,向巴比倫王將帥投降,你的性命必可保全,這城不至於被焚;你和你全家也必生存。
೧೭ಆಗ ಯೆರೆಮೀಯನು ಚಿದ್ಕೀಯನಿಗೆ, “ಸೇನಾಧೀಶ್ವರ ಸ್ವಾಮಿಯೂ ಇಸ್ರಾಯೇಲರ ದೇವರೂ ಆದ ಯೆಹೋವನು ಇಂತೆನ್ನುತ್ತಾನೆ, ನೀನು ಬಾಬೆಲಿನ ಅರಸನ ಸರದಾರರನ್ನು ಮೊರೆಹೊಕ್ಕರೆ ನಿನ್ನ ಪ್ರಾಣ ಉಳಿಯುವುದು, ಈ ಪಟ್ಟಣವೂ ಬೆಂಕಿಯಿಂದ ಸುಟ್ಟು ಹೋಗದು, ನೀನೂ ನಿನ್ನ ಮನೆತನದವರೂ ಬದುಕುವಿರಿ.
18 但是如果你不出去向巴比倫王將帥投降,這城必會被交在加色丁人的手裏,由他們放火燒城,而你也逃不出他們的手。」
೧೮ನೀನು ಬಾಬೆಲಿನ ಅರಸನ ಸರದಾರರ ಬಳಿ ಮೊರೆಹೋಗದಿದ್ದರೆ ಈ ಪಟ್ಟಣವು ಕಸ್ದೀಯರ ಕೈವಶವಾಗುವುದು. ಅವರು ಅದನ್ನು ಬೆಂಕಿಯಿಂದ ಸುಟ್ಟು ಬಿಡುವರು, ನೀನು ಅವರ ಕೈಯಿಂದ ತಪ್ಪಿಸಿಕೊಳ್ಳಲಾರೆ” ಎಂದು ಹೇಳಿದನು.
19 漆德克雅王便對耶肋米亞說:「我很害怕那些投降加色丁人的猶太人,將我交在他們手中,任他們凌辱我。」
೧೯ಇದನ್ನು ಕೇಳಿ ಅರಸನಾದ ಚಿದ್ಕೀಯನು ಯೆರೆಮೀಯನಿಗೆ, “ಕಸ್ದೀಯರು ತಮ್ಮನ್ನು ಮೊರೆಹೊಕ್ಕಿರುವ ಯೆಹೂದ್ಯರಿಗೆ ನನ್ನನ್ನು ಒಪ್ಪಿಸುವರೋ ಏನೋ; ಅವರು ನನ್ನನ್ನು ಹಿಂಸಿಸಬಹುದು ಎಂದು ಶಂಕೆಪಡುತ್ತೇನೆ” ಎಂದು ಉತ್ತರಕೊಟ್ಟನು.
20 耶肋米亞答說:「他們不會將你交出! 在我對你所說的事上,你只管聽上主的聲音,事必於你有利,你的性命必可保全。
೨೦ಅದಕ್ಕೆ ಯೆರೆಮೀಯನು, “ನಿನ್ನನ್ನು ಒಪ್ಪಿಸರು; ಪ್ರಭುವೇ, ನಾನು ನಿನಗೆ ಹೇಳಿರುವ ಯೆಹೋವನ ಮಾತನ್ನು ಕೈಗೊಳ್ಳು; ಕೈಗೊಂಡರೆ ಪ್ರಾಣ ಉಳಿಯುವುದು, ಸುಖವೂ ಆಗುವುದು.
21 但是,如果你拒絕出降,這就是上主使我預見的事:
೨೧ಆದರೆ ನೀನು, ‘ಶತ್ರುವಿನ ಮೊರೆಹೋಗೆನು’ ಎನ್ನುವ ಪಕ್ಷದಲ್ಲಿ ಯೆಹೋವನು ನಿನ್ನ ಮುಂದಿನ ಗತಿಯನ್ನು ನನಗೆ ಹೀಗೆ ತೋರ್ಪಡಿಸಿದ್ದಾನೆ.
22 看,凡留在猶大王宮的一切婦女,都要被領出,交給巴比倫王的將帥,哭訴著說:對你高唱和平的友人,欺騙了你,愚弄了你;見你雙腳陷入泥淖,就轉背逃遁。
೨೨ಯೆಹೂದದ ಅರಸನ ಮನೆಯಲ್ಲಿ ಉಳಿದಿರುವ ಸಕಲ ಸ್ತ್ರೀಯರು ಬಾಬೆಲಿನ ಅರಸನ ಸರದಾರರ ಬಳಿಗೆ ತರಲ್ಪಟ್ಟವರಾಗಿ ನಿನ್ನನ್ನು ಪ್ರೇರೇಪಿಸಿ ಒಳಪಡಿಸಿಕೊಂಡಿದ್ದ ನಿನ್ನ ಆಪ್ತಮಿತ್ರರು ನಿನ್ನ ಕಾಲುಗಳ ಬದಿಯಲ್ಲಿ ಹೂತದ್ದನ್ನು ನೋಡಿ ಹಿಂದಿರುಗಿದ್ದಾರೆ ಎಂದು ನಿಂದಿಸುವರು.
23 你的妻子兒女,都要被領出,交給加色丁人;連你也逃不出他們的手,終於被巴比倫王捉去;至於這城,必要被火焚毀。」
೨೩ನಿನ್ನ ಸಮಸ್ತ ಪತ್ನಿಯರೂ, ಗಂಡು ಮತ್ತು ಹೆಣ್ಣುಮಕ್ಕಳು ಕಸ್ದೀಯರ ಬಳಿಗೆ ತರಲ್ಪಡುವರು; ನೀನೂ ಅವರಿಂದ ತಪ್ಪಿಸಿಕೊಳ್ಳಲಾರದೆ ಬಾಬೆಲಿನ ಅರಸನ ಕೈಗೆ ಸಿಕ್ಕಿಕೊಳ್ಳುವಿ; ಈ ಪಟ್ಟಣವು ನಿನ್ನ ನಿಮಿತ್ತ ಬೆಂಕಿಯಿಂದ ಸುಟ್ಟುಹೋಗುವುದು” ಎಂದು ಹೇಳಿದನು.
24 於是漆德克雅對耶肋米亞說:「任何陽不得知道這些話,否則你就該死!
೨೪ಆಗ ಚಿದ್ಕೀಯನು ಯೆರೆಮೀಯನಿಗೆ, “ಈ ಮಾತುಗಳು ಯಾರಿಗೂ ತಿಳಿಯದಿರಲಿ, ಜೋಕೆ; ತಿಳಿಯದಿದ್ದರೆ ನೀನು ಸಾಯುವುದಿಲ್ಲ.
25 倘若首長們聽說我曾與你談論,而前來問你說:請你告訴我們,你對君王說了什麼﹖你不可對我們隱瞞,否則我們就要你的命! 究竟君王對你說了些什麼﹖
೨೫ನಾನು ನಿನ್ನ ಸಂಗಡ ಮಾತನಾಡಿದ ಸುದ್ದಿಯನ್ನು ಪ್ರಧಾನರು ಕೇಳಿ ನಿನ್ನ ಬಳಿಗೆ ಬಂದು, ‘ನೀನು ಅರಸನಿಗೆ ಹೇಳಿದ್ದನ್ನು ನಮಗೆ ತಿಳಿಸು; ನಮಗೆ ಮರೆಮಾಡದಿದ್ದರೆ ನಿನ್ನನ್ನು ಕೊಲ್ಲುವುದಿಲ್ಲ; ಅರಸನು ನಿನಗೆ ಹೇಳಿದ್ದನ್ನೂ ತಿಳಿಸು’ ಎಂದು ಪ್ರಶ್ನೆಮಾಡಬಹುದು.
26 你要回答他們說:我向君王面呈我的請求,請他不要叫我再回到約納堂的家裏去,死在那裏。」
೨೬ಆಗ ನೀನು ಅವರಿಗೆ, ‘ಯೆಹೋನಾಥಾನನ ಮನೆಗೆ ನನ್ನನ್ನು ತಿರುಗಿ ಸೇರಿಸಬೇಡ, ಅಲ್ಲೇ ಸತ್ತೇನು ಎಂದು ಅರಸನಿಗೆ ಬಿನ್ನಹ ಮಾಡಿಕೊಂಡೆನು’ ಎಂಬುದಾಗಿ ಹೇಳು” ಎಂದು ಅಪ್ಪಣೆಕೊಟ್ಟೆನು.
27 果然,眾首長前來質問耶肋米亞,他就全依照君王吩咐的話答覆了他們。他們對他無話可說,因為那次的談話,沒有被人竊聽了去。
೨೭ಕೆಲವು ಕಾಲದ ಮೇಲೆ ಸಕಲ ಪ್ರಧಾನರು ಯೆರೆಮೀಯನ ಬಳಿಗೆ ಬಂದು ಹಾಗೆಯೇ ಪ್ರಶ್ನೆ ಮಾಡಿದರು. ಅವನು ಅರಸನ ಅಪ್ಪಣೆಯಂತೆಯೇ ಉತ್ತರಕೊಡಲು ಅವರು ಮಾತನ್ನು ಮುಗಿಸಿದರು; ಏನೂ ತಿಳಿದುಕೊಳ್ಳಲಿಲ್ಲ.
28 這樣,耶肋米亞直到耶路撒冷淪陷的那一天,就住在拘留所的庭院裏。
೨೮ಯೆರೂಸಲೇಮು ಶತ್ರುವಶವಾಗುವ ತನಕ ಯೆರೆಮೀಯನು ಕಾರಾಗೃಹದ ಅಂಗಳದಲ್ಲೇ ವಾಸಿಸುತ್ತಿದ್ದನು.