< Nehemiah 5 >
1 Hatnavah, napui tongpanaw ni a miphun lah kaawm e Judahnaw hah a taran awh teh puenghoi a hramki awh.
೧ತರುವಾಯ ಜನರೂ ಅವರ ಹೆಂಡತಿಯರೂ ತಮ್ಮ ಬಂಧುಗಳಾದ ಯೆಹೂದ್ಯರಿಗೆ ವಿರುದ್ಧವಾಗಿ ಬಹಳ ಗೋಳಾಡ ತೊಡಗಿದರು.
2 Tangawn ni kaimae canunaw hoi capanaw moi apap. Ahnimanaw ka paca hane nâ e rawca namaw ka la awh han ati awh.
೨ಅವರಲ್ಲಿ ಕೆಲವರು, “ನಾವೂ ನಮ್ಮ ಗಂಡು ಹೆಣ್ಣು ಮಕ್ಕಳೂ ಬಹು ಮಂದಿ ಇದ್ದೇವೆ; ನಮ್ಮ ಜೀವನಕ್ಕಾಗಿ ಧಾನ್ಯವು ಬೇಕಾಗಿದೆ” ಎಂದು ಹೇಳಿದರು.
3 Tangawn ni kaimae law, takha, imnaw hoi ka pâhung awh toe. Canei takangnae atueng nâ e maw ka hmu awh han vah ati awh.
೩ಇನ್ನು ಕೆಲವರು, “ಬರಗಾಲದಲ್ಲಿ ಧಾನ್ಯವನ್ನು ಸಂಪಾದಿಸಿಕೊಳ್ಳಲು ನಮ್ಮ ಹೊಲ, ದ್ರಾಕ್ಷಿತೋಟ, ಮನೆಗಳನ್ನು ಒತ್ತೆ ಇಟ್ಟಿದ್ದೇವೆ” ಎಂದು ಹೇಳಿದರು.
4 Tangawn ni kaimouh ni siangpahrang koe aphawng poe hanelah law, takha naw hane tangka ka cawi awh toe.
೪ಮತ್ತು ಕೆಲವರು, “ಅರಸನ ಸರ್ಕಾರಕ್ಕೆ ಕಂದಾಯ ಕೊಡುವುದಕ್ಕಾಗಿ ನಾವು ನಮ್ಮ ಹೊಲ ದ್ರಾಕ್ಷಿತೋಟಗಳ ಮೇಲೆ ಹಣವನ್ನು ಸಾಲವಾಗಿ ತೆಗೆದುಕೊಳ್ಳಬೇಕಾಯಿತು” ಎಂದು ಹೇಳಿದರು.
5 Atuvah maimae takthainaw teh miphun buet touh e takthai patetlah doeh ao. Maimae canaw teh ahnimae canaw patetlah doeh ao awh. Maimae canaw hah yo vaiteh, san lah o sak han namaw. San dawk kaawm e canunaw patenghai ratang thai awh hoeh. Law hoi misur takhanaw pueng ayânaw e kut dawk a pha toe ati awh.
೫ಆದರೂ ನಮ್ಮ ಸಹೋದರರ ಕುಲವೂ ನಮ್ಮ ಕುಲವೂ, ಅವರ ಮಕ್ಕಳೂ, ನಮ್ಮ ಮಕ್ಕಳೂ ಒಂದೇ ಆಗಿದ್ದೇವೆ. ಆದರೆ ನಾವು ನಮ್ಮ ಗಂಡು ಹೆಣ್ಣು ಮಕ್ಕಳನ್ನು ಪರರಿಗೆ ದಾಸರನ್ನಾಗಿ ಕೊಡಬೇಕಾಯಿತು. ನಮ್ಮ ಹೆಣ್ಣು ಮಕ್ಕಳಲ್ಲಿ ಕೆಲವರನ್ನು ಅಪಹರಿಸಿದ್ದಾರೆ. ನಮ್ಮ ಪ್ರಯತ್ನವೆಲ್ಲ ವ್ಯರ್ಥವಾಯಿತು. ನಮ್ಮ ಹೊಲ ದ್ರಾಕ್ಷಿತೋಟಗಳು ಪರರಿಗೆ ಅಧೀನವಾದವು ಎಂದು ಗೊಣಗಾಡಿದರು.
6 Hettelah hramnae lawk ka thai navah puenghoi ka lungkhuek.
೬ಅವರ ಬೊಬ್ಬೆಯನ್ನೂ, ಮಾತುಗಳನ್ನೂ ಕೇಳಿದಾಗ ನಾನು ಬಹಳ ಸಿಟ್ಟುಗೊಂಡೆನು.
7 Hahoi, kahawicalah kho ka pouk teh bawinaw hoi lawkcengkungnaw ka kaw teh, nangmouh ni na hmaunawngha koe bangkongmaw apung na ca awh vaw telah ka yue teh, hote kong kâpankhai nahanelah taminaw teh ka kamkhueng sak.
೭ನಾನು ಮನಸ್ಸಿನಲ್ಲಿ ಸ್ವಲ್ಪ ಆಲೋಚಿಸಿಕೊಂಡು ಶ್ರೀಮಂತರಿಗೂ, ಅಧಿಕಾರಿಗಳಿಗೂ, “ನೀವು ನಿಮ್ಮ ಸಹೋದರರಿಂದ ಬಡ್ಡಿ ತೆಗೆದುಕೊಳ್ಳುವುದೆಂದರೇನು” ಎಂದು ಹೇಳಿ ಮಹಾಸಭೆಯನ್ನು ಕೂಡಿಸಿ
8 Jentelnaw koe kaawm e hmaunawngha Judah taminaw hah a coung thai totouh ka ratang awh teh, nangmouh ni hmaunawnghanaw bout na yo awh han rah maw, nangmouh ni hmaunawnghanaw bout na kâyo awh han rah maw telah ka yue teh lawkkamuem duem ao awh teh, pathung nahane lawk tawn awh hoeh toe.
೮ಅವರಿಗೆ, “ನಾವು ನಮ್ಮಿಂದಾಗುವಷ್ಟು ಮಟ್ಟಿಗೆ ನಮ್ಮ ಸಹೋದರರಾದ ಯೆಹೂದ್ಯರಲ್ಲಿ ಅನ್ಯಜನರಿಗೆ ಮಾರಲ್ಪಟ್ಟವರನ್ನು ಹಣ ಕೊಟ್ಟು ಬಿಡಿಸುತ್ತಿದ್ದೆವು. ಈಗ ನೀವು ನಿಮ್ಮ ಸಹೋದರರನ್ನು ಮಾರಿಬಿಡುತ್ತಿದ್ದೀರಿ; ಈಗ ಅವರನ್ನು ನಾವು ಕೊಂಡುಕೊಳ್ಳಬೇಕೇನು” ಎನ್ನಲು ಅವರು ಉತ್ತರಕೊಡದೆ ಸುಮ್ಮನಿದ್ದರು.
9 Hahoi kai ni, nangmouh ni na sak e hnonaw hawihoeh. Maimae taran lah kaawm e Jentelnaw ni na dudam awh han. Nangmouh ni Cathut taki laihoi hnokahawi sak kawi nahoehmaw ka ti pouh.
೯ಆನಂತರ ನಾನು ಅವರಿಗೆ, “ನೀವು ಮಾಡುತ್ತಿರುವುದು ಒಳ್ಳೆಯ ಕಾರ್ಯವಲ್ಲ; ನಾವು ನಮ್ಮ ವಿರೋಧಿಗಳಾಗಿರುವ ಅನ್ಯಜನರ ನಿಂದೆಗೆ ಗುರಿಯಾಗದಂತೆ ದೇವರಲ್ಲಿ ಭಯಭಕ್ತಿಯುಳ್ಳವರಾಗಿ ನಡೆದುಕೊಳ್ಳಬೇಕಲ್ಲವೇ.
10 Kai hoi hmaunawngha, ka sannaw ni taminaw koehoi e hnopai hoi cainaw kârei thai awh van nahoehmaw. Apung canae teh pâpout awh leih.
೧೦ನಾನೂ ನನ್ನ ಸಹೋದರರೂ ಸೇವಕರೂ ಸಹ ಅವರಿಗೆ ಹಣವನ್ನೂ, ಧಾನ್ಯವನ್ನೂ ಸಾಲವಾಗಿ ಕೊಟ್ಟಿದ್ದೇವೆ. ಬಡ್ಡಿತೆಗೆದುಕೊಳ್ಳುವ ಈ ಪದ್ಧತಿಯನ್ನು ಬಿಟ್ಟುಬಿಡೋಣ.
11 Sahnin roeroe vah ahnimae law, takha, Olive takhanaw hoi imnaw amamouh koehoi na kâreikhai e cai, misurtui hoi satuinaw 100 touh dawk buet touh na la awh e pueng hai bout poe awh leih ka ti pouh.
೧೧ಅವರ ಹೊಲ, ದ್ರಾಕ್ಷಿತೋಟ, ಎಣ್ಣೆಮರಗಳ ತೋಪು, ಮನೆ ಇವುಗಳನ್ನೂ ನೀವು ಕೊಟ್ಟ ಹಣ, ಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳಿಗೋಸ್ಕರ ನೂರಕ್ಕೆ ಒಂದರಂತೆ ನೀವು ತೆಗೆದುಕೊಂಡಿರುವ ಬಡ್ಡಿಯನ್ನೂ ದಯವಿಟ್ಟು ಈ ಹೊತ್ತೇ ಹಿಂದಕ್ಕೆ ಕೊಡಿರಿ” ಎಂದು ಹೇಳಿದೆನು.
12 Ahnimouh ni hai bout ka poe awh han toe. Banghai bout ka lat awh mahoeh toe. Na dei e patetlah ka sak awh han ati awh. Hahoi vaihmanaw ka kaw teh lawkkam e patetlah tawk hanelah lawkkamnae ka sak sak.
೧೨ಅದಕ್ಕೆ ಅವರು, “ನಾವು ಅವರಿಂದ ತೆಗೆದುಕೊಂಡದ್ದನ್ನು ಹಿಂದಕ್ಕೆ ಕೊಡುತ್ತೇವೆ, ಅವರಿಂದ ಏನೂ ಕೇಳುವುದಿಲ್ಲ, ನೀನು ಹೇಳಿದಂತೆಯೇ ಮಾಡುತ್ತೇವೆ” ಎಂದು ಉತ್ತರಕೊಟ್ಟರು. ಆಗ ನಾನು ಯಾಜಕರನ್ನು ಕರೆಸಿ ಈ ಮಾತಿನಂತೆ ನಡೆಯುವುದಾಗಿ ಅವರಿಂದ ಪ್ರಮಾಣ ಮಾಡಿಸಿದೆನು.
13 Kai ni hai kâkhu e ka kathuek teh, hete lawkkam ka tarawi hoeh e tami teh Cathut ni im dawk hoi thoseh, a thaw dawk hoi thoseh kathuek van naseh telah taminaw koe ka dei navah ahnimouh ni Amen telah ati awh. BAWIPA a pholen awh. Hahoi teh taminaw pueng ni lawkkam patetlah a tawksak awh.
೧೩ಇದಲ್ಲದೆ ನನ್ನ ನಡು ಪಟ್ಟಿಯನ್ನು ಝಾಡಿಸಿ ಅವರಿಗೆ, “ಈಗ ಕೊಟ್ಟ ಮಾತನ್ನು ಕೈಕೊಳ್ಳದ ಪ್ರತಿಯೊಬ್ಬನನ್ನು ದೇವರು ಅವನ ಮನೆಯಿಂದಲೂ, ಸ್ವತ್ತಿನಿಂದಲೂ ಈ ಪ್ರಕಾರವೇ ಝಾಡಿಸಿ ಬಿಡಲಿ; ಅವನು ಝಾಡಿಸಲ್ಪಟ್ಟ ನಡುಪಟ್ಟಿಯಂತೆಯೇ ಬರಿದಾಗಲಿ” ಅಂದೆನು. ಕೂಡಲೆ ಸಭೆಯವರೆಲ್ಲಾ, “ಹಾಗೆಯೇ ಆಗಲಿ” ಎಂದು ಹೇಳಿ ಯೆಹೋವನನ್ನು ಕೊಂಡಾಡಿ ಕೊಟ್ಟ ಮಾತನ್ನು ಕೈಗೊಂಡರು.
14 Judah ram ukkung lah ka o navah siangpahrang Artaxerxes kum 20 touh hoi kamtawng teh kum 32 totouh, kum 12 touh thung kai hoi ka hmaunawnghanaw ni ukkung e tamuk ka lat boi awh hoeh.
೧೪ಅರಸನಾದ ಅರ್ತಷಸ್ತನು ನನ್ನನ್ನು ಯೆಹೂದ ದೇಶದ ಅಧಿಪತಿಯನ್ನಾಗಿ ನೇಮಿಸಿದಂದಿನಿಂದ ಹನ್ನೆರಡು ವರ್ಷಗಳ ವರೆಗೆ ಅಂದರೆ ಅವನ ಆಳ್ವಿಕೆಯ ಇಪ್ಪತ್ತನೆಯ ವರ್ಷದಿಂದ ಮೂವತ್ತೆರಡನೆಯ ವರ್ಷದವರೆಗೆ ನಾನಾಗಲಿ ನನ್ನ ಸಹೋದರರಾಗಲಿ ದೇಶಾಧಿಪತಿಗೆ ಸಲ್ಲತಕ್ಕ ಭತ್ಯದಿಂದ ಜೀವನಮಾಡಲಿಲ್ಲ.
15 Ahmaloe ukkungnaw teh taminaw hanelah hnokari poung lah ao awh. Vaiyei hoi misurtui hai thoseh, hnin touh dawk sekel 40 touh a poe awh. Hothloilah a sannaw koehoi dumyennae hai a kâhmo awh. Hatei kai teh Cathut ka taki dawkvah hottelah ka sak hoeh.
೧೫ನನಗಿಂತ ಮೊದಲಿದ್ದ ದೇಶಾಧಿಪತಿಗಳು ಜನರ ಮೇಲೆ ಬಹಳ ಭಾರಹಾಕಿ ಅವರಿಂದ ದಿನಕ್ಕೆ ನಲ್ವತ್ತು ರೂಪಾಯಿಯ ಆಹಾರವನ್ನೂ, ದ್ರಾಕ್ಷಾರಸವನ್ನೂ ತೆಗೆದುಕೊಂಡದ್ದಲ್ಲದೆ ಅವರ ಸೇವಕರೂ ಜನರ ಮೇಲೆ ದೊರೆತನ ನಡೆಸಿದರು. ನಾನಾದರೋ ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಇರುವುದರಿಂದ ಹಾಗೆ ಮಾಡದೆ ಆ ಪೌಳಿಗೋಡೆ ಕಟ್ಟುವುದರಲ್ಲಿ ನಿರತನಾಗಿದ್ದೆನು.
16 Hothloilah, kai teh khopui rapan doeh pou ka pathoup. Kai hoi ka sannaw ni la ka ran awh hoeh. Khopui rapan pathoup hane doeh lungkângingcalah kâyawm awh.
೧೬ಮತ್ತು ನನ್ನ ಎಲ್ಲಾ ಸೇವಕರೂ ಪ್ರತಿದಿನ ಆ ಕೆಲಸಕ್ಕೆ ಬರುವಂತೆ ನೋಡುತ್ತಿದ್ದೆನು. ನಾವು ಅಲ್ಲಿ ಭೂಮಿಯನ್ನು ಸಂಪಾದಿಸಿಕೊಂಡಿರಲಿಲ್ಲ.
17 Hahoi miphun alouke hoi ka tho e dei laipalah, Judah miphunnaw hoi lawkcengkungnaw 150 touh ni ka caboi dawk rawca pou a ven awh.
೧೭ಇದಲ್ಲದೆ ಯೆಹೂದ್ಯರಲ್ಲಿ ನೂರೈವತ್ತು ಮಂದಿ ಅಧಿಕಾರಿಗಳೂ ಸುತ್ತಣ ಜನಾಂಗಗಳ ಮಧ್ಯದಿಂದ ನಮ್ಮ ಬಳಿಗೆ ಬರುತ್ತಿದ್ದವರೂ ನನ್ನ ಪಂಕ್ತಿಯಲ್ಲಿ ಊಟಮಾಡುತ್ತಿದ್ದರು.
18 Hnintangkuem maito buet touh, tu 6 touh hoi ânaw pou a thei awh hloilah, hnin 10 touh dawk vai touh misurtui aphunphun ka nei awh. Hettelah ka baw nakunghai taminaw ni puenghoi thaw a tawk awh dawkvah, khobawi ni pang hane kawi ka het boi awh hoeh.
೧೮ಪ್ರತಿದಿನ ಒಂದು ಹೋರಿ, ಆರು ಕೊಬ್ಬಿದ ಕುರಿ, ಕೆಲವು ಪಕ್ಷಿಗಳು ನಮ್ಮ ಭೋಜನಕ್ಕಾಗಿ ಸಿದ್ಧವಾಗುತ್ತಿದ್ದವು. ಹತ್ತು ದಿನಕ್ಕೊಮ್ಮೆ ನಾನು ಎಲ್ಲಾ ಬಗೆಯ ದ್ರಾಕ್ಷಾರಸವನ್ನು ಬೇಕಾದಷ್ಟು ಒದಗಿಸಲು ವ್ಯವಸ್ಥೆಮಾಡಿದೆ. ಇಷ್ಟೆಲ್ಲಾ ಇದ್ದರೂ ಆ ಜನರು ಮಾಡುತ್ತಿದ್ದ ಕೆಲಸವು ಬಹು ಕಠಿಣವಾಗಿದ್ದದರಿಂದ ನಾನು ದೇಶಾಧಿಪತಿಗೆ ಸಲ್ಲತಕ್ಕ ಭತ್ಯವನ್ನು ಕೇಳಲೇ ಇಲ್ಲ.
19 OE ka Cathut, hete taminaw hanelah hnokahawi ka sak e dawkvah kai heh kahawi nahanelah na pahnim pouh hanh lah a.
೧೯ನನ್ನ ದೇವರೇ, ನಾನು ಆ ಜನರಿಗೋಸ್ಕರ ಮಾಡಿದ್ದೆಲ್ಲವನ್ನು ನೆನಪು ಮಾಡಿಕೊಂಡು ನನಗೆ ಒಳಿತನ್ನು ಅನುಗ್ರಹಿಸು ಎಂದು ಪ್ರಾರ್ಥಿಸಿದೆ.