< ESTHER 8 >
1 Amah te khohnin ah manghai Ahasuerus loh Judah, Judah aka daengdaeh Haman im te manghainu Esther taengla a paek. A taengkah te Esther loh a puen coeng dongah Mordekai khaw manghai mikhmuh la mop.
೧ಆ ದಿನದಲ್ಲಿ ಅರಸನಾದ ಅಹಷ್ವೇರೋಷನು ಯೆಹೂದ್ಯರ ವೈರಿಯಾದ ಹಾಮಾನನ ಮನೆಯನ್ನು ಎಸ್ತೇರ್ ರಾಣಿಗೆ ಕೊಟ್ಟನು. ಆಕೆಯು ಮೊರ್ದೆಕೈಗೂ ತನಗೂ ಇರುವ ಸಂಬಂಧವನ್ನು ತಿಳಿಸಿದಳು.
2 Manghai loh Haman lamkah aka mael a kutcaeng te a dul tih Mordekai taengla a paek. Esther loh Mordekai te Haman im ah a khueh.
೨ಆಗ ಅರಸನು ತಾನು ಹಾಮಾನನಿಗೆ ನೀಡಿದ್ದ ತನ್ನ ಮುದ್ರೆಯುಂಗುರವನ್ನು ಮೊರ್ದೆಕೈಗೆ ಕೊಟ್ಟನು; ಎಸ್ತೇರಳು ಹಾಮಾನನ ಮನೆಯ ಆಡಳಿತವನ್ನು ಅವನಿಗೆ ಒಪ್ಪಿಸಿದಳು.
3 Te phoeiah Esther loh a rhaep tih manghai mikhmuh ah a thui pah. A kho kung ah yalh tih rhap. Te vaengah a taengah Agagite Haman kah boethae neh Judah rhoek a taeng thil a kopoek te paa sak ham a bih.
೩ಎಸ್ತೇರಳು ಪುನಃ ಅರಸನನ್ನು ಮಾತನಾಡಿಸುವುದಕ್ಕೆ ಹೋಗಿ ಅವನ ಪಾದಗಳಿಗೆ ಬಿದ್ದು, ಅಳುತ್ತಾ, “ಅಗಾಗನ ವಂಶದವನಾದ ಹಾಮಾನನು ಯೆಹೂದ್ಯರ ಹಾನಿಗಾಗಿ ಕಲ್ಪಿಸಿದ ದುಷ್ಟ ಯೋಜನೆಗಳನ್ನು, ಅಪಾಯಗಳನ್ನು ನಿವಾರಿಸಬೇಕು” ಎಂದು ವಿಜ್ಞಾಪಿಸಿದಳು.
4 Te vaengah manghai loh Esther taengla sui mancai a doe. Te dongah Esther te thoo tih manghai mikhmuh ah pai.
೪ಅರಸನು ಸುವರ್ಣ ರಾಜದಂಡವನ್ನು ಆಕೆಯ ಕಡೆಗೆ ಚಾಚಿದ್ದರಿಂದ ಆಕೆಯು ಎದ್ದು ಅರಸನ ಮುಂದೆ ನಿಂತಳು.
5 Te phoeiah, “Manghai ham khaw then mai tih a mikhmuh ah mikdaithen ka dang mai atah, manghai mikhmuh ah khaw ol te khui coeng. Kai khaw a mikhmuh ah then coeng. Agagite Hammedatha capa Haman kah kopoek cabu te yueh hamla daek mai saeh. Te te manghai paeng pum ah Judah rhoek milh sak ham ni a daek.
೫ಆಗ ಎಸ್ತೇರಳು ಅವನಿಗೆ, “ಅರಸನು ನನ್ನ ಮೇಲೆ ಕಟಾಕ್ಷವಿಟ್ಟು, ನನ್ನನ್ನು ಮೆಚ್ಚಿ, ನಾನು ಹೇಳುವ ಮಾತು ಒಳ್ಳೆಯದೆಂದು ಅದಕ್ಕೆ ಸಮ್ಮತಿಸುವುದಾದರೆ, ಅರಸನ ಎಲ್ಲಾ ಸಂಸ್ಥಾನಗಳಲ್ಲಿರುವ ಯೆಹೂದ್ಯರನ್ನು ಸಂಹರಿಸುವ ವಿಷಯವಾಗಿ ಅಗಾಗನ ವಂಶದವನೂ, ಹಮ್ಮೆದಾತನ ಮಗನು ಆದ ಹಾಮಾನನು ಬರೆಯಿಸಿದ ಪತ್ರವನ್ನು ರದ್ದುಮಾಡುವುದಕ್ಕಾಗಿ ಆಜ್ಞಾಪತ್ರವನ್ನು ಪ್ರಕಟಿಸಬೇಕು.
6 Boethae loh ka pilnam a tlak thil ham te metlam ka ueh vetih ka sawt eh? Ka pacaboeina kah mitmoengnah ham te metlam ka ueh vetih ka sawt eh?” a ti nah.
೬ನನ್ನ ಜನರಿಗೆ ಕೇಡು ಸಂಭವಿಸುವುದನ್ನು ನೋಡಿ ನಾನು ಸಹಿಸಿಕೊಂಡಿರುವುದು ಹೇಗೆ? ನನ್ನ ಕುಲನಾಶನವನ್ನು ನೋಡುತ್ತಾ ಸುಮ್ಮನಿರುವುದು ಹೇಗೆ?” ಎಂದು ಬಿನ್ನವಿಸಿದಳು.
7 Te vaengah manghai Ahasuerus loh manghainu Esther taeng neh Judah Mordekai taengah, “Haman im te Esther taengla ka paek coeng. Judah, Judah te a kut a hlah thil dongah amah khaw thing dongah ka kuiok sak coeng.
೭ಆಗ ಅಹಷ್ವೇರೋಷ್ ರಾಜನು ರಾಣಿಯಾದ ಎಸ್ತೇರಳಿಗೂ ಮತ್ತು ಯೆಹೂದ್ಯನಾದ ಮೊರ್ದೆಕೈಗೂ, “ಹಾಮಾನನು ಯೆಹೂದ್ಯರಿಗೆ ವಿರುದ್ಧವಾಗಿ ಕೈಯೆತ್ತಿದ್ದರಿಂದ ಅವನನ್ನು ಗಲ್ಲಿಗೆ ಹಾಕಿಸಿ, ಅವನ ಸೊತ್ತನ್ನು ಎಸ್ತೇರಳಿಗೆ ದಾನಮಾಡಿದ್ದೇನಲ್ಲಾ, ಅರಸನ ಹೆಸರಿನಲ್ಲಿ ಬರೆಯಲ್ಪಟ್ಟು ರಾಜಮುದ್ರೆಯಿರುವ ಲೇಖನವನ್ನು ಯಾರೂ ರದ್ದುಮಾಡಲು ಬರುವುದಿಲ್ಲ.
8 Nangmih loh Judah rhoek ham te na mik ah then na ti bangla manghai ming neh daek pah laeh. Te phoeiah ca te manghai kah kutcaeng neh hnah thil. Manghai ming neh a daek tih manghai kutcaeng neh a hnah thil tah a yueh ham voel moenih,” a ti nah.
೮ಆದುದರಿಂದ ಯೆಹೂದ್ಯರ ವಿಷಯವಾಗಿ ನಿಮಗೆ ಸರಿತೋರುವುದನ್ನು ಅರಸನ ಹೆಸರಿನಲ್ಲಿ ನೀವೂ ಬರೆಯಿಸಿ, ಅದಕ್ಕೆ ರಾಜಮುದ್ರೆಯನ್ನು ಹಾಕಿರಿ” ಎಂದು ಹೇಳಿದನು.
9 Te dongah te khohnin ah manghai kah cadaek rhoek khue uh thae. Te te a kum kul kum thum nah, hla thum dongkah Sivan hla ni. Te vaengah Mordekai ol uen boeih te Judah rhoek ham neh khoboei rhoek ham khaw, India lamloh Kusah hil paeng ya pakul parhih kah paeng rhalboei rhoek neh mangpa ham khaw, paeng khat ah amah paeng kah ca neh, pilnam khat taengah amah pilnam ol neh, Judah ham khaw amah ca, amah ol neh a daek pah.
೯ಆಗ ರಾಜಲೇಖಕರು ಕರೆಯಲ್ಪಟ್ಟರು. ಅವರು ಬಂದು ಮೂರನೆಯ ತಿಂಗಳಾದ ಜೇಷ್ಠಮಾಸದ ಇಪ್ಪತ್ತಮೂರನೆಯ ದಿನದಲ್ಲಿ, ಮೊರ್ದೆಕೈಯ ಆಜ್ಞಾನುಸಾರ ಯೆಹೂದ್ಯರಿಗೂ, ಭಾರತ ಮೊದಲುಗೊಂಡು ಕೂಷಿನ ವರೆಗೂ ಇರುವ ನೂರ ಇಪ್ಪತ್ತೇಳು ಸಂಸ್ಥಾನಗಳ ಉಪರಾಜರಿಗೂ, ದೇಶಾಧಿಪತಿಗಳಿಗೂ ಮತ್ತು ಅಧಿಕಾರಿಗಳಿಗೂ ಪತ್ರಗಳನ್ನು ಬರೆದರು. ಆ ಪತ್ರಗಳು ಆಯಾ ಸಂಸ್ಥಾನಗಳ ಬರಹಗಳಲ್ಲಿಯೂ, ಆಯಾ ಜನಾಂಗಗಳ ಭಾಷೆಗಳಲ್ಲಿಯೂ ಇದ್ದವು. ಯೆಹೂದ್ಯರಿಗೆ ಬರೆದ ಪತ್ರಗಳು ಯೆಹೂದ್ಯ ಬರಹದಲ್ಲಿಯೂ, ಭಾಷೆಗಳಲ್ಲಿಯೂ ಲಿಖಿತವಾದವು.
10 Manghai Ahasuerus ming neh a daek tih manghai kutcaeng a hnah thil. Te phoeiah cabu te marhangpa, boei leng dongah ngol tih tatloe kut lamloh marhang dongah a pat.
೧೦ಮೊರ್ದೆಕೈಯು ಅರಸನ ಹೆಸರಿನಲ್ಲಿ ಬರೆಯಲ್ಪಟ್ಟ ಆ ಪತ್ರಗಳಿಗೆ ರಾಜಮುದ್ರೆಯನ್ನು ಹಾಕಿ, ಅರಮನೆಯ ಅಶ್ವಾಲಯಗಳಲ್ಲಿ ಹುಟ್ಟಿ ಬೆಳೆದಂಥ, ಅರಸನ ಸೇವೆಗಾಗಿ ಉಪಯೋಗಿಸಲ್ಪಡುತ್ತಿದ್ದ ವೇಗವಾಗಿ ಓಡುವಂಥ ಕುದುರೆಗಳ ಮುಖಾಂತರ ಕಳುಹಿಸಿದನು.
11 Manghai loh Judah rhoek te khopuei, khopuei boeih ah tingtun ham neh amamih hinglu te pai puei ham, amih aka dum paeng neh pilnam tatthai boeih te tah mitmoeng sak ham, ngawn ham, milh sak ham, huta camoe neh a kutbuem te poelyoe pah ham a paek.
೧೧ಆ ಪತ್ರಗಳಲ್ಲಿ ಅರಸನು, “ಅಹಷ್ವೇರೋಷ್ ರಾಜನ ಎಲ್ಲಾ ಸಂಸ್ಥಾನಗಳ ಆಯಾ ಪಟ್ಟಣಗಳಲ್ಲಿರುವ ಯೆಹೂದ್ಯರು ಒಂದೇ ದಿನದಲ್ಲಿ ಅಂದರೆ, ಹನ್ನೆರಡನೆಯ ತಿಂಗಳಾದ ಫಾಲ್ಗುಣಮಾಸದ ಹದಿಮೂರನೆಯ ದಿನದಲ್ಲಿ ಒಟ್ಟಾಗಿ ಸೇರಿಕೊಳ್ಳಬೇಕು.
12 Te te hla hlai nit, Adar hla hnin hlai thum dongah tah manghai Ahasuerus kah paeng pum ah hnin at neh saii saeh a ti.
೧೨ತಮ್ಮ ಪ್ರಾಣರಕ್ಷಣೆಗಾಗಿ ಎದ್ದು, ತಮ್ಮ ವಿರುದ್ಧವಾಗಿ ಆಯುಧಗಳೊಡನೆ ನೆರೆದು ಬರುವ ಎಲ್ಲಾ ಜನಾಂಗಗಳವರನ್ನೂ, ಸಂಸ್ಥಾನಗಳವರನ್ನೂ, ಅವರ ಹೆಂಡತಿಯರು ಮಕ್ಕಳು ಸಹಿತವಾಗಿ ಕೊಂದು, ಸಂಹರಿಸಿ, ನಿರ್ನಾಮಗೊಳಿಸಬೇಕು.
13 Catlaep ca te paeng, paeng boeih ah olkhan la paek ham, pilnam cungkuem taengah a tai sak. Te daengah ni Judah, Judah rhoek khaw te khohnin ah a thunkha rhoek soah phuloh ham khohrhang neh a coekcoe la a om eh.
೧೩ಅವರ ಸೊತ್ತನ್ನು ಸೂರೆಮಾಡಬೇಕು, ಈ ಪತ್ರದ ಒಂದೊಂದು ಪ್ರತಿಯನ್ನು ಪ್ರತಿಯೊಂದು ಸಂಸ್ಥಾನದಲ್ಲಿ ರಾಜವಿಧಿಯೆಂದು ಎಲ್ಲಾ ಜನರಲ್ಲಿ ಪ್ರಕಟಿಸಬೇಕು, ಆ ದಿನದಲ್ಲಿ ಯೆಹೂದ್ಯರು ತಮ್ಮ ಶತ್ರುಗಳಿಗೆ ಮುಯ್ಯಿತೀರಿಸುವುದಕ್ಕೆ ಸಿದ್ಧರಾಗಿರಬೇಕು” ಎಂದು ಅಪ್ಪಣೆಮಾಡಿದ್ದನು.
14 Boei marhang dongah aka ngol tatloe rhoek loh tlek a thak uh. Te phoeiah manghai ol neh Shushan rhalmah im ah olkhan a paek te a khuen paitok.
೧೪ಈ ರಾಜಾಜ್ಞೆಯು ಶೂಷನ್ ಕೋಟೆಯಲ್ಲಿ ಪ್ರಕಟವಾದಾಗಲೇ ಅಂಚೆಯವರು ಅರಮನೆಯ ಸವಾರಿಕುದುರೆಗಳನ್ನು ಹತ್ತಿಕೊಂಡು ಅರಸನ ಅಪ್ಪಣೆಯಿಂದ ಪ್ರೇರಿತರಾಗಿ ಅತಿ ಶೀಘ್ರವಾಗಿ ಹೊರಟರು.
15 Mordekai khaw manghai mikhmuh lamloh manghai pueinak, a thim, a bok, boeilen sui rhuisam, baibok hni neh, daidi neh cet. Te daengah ni Shushan khopuei khaw hlampan tih a kohoe.
೧೫ಮೊರ್ದೆಕೈಯಾದರೋ ನೀಲಿ ಮತ್ತು ಶುಭ್ರವರ್ಣಗಳುಳ್ಳ ರಾಜವಸ್ತ್ರಗಳನ್ನು ಧರಿಸಿಕೊಂಡು, ಬಂಗಾರದ ದೊಡ್ಡ ಕಿರೀಟವನ್ನು ಇಟ್ಟುಕೊಂಡು, ರಕ್ತವರ್ಣದ ನಾರಿನ ನಿಲುವಂಗಿಯನ್ನು ಹೊದ್ದುಕೊಂಡು ರಾಜಸನ್ನಿಧಿಯಿಂದ ಹೊರಟನು. ಶೂಷನ್ ಪಟ್ಟಣದಲ್ಲಿ ಸಂತೋಷದ ಆರ್ಭಟವು ಕೇಳಿಸಿತು.
16 Judah ham khaw khosae neh kohoenah, omngaihnah neh umponah la a om pah.
೧೬ಅಲ್ಲಿನ ಯೆಹೂದ್ಯರಿಗೆ ಸಂತೋಷ, ಗೌರವ, ಹರ್ಷಪ್ರಭಾವ ಮತ್ತು ತೇಜಸ್ಸುಳ್ಳವರಾದರು.
17 Paeng neh paeng tom ah khaw, khopuei neh khopuei tom ah khaw, manghai ol neh a olkhan loh a pha nah hmuen ah kohoenah neh omngaihnah om. Judah lakli ah khaw buhkoknah neh khohnin then a bul uh. Khohmuen pilnam lamkah te a taengah Judah birhihnah loh a khuk dongah Judah khuila muep kun uh.
೧೭ರಾಜನಿರ್ಣಯ ಶಾಸನಗಳು ಪ್ರಕಟಿಸಲ್ಪಟ್ಟ ಪ್ರತಿಯೊಂದು ಸಂಸ್ಥಾನದಲ್ಲಿಯೂ ಪಟ್ಟಣದಲ್ಲಿಯೂ ಇದ್ದ ಯೆಹೂದ್ಯರಿಗೆ ಶುಭದಿನ ಉಂಟಾಯಿತು; ಅವರು ಸಂತೋಷದಿಂದಲೂ, ಉಲ್ಲಾಸದಿಂದಲೂ ಭಕ್ಷ್ಯಭೋಜನಮಾಡಿದರು. ದೇಶದ ಜನರಲ್ಲಿ ಅನೇಕರು ಯೆಹೂದ್ಯರಿಗೆ ಭಯಪಟ್ಟು ಅವರ ಮತಕ್ಕೆ ಸೇರಿದರು.