< Jeremiah 40 >
1 Siangpahrang toepkung misatuh angraeng Neburazadan mah, Jeremiah to sumqui hoiah pathlet moe, Babylon misong ah kalaem Judah kaminawk hoi Jerusalem kaminawk hoiah nawnto a caeh haih; Ramah phak naah loe, Jeremiah to prawt hanah Angraeng ih lok anih khaeah angzoh;
೧ಯೆಹೋವನು ಮತ್ತೊಮ್ಮೆ ತನ್ನ ವಾಕ್ಯವನ್ನು ಯೆರೆಮೀಯನಿಗೆ ದಯಪಾಲಿಸಿದನು. ಇಷ್ಟರೊಳಗೆ ಕಾವಲುದಂಡಿನ ಅಧಿಪತಿಯಾದ ನೆಬೂಜರದಾನನು ಯೆರೂಸಲೇಮಿನವರ ಮತ್ತು ಯೆಹೂದ್ಯರ ಗುಂಪನ್ನು ಬಾಬಿಲೋನಿಗೆ ಸೆರೆಯೊಯ್ಯುತ್ತಿದ್ದಾಗ ಅವರಲ್ಲಿ ಸಂಕೋಲೆಗಳಿಂದ ಕಟ್ಟಲ್ಪಟ್ಟಿದ್ದ ಯೆರೆಮೀಯನನ್ನು ರಾಮದ ಬಳಿಯಲ್ಲಿ ಬಿಡಿಸಿಬಿಟ್ಟಿದ್ದನು.
2 misatuh angraeng Nebuzaradan mah, Jeremiah to hnuk naah anih khaeah, Na Angraeng Sithaw mah hae ahmuen ah hae baktih amrohaih lok to thuih boeh.
೨ಆಗ ಕಾವಲು ದಂಡಿನ ಅಧಿಪತಿಯು ಯೆರೆಮೀಯನನ್ನು ಕರೆಯಿಸಿ ಅವನಿಗೆ, “ನಿನ್ನ ದೇವರಾದ ಯೆಹೋವನು ಈ ಸ್ಥಳಕ್ಕೆ ಇಂಥ ಕೆಡುಕಾಗಲಿ ಎಂದು ಶಾಪಕೊಟ್ಟನು.
3 A thuih ih lok baktih toengah Angraeng mah vaihi koepsak boeh; nangcae loe Sithaw nuiah na zae o moe, a lok na tahngai pae o ai pongah ni, hae hmuennawk hae nangcae nuiah phak.
೩ಆತನು ಅದನ್ನೇ ಬರಮಾಡಿ ತನ್ನ ಮಾತನ್ನು ನೆರವೇರಿಸಿದ್ದಾನೆ; ನೀವು ಯೆಹೋವನ ಧ್ವನಿಗೆ ಕಿವಿಗೊಡದೆ ಆತನಿಗೆ ಪಾಪಮಾಡಿದ್ದರಿಂದಲೇ ಇದು ನಿಮಗೆ ಸಂಭವಿಸಿದೆ.
4 Toe khenah, na ban pong ih sumqui hae vaihi ka khramh han. Na koeh nahaeloe Babylon ah angzo ah, kaimah kang khetzawn han; toe Babylon ah angzoh han na koeh ai nahaeloe, angzo hmah; na hmaa ah kaom prae boih ho, khenah; nangmah hanah hoih koek tih, tiah na poek ih ahmuen to om nahaeloe, to ahmuen ah caeh ah, tiah a naa.
೪ಇಗೋ, ನಿನ್ನ ಕೈಗೆ ಹಾಕಿದ ಬೇಡಿಗಳನ್ನು ಈ ದಿನ ತೆಗೆಸಿದ್ದೇನೆ. ನನ್ನ ಸಂಗಡ ಬಾಬಿಲೋನಿಗೆ ಬರಬೇಕೆಂದು ನಿನಗೆ ಮನಸ್ಸಿದ್ದರೆ ಬಾ; ನಿನ್ನನ್ನು ಕಟಾಕ್ಷಿಸುವೆನು; ನನ್ನ ಸಂಗಡ ಬಾಬಿಲೋನಿಗೆ ಬರುವುದಕ್ಕೆ ಮನಸ್ಸಿಲ್ಲದೆ ಹೋದರೆ ನಿಂತುಬಿಡು; ಇಗೋ, ದೇಶವೆಲ್ಲಾ ನಿನ್ನ ಕಣ್ಣೆದುರಿಗಿದೆ; ನಿನಗೆ ಯಾವ ಕಡೆ ಹೋಗುವುದು ಸರಿಯೋ ಒಳ್ಳೆಯದೋ ಆ ಕಡೆ ಹೋಗು” ಎಂದು ಹೇಳಿದನು.
5 Jeremiah loe anih khae hoi tacawt ai naah, Nebuzaradan mah anih khaeah, Babylon siangpahrang mah Judah vangpuinawk ukkung ah suek ih, Shaphan capa Ahikam, anih ih capa Gedaliah khaeah caeh ah loe, kaminawk hoi nawnto om ah, to tih ai boeh loe nangmah hanah hoih koek tih, tiah na poek ih ahmuen ah caeh halat ah, tiah a naa. To pacoengah misatuh angraeng mah caaknaek hoi tangqum to paek moe, a caehsak.
೫ಯೆರೆಮೀಯನು ಇನ್ನೂ ಹಿಂದಿರುಗದಿರುವಲ್ಲಿ ನೆಬೂಜರದಾನನು ಅವನಿಗೆ, “ಬಾಬೆಲಿನ ಅರಸನು ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನನ್ನು ಯೆಹೂದದ ಪಟ್ಟಣಗಳಿಗೆ ಅಧಿಪತಿಯನ್ನಾಗಿ ನೇಮಿಸಿದ್ದಾನಲ್ಲಾ; ಅವನ ಕಡೆಗೆ ನೀನು ಹಿಂದಿರುಗಿ ಅವನ ಹತ್ತಿರ ಜನರ ಮಧ್ಯೆ ವಾಸಿಸು; ಇಲ್ಲವೆ ಎಲ್ಲಿ ಬೇಕಾದರೂ ಹೋಗು” ಎಂದು ಹೇಳಿ ಬುತ್ತಿಯನ್ನೂ ಮತ್ತು ಬಹುಮಾನವನ್ನೂ ಕೊಡಿಸಿ ಅವನನ್ನು ಕಳುಹಿಸಿಬಿಟ್ಟನು.
6 To pongah Jeremiah loe Mizpah ah kaom, Ahikam capa Gedaliah khaeah caeh moe, anih hoi to prae ah caehtaak ih kaminawk salakah oh toeng.
೬ಆಗ ಯೆರೆಮೀಯನು ಅಹೀಕಾಮನ ಮಗನಾದ ಗೆದಲ್ಯನು ಇದ್ದ ಮಿಚ್ಪಕ್ಕೆ ಹೋಗಿ ದೇಶದಲ್ಲಿ ಉಳಿದ ಜನರ ಮಧ್ಯದಲ್ಲಿ ಅವನ ಸಂಗಡ ವಾಸಿಸಿದನು.
7 Babylon siangpahrang mah Ahikam capa Gedaliah to prae ukkung ah suek moe, Babylon misong ah kalaem ai nongpa hoi nongpatanawk, nawktanawk hoi amtang kaminawk to anih khaeah paek ti, tiah taw ah kaom misatuh angraengnawk, angmacae hoi angmacae ih kaminawk boih mah thaih o naah,
೭ಬಾಬೆಲಿನ ಅರಸನು ಅಹೀಕಾಮನ ಮಗನಾದ ಗೆದಲ್ಯನನ್ನು ದೇಶಾಧಿಪತಿಯನ್ನಾಗಿ ನೇಮಿಸಿ, ಬಾಬಿಲೋನಿಗೆ ಸೆರೆಯೊಯ್ಯಲ್ಪಡದ ದೇಶೀಯರಲ್ಲಿ ಬಡ, ದಿಕ್ಕಿಲ್ಲದ ಗಂಡಸರನ್ನೂ, ಹೆಂಗಸರನ್ನೂ ಮತ್ತು ಮಕ್ಕಳನ್ನೂ ಅವನ ಅಧಿಕಾರಕ್ಕೆ ಒಪ್ಪಿಸಿದನೆಂಬ ಸುದ್ದಿಯನ್ನು ಕಾಡುಮೇಡುಗಳಲ್ಲಿದ್ದ ಸಕಲ ಯೆಹೂದ ಸೈನಿಕರೂ ಮತ್ತು ಸೇನಾಪತಿಗಳು ಕೇಳಿ ಮಿಚ್ಪದಲ್ಲಿ ವಾಸವಾಗಿದ್ದ ಅವನ ಬಳಿಗೆ ಹೋದರು.
8 Mizpah ah Gedaliah khaeah, Nethaniah capa Ishmael, Kariah capa Johanan hoi Jonathan, Tanhumeth capa Seraiah, Ephai capa Netophath, Maakath capa Jezaniah hoi nihcae ih kaminawk to angzoh o.
೮ಆ ಸೇನಾಪತಿಗಳು ಯಾರೆಂದರೆ, ನೆತನ್ಯನ ಮಗನಾದ ಇಷ್ಮಾಯೇಲ, ಕಾರೇಹನ ಮಕ್ಕಳಾದ ಯೋಹಾನಾನ ಮತ್ತು ಯೋನಾಥಾನ, ತನ್ಹುಮೆತನ ಮಗನಾದ ಸೆರಾಯ, ಮಾಕಾ ಊರಿನವನ ಮಗನಾದ ಯೆಜನ್ಯ, ನೆಟೋಫದವನಾದ ಏಫಯನ ಮಕ್ಕಳು ಇವರೇ.
9 Shaphan capa Ahikam, anih ih capa Gedaliah mah, Khaldian kaminawk ih toksak hanah mawn hmah, hae prae ah om ah loe, Babylon siangpahrang ih tok to sah pae oh, to tiah na sak pae o nahaeloe, khosak na hoih o tih, tiah nihcae khaeah lokmaihaih a sak.
೯ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನು ಇವರಿಗೂ ಇವರ ಸೈನಿಕರಿಗೂ, “ಕಸ್ದೀಯರಿಗೆ ಅಧೀನರಾಗಿರಲಿಕ್ಕೆ ಹೆದರಬೇಡಿರಿ; ಬಾಬೆಲಿನ ಅರಸನಿಗೆ ಅಧೀನರಾಗಿ ಇಲ್ಲಿಯೇ ವಾಸಿಸಿರಿ; ಆಗ ನಿಮಗೆ ಸುಖವಾಗುವುದು.
10 Khenah, kai doeh aicae khaeah angzo han koi Khaldian kaminawk ih tok to sak pae hanah, Mizpah ah ka oh han; toe misurtui, nipui ih thingthainawk hoi situinawk to patung oh, laom thungah suem oh loe, na oh o haih vangpuinawk ah khosah oh, tiah a naa.
೧೦ನಾನಂತು ಮಿಚ್ಪದಲ್ಲಿ ವಾಸವಾಗಿದ್ದು ನಮ್ಮ ಬಳಿಗೆ ಬರುವ ಕಸ್ದೀಯರ ಮುಂದೆ ನಿಮ್ಮ ಪಕ್ಷವನ್ನು ವಹಿಸುವೆನು; ನೀವು ದ್ರಾಕ್ಷಾರಸ, ಹಣ್ಣು, ಎಣ್ಣೆ, ಇವುಗಳನ್ನು ಸಂಗ್ರಹಿಸಿ ನಿಮ್ಮ ಪಾತ್ರೆಗಳಲ್ಲಿ ತುಂಬಿಸಿಟ್ಟು ನೀವು ಹಿಡಿದ ಪಟ್ಟಣಗಳಲ್ಲಿ ವಾಸಿಸಿರಿ” ಎಂದು ಖಂಡಿತವಾಗಿ ಹೇಳಿದನು.
11 Moab, Ammon, Edom hoi kalah praenawk ah kaom Judah kaminawk mah, Babylon siangpahrang mah thoemto Judah kaminawk to caehtaak sut, nihcae ukkung ah Shaphan capa Ahikam, anih ih capa Gedaliah to suek boeh, tiah thaih o naah,
೧೧ಇದಲ್ಲದೆ ಅಮ್ಮೋನ್ಯರ ಮಧ್ಯದೊಳಗೂ, ಮೋವಾಬ್ ಮತ್ತು ಎದೋಮ್ ಮೊದಲಾದ ದೇಶಗಳಲ್ಲಿಯೂ ಚದುರಿ ಹೋಗಿದ್ದ ಯೆಹೂದ್ಯರೆಲ್ಲರೂ ಬಾಬೆಲಿನ ಅರಸನು ಯೆಹೂದದಲ್ಲಿ ಕೆಲವರನ್ನು ಉಳಿಸಿ ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನನ್ನು ಅವರಿಗೆ ಅಧಿಪತಿಯನ್ನಾಗಿ ನೇಮಿಸಿದ್ದಾನೆಂಬ
12 Judah kaminawk boih, angmacae amhet o haih ahmuen boih hoiah Judah prae, Gedaliah ohhaih, Mizpah ah angzoh o moe, misurtui hoi nipui ih thingthainawk to patung o.
೧೨ವರ್ತಮಾನವನ್ನು ಕೇಳಿ ತಾವು ಅಟ್ಟಲ್ಪಟ್ಟು ಸೇರಿದ್ದ ಎಲ್ಲಾ ಸ್ಥಳಗಳಿಂದಲೂ ಯೆಹೂದಕ್ಕೆ ಹಿಂದಿರುಗಿ ಮಿಚ್ಪದಲ್ಲಿ ವಾಸವಾಗಿದ್ದ ಗೆದಲ್ಯನ ಬಳಿಗೆ ಬಂದು ದ್ರಾಕ್ಷಾರಸವನ್ನೂ, ಹಣ್ಣುಗಳನ್ನೂ ಸಮೃದ್ಧಿಯಾಗಿ ಸಂಗ್ರಹಿಸಿದರು.
13 Kariah capa Johanan hoi taw ah kaom misatuh angraengnawk loe, Gedaliah ohhaih, Mizpah ah angzoh o boih moe,
೧೩ಆಮೇಲೆ ಕಾರೇಹನ ಮಗನಾದ ಯೋಹಾನಾನನೂ, ಕಾಡುಮೇಡುಗಳಲ್ಲಿದ್ದ ಸಕಲ ಸೇನಾಪತಿಗಳೂ ಮಿಚ್ಪದಲ್ಲಿ ವಾಸವಾಗಿದ್ದ ಗೆದಲ್ಯನ ಬಳಿಗೆ ಹೋದರು.
14 anih khaeah, Nang hum hanah, Ammon kaminawk ih siangpahrang Baalis mah Nethaniah ih capa Ishmael to patoeh, tito na panoek ai maw? tiah a naa o; toe Ahikam capa Gedaliah mah nihcae ih lok to tang pae ai.
೧೪ಅವರು, “ಅಮ್ಮೋನ್ಯರ ಅರಸನಾದ ಬಾಲೀಸನು ನಿನ್ನನ್ನು ಕೊಲ್ಲುವುದಕ್ಕಾಗಿ ನೆತನ್ಯನ ಮಗನಾದ ಇಷ್ಮಾಯೇಲನನ್ನು ಕಳುಹಿಸದ್ದಾನೆಂಬುದು ನಿನಗೆ ಗೊತ್ತಿದೆಯೋ?” ಎಂದು ಕೇಳಿದರು. ಆದರೆ ಅಹೀಕಾಮನ ಮಗನಾದ ಗೆದಲ್ಯನು ಅವರನ್ನು ನಂಬಲಿಲ್ಲ.
15 To naah Kariah capa Johanan mah, Tamquta hoi Gedaliah khaeah Mizpah ah caeh moe, Mi mah doeh panoek ai ah, Nethaniah capa Ishmael to ka hum han: Ishmael mah na hinghaih la ving nahaeloe, nang khaeah kaom Judah kaminawk boih amhet o phang tih, kanghmat Judah kaminawk anghma angtaa o mak ai maw? tiah a naa.
೧೫ಆಗ ಕಾರೇಹನ ಮಗನಾದ ಯೋಹಾನಾನ ಮಿಚ್ಪದಲ್ಲಿದ್ದ ಗೆದಲ್ಯನಿಗೆ, “ನಾನು ಹೋಗಿ ನೆತನ್ಯನ ಮಗನಾದ ಇಷ್ಮಾಯೇಲನನ್ನು ಕೊಲ್ಲಲಿಕ್ಕೆ ಅಪ್ಪಣೆಯಾಗಲಿ; ಇದು ನಿನ್ನ ಅಪ್ಪಣೆ ಎಂದು ಯಾರಿಗೂ ತಿಳಿದು ಬರುವುದಿಲ್ಲ; ಅವನು ನಿನ್ನನ್ನು ಕೊಂದರೆ ನಿನ್ನ ಆಶ್ರಯದ ಯೆಹೂದ್ಯರೆಲ್ಲರೂ ದಿಕ್ಕಾಪಾಲಾಗಿ ಯೆಹೂದದ ಶೇಷವು ನಿಶ್ಶೇಷವಾಗುವುದಲ್ಲಾ; ಏಕೆ ಹೀಗಾಗಬೇಕು?” ಎಂದು ರಹಸ್ಯವಾಗಿ ವಿಜ್ಞಾಪಿಸಿದನು.
16 Toe Ahikam capa Gedaliah mah Kariah capa Johanan khaeah, To baktih hmuen to sah hmah! Na thuih ih Ishmael kawng loe kamsoem hmuen na ai ni, tiah a naa.
೧೬ಆಗ ಅಹೀಕಾಮನ ಮಗನಾದ ಗೆದಲ್ಯನು ಅವನಿಗೆ, “ನೀನು ಹಾಗೆ ಮಾಡಲೇ ಕೂಡದು; ನೀನು ಇಷ್ಮಾಯೇಲನ ವಿಷಯವಾಗಿ ಹೇಳಿದ್ದು ಸುಳ್ಳು” ಎಂದು ಉತ್ತರಕೊಟ್ಟನು.