< Panultihon 25 >
1 Kini ang dugang pa nga mga panultihon ni Solomon, nga gikopya sa mga tawo ni Ezequias, ang hari sa Juda.
೧ಇವು ಕೂಡ ಸೊಲೊಮೋನನ ಜ್ಞಾನೋಕ್ತಿಗಳು, ಯೆಹೂದದ ಅರಸನಾದ ಹಿಜ್ಕೀಯನ ಲೇಖಕರು ಇವುಗಳನ್ನು ಸಂಗ್ರಹಿಸಿ ಬರೆದರು.
2 Mao kini ang himaya sa Dios aron itago ang usa ka butang, apan ang himaya sa mga hari ang mosusi niini.
೨ವಿಷಯವನ್ನು ರಹಸ್ಯವಾಗಿಡುವುದು ದೇವರ ಮಹಿಮೆ, ವಿಷಯವನ್ನು ವಿಮರ್ಶೆಮಾಡುವುದು ರಾಜರ ಹಿರಿಮೆ.
3 Sama nga ang kalangitan alang sa kahitas-an ug ang kalibotan alang sa kinahiladman, busa dili matukib ang kasingkasing sa mga hari.
೩ಆಕಾಶವು ಉನ್ನತ, ಭೂಮಿಯು ಅಗಾಧ, ರಾಜರ ಹೃದಯವು ಅಗೋಚರ.
4 Tanggala ang hugaw gikan sa plata ug ang magbubuhat ug puthaw makagamit sa plata sa iyang binuhat.
೪ಬೆಳ್ಳಿಯಿಂದ ಕಲ್ಮಷವನ್ನು ತೆಗೆದುಹಾಕಿದರೆ, ಅಕ್ಕಸಾಲಿಗನಿಗೆ ಬೇಕಾದ ಪಾತ್ರೆಯಾಗುವುದು.
5 Bisan pa niana, tanggala ang mga tawong daotan gikan sa presensya sa hari ug ang iyang trono matukod pinaagi sa pagbuhat ug matarong.
೫ರಾಜನ ಸಮ್ಮುಖದಿಂದ ದುಷ್ಟರನ್ನು ತೆಗೆದುಹಾಕಿದರೆ, ಅವನ ಸಿಂಹಾಸನವು ಧರ್ಮದಿಂದ ಸ್ಥಿರವಾಗುವುದು.
6 Ayaw pasidunggi ang imong kaugalingon diha sa presensya sa hari ug ayaw pagbarog diha sa dapit nga gitagana alang sa bantogan nga mga tawo.
೬ರಾಜನ ಸನ್ನಿಧಾನದಲ್ಲಿ ನಿನ್ನನ್ನು ಹೆಚ್ಚಿಸಿಕೊಳ್ಳಬೇಡ, ಶ್ರೀಮಂತರಿಗೆ ಏರ್ಪಡಿಸಿರುವ ಸ್ಥಾನದಲ್ಲಿ ನಿಂತುಕೊಳ್ಳಬೇಡ.
7 Mas maayo nga moingon siya alang kanimo, “Saka ngari,” kaysa pakaulawan ka diha sa presensya sa halangdon. Kung unsa imong nasaksihan,
೭ನೀನು ಪ್ರಭುವನ್ನು ದರ್ಶನಮಾಡುತ್ತಿರಲು ಅವನ ಸಮಕ್ಷಮದಲ್ಲಿ ಕೆಳಗಣಸ್ಥಾನಕ್ಕೆ ನೂಕಿಸಿಕೊಳ್ಳುವುದಕ್ಕಿಂತಲೂ, “ಇನ್ನೂ ಮೇಲಕ್ಕೆ ಬಾ” ಎಂದು ಕರೆಯಿಸಿಕೊಳ್ಳುವುದು ಲೇಸು.
8 ayaw dayon dad-a sa hukmanan. Kay unsa man ang imong buhaton sa kataposan, sa dihang pakaulawan ka sa imong silingan?
೮ದುಡುಕಿ ನೆರೆಯವನ ಮೇಲೆ ವ್ಯಾಜ್ಯಕ್ಕೆ ಹೋಗಬೇಡ, ಅವನು ನಿನ್ನ ಮಾನ ಕಳೆದ ಮೇಲೆ ಕಡೆಯಲ್ಲಿ ಏನು ಮಾಡಬಲ್ಲೆ, ನೋಡಿಕೋ.
9 Pakiglantugi sa imong katungod tali lamang kanimo ug sa imong silingan ug ayaw ibutyag ang tinago sa uban,
೯ವ್ಯಾಜ್ಯವಾಡಿದವನ ಸಂಗಡಲೇ ಅದನ್ನು ಚರ್ಚಿಸು, ಒಬ್ಬನ ಗುಟ್ಟನ್ನೂ ಬಯಲುಮಾಡಬೇಡ.
10 o tingali ang usa nga nakadungog kanimo magdala ug kaulawan nganha kanimo ug ang daotang balita mahitungod kanimo dili mahilom.
೧೦ಅದನ್ನು ಕೇಳುವವನು ನಿನ್ನನ್ನು ದೂಷಿಸಾನು, ನಿನಗೆ ಬಂದ ಅಪಕೀರ್ತಿಯು ಹೋಗದು.
11 Ang pagsulti ug pulong nga maayo ang pagkapili, sama sa hulmahan sa bulawan nga nahimutang sa plata.
೧೧ಸಮಯೋಚಿತವಾದ ಮಾತುಗಳು ಬೆಳ್ಳಿಯ ಕಟ್ಟಿನಲ್ಲಿ ಖಚಿತವಾದ ಬಂಗಾರದ ಹಣ್ಣುಗಳಿಗೆ ಸಮಾನ.
12 Sama sa bulawan nga singsing o alahas nga hinimo sa labing maayo nga bulawan mao ang maalamon nga pagbadlong alang sa nagapatalinghog nga dalunggan.
೧೨ಕೇಳುವ ಕಿವಿಗೆ ಮುಟ್ಟುವ ಬುದ್ಧಿವಾದವು ಹೊನ್ನಿನ ಮುರುವಿಗೂ, ಅಪರಂಜಿಯ ಆಭರಣಕ್ಕೂ ಸಮಾನ.
13 Sama sa kabugnaw sa niyebe sa panahon sa ting-ani mao ang matinumanon nga mensahero alang niadtong nagpadala kaniya; gipasig-uli niya ang kinabuhi sa iyang mga agalon.
೧೩ಸುಗ್ಗೀಕಾಲದಲ್ಲಿ ಹಿಮದ ಶೀತವು ಹೇಗೋ ಕಳುಹಿಸಿದ ಒಡೆಯರಿಗೆ ಆಪ್ತದೂತನು ಹಾಗೆಯೇ ಹಿತ.
14 nga mapasigarbuhon mahitungod sa gasa nga wala niya gihatag sama sa mga panganod ug hangin nga walay ulan.
೧೪ಬರೀ ಗಾಳಿಯ ಮೋಡಗಳು ಹೇಗೋ, ದಾನಕೊಡುತ್ತೇನೆಂದು ಸುಳ್ಳಾಡಿ ಜಂಬಮಾಡುವವನೂ ಹಾಗೆಯೇ.
15 Pinaagi sa pagpailob ang magmamando mahimong malukmay ug ang malumo nga dila makadugmok sa bukog.
೧೫ದೀರ್ಘಶಾಂತಿಯಿಂದ ಪ್ರಭುವನ್ನೂ ಸಮ್ಮತಿಪಡಿಸಬಹುದು, ಮೃದುವಚನವು ಎಲುಬನ್ನು ಮುರಿಯುವುದು.
16 Kung makakaplag ka ug dugos, pagkaon ug insakto lang— kondili, ang pagpasobra niini, masuka mo lamang kini.
೧೬ಜೇನು ಸಿಕ್ಕಿತೋ? ಮಿತವಾಗಿ ತಿನ್ನು, ಹೊಟ್ಟೆತುಂಬಾ ತಿಂದರೆ ಕಾರಿಬಿಟ್ಟೀಯೇ.
17 Ayaw pakanunaya ang imong tiil sa balay sa imong silingan, kay mahimong kapoyon siya kanimo ug masilag kanimo.
೧೭ನೆರೆಯವನು ಬೇಸರಗೊಂಡು ಹಗೆಮಾಡದ ಹಾಗೆ, ಅವನ ಮನೆಯಲ್ಲಿ ಅಪರೂಪವಾಗಿ ಹೆಜ್ಜೆಯಿಡು.
18 Ang tawo nga nagdala ug bakak nga pagsaksi batok sa iyang silingan sama sa usa ka puspos nga gigamit sa pagpakiggubat, o sa espada, o sa hait nga pana.
೧೮ನೆರೆಯವನ ಮೇಲೆ ಸುಳ್ಳುಸಾಕ್ಷಿಹೇಳುವವನು, ಚಮಟಿಕೆ, ಕತ್ತಿ, ಚೂಪಾದ ಬಾಣ ಇವುಗಳೇ.
19 Ang tawo nga dili matinud-anon nga imong gisaligan sa panahon sa kasamok sama sa daot nga ngipon o sa tiil nga madakin-as.
೧೯ಕಷ್ಟಕಾಲದಲ್ಲಿ ದ್ರೋಹಿಯಲ್ಲಿಡುವ ನಂಬಿಕೆಯು, ಮುರುಕಹಲ್ಲು ಮತ್ತು ಜಾರುವ ಕಾಲು.
20 Sama sa usa ka tawo nga naghukas ug bisti sa bugnaw nga panahon, o sama sa suka nga gibubo sa ibabaw sa nagbulabula nga soda, siya nga nagaawit ug mga alawiton diha sa gibug-atan nga kasingkasing.
೨೦ಮನಗುಂದಿದವನಿಗೆ ಸಂಗೀತಹಾಡುವುದು ಚಳಿದಿನದಲ್ಲಿ ಬಟ್ಟೆ ತೆಗೆದಂತೆ, ಗಾಯಕ್ಕೆ ಹುಳಿಹೊಯ್ದಂತೆ.
21 Kung gigutom ang imong kaaway, hatagi siya ug pagkaon aron makakaon ug kung giuhaw siya, hatagi siya ug tubig aron makainom,
೨೧ನಿನ್ನ ವೈರಿ ಹಸಿದಿದ್ದರೆ ಅನ್ನವಿಡು, ಬಾಯಾರಿದ್ದರೆ ನೀರುಕೊಡು,
22 kay palahon nimo ang mga baga sa kalayo ngadto sa iyang ulo ug gantihan ka ni Yahweh.
೨೨ಹೀಗೆ ಅವನ ತಲೆಯ ಮೇಲೆ ಕೆಂಡ ಸುರಿದಂತಾಗುವುದು. ಯೆಹೋವನೇ ನಿನಗೆ ಪ್ರತಿಫಲಕೊಡುವನು.
23 Ingon kasigurado nga magdala gayod ug ulan ang hangin sa amihan, ang usa ka tawo nga magsulti ug mga tinago makapasuko sa mga panagway.
೨೩ಉತ್ತರದ ಗಾಳಿ ಮಳೆ ಬರಮಾಡುವುದು, ಚಾಡಿಯ ನಾಲಿಗೆ ಕೋಪದ ಮುಖ ಮಾಡುವುದು.
24 Mas maayo pa nga magpuyo sa suok sa atop kay sa makig-ipon sa balay kauban ang babaye nga malalison.
೨೪ಮನೆಯಲ್ಲಿ ಜಗಳಗಂಟಿಯ ಜೊತೆಯಲ್ಲಿರುವುದಕ್ಕಿಂತಲೂ, ಮಾಳಿಗೆಯ ಒಂದು ಮೂಲೆಯಲ್ಲಿ ವಾಸಿಸುವುದೇ ಲೇಸು.
25 Sama sa bugnaw nga mga tubig alang sa tawo nga giuhaw, mao man usab ang maayo nga balita gikan sa halayo nga nasod.
೨೫ಬಳಲಿ ಬಾಯಾರಿದವನಿಗೆ ತಣ್ಣೀರು ಹೇಗೋ, ದೇಶಾಂತರದಿಂದ ಬಂದ ಒಳ್ಳೆಯ ಸಮಾಚಾರವು ಹಾಗೆಯೇ.
26 Sama sa nahugaw nga tinubdan o sa nadaot nga tuboran mao ang tawo nga maayo nga nadaog atubangan sa daotan nga mga tawo.
೨೬ದುಷ್ಟರಿಂದ ಸೋತ ಶಿಷ್ಟನು, ಹಾಳು ಬಾವಿ ಮತ್ತು ತುಳಿದಾಡಿದ ಒರತೆ.
27 Dili maayo ang paghinobra ug kaon sa dugos; sama kana sa pagpangita ug dungog human sa kadungganan.
೨೭ಜೇನನ್ನು ಹೆಚ್ಚಾಗಿ ತಿನ್ನುವುದು ಹಿತವಲ್ಲ, ಸ್ವಂತಮಾನವನ್ನು ಹೆಚ್ಚಾಗಿ ಯೋಚಿಸುವುದು ಮಾನವಲ್ಲ.
28 Ang tawo nga walay pagpugong sa kaugalingon sama sa siyudad nga nalumpag ug walay mga paril.
೨೮ಆತ್ಮವನ್ನು ಸ್ವಾಧೀನಮಾಡಿಕೊಳ್ಳದವನು ಗೋಡೆ ಬಿದ್ದ ಹಾಳೂರಿಗೆ ಸಮಾನ.