< Jeremias 34 >
1 Miabot ang pulong ni Yahweh kang Jeremias, sa dihang nakiggubat si Nebucadnezar nga hari sa Babilonia ug ang tanan niyang mga kasundalohan, uban ang tanang gingharian sa kalibotan, nga iyang mga ginsakopan ilalom sa iyang gahom, ug ang tanan nilang katawhan nga nakiggubat batok sa Jerusalem ug sa tanang mga siyudad niini, nga nag-ingon:
೧ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು, ಅವನ ಪೂರ್ಣಸೈನ್ಯವು, ಅವನ ಕೈಕೆಳಗಿನ ಸಮಸ್ತ ಭೂರಾಜ್ಯಗಳು, ಸಕಲ ಜನಗಳು, ಇವೆಲ್ಲಾ ಯೆರೂಸಲೇಮಿಗೂ ಅದಕ್ಕೆ ಸೇರಿದ ಎಲ್ಲಾ ಊರುಗಳಿಗೂ ವಿರುದ್ಧವಾಗಿ ಯುದ್ಧಮಾಡುತ್ತಿದ್ದಾಗ ಯೆಹೋವನು ಯೆರೆಮೀಯನಿಗೆ ಈ ಮಾತನ್ನು ದಯಪಾಲಿಸಿದನು.
2 'Si Yahweh, ang Dios sa Israel, miingon niini: Lakaw ug pakigsulti kang Zedekia nga hari sa Juda ug sultihi siya,” miingon si Yahweh niini: Tan-awa, igatugyan ko kining siyudara ngadto sa kamot sa hari sa Babilonia. Sunogon niya kini.
೨ಇಸ್ರಾಯೇಲರ ದೇವರಾದ ಯೆಹೋವನು ಇಂತೆನ್ನುತ್ತಾನೆ, “ನೀನು ಯೆಹೂದದ ಅರಸನಾದ ಚಿದ್ಕೀಯನ ಬಳಿಗೆ ಹೋಗಿ ಅವನಿಗೆ ಹೀಗೆ ಹೇಳು, ‘ಯೆಹೋವನ ಮಾತನ್ನು ಆಲಿಸು, ಇಗೋ, ನಾನು ಈ ಪಟ್ಟಣವನ್ನು ಬಾಬೆಲಿನ ಅರಸನ ಕೈವಶಮಾಡುವೆನು, ಅವನು ಅದನ್ನು ಬೆಂಕಿಯಿಂದ ಸುಟ್ಟುಬಿಡುವನು.
3 Dili ka makaikyas gikan sa iyang kamot, kay dakpon ka gayod ug itugyan sa iyang kamot. Magkakit-anay kamo sa hari sa Babilonia; ug sultihan dayon ka niya sa dihang mahiabot ka sa Babilonia.'
೩ನೀನು ಅವನ ಕೈಯಿಂದ ತಪ್ಪಿಸಿಕೊಳ್ಳಲಾರದೆ ಹಿಡಿಯಲ್ಪಟ್ಟು ಅವನ ವಶವಾಗುವಿ; ಬಾಬೆಲಿನ ಅರಸನ ಸಮಕ್ಷಮದಲ್ಲಿ ನಿಲ್ಲುವಿ; ಅವನು ನಿನ್ನ ಸಂಗಡ ಎದುರೆದುರಾಗಿ ಮಾತನಾಡುವನು; ನೀನು ಬಾಬಿಲೋನಿಗೆ ಗಡಿ ಪಾರಾಗುವಿ.
4 Patalinghogi ang pulong ni Yahweh, Zedekia nga hari sa Juda! Gisulti kini ni Yahweh bahin kanimo, 'Dili ka mamatay pinaagi sa espada.
೪ಆದರೂ ಯೆಹೂದದ ಅರಸನಾದ ಚಿದ್ಕೀಯನೇ, ಯೆಹೋವನ ಮಾತನ್ನು ಕೈಗೊಳ್ಳು; ಯೆಹೋವನು ನಿನ್ನ ವಿಷಯವಾಗಿ ಇಂತೆನ್ನುತ್ತಾನೆ, ನೀನು ಕೇಳಿ ಕೈಕೊಂಡರೆ ಖಡ್ಗದಿಂದ ಹತನಾಗುವುದಿಲ್ಲ; ಸುಖವಾಗಿ ಸಾಯುವಿ.
5 Mamatay ka nga malinawon. Pagasunogon ang imong patayng lawas sama sa imong mga katigulangan nga gisunog paglubong, ug sa mga hari nga nag-una kanimo. Moingon sila, “Pagkaalaot, agalon!” Magbangotan sila alang kanimo. Nagsulti ako karon—mao kini ang gipahayag ni Yahweh.”
೫ನಿನಗಿಂತ ಮುಂಚಿನ ನಿನ್ನ ಪೂರ್ವಿಕರಾದ ಅರಸರಿಗೆ ಧೂಪಹಾಕಿದ ಪ್ರಕಾರ ನಿನಗೂ ಹಾಕುವರು; ಅಯ್ಯೋ, ಪ್ರಭುವೇ ಎಂದು ನಿನಗಾಗಿ ಗೋಳಾಡುವರು; ನಾನೇ ನುಡಿದಿದ್ದೇನೆ ಎಂದು ಯೆಹೋವನು ಅನ್ನುತ್ತಾನೆ’” ಎಂದನು.
6 Busa gimantala ni propeta Jeremias didto sa Jerusalem kining tanan nga mga pulong ngadto kang Zedekia nga hari sa Juda.
೬ಆಗ ಪ್ರವಾದಿಯಾದ ಯೆರೆಮೀಯನು ಈ ಮಾತುಗಳನ್ನೆಲ್ಲಾ ಯೆರೂಸಲೇಮಿನಲ್ಲಿ ಯೆಹೂದದ ಅರಸನಾದ ಚಿದ್ಕೀಯನಿಗೆ ಹೇಳಿದನು.
7 Nakiggubat ang kasundalohan sa hari sa Babilonia batok sa Jerusalem ug sa tanang nahibiling mga siyudad sa Juda: ang Lachis ug ang Azeka. Mao kini ang mga siyudad nga nagpabiling lig-on.
೭ಬಾಬೆಲಿನ ಅರಸನ ಸೈನ್ಯವು ಯೆರೂಸಲೇಮಿಗೂ, ಯೆಹೂದದೊಳಗೆ ಕೋಟೆಕೊತ್ತಲದ ಪಟ್ಟಣಗಳಾಗಿ ಉಳಿದಿದ್ದ ಲಾಕೀಷಿಗೂ ಮತ್ತು ಅಜೇಕಕ್ಕೂ ವಿರುದ್ಧವಾಗಿ ಯುದ್ಧಮಾಡುತ್ತಿದ್ದಾಗ ಹೇಳಿದನು.
8 Miabot ang pulong ngadto kang Jeremias gikan kang Yahweh human sa pakigsaad ni Haring Zedekia uban sa tanang katawhan sa Jerusalem, aron sa pagmantala ug kagawasan ngadto kanila nga kinahanglan ipalingkawas
೮ಆ ಮೇಲೆ ಯೆಹೋವನು ಯೆರೆಮೀಯನಿಗೆ ಒಂದು ಮಾತನ್ನು ದಯಪಾಲಿಸಿದನು. ಇಷ್ಟರೊಳಗೆ ಅರಸನಾದ ಚಿದ್ಕೀಯನು ಯೆರೂಸಲೇಮಿನವರೆಲ್ಲರೊಂದಿಗೆ ಸೇರಿ,
9 sa matag tawo ang iyang mga ulipon nga Hebreo, ang mga lalaki ug ang mga babaye, bisan kadtong nag-ulipon ug usa ka Judio, nga iyang igsoon.
೯“ನಮ್ಮಲ್ಲಿ ಪ್ರತಿಯೊಬ್ಬನು ತನ್ನ ದಾಸ ದಾಸಿಯರೊಳಗೆ ಇಬ್ರಿಯರನ್ನು ಬಿಡುಗಡೆಮಾಡುವನು; ಯಾರೂ ತನ್ನ ಸಹೋದರನಾದ ಯೆಹೂದ್ಯನಿಂದ ಇನ್ನು ಗುಲಾಮತನ ಮಾಡಿಸಿಕೊಳ್ಳುವುದಿಲ್ಲ” ಎಂದು ಅವರಿಗೆ ವಿಮೋಚನೆಯನ್ನು ಪ್ರಕಟಿಸುವ ಒಡಂಬಡಿಕೆಯನ್ನು ಮಾಡಿಕೊಂಡಿದ್ದನು.
10 Busa nagsaad ang tanang mga pangulo ug katawhan nga ipalingkawas sa matag tawo ang iyang mga ulipong lalaki ug mga ulipong babaye aron dili na sila mahimong mga ulipon pa. Gituman nila ug gipalingkawas sila.
೧೦ಆಗ ತಾವು ತಮ್ಮ ತಮ್ಮ ದಾಸ, ದಾಸಿಯರನ್ನು ಬಿಡುಗಡೆಮಾಡಿ ಅವರಿಂದ ಇನ್ನು ಗುಲಾಮತನ ಮಾಡಿಸಿಕೊಳ್ಳುವುದಿಲ್ಲ ಎಂದು ಒಡಂಬಡಿಕೆಗೆ ಒಪ್ಪಿಕೊಂಡ ಸಕಲ ಪ್ರಧಾನರೂ ಮತ್ತು ಸಮಸ್ತ ಪ್ರಜೆಗಳೂ ಅದರಂತೆ ನಡೆದು ಅವರನ್ನು ವಿಮೋಚಿಸಿದರು.
11 Apan human niini nausab ang ilang mga hunahuna. Gidala nila pagbalik ang mga ulipon nga ilang gipalingkawas. Gipugos nila sila nga mahimong mga ulipon pag-usab.
೧೧ಆದರೆ ಸ್ವಲ್ಪ ಸಮಯವಾದ ಮೇಲೆ ಮನಸ್ಸನ್ನು ಬೇರೆ ಮಾಡಿಕೊಂಡು ತಾವು ಬಿಟ್ಟಿದ್ದವರನ್ನು ಪುನಃ ದಾಸ, ದಾಸಿಯರನ್ನಾಗಿ ಅಧೀನಮಾಡಿಕೊಂಡರು.
12 Busa miabot ang pulong ni Yahweh ngadto kang Jeremias, nga nag-ingon,
೧೨ಹೀಗಿರಲು ಯೆಹೋವನು ಯೆರೆಮೀಯನಿಗೆ ಈ ವಾಕ್ಯವನ್ನು ದಯಪಾಲಿಸಿದನು,
13 “Si Yahweh, ang Dios sa Israel, nag-ingon niini, 'Ako mismo naghimo ug kasabotan tali sa imong mga katigulangan sa adlaw nga ako silang gidala pagawas gikan sa yuta sa Ehipto, gawas gikan sa puloy-anan sa pagkaulipon. Gisulti ko kini,
೧೩“ಇಸ್ರಾಯೇಲರ ದೇವರಾದ ಯೆಹೋವನು ಇಂತೆನ್ನುತ್ತಾನೆ, ಐಗುಪ್ತದೇಶದಲ್ಲಿ ದಾಸರಾಗಿದ್ದ ನಿಮ್ಮ ಪೂರ್ವಿಕರನ್ನು ನಾನು ಅಲ್ಲಿಂದ ಕರೆತಂದಾಗ
14 “Sa kataposan sa matag pito ka tuig, kinahanglan papaulion sa matag tawo ang iyang igsoon, ang iyang isigka-Hebreo nga nagbaligya sa iyang kaugalingon diha kaninyo ug nag-alagad kaninyo sulod sa unom ka tuig. Papaulia siya nga adunay kagawasan.” Apan wala namati ang imong mga katigulangan kanako ni mipatalinghog kanako.
೧೪‘ನಿಮ್ಮಲ್ಲಿ ಪ್ರತಿಯೊಬ್ಬನು ನಿಮಗೆ ಆರು ವರ್ಷಗಳ ಕಾಲ ದಾಸನಾಗಿದ್ದು ನಿಮಗೆ ಸೇವೆ ಮಾಡಿದ ಇಬ್ರಿಯನಾದ ಪ್ರತಿಯೊಬ್ಬ ಸಹೋದರನನ್ನು ಏಳನೆಯ ವರ್ಷದಲ್ಲಿ ಸ್ವತಂತ್ರನನ್ನಾಗಿ ಬಿಟ್ಟುಬಿಡಬೇಕು’ ಎಂದು ವಿಧಿಸಿ, ಅವರೊಂದಿಗೆ ಒಡಂಬಡಿಕೆ ಮಾಡಿಕೊಂಡೆನಷ್ಟೆ. ಆದರೆ ನಿಮ್ಮ ಪೂರ್ವಿಕರು ನನ್ನ ಮಾತಿಗೆ ಕಿವಿಗೊಡಲಿಲ್ಲ, ಕೇಳಲಿಲ್ಲ.
15 Karon naghinulsol kamo sa inyong mga kaugalingon ug nagsugod sa pagbuhat kung unsa ang husto sa akong panan-aw. Gimantala ninyo ang kagawasan, ang matag usa kaninyo ngadto sa iyang silingan, ug naghimo kamo ug kasabotan atubangan sa akong puloy-anan nga gitawag pinaagi sa akong ngalan.
೧೫ನೀವೋ ಈಗಲೇ ಮನಮರುಗಿ ನಿಮ್ಮ ನಿಮ್ಮ ನೆರೆಹೊರೆಯವರಿಗೆ ವಿಮೋಚನೆಯನ್ನು ಪ್ರಕಟಿಸಿ ನನ್ನ ಚಿತ್ತಾನುಸಾರವಾಗಿ ನಡೆದಿರಿ. ನನ್ನ ಹೆಸರಿನಿಂದ ಖ್ಯಾತಿಗೊಂಡಿರುವ ಆಲಯದಲ್ಲಿ ನನ್ನ ಮುಂದೆ ಒಡಂಬಡಿಕೆ ಮಾಡಿಕೊಂಡಿರಿ.
16 Apan mitalikod kamo ug gihugawan ang akong ngalan; gikuha ninyo pagbalik ang inyong mga ulipong lalaki ug mga ulipong babaye, nga inyong gipakagiw sa bisan diin nila buot moadto. Gipugos ninyo sila nga mahimo ninyong mga ulipon pag-usab.'
೧೬ಆ ಮೇಲೆ ನೀವು ಮನಸ್ಸನ್ನು ಬೇರೆ ಮಾಡಿಕೊಂಡಿರಿ; ಸ್ವತಂತ್ರರನ್ನಾಗಿ ಬಿಟ್ಟಿದ್ದವರನ್ನು ಪುನಃ ದಾಸದಾಸಿಯರನ್ನಾಗಿ ಸೇರಿಸಿಕೊಂಡು ಅಧೀನಮಾಡಿಕೊಂಡು ನನ್ನ ನಾಮವನ್ನು ಅಪಕೀರ್ತಿಗೆ ಗುರಿಮಾಡಿದಿರಿ” ಎಂಬುದೇ.
17 Busa nagsulti si Yahweh niini, 'Wala kamo namati kanako. Kinahanglan nga imantala ninyo ang kagawasan, ang matag usa kaninyo, ngadto sa inyong mga igsoon ug sa mga isigka-Israelita. Busa tan-awa! Imantala ko ang kagawasan nganha kaninyo—mao kini ang gipahayag ni Yahweh—kagawasan gikan sa espada, sa katalagman, ug sa kagutom, kay himoon ko kamong kahadlokan sa panan-aw sa matag gingharian sa kalibotan.
೧೭ಆದಕಾರಣ ಯೆಹೋವನು, “ನೀವು ನನ್ನನ್ನು ಕೇಳಲಿಲ್ಲ, ನಿಮ್ಮ ನಿಮ್ಮ ಸಹೋದರರಿಗೂ, ನೆರೆಹೊರೆಯವರಿಗೂ ಬಿಡುಗಡೆಯನ್ನು ಪ್ರಕಟಿಸಲಿಲ್ಲ; ಇದೇ ಯೆಹೋವನ ನುಡಿ. ಇಗೋ, ನಾನು ನಿಮಗೆ ಬಿಡುಗಡೆಯನ್ನು ಪ್ರಕಟಿಸುತ್ತೇನೆ; ನಿಮ್ಮನ್ನು ಖಡ್ಗ, ವ್ಯಾಧಿ ಮತ್ತು ಕ್ಷಾಮಗಳಿಗೆ ಗುರಿಮಾಡುತ್ತೇನೆ; ನಿಮ್ಮನ್ನು ಲೋಕದ ಸಮಸ್ತ ರಾಜ್ಯಗಳಿಗೆ ಭಯಾಸ್ಪದವಾಗುವಂತೆ ಮಾಡುವೆನು.
18 Unya pagasilotan ko ang katawhan nga misupak sa akong kasabotan, nga wala nagtuman sa mga pulong sa kasabotan nga ilang gihimo sa akong atubangan sa dihang gitunga nila ang torong baka sa duha ka bahin ug milakaw taliwala sa mga bahin niini,
೧೮ನನ್ನ ನಿಬಂಧನೆಗಳನ್ನು ಕೈಗೊಳ್ಳದೆ, ನನ್ನ ಮುಂದೆ ಮಾಡಿದ ಒಡಂಬಡಿಕೆಯನ್ನು ಮೀರಿದವರಿಗೆ ಕರುವನ್ನು ಸೀಳಿ ಅದರ ಹೋಳುಗಳ ನಡುವೆ ಹಾದುಹೋಗುವ ಗತಿ ಬರುವಂತೆ ಮಾಡುವೆನು.
19 ug unya ang mga pangulo sa Juda ug sa Jerusalem, ang mga yunoko ug ang mga pari, ug ang tanang katawhan sa yuta nga milakaw taliwala sa mga bahin sa torong baka.
೧೯ನನ್ನ ಒಡಂಬಡಿಕೆಯನ್ನು ಮೀರಿದ ಯೆಹೂದದ ಪ್ರಧಾನರು, ಯೆರೂಸಲೇಮಿನ ಪ್ರಧಾನರು, ಕಂಚುಕಿಗಳು, ಯಾಜಕರು,
20 Itugyan ko sila ngadto sa kamot sa ilang mga kaaway ug ngadto sa kamot niadtong nagapangita sa ilang mga kinabuhi. Ang ilang mga lawas mahimong pagkaon alang sa kalanggaman sa kalangitan ug sa mga mananap sa yuta.
೨೦ಕರುವಿನ ಹೋಳುಗಳ ನಡುವೆ ಹಾದುಹೋದ ದೇಶದ ಸಕಲ ಜನರು, ಇವರೆಲ್ಲರನ್ನೂ ಇವರ ಪ್ರಾಣವನ್ನು ಹುಡುಕುವ ಶತ್ರುಗಳ ಕೈಗೆ ಕೊಡುವೆನು; ಇವರ ಹೆಣಗಳು ಆಕಾಶ ಪಕ್ಷಿಗಳಿಗೂ, ಭೂಜಂತುಗಳಿಗೂ ಆಹಾರವಾಗುವವು.
21 Busa itugyan ko si Zedekia ang hari sa Juda ug ang iyang mga pangulo ngadto sa kamot sa ilang mga kaaway ug ngadto sa kamot niadtong nagapangita sa ilang mga kinabuhi, ug ngadto sa kamot sa kasundalohan sa hari sa Babilonia nga makiggubat batok kaninyo.
೨೧ಯೆಹೂದದ ಅರಸನಾದ ಚಿದ್ಕೀಯನನ್ನೂ ಮತ್ತು ಅವನ ಪ್ರಧಾನರನ್ನೂ ಅವರ ಪ್ರಾಣ ಹುಡುಕುವ ಶತ್ರುಗಳ ಕೈಗೆ ಅಂದರೆ ನಿಮ್ಮನ್ನು ಬಿಟ್ಟುಹೋಗಿರುವ ಬಾಬೆಲಿನ ಅರಸನ ಕೈಗೆ ಕೊಡುವೆನು” ಎನ್ನುತ್ತಾನೆ.
22 Tan-awa, maghatag ako ug mando—mao kini ang gipahayag ni Yahweh— ug magdala pagbalik kanila dinhi sa siyudad aron makiggubat batok niini ug moilog, ug magsunog niini. Kay gun-obon ko ang mga siyudad sa Juda nga wala nay lumolupyo.”'
೨೨ಯೆಹೋವನು, “ಇಗೋ, ನಾನು ಅಪ್ಪಣೆಕೊಟ್ಟು ಆ ಶತ್ರುಗಳು ಈ ಪಟ್ಟಣಕ್ಕೆ ಹಿಂದಿರುಗುವಂತೆ ಮಾಡುವೆನು; ಅವರು ಅದಕ್ಕೆ ವಿರುದ್ಧವಾಗಿ ಯುದ್ಧಮಾಡಿ ಅದನ್ನು ಆಕ್ರಮಿಸಿ ಬೆಂಕಿಯಿಂದ ಸುಟ್ಟುಬಿಡುವರು; ನಾನು ಯೆಹೂದದ ಪಟ್ಟಣಗಳನ್ನು ಜನವಿಲ್ಲದ ಬೀಳುಭೂಮಿಯನ್ನಾಗಿ ಮಾಡುವೆನು” ಎಂದು ನುಡಿಯುತ್ತಾನೆ.