< Исая 17 >
1 Наложеното за Дамаск пророчество: - Ето, Дамаск не е вече град, А ще бъде грамада развалини.
೧ದಮಸ್ಕದ ವಿಷಯವಾದ ದೈವೋಕ್ತಿ. “ಆಹಾ, ದಮಸ್ಕವು ಇನ್ನು ಪಟ್ಟಣವಾಗಿರದೇ ಹಾಳು ದಿಬ್ಬವಾಗಿರುವುದು.
2 Градовете на Ароир са напуснати; Те ще служат за стада, Които ще лежат, и не ще има кой да ги плаши.
೨ಆರೋಯೇರಿನ ಪಟ್ಟಣಗಳು ನಿರ್ಜನವಾಗಿ, ಮಂದೆಗಳಿಗೆ ಆಸರೆಯಾಗುವವು. ಅವು ಯಾರ ಹೆದರಿಕೆಯೂ ಇಲ್ಲದೆ ಅಲ್ಲಿ ತಂಗುವವು.
3 Крепостта ще се махне от Ефрема, и царството от Дамаск, И останалото от Сирия ще бъде като славата на израилтяните, Казва Господ на Силите.
೩ಎಫ್ರಾಯೀಮಿಗೆ ರಕ್ಷಣೆಯಾಗಿರುವ ಕೋಟೆಯೂ, ದಮಸ್ಕವು ನಡೆಸುವ ರಾಜ್ಯಾಧಿಕಾರವೂ ಇಲ್ಲವಾಗುವವು. ಅರಾಮ್ಯರಲ್ಲಿ ಉಳಿದವರು ಇಸ್ರಾಯೇಲರ ಮಕ್ಕಳ ವೈಭವದಂತೆ ಇರುವರು” ಇದು ಸೇನಾಧೀಶ್ವರನಾದ ಯೆಹೋವನ ನುಡಿ.
4 И в оня ден славата на Якова ще се смали, И тлъстината на месата му ще измършавее;
೪“ಆ ದಿನದಲ್ಲಿ, ಯಾಕೋಬಿನ ಮಾಂಸದ ಕೊಬ್ಬು ಕರಗಿ, ಅದರ ಮಹಿಮೆಯೂ ಕ್ಷೀಣವಾಗುವುದು.
5 И ще бъде както, когато жетварят хване стръкове жито И пожъне класовете с мишцата си; Да! ще бъде както, когато събира някой класове в рафаимската долина.
೫ಹೊಲದಲ್ಲಿ ಬೆಳೆ ಕೊಯ್ಯುವವನು ಪೈರುಗಳನ್ನು ಒಟ್ಟುಗೂಡಿಸಿ ಕೈಯಿಂದ ತೆನೆಗಳನ್ನು ಕತ್ತರಿಸುವ ಹಾಗಿರುವುದು. ಹೌದು, ರೆಫಾಯೀಮ್ ತಗ್ಗಿನಲ್ಲಿ ತೆನೆಗಳನ್ನು ಕೂಡಿಸುವ ಹಾಗೆ ಇರುವುದು.
6 Но ще остане в него пабирък, Както при отръсването на маслината, - Две-три зърна на върха на по-високите клонове. Четири-пет на по-крайните клончета на някое плодородно дърво, Казва Господ Израилевият Бог.
೬ಆದರೂ ಎಣ್ಣೆಯ ಮರದ ಕಾಯಿಗಳನ್ನು ಉದುರಿಸಿದ ಬಳಿಕ ಮೇಲಿನ ಕೊಂಬೆಯ ತುಟ್ಟತುದಿಯಲ್ಲಿ, ಎರಡು ಮೂರು ಕಾಯಿಗಳು, ಫಲವತ್ತಾದ ಆ ಮರದ ಕೊಂಬೆಗಳಲ್ಲೆಲ್ಲಾ ನಾಲ್ಕೈದು ಕಾಯಿಗಳು ಉಳಿದಿರುವಂತೆ ಹಕ್ಕಲುಹಣ್ಣುಗಳು ಅದರಲ್ಲಿ ಉಳಿದಿರುವುದು” ಎಂದು ಇಸ್ರಾಯೇಲರ ದೇವರಾದ ಯೆಹೋವನು ನುಡಿಯುತ್ತಾನೆ.
7 В оня ден човека ще погледни към Създателя си, И очите му ще се взрат в Светия Израилев;
೭ಆ ದಿನದಲ್ಲಿ ಜನರು ತಮ್ಮ ಸೃಷ್ಟಿಕರ್ತನನ್ನೇ ದೃಷ್ಟಿಸುವರು ಮತ್ತು ಇಸ್ರಾಯೇಲಿನ ಸದಮಲಸ್ವಾಮಿಯ ಕಡೆಗೆ ಕಣ್ಣುಗಳನ್ನು ತಿರುಗಿಸುವರು.
8 Той не ще погледне към жертвениците, делото на ръцете си. Нито ще се взре в онова, което изработиха пръстите му. Нито в ашерите, нито в кумирите на слънцето.
೮ತಮ್ಮ ಕೈಯಿಂದ ಮಾಡಿದ ಬಲಿಪೀಠಗಳನ್ನು ಲಕ್ಷಿಸದೆ, ತಮ್ಮ ಬೆರಳುಗಳಿಂದ ನಿರ್ಮಿಸಿದ ಅಶೇರವೆಂಬ ವಿಗ್ರಹಸ್ತಂಭಗಳನ್ನಾಗಲಿ, ಸೂರ್ಯಸ್ತಂಭಗಳನ್ನಾಗಲಿ ದೃಷ್ಟಿಸುವುದಿಲ್ಲ.
9 В оня ден укрепените му градове Ще бъдат като оставените места в гората на планинския връх, Които бидоха оставени по причина на израилтяните; И ще стане там запустение.
೯ಆ ದಿನದಲ್ಲಿ ದೇಶದ ಬಲವಾದ ಕೋಟೆಗಳು ಪೂರ್ವದಲ್ಲಿ ಇಸ್ರಾಯೇಲರ ಭಯದಿಂದ ನಿರ್ಜನವಾಗಿದ್ದ, ಅದು ಅಡವಿಯಲ್ಲಿಯೂ, ಬೆಟ್ಟಗಳ ತುದಿಯ ಮೇಲೂ ಕಾಣುವ ಹಾಳು ನಿವೇಶನಗಳಂತಿರುವವು, ಅಂತೂ ದೇಶವೆಲ್ಲಾ ಹಾಳಾಗಿರುವುದು.
10 Понеже си забравил Бога на спасението си, И не си спомнил силната си Канара, Затова насаждаш приятни садове, И насаденото е от чужди фиданки;
೧೦ಏಕೆಂದರೆ ನೀನು ನಿನ್ನ ರಕ್ಷಕನಾದ ದೇವರನ್ನು ಮರೆತುಬಿಟ್ಟು, ನಿನ್ನ ಆಶ್ರಯಗಿರಿಯನ್ನು ಸ್ಮರಿಸಲಿಲ್ಲ. ಹೀಗಿರಲು ನೀನು ಇಷ್ಟವಾದ ದ್ರಾಕ್ಷಿಯ ಗಿಡಗಳನ್ನು ನೆಟ್ಟು, ನಿನ್ನ ದೇಶದಲ್ಲಿ ದೇಶಾಂತರದ ಸಸಿಗಳನ್ನು ನೆಟಿದ್ದಿ.
11 В деня, когато ги насадиш заграждаш ги с плет, И сутрин правиш семето ти да цъфти; А жетвата ще чезне в деня на скръб И на неизцелима печал.
೧೧ಬೀಜವನ್ನು ನೆಟ್ಟ ದಿನದಲ್ಲಿಯೇ ಬೇಲಿಕಟ್ಟಿ, ಮರುದಿನ ಬೆಳಿಗ್ಗೆ ಮೊಳೆಯುವಂತೆ ಮಾಡಿದ್ದೀ. ಆದರೆ ಬೆಳೆಯನ್ನು ಕುಪ್ಪೆಯಾಗಿ ಕೂಡಿಸುವ ದಿನವು ವ್ಯಾಧಿಯ ಮತ್ತು ವಿಪರೀತ ವ್ಯಥೆಯ ದಿನವಾಗಿರುತ್ತದೆ.
12 Ах! шуменето на многото племена, Които бучат като бученето на моретата, - И смутът на народите, Които напират като напора на големи води!
೧೨ಆಹಾ, ಸಮುದ್ರವು ಭೋರ್ಗರೆಯುವಂತೆ ಭೋರ್ಗರೆಯುವ ಬಹು ಜನಾಂಗಗಳ ಗದ್ದಲ! ಮಹಾ ಜಲಪ್ರವಾಹಗಳು ಘೋಷಿಸುವಂತೆ ಘೋಷಿಸುವ ಜನಗಳ ಘೋಷ!
13 Народите ще напират като напора на големите води; Но Бог ще ги смъмри и те ще бягат далеч И ще бъдат гонени като плява по планините пред вятъра, И като въртещ се прах пред вихрушката.
೧೩ಹೌದು, ಮಹಾ ಜಲಪ್ರವಾಹಗಳು ಘೋಷಿಸುವಂತೆ ಜನಾಂಗಗಳು ಘೋಷಿಸುತ್ತಿವೆ. ಆದರೆ ಆತನು ಅವರನ್ನು ಗದರಿಸುವಾಗ ಅವರು ದೂರ ಓಡಿಹೋಗಿ ಬೆಟ್ಟಗಳಲ್ಲಿ ಗಾಳಿಗೆ ಸಿಕ್ಕಿದ ಹೊಟ್ಟಿನಂತೆಯೂ, ಸುಂಟರ ಗಾಳಿಯಿಂದ ಸುತ್ತಾಡುವ ಧೂಳಿನಂತೆಯೂ ಅಟ್ಟಲ್ಪಡುವರು.
14 Привечер, ето смущение, И преди да съмне ги няма! Това е делът на тия, които ни обират, И съдбата на ония, които ни разграбват.
೧೪ಇಗೋ, ಸಂಜೆಯಲ್ಲಿ ಹೆದರಿ ಉದಯದೊಳಗಾಗಿ ಇಲ್ಲವಾಗುವರು! ನಮ್ಮನ್ನು ಸೂರೆ ಮಾಡುವವರಿಗೆ ಇದೇ ಗತಿ. ನಮ್ಮನ್ನು ಕೊಳ್ಳೆಹೊಡೆಯುವವರ ಪಾಡು ಇದೇ.