< Изход 30 >
1 Да направиш олтар за кадене темян, от ситимово дърво да го направиш;
೧“ಸುಗಂಧದ್ರವ್ಯಗಳಿಂದ ಧೂಪಹಾಕುವುದಕ್ಕೆ ನೀವು ಜಾಲೀಮರದಿಂದ ಒಂದು ಧೂಪವೇದಿಯನ್ನು ಮಾಡಿಸಬೇಕು.
2 един лакът дълъг и един лакът широк; четвъртит да бъде; и височината ме да бъде два лакътя; роговете му да са част от самия него.
೨ಅದು ಒಂದು ಮೊಳ ಉದ್ದವಾಗಿಯು, ಒಂದು ಮೊಳ ಅಗಲವಾಗಿಯೂ ಇದ್ದು ಚಚ್ಚೌಕವಾಗಿರಬೇಕು. ಅದರ ಎತ್ತರವು ಎರಡು ಮೊಳವಾಗಿರಬೇಕು. ಅದರ ಕೊಂಬುಗಳು ಅದರಿಂದಲೇ ಆಗಿರಬೇಕು.
3 Да обковеш с чисто злато върха му, страните му наоколо, и роговете му; да му направиш и златен венец наоколо.
೩ಅದರ ಮೇಲ್ಭಾಗಕ್ಕೆ, ನಾಲ್ಕು ಬದಿಗಳಿಗೆ ಹಾಗೂ ಕೊಂಬುಗಳಿಗೆ, ಚೊಕ್ಕ ಬಂಗಾರದ ತಗಡುಗಳನ್ನು ಹೊದಿಸಬೇಕು. ಸುತ್ತಲೂ ಚಿನ್ನದ ಅರುಗನ್ನು (ಅಂಚು) ಕಟ್ಟಿಸಬೇಕು.
4 А под венеца му да му направиш две златни колелца; близо при двата му ъгъла на двете му страни да ги направиш; и да бъдат влагалища на върлините, за да го носят с тях.
೪ಅದರ ತೋರಣದ ಕೆಳಗೆ ಯಜ್ಞವೇದಿಯ ಎರಡು ಪಾರ್ಶ್ವಗಳಲ್ಲಿ ಎರಡೆರಡು ಚಿನ್ನದ ಬಳೆಗಳನ್ನು ಮೂಲೆಗಳಲ್ಲಿಯೇ ಹಾಕಿಸಬೇಕು. ಯಜ್ಞವೇದಿಯನ್ನು ಹೊರುವುದಕ್ಕೆ ಕಂಬಗಳನ್ನು ಅವುಗಳಲ್ಲಿ ಸೇರಿಸಬೇಕು.
5 Да направиш върлините от ситимово дърво, и да ги обковеш със злато.
೫ಆ ಕಂಬಗಳನ್ನು ಜಾಲೀಮರದಿಂದ ಮಾಡಿಸಿ ಅವುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಬೇಕು.
6 Тоя олтар да туриш пред завесата, която е пред ковчега с плочите на свидетелството, гдето ще се срещам с тебе.
೬ಆಜ್ಞಾಶಾಸನವಿರುವ ಮಂಜೂಷದ ಮುಂದಣ ಪರದೆಗೆ ಎದುರಾಗಿ, ಅಂದರೆ ಆಜ್ಞಾಶಾಸನವಿರುವ ಮಂಜೂಷದ ಮೇಲಿರುವಂಥ ಮತ್ತು ನಾನು ನಿನಗೆ ದರ್ಶನ ಕೊಡುವಂಥ ಕೃಪಾಸನದ ಮುಂದೆ ಅದನ್ನು ಇಡಬೇಕು.
7 И всяка заран Аарон нека кади над него благовонен темян; когато приготвя светилата нека кади с него.
೭“ಆರೋನನು ಪ್ರತಿನಿತ್ಯ ಹೊತ್ತಾರೆಯಲ್ಲಿ ದೀಪಗಳನ್ನು ಸರಿಪಡಿಸುವಾಗಲೂ
8 И когато запали Аарон светилата вечер, нека кади с тоя темян; това ще бъде вечно кадене пред Господа във всичките ви поколения.
೮ಸಾಯಂಕಾಲದಲ್ಲಿ ದೀಪಗಳನ್ನು ಹೊತ್ತಿಸುವಾಗಲೂ ಅದರ ಮೇಲೆ ಸುಗಂಧದ್ರವ್ಯಗಳಿಂದ ಧೂಪವನ್ನು ಹಾಕಬೇಕು. ಹೀಗೆ ನಿಮ್ಮಿಂದಲೂ ನಿಮ್ಮ ಸಂತತಿಯವರಿಂದಲೂ ಯೆಹೋವನ ಸನ್ನಿಧಿಯಲ್ಲಿ ನಿರಂತರವಾದ ಧೂಪ ಸಮರ್ಪಣೆಯು ನಡೆಯುತ್ತಿರಬೇಕು.
9 На тоя олтар да не принасяш чужд темян, нито всеизгаряне, нито хлебен принос, нито да изливате на него възлияние.
೯ಆ ಯಜ್ಞವೇದಿಯ ಮೇಲೆ ಬೇರೆ ಯಾವ ಧೂಪವನ್ನೂ ಹಾಕಬಾರದು. ಅದರ ಮೇಲೆ ಇತರೆ ಹೋಮವನ್ನಾಗಲಿ, ಭೋಜನದ್ರವ್ಯವನ್ನಾಗಲಿ ಹಾಗೂ ಪಾನದ್ರವ್ಯವನ್ನಾಗಲಿ ಸಮರ್ಪಿಸಕೂಡದು.
10 Над роговете му веднъж в годината да направи Аарон умилостивение с кръвта на умилостивителния принос за грях; веднъж в годината да прави над него умилостивение във всичките ви поколения; това е пресвето Господу.
೧೦ಆರೋನನು ಅವನ ಸಂತತಿಯವರೂ ವರ್ಷಕ್ಕೆ ಒಂದು ಸಾರಿ ದೋಷಪರಿಹಾರಕ ಯಜ್ಞದ ಪಶುವಿನ ರಕ್ತವನ್ನು ಆ ಯಜ್ಞವೇದಿಯ ಕೊಂಬುಗಳಿಗೆ ಹಚ್ಚಿ ಅದರ ಕುರಿತಾಗಿ ದೋಷಪರಿಹಾರವನ್ನು ಮಾಡಬೇಕು. ಅದು ಯೆಹೋವನಿಗೆ ಅತಿ ಪರಿಶುದ್ಧವಾಗಿದೆ.”
11 И Господ говори на Моисея, казвайки:
೧೧ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ,
12 При преброяването на израилтяните, когато вземеш цялото им число, тогава да дадеш откуп Господу, всеки човек за живота си, когато ги преброяваш, за да не ги нападне язва, когато ги преброяваш.
೧೨“ನೀನು ಇಸ್ರಾಯೇಲ್ಯರ ಜನಗಣತಿ ಮಾಡಿಸಿ ಅವರನ್ನು ಲೆಕ್ಕಿಸುವಾಗ ಅವರಿಗೆ ಬಾಧೆಯುಂಟಾಗಿ ವ್ಯಾಧಿ ಸಂಭವಿಸದಂತೆ ಪ್ರತಿಯೊಬ್ಬನೂ ತನ್ನ ತನ್ನ ಪ್ರಾಣಕ್ಕಾಗಿ ವಿಮೋಚನ ಕ್ರಯವನ್ನು ಯೆಹೋವನಿಗೆ ಕೊಡಬೇಕು.
13 Ето какво да дават: всеки, който се причислява към преброените, половин сикъл, според сикъла на светилището (един сикъл е двадесет гери); половин сикъл за принос Господу.
೧೩ಲೆಕ್ಕಿತರಾದವರಲ್ಲಿ ಪ್ರತಿಯೊಬ್ಬನೂ ದೇವರ ಸೇವೆಗೆ ನೇಮಕವಾದ ಇಪ್ಪತ್ತು ಗೇರಾ ತೂಕದ ರೂಪಾಯಿಯ ಮೇರೆಗೆ ಅರ್ಧ ಶೆಕೆಲ್ ಕಾಣಿಕೆಯನ್ನು ಕೊಡಬೇಕು. ಈ ಅರ್ಧ ಶೆಕೆಲ್ ಯೆಹೋವನಿಗೆ ಪವಿತ್ರವಾದ ಕಾಣಿಕೆಯಾಗಿರುತ್ತದೆ.
14 Всеки, който се причислява към преброените то ест, който е от двадесет години нагоре, да даде тоя принос Господу.
೧೪ಲೆಕ್ಕ ಮಾಡಿದವರಲ್ಲಿ ಇಪ್ಪತ್ತು ವರ್ಷದವರೂ ಹಾಗೂ ಅದಕ್ಕೆ ಮೇಲ್ಪಟ್ಟ ವಯಸ್ಸುಳ್ಳವರೂ ಆ ಕಾಣಿಕೆಯನ್ನು ಯೆಹೋವನಿಗೆ ಕೊಡಬೇಕು.
15 Богатият да не даде повече, и сиромахът да не даде по-малко, от половин сикъл, когато давате тоя принос Господу, за да направите умилостивение за живота си.
೧೫ಪ್ರಾಣಗಳ ಪ್ರಾಯಶ್ಚಿತ್ತಕ್ಕಾಗಿ ಕಾಣಿಕೆಯನ್ನು ಯೆಹೋವನಿಗೆ ಕೊಡುವುದರಲ್ಲಿ ಐಶ್ವರ್ಯವಂತರಾದರೂ ಅರ್ಧಶೆಕೆಲಿಗಿಂತ ಹೆಚ್ಚು ಕೊಡಬಾರದು. ಬಡವರು ಕಡಿಮೆ ಕೊಡಬಾರದು.
16 А като вземеш парите за умилостивението от израилтяните, да ги употребиш в службата в шатъра за срещане; и това ще бъде за спомен на израилтяните пред Господа, за да бъде умилостивение за живота ви.
೧೬ನೀನು ಪ್ರಾಣಗಳ ಪ್ರಾಯಶ್ಚಿತ್ತಕ್ಕಾಗಿ ಹಣವನ್ನು ಇಸ್ರಾಯೇಲರಿಂದ ತೆಗೆದುಕೊಂಡು ಅದನ್ನು ದೇವದರ್ಶನದ ಗುಡಾರದ ಸೇವೆಗೆ ಉಪಯೋಗಿಸಬೇಕು. ಇಸ್ರಾಯೇಲರ ಪ್ರಾಣಗಳನ್ನು ಉಳಿಸಬೇಕೆಂಬುದಾಗಿ ಆ ಕಾಣಿಕೆಯು ಯೆಹೋವನಾದ ನನ್ನ ಸನ್ನಿಧಿಯಲ್ಲಿ ಜ್ಞಾಪಕವಾಗಿರುವುದು.”
17 Господ говори още на Моисея, казвайки:
೧೭ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ,
18 Да направиш и меден умивалник, с медна подложка, за да се мият; и да го поставиш между шатъра за срещане и олтара и да налееш вода в него,
೧೮“ಸ್ನಾನಕ್ಕಾಗಿ ಒಂದು ತಾಮ್ರದ ತೊಟ್ಟಿಯನ್ನೂ ಅದಕ್ಕೆ ತಾಮ್ರದ ಪೀಠವನ್ನೂ ಮಾಡಿಸಿ ದೇವದರ್ಶನದ ಗುಡಾರಕ್ಕೂ, ಯಜ್ಞವೇದಿಗೂ ನಡುವೆ ಇಟ್ಟು ಅದರಲ್ಲಿ ನೀರು ತುಂಬಿಸಬೇಕು.
19 та Аарон и синовете му да умиват ръцете си и нозете си в него.
೧೯ಆರೋನನೂ ಅವನ ಮಕ್ಕಳೂ ಅದರಿಂದ ಕೈಕಾಲುಗಳನ್ನು ತೊಳೆದುಕೊಳ್ಳಬೇಕು.
20 Когато влизат в шатъра за срещане нека се мият с водата, за да не умират; или когато пристъпват при олтара да служат, като изгарят жертва чрез огън Господу,
೨೦ಅವರು ದೇವದರ್ಶನದ ಗುಡಾರದೊಳಗೆ ಹೋಗುವಾಗ ಹಾಗೂ ದೇವರ ಸೇವೆಯನ್ನು ಮಾಡುವವರಾಗಿ ಯೆಹೋವನಿಗೆ ಹೋಮವನ್ನು ಸಮರ್ಪಿಸುವುದಕ್ಕಾಗಿ ಯಜ್ಞವೇದಿಯ ಬಳಿಗೆ ಬರುವಾಗ ಜೀವದಿಂದಿರಲು ಕೈಕಾಲುಗಳನ್ನು ತೊಳೆದುಕೊಂಡು ಬರಬೇಕು.
21 тогава да умиват ръцете си и нозете си, за да не умрат. Това ще им бъде вечен закон, за него и за потомците му във всичките им поколения.
೨೧ತೊಳೆದುಕೊಳ್ಳದೆ ಬಂದರೆ ಮರಣ ಶಿಕ್ಷೆಯಾಗುವುದು. ಇದು ಅವನಿಗೂ ಮತ್ತು ಅವನ ಸಂತತಿಯವರಿಗೂ ಶಾಶ್ವತ ನಿಯಮವಾಗಿರಬೇಕು.”
22 При това Господ говори на Моисея, казвайки:
೨೨ಇದಲ್ಲದೆ ಯೆಹೋವನು ಮೋಶೆಗೆ ಪುನಃ ಹೇಳಿದ್ದೇನೆಂದರೆ,
23 Вземи си изрядни аромати, от чиста смирна петстотин сикли, от благоуханна канела половината на това, сиреч, двеста и петдесет сикли от благоуханна тръст двеста и петдесет сикли,
೨೩“ನೀನು ಸುಗಂಧದ್ರವ್ಯಗಳಲ್ಲಿ ದೇವರ ಸೇವೆಗೆ ನೇಮಕವಾದ ತೂಕದ ಮೇರೆಗೆ ಐನೂರು ಶೆಕೆಲ್ ಅಚ್ಚರಕ್ತಬೋಳ, ಅದರರ್ಧ ಅಂದರೆ ಇನ್ನೂರೈವತ್ತು ಶೆಕೆಲ್ ಶ್ರೇಷ್ಠವಾದ ಲವಂಗ,
24 от касия петстотин, според сикъла на светилището, и от дървеното масло един ин;
೨೪ಐನೂರು ಸುಗಂಧವಾದ ಚೆಕ್ಕೆ, ಮತ್ತು ಒಂದು ಹೀನ್ ಒಲೀವ್ ಎಣ್ಣೆ ಇವುಗಳನ್ನೆಲ್ಲಾ ತೆಗೆದುಕೊಂಡು,
25 и да ги направиш миро за свето помазване, мас приготвена според изкуството на мироварец; това да бъде моро за свето помазване.
೨೫ಸುಗಂಧ ದ್ರವ್ಯಕಾರರ ಪದ್ದತಿಯ ಮೇರೆಗೆ ಮಿಶ್ರಮಾಡಿ ಪರಿಶುದ್ಧವಾದ ಅಭಿಷೇಕ ತೈಲವನ್ನು ಮಾಡಿಸಬೇಕು. ಇದು ಪರಿಶುದ್ಧವಾದ ಅಭಿಷೇಕ ತೈಲವಾಗಿರುವುದು.
26 И да помажеш с него шатъра за срещане, ковчега с плочите на свидетелството,
೨೬ಆದುದರಿಂದ ದೇವದರ್ಶನದ ಗುಡಾರ, ಆಜ್ಞಾಶಾಸನಗಳ ಮಂಜೂಷ, ಮೇಜು, ಮೇಜಿನ ಉಪಕರಣಗಳು,
27 трапезата и всичките й прибори, светилника и приборите му, кадилния олтар,
೨೭ದೀಪಸ್ತಂಭ, ದೀಪಸ್ತಂಭದ ಉಪಕರಣಗಳು,
28 олтара за всеизгарянето със всичките му прибори, и умивалника с подложката му;
೨೮ಧೂಪವೇದಿ, ಯಜ್ಞವೇದಿ, ಯಜ್ಞವೇದಿಯ ಉಪಕರಣಗಳು ಹಾಗು ನೀರಿನ ತೊಟ್ಟಿ ಅದರ ಪೀಠ ಇವುಗಳನ್ನೆಲ್ಲಾ ಅಭಿಷೇಕಿಸಬೇಕು.
29 така да ги осветиш, за да бъдат пресвети; всичко що се докосва до тях да биде свето.
೨೯ಅವು ಅತಿ ಪರಿಶುದ್ಧವಾಗುವಂತೆ ಅವುಗಳನ್ನು ಶುದ್ಧೀಕರಿಸಬೇಕು. ಅವುಗಳನ್ನು ಮುಟ್ಟುವವರೆಲ್ಲರೂ ಪರಿಶುದ್ಧರಾಗಿರಬೇಕು.
30 И да помажеш Аарона и синовете му, и да ги осветиш, за да ми свещенодействуват.
೩೦ಅದಲ್ಲದೆ ಆರೋನನೂ ಅವನ ಮಕ್ಕಳೂ ನನಗೆ ಯಾಜಕರಾಗುವಂತೆ ಅವರನ್ನು ಅಭಿಷೇಕಿಸಿ ಶುದ್ಧೀಕರಿಸಬೇಕು.”
31 И да говориш на израилтяните, казвайки: Това ще бъде за Мене свето миро за помазване на всичките ви поколения.
೩೧ನೀನು ಇಸ್ರಾಯೇಲರಿಗೆ ಆಜ್ಞಾಪಿಸತಕ್ಕದ್ದೇನೆಂದರೆ, “ನೀವೂ ನಿಮ್ಮ ಸಂತತಿಯವರೂ ಈ ತೈಲವನ್ನು ನನ್ನ ಸೇವೆಗೆ ನೇಮಕವಾದ ಪರಿಶುದ್ಧ ಅಭಿಷೇಕ ತೈಲವೆಂದು ತಿಳಿದುಕೊಳ್ಳಬೇಕು.
32 Човешка плът да се не помаже с него; и по неговия състав подобно на него да не правите; то да е свето, и свето да бъде за вас.
೩೨ಜನರು ಮೈಗೆ ಹಚ್ಚಿಕೊಳ್ಳುವುದಕ್ಕೆ ಇದನ್ನು ಉಪಯೋಗಿಸಬಾರದು. ಈ ವಿಧಾನದ ಮೇರೆಗೆ ಬೇರೆ ಕೆಲಸಕ್ಕಾಗಿ ತೈಲವನ್ನು ಮಾಡಲೇಬಾರದು. ಇದು ದೇವರ ವಸ್ತು. ಇದು ಪರಿಶುದ್ಧವಾದದ್ದು ಎಂದು ನೀವು ತಿಳಿದುಕೊಳ್ಳಬೇಕು.
33 Който направи подобно нему, или който тури от него на чужденец, ще бъде изтребен из людете си.
೩೩ಇದರಂತೆ ತೈಲವನ್ನು ಮಾಡುವವನಾಗಲಿ ಇದನ್ನು ಯಾಜಕನಲ್ಲದವನ ಮೇಲೆ ಹಚ್ಚುವವನಾಗಲಿ ತನ್ನ ಕುಲದಿಂದ ಬಹಿಷ್ಕೃತನಾಗುವನು.”
34 Рече още Господ на Моисея: Вземи си аромати, - стакти, ониха, галбан, - тия аромати с чист ливан; по равни части да бъдат.
೩೪ಅದಲ್ಲದೆ ಯೆಹೋವನು ಮೋಶೆಗೆ ಆಜ್ಞಾಪಿಸಿದ್ದೇನೆಂದರೆ, “ನೀನು ಹಾಲುಮಡ್ಡಿ, ಗುಗ್ಗುಲ ಹಾಗೂ ಗಂಧದ ಚೆಕ್ಕೆ ಎಂಬ ಪರಿಮಳ ದ್ರವ್ಯಗಳನ್ನು ಸ್ವಚ್ಛವಾದ ಧೂಪವನ್ನೂ ಸಮಭಾಗವಾಗಿ ತೆಗೆದುಕೊಂಡು,
35 И от тях да направиш, темян, смесен според изкуството на мироварец, подправен със сол, чист, свет.
೩೫ಸುಗಂಧ ದ್ರವ್ಯ ತಯಾರಿಸುವವರ ಕೌಶಲ್ಯಕ್ಕೆ ತಕ್ಕಂತೆ ಕಲಿಸಿ ಉಪ್ಪು ಹಾಕಿ ದೇವರ ಸೇವೆಗೆ ಪವಿತ್ರವಾದ ಧೂಪದ್ರವ್ಯವನ್ನು ಮಾಡಿಸಬೇಕು.
36 И да счукаш от него много дребно, и да туриш от него пред плочите на свидетелството в шатъра за срещане, гдето ще се срещам с тебе; тоя темян да ви бъде пресвет.
೩೬ಅದರಲ್ಲಿ ಸ್ವಲ್ಪವನ್ನು ಪುಡಿಮಾಡಿಸಿ ದೇವದರ್ಶನದ ಗುಡಾರದೊಳಗೆ ಆಜ್ಞಾಶಾಸನಗಳ ಮಂಜೂಷದ ಎದುರಾಗಿ ನಾನು ನಿನಗೆ ದರ್ಶನ ಕೊಡುವ ಸ್ಥಳದಲ್ಲಿ ಇರಿಸಬೇಕು. ಅದು ಅತಿ ಪರಿಶುದ್ಧವಾದದ್ದೆಂದು ನೀವು ಭಾವಿಸಬೇಕು.
37 А според състава на тоя темян, който ще направиш да не правите за себе си; той да ти бъде свет за Господа.
೩೭ನೀವು ಆ ಧೂಪದ್ರವ್ಯದ ವಿಧಾನದ ಮೇರೆಗೆ ನಿಮ್ಮ ಸ್ವಂತಕ್ಕೋಸ್ಕರ ಧೂಪದ್ರವ್ಯವನ್ನು ಮಾಡಿಸಿಕೊಳ್ಳಬಾರದು. ಅದು ಯೆಹೋವನ ಸೇವೆಗೆ ಮಾತ್ರ ಉಪಯೋಗಿಸಬೇಕಾದ ಮೀಸಲಾದ ಪವಿತ್ರ ಪದಾರ್ಥವೆಂದು ಭಾವಿಸಬೇಕು.
38 Който направи подобен нему, за да го мирише, да бъде изтребен из людете си.
೩೮ಸುವಾಸನೆಗೋಸ್ಕರ ಅಂಥದನ್ನು ಮಾಡಿಕೊಳ್ಳುವವನು ತನ್ನ ಕುಲದಿಂದ ಬಹಿಷ್ಕಾರಕ್ಕೆ ಗುರಿಯಾಗುವನು.”