< বংশাবলির প্রথম খণ্ড 8 >

1 বিন্যামীন তাঁর, বড়ো ছেলে বেলার বাবা, তাঁর দ্বিতীয় ছেলে অস্‌বেল, তৃতীয়জন অহর্হ,
ಬೆನ್ಯಾಮೀನನ ಮಕ್ಕಳು: ಚೊಚ್ಚಲಮಗನಾದ ಬೆಳನನ್ನೂ, ಎರಡನೆಯವನಾದ ಅಷ್ಬೇಲನನ್ನೂ, ಮೂರನೆಯವನಾದ ಅಹ್ರಹನನ್ನೂ,
2 চতুর্থজন নোহা ও পঞ্চমজন রাফা।
ನಾಲ್ಕನೆಯವನಾದ ನೋಹನನ್ನೂ, ಐದನೆಯವನಾದ ರಾಫನನ್ನೂ ಪಡೆದನು.
3 বেলার ছেলেরা হলেন: অদ্দর, গেরা, অবীহূদ,
ಬೆಳನ ಪುತ್ರರು: ಅದ್ದಾರ್, ಗೇರ, ಅಬೀಹೂದ್,
4 অবীশূয়, নামান, আহোহ,
ಅಬೀಷೂವನು, ನಾಮಾನನು, ಅಹೋಹನು,
5 গেরা, শফূফন ও হূরম।
ಗೇರನು, ಶೆಫುಫಾನನು, ಹೂರಾಮನು.
6 এহূদের এই বংশধররা গেবায় বসবাসকারী পরিবারগুলির কর্তা ছিলেন এবং তাদের নির্বাসিত করে মানহতে নিয়ে যাওয়া হল:
ಏಹೂದನ ಪುತ್ರರು: ನಾಮಾನನು, ಅಹೀಯನು, ಗೇರನು. ಇವರೇ ಗಿಬೆಯ ನಿವಾಸಿಗಳ ಕುಟುಂಬಗಳಲ್ಲಿ ಯಜಮಾನರಾಗಿದ್ದರು. ಆದರೆ ಅವರನ್ನು ಮಾನಹತಿಗೆ ತೆಗೆದುಕೊಂಡು ಹೋದರು.
7 নামান, অহিয়, ও সেই গেরা, যিনি তাদের নির্বাসিত করলেন এবং যিনি আবার উষ ও অহীহূদের বাবাও ছিলেন।
ನಾಮಾನ್, ಅಹೀಯ, ಗೇರನನ್ನು ತೆಗೆದುಕೊಂಡು ಹೋದ ತರುವಾಯ, ಉಜ್ಜನನ್ನೂ, ಅಹೀಹೂದನನ್ನೂ ಪಡೆದನು.
8 মোয়াবে শহরয়িম তাঁর দুই স্ত্রী হূশীম ও বারার সঙ্গে বিবাহবিচ্ছিন্ন হওয়ার পর তাঁর কয়েকটি ছেলের জন্ম হয়েছিল।
ಇದಲ್ಲದೆ ಅವನು ಅವರನ್ನು ಕಳುಹಿಸಿದ ತರುವಾಯ, ಶಹರಯಿಮನು ಮೋವಾಬಿನ ದೇಶದಲ್ಲಿ ಮಕ್ಕಳನ್ನು ಪಡೆದನು. ಹುಷೀಮಳೂ, ಬಾರಳೂ ಅವನಿಗೆ ಪತ್ನಿಯರಾಗಿದ್ದರು.
9 তাঁর স্ত্রী হোদশের মাধ্যমে তিনি যে ছেলেদের পেয়েছিলেন, তারা হলেন—যোবব, সিবিয়, মেশা, মল্কম,
ಇದಲ್ಲದೆ ಅವನು ತನ್ನ ಹೆಂಡತಿಯಾದ ಹೋದೆಷಳಿಂದ ಯೋವಾಬನನ್ನೂ, ಚಿಬ್ಯನನ್ನೂ, ಮೇಷನನ್ನೂ, ಮಲ್ಕಾಮನನ್ನೂ,
10 যিয়ূশ, শখিয় ও মির্ম। এরাই তাঁর ছেলে, তথা তাদের পরিবারগুলির কর্তা।
ಯೆಯೂಚನನ್ನೂ, ಸಾಕ್ಯನನ್ನೂ, ಮಿರ್ಮನನ್ನೂ ಪಡೆದನು. ಅವನ ಮಕ್ಕಳಾದ ಇವರು ಕುಟುಂಬಗಳಲ್ಲಿ ಯಜಮಾನರಾಗಿದ್ದರು.
11 হূশীমের মাধ্যমে তিনি অবীটূব ও ইল্পালকে পেয়েছিলেন।
ಹುಷೀಮಳಿಂದ ಅವನು ಅಬಿಟೂಬನನ್ನೂ, ಎಲ್ಪಾಲನನ್ನೂ ಪಡೆದನು.
12 ইল্পালের ছেলেরা: এবর, মিশিয়ম, শেমদ (যিনি চারপাশের গ্রাম সমেত ওনো ও লোদ নগর দুটি গেঁথে তুলেছিলেন),
ಎಲ್ಪಾಲನ ಪುತ್ರರು: ಏಬೆರ್, ಮಿಷಾಮ್, ಶೆಮೆದ್. ಶೆಮೆದನು ಓನೋ, ಲೋದ್ ಎಂಬ ಪಟ್ಟಣಗಳನ್ನೂ, ಅವುಗಳಿಗೆ ಸೇರಿದ ಗ್ರಾಮಗಳನ್ನೂ ಕಟ್ಟಿಸಿದರು.
13 এবং বরিয় ও শেমা, যারা অয়ালোনে বসবাসকারী পরিবারগুলির কর্তা ছিলেন এবং তারাই গাতের অধিবাসীদের তাড়িয়ে দিলেন।
ಇದಲ್ಲದೆ ಅವನು ಗತ್‌ನವರನ್ನು ಓಡಿಸಿಬಿಟ್ಟ ಅಯ್ಯಾಲೋನಿನ ನಿವಾಸಿಗಳ ಕುಟುಂಬಗಳಲ್ಲಿ ಬೆರೀಯ, ಶಮ ಯಜಮಾನರಾಗಿದ್ದರು.
14 অহিয়ো, শাশক, যিরেমোৎ,
ಅಹಿಯೋ, ಶಾಷಕ್, ಯೆರೀಮೋತ್,
15 সবদিয়, অরাদ, এদর,
ಜೆಬದ್ಯ, ಅರಾದ್, ಏದೆರ್,
16 মীখায়েল, যিশপা ও যোহ বরিয়ের ছেলে ছিলেন।
ಮೀಕಾಯೇಲ್, ಇಷ್ಪ, ಯೋಹ ಇವರು ಬೆರೀಯನ ಪುತ್ರರು.
17 সবদিয়, মশুল্লম, হিষ্কি, হেবর,
ಜೆಬದ್ಯ, ಮೆಷುಲ್ಲಾಮ್, ಹಿಜ್ಕೀ, ಹೆಬೆರ್,
18 যিশ্মরয়, যিষলিয় ও যোবব ইল্পালের ছেলে ছিলেন।
ಇಷ್ಮೆರೈ, ಇಜ್ಲೀಯ, ಯೋಬಾಬ್ ಇವರು ಎಲ್ಪಾಲನ ಪುತ್ರರು.
19 যাকীম, সিখ্রি, সব্দি,
ಶಿಮ್ಮಿಯ ಕುಮಾರರು: ಯಾಕೀಮ್, ಜಿಕ್ರಿ, ಜಬ್ದೀ,
20 ইলীয়ৈনয়, সিল্লথয়, ইলীয়েল,
ಎಲೀಯೆನೈ, ಚಿಲ್ಲೆತೈ, ಎಲೀಯೇಲ್,
21 অদায়া, বরায়া ও শিম্রৎ শিমিয়ির ছেলে ছিলেন।
ಅದಾಯಾ, ಬೆರಾಯ, ಶಿಮ್ರಾತ್.
22 যিশপন, এবর, ইলীয়েল,
ಶಾಷಕನ ಪುತ್ರರು: ಇಷ್ಪಾನ್, ಏಬೆರ್, ಎಲೀಯೇಲ್,
23 অব্দোন, সিখ্রি, হানন,
ಅಬ್ದೋನ್, ಜಿಕ್ರಿಯು, ಹಾನಾನ್,
24 হনানিয়, এলম, অন্তোথিয়,
ಹನನ್ಯ, ಏಲಾಮ್, ಅನೆತೋತೀಯ,
25 যিফদিয় ও পনূয়েল শাশকের ছেলে ছিলেন।
ಇಫ್ದೆಯಾಹ, ಪೆನೂಯೇಲ್.
26 শিম্‌শরয়, শহরিয়, অথলিয়,
ಶಂಷೆರೈ, ಶೆಹರ್ಯ, ಅತಲ್ಯ,
27 যারিশিয়, এলিয় ও সিখ্রি যিরোহমের ছেলে ছিলেন।
ಯಾರೆಷ್ಯ, ಎಲೀಯ, ಜಿಕ್ರಿ ಇವರು ಯೆರೋಹಾಮನ ಪುತ್ರರು.
28 এরা সবাই তাদের বংশতালিকায় নথিভুক্ত পরিবারগুলির কর্তা ও প্রধান ছিলেন এবং তাঁরা জেরুশালেমেই বসবাস করতেন।
ಇವರೇ ಕುಟುಂಬಗಳಲ್ಲಿ ಯಜಮಾನರಾಗಿದ್ದು, ತಮ್ಮ ವಂಶಗಳ ಮುಖ್ಯಸ್ಥರಾಗಿ ಯೆರೂಸಲೇಮಿನಲ್ಲಿ ವಾಸವಾಗಿದ್ದರು.
29 গিবিয়োনের বাবা যিয়ীয়েল গিবিয়োনে বসবাস করতেন। তাঁর স্ত্রীর নাম মাখা,
ಗಿಬ್ಯೋನನ ಮೂಲಪುರುಷನಾದ ಯೆಹಿಯೇಲನು ಗಿಬ್ಯೋನಿನಲ್ಲಿ ವಾಸವಾಗಿದ್ದನು. ಅವನ ಹೆಂಡತಿಯ ಹೆಸರು ಮಾಕಳು.
30 এবং তাঁর বড়ো ছেলে অব্দোন, পরে জন্ম হল সূর, কীশ, বায়াল, নের, নাদব,
ಅವನ ಚೊಚ್ಚಲ ಮಗನು ಅಬ್ದೋನನು ನಂತರ ಚೂರನು, ಕೀಷನು, ಬಾಳನು, ನೇರನು, ನಾದಾಬನು,
31 গদোর, অহিয়ো, সখর
ಗೆದೋರನು, ಅಹಿಯೋನು, ಜೆಕೆರನು.
32 এবং সেই মিক্লোতের, যিনি শিমিয়ির বাবা ছিলেন। তারাও জেরুশালেমে তাদের আত্মীয়স্বজনের কাছে বসবাস করতেন।
ಮಿಕ್ಲೋತನು ಶಿಮಾಹನನ್ನು ಪಡೆದನು. ಇವರೂ ಸಹ ಯೆರೂಸಲೇಮಿನಲ್ಲಿ ತಮ್ಮ ಸಹೋದರರ ಸಂಗಡ ವಾಸವಾಗಿದ್ದರು.
33 নের কীশের বাবা, কীশ শৌলের বাবা, ও শৌল যোনাথন, মল্কীশূয়, অবীনাদব ও ইশ্‌বায়ালের বাবা।
ನೇರನು ಕೀಷನನ್ನು ಪಡೆದನು; ಕೀಷನು ಸೌಲನನ್ನು ಪಡೆದನು; ಸೌಲನ ಮಕ್ಕಳು ಯೋನಾತಾನ್, ಮಲ್ಕೀಷೂವ, ಅಬೀನಾದಾಬ್, ಎಷ್ಬಾಳ ಎಂಬವರು.
34 যোনাথনের ছেলে: মরীব্-বায়াল, যিনি মীখার বাবা।
ಯೋನಾತಾನನ ಮಗನು ಮೆರೀಬ್ಬಾಳನು; ಮೆರೀಬ್ಬಾಳನು ಮೀಕನನ್ನು ಪಡೆದನು.
35 মীখার ছেলেরা: পিথোন, মেলক, তরেয় ও আহস।
ಮೀಕನ ಪುತ್ರರು: ಪಿತೋನನು, ಮೇಲಕನು, ತರೇಯನು ಮತ್ತು ಆಹಾಜನು.
36 আহস যিহোয়াদার বাবা, যিহোয়াদা আলেমৎ, অসমাবৎ ও সিম্রির বাবা, এবং সিম্রি মোৎসার বাবা।
ಆಹಾಜನು ಯೆಹೋವದ್ದಾಹನ ತಂದೆ. ಯೆಹೋವದ್ದಾಹನು ಆಲೆಮೆತನನ್ನೂ, ಅಜ್ಮಾವೆತನನ್ನೂ, ಜಿಮ್ರಿಯನ್ನೂ ಪಡೆದನು, ಜಿಮ್ರಿಯು ಮೋಚನನ್ನು ಪಡೆದನು.
37 মোৎসা বিনিয়ার বাবা; বিনিয়ার ছেলে রফায়, তাঁর ছেলে ইলীয়াসা ও তাঁর ছেলে আৎসেল।
ಮೋಚನು ಬಿನ್ನನನ್ನು ಪಡೆದನು. ಅವನ ಮಗನು ರಾಫನು. ಅವನ ಮಗನು ಎಲ್ಲಾಸನು. ಅವನ ಮಗನು ಆಚೇಲನು.
38 আৎসেলের ছয় ছেলে ছিল, এবং এই তাদের নাম: অস্রীকাম, বোখরূ, ইশ্মায়েল, শিয়রিয়, ওবদিয় ও হানান। এরা সবাই আৎসেলের ছেলে।
ಈ ಆಚೇಲನಿಗೆ ಆರು ಮಂದಿ ಪುತ್ರರಿದ್ದರು. ಅವರ ಹೆಸರುಗಳು ಅಜ್ರೀಕಾಮನು, ಬೋಕೆರೂ, ಇಷ್ಮಾಯೇಲನು, ಶೆಯರ್ಯನು, ಓಬದ್ಯನು, ಹಾನಾನನು, ಇವರೆಲ್ಲರು ಆಚೇಲನ ಪುತ್ರರು.
39 তাঁর ভাই এশকের ছেলেরা: তাঁর বড়ো ছেলে ঊলম, দ্বিতীয় ছেলে যিয়ূশ ও তৃতীয়জন এলীফেলট।
ಅವನ ಸಹೋದರನಾದ ಏಷೆಕನ ಪುತ್ರರು: ಅವನ ಚೊಚ್ಚಲಮಗನಾದ ಉಲಾಮನು, ಎರಡನೆಯವನಾದ ಯೆಯೂಷನು, ಮೂರನೆಯವನಾದ ಎಲೀಫೆಲೆಟನು.
40 ঊলমের ছেলেরা এমন সাহসী যোদ্ধা ছিলেন, যারা ধনুক ব্যবহার করতে পারতেন। তাদের প্রচুর সংখ্যায় ছেলে ও নাতি ছিল—মোট 150 জন। এরা সবাই বিন্যামীনের বংশধর।
ಈ ಉಲಾಮನ ಪುತ್ರರು ಬಿಲ್ಲುಗಾರರಾಗಿ ಯುದ್ಧದಲ್ಲಿ ಪರಾಕ್ರಮಶಾಲಿಗಳಾಗಿದ್ದರು. ಅವರಿಗೆ ಮಕ್ಕಳೂ, ಮೊಮ್ಮಕ್ಕಳೂ 150 ಮಂದಿ ಇದ್ದರು. ಇವರೆಲ್ಲರೂ ಬೆನ್ಯಾಮೀನನ ವಂಶಜರು.

< বংশাবলির প্রথম খণ্ড 8 >