< বংশাবলির প্রথম খণ্ড 7 >
1 ইষাখরের ছেলেরা: তোলয়, পূয়, যাশূব ও শিম্রোণ—মোট চারজন।
೧ಇಸ್ಸಾಕಾರನ ಮಕ್ಕಳು: ತೋಲ, ಪೂವ, ಯಾಶೂಬ್, ಶಿಮ್ರೋನ್ ಎಂಬ ನಾಲ್ಕು ಜನರು.
2 তোলয়ের ছেলেরা: উষি, রফায়, যিরীয়েল, যহময়, যিবসম ও শমূয়েল—তাদের পরিবারের কর্তা। দাউদের রাজত্বকালে, তোলয়ের যেসব বংশধর তাদের বংশতালিকানুসারে যোদ্ধারূপে নথিভুক্ত হল, তাদের সংখ্যা 22,600 জন।
೨ತೋಲನ ಮಕ್ಕಳಾದ, ಉಜ್ಜೀ, ರೆಫಾಯ, ಯೆರೀಯೇಲ್, ಯಹ್ಮೈ, ಇಬ್ಸಾಮ್ ಮತ್ತು ಸಮುವೇಲ್. ಇವರು ತೋಲನ ವಂಶದ ಕುಟುಂಬಗಳಲ್ಲಿ ಪ್ರಧಾನ ಪುರುಷರೂ, ರಣವೀರರೂ ಆಗಿದ್ದರು. ತೋಲ ವಂಶದವರ ಸಂಖ್ಯೆಯು ದಾವೀದನ ಕಾಲದಲ್ಲಿ ಇಪ್ಪತ್ತೆರಡು ಸಾವಿರದ ಆರುನೂರು.
3 উষির ছেলে: যিষ্রাহিয়। যিষ্রাহিয়ের ছেলেরা: মীখায়েল, ওবদিয়, যোয়েল ও যিশিয়। এই পাঁচজনই প্রধান ছিলেন।
೩ಉಜ್ಜೀಯನ ಮಗ ಇಜ್ಯಹ್ಯಾಹ. ಇಜ್ಯಹ್ಯಾಹನ ಮಕ್ಕಳು ಮಿಕಾಯೇಲ್, ಓಬದ್ಯ, ಯೋವೇಲ್, ಇಷ್ಷೀಯ. ಇವರು ಈ ಕುಟುಂಬದ ಗೋತ್ರಪ್ರಧಾನರು.
4 তাদের পারিবারিক বংশতালিকানুসারে, তাদের কাছে 36,000 জন লোক যুদ্ধ করার জন্য প্রস্তুত ছিল, কারণ তাদের অনেকগুলি স্ত্রী ও সন্তানসন্ততি ছিল।
೪ಇವರ ಹೆಂಡತಿ ಮಕ್ಕಳೂ, ಇವರ ಗೋತ್ರ ಕುಟುಂಬಗಳಿಗೆ ಸೇರುವ ಯುದ್ಧಭಟರು ಮತ್ತು ಹೆಂಡತಿ, ಮಕ್ಕಳು ಒಟ್ಟು ಮೂವತ್ತಾರು ಸಾವಿರ.
5 ইষাখরের সব বংশোদ্ভুক্ত যেসব আত্মীয়স্বজন তাদের বংশতালিকানুসারে যোদ্ধারূপে নথিভুক্ত হল, তাদের সংখ্যা মোট 87,000 জন।
೫ಇವರ ಗೋತ್ರ ಸಂಬಂಧಿಗಳಾದ ಇಸ್ಸಾಕಾರ್ಯರೆಲ್ಲರೂ ರಣವೀರರು. ಈ ಕುಟುಂಬದ ಬಹುಪಾಲು ಪುರುಷರು ಸೈನ್ಯದಲ್ಲಿ ಸೇವೆಮಾಡಲು ಯೋಗ್ಯರಾಗಿದ್ದರೆಂದು ತಮ್ಮನ್ನು ಅರ್ಪಿಸಿಕೊಂಡರು, ಪಟ್ಟಿಯಲ್ಲಿ ಲೆಕ್ಕಿಸಲ್ಪಟ್ಟವರು ಒಟ್ಟು ಎಂಭತ್ತೇಳು ಸಾವಿರ ಮಂದಿ.
6 বিন্যামীনের ছেলেরা তিনজন: বেলা, বেখর ও যিদীয়েল।
೬ಬೆನ್ಯಾಮೀನನಿಗೆ ಬೆಳ, ಬೆಕೆರ್, ಯೆದೀಯಯೇಲ್ ಎಂಬ ಮೂರು ಮಕ್ಕಳಿದ್ದರು.
7 বেলার ছেলেরা: ইষবোণ, উষি, উষীয়েল, যিরেমৎ ও ঈরী। এরা পরিবারগুলির কর্তা—মোট পাঁচজন। তাদের বংশতালিকায় 22,034 জন যোদ্ধা নথিভুক্ত হল।
೭ಬೆಳನ ಮಕ್ಕಳು ಎಚ್ಬೋನ್, ಉಜ್ಜೀ, ಉಜ್ಜೀಯೇಲ್, ಯೆರೀಮೋತ್ ಮತ್ತು ಈರೀ ಎಂಬವರು. ಈ ಐದು ಜನರು ಗೋತ್ರ ಪ್ರಧಾನರು ರಣವೀರರೂ ಆಗಿದ್ದರು. ಅವರ ವಂಶಾವಳಿಯ ಪಟ್ಟಿಯಲ್ಲಿ ಇಪ್ಪತ್ತೆರಡು ಸಾವಿರದ ಮೂವತ್ತನಾಲ್ಕು ಜನರೆಂದು ಲೆಕ್ಕಿಸಲ್ಪಟ್ಟವರು.
8 বেখরের ছেলেরা: সমীরা, যোয়াশ, ইলীয়েষর, ইলীয়ৈনয়, অম্রি, যিরেমোৎ, অবিয়, অনাথোৎ ও আলেমৎ। এরা সবাই বেখরের ছেলে।
೮ಬೆಕೆರನ ಮಕ್ಕಳು ಜೆಮೀರ್, ಯೋವಾಷ್, ಎಲೀಯೆಜೆರ್, ಎಲ್ಯೋವೇನೈ, ಒಮ್ರಿ, ಯೆರೀಮೋತ್, ಅಬೀಯ, ಅನಾತೋತ್ ಮತ್ತು ಆಲೆಮೆತ್ ಎಂಬವರು.
9 তাদের বংশতালিকায় 20,200 জন যোদ্ধা নথিভুক্ত হল।
೯ರಣವೀರರಾದ ಈ ಗೋತ್ರಪ್ರಧಾನರ ವಂಶಾವಳಿಯ ಪಟ್ಟಿಯಲ್ಲಿ ಲೆಕ್ಕಿಸಲ್ಪಟ್ಟ ಇಪ್ಪತ್ತು ಸಾವಿರದ ಇನ್ನೂರು ಯುದ್ಧ ಪರಾಕ್ರಮಶಾಲಿಗಳು.
10 যিদীয়েলের ছেলে: বিলহন। বিলহনের ছেলেরা: যিয়ূশ, বিন্যামীন, এহূদ, কানান্না, সেথন, তর্শীশ ও অহীশহর।
೧೦ಯೆದೀಯಯೇಲನ ಮಗ ಬಿಲ್ಹಾನ್. ಬಿಲ್ಹಾನನ ಮಕ್ಕಳು: ಯೆಯೂಷ್, ಬೆನ್ಯಾಮೀನ್, ಏಹೂದ್, ಕೆನಾನ, ಜೇತಾನ್, ತಾರ್ಷೀಷ್, ಅಹೀಷೆಹರ್ ಎಂಬವರು.
11 যিদীয়েলের এইসব ছেলে পরিবারের কর্তা ছিলেন। 17,200 জন যোদ্ধা যুদ্ধে যাওয়ার জন্য প্রস্তুত ছিল।
೧೧ಈ ಗೋತ್ರ ಪ್ರಧಾನರಿಗೆ ಸೇರಿದವರೆಲ್ಲರೂ ಯೆದೀಯಯೇಲನ ಸಂತಾನದವರು. ಇವರಲ್ಲಿ ಹದಿನೇಳು ಸಾವಿರದ ಇನ್ನೂರು ಯುದ್ಧದಲ್ಲಿ ಹೋರಾಡತಕ್ಕ ಪರಾಕ್ರಮ ಶಾಲಿಗಳು.
12 শুপ্পিমীয় ও হুপ্পিমীয়রা ঈরের বংশধর, এবং হূশীয়রা অহেরের বংশধর।
೧೨ಶುಪ್ಪೀಮ್ ಮತ್ತು ಹುಪ್ಪೀಮರು ಈರನ ಮಕ್ಕಳು. ಹುಶೀಮನು ಅಹೇರನ ಮಗ.
13 নপ্তালির ছেলেরা: যহসিয়েল, গূনি, যেৎসর ও শিল্লেম—এরা বিলহার বংশধর।
೧೩ನಫ್ತಾಲಿಯ ಮಕ್ಕಳು ಯಹಚಿಯೇಲ್, ಗೂನೀ, ಯೇಚೆರ್, ಶಲ್ಲೂಮ್ ಇವರು ಬಿಲ್ಹಳ ಸಂತಾನದವರು.
14 মনঃশির বংশধরেরা: তাঁর অরামীয় উপপত্নীর মাধ্যমে উৎপন্ন বংশধর অস্রীয়েল। সেই উপপত্নী গিলিয়দের বাবা মাখীরকেও গর্ভে ধারণ করল।
೧೪ಮನಸ್ಸೆಯ ಸಂತಾನದವರು: ಅರಾಮ್ಯಳಾದ ಮನಸ್ಸೆಯ ಉಪಪತ್ನಿಯಿಂದ ಅಷ್ರೀಯೇಲ ಮತ್ತು ಮಾಕೀರನನ್ನು ಮನಸ್ಸೆ ಪಡೆದನು. ಮಾಕೀರನು ಗಿಲ್ಯಾದನ ತಂದೆ.
15 মাখীর হুপ্পিমীয় ও শুপ্পিমীয়দের মধ্যে থেকেই একজনকে স্ত্রী করে নিয়েছিলেন। তাঁর বোনের নাম মাখা। অন্য একজন বংশধরের নাম সলফাদ, যাঁর শুধু মেয়েই ছিল।
೧೫ಮಾಕೀರನು ಹುಪ್ಪೀಮ್ ಮತ್ತು ಶುಪ್ಪೀಮ್ಯರಿಂದ ಹೆಣ್ಣನ್ನು ತೆಗೆದುಕೊಂಡನು. ಅವನ ತಂಗಿಯ ಹೆಸರು ಮಾಕ. ಅವನ ತಮ್ಮನ ಹೆಸರು ಚೆಲೋಫಾದ್. ಚೆಲೋಫಾದನಿಗೆ ಹೆಣ್ಣು ಮಕ್ಕಳು ಮಾತ್ರ ಇದ್ದರು.
16 মাখীরের স্ত্রী মাখা এক ছেলের জন্ম দিলেন ও তাঁর নাম রেখেছিলেন পেরশ। তাঁর ভাইয়ের নাম রাখা হল শেরশ, এবং তাঁর ছেলেদের নাম ঊলম ও রেকম।
೧೬ಮಾಕೀರನ ಹೆಂಡತಿಯಾದ ಮಾಕಳು ಮಗನನ್ನು ಹೆತ್ತು, ಅವನಿಗೆ ಪೆರೇಷ್ ಎಂದು ಹೆಸರಿಟ್ಟಳು. ಇವನ ತಮ್ಮನ ಹೆಸರು ಶೆರೆಷ್. ಶೆರೆಷನ ಮಕ್ಕಳು ಊಲಾಮ್ ಮತ್ತು ರೆಕೆಮ್.
17 ঊলমের ছেলে: বদান। মনঃশির ছেলে মাখীর, তার ছেলে গিলিয়দ, এরা তার ছেলে।
೧೭ಉಲಾಮನ ಮಗನು ಬೆದಾನ್. ಇವರು ಮನಸ್ಸೆಯ ಮೊಮ್ಮಗ ಹಾಗೂ ಮಾಕೀರನ ಮಗ. ಇವರು ಗಿಲ್ಯಾದನ ಸಂತಾನದವರು.
18 তাঁর বোন হম্মোলেকত ঈশ্হোদ, অবীয়েষর ও মহলাকে জন্ম দিলেন।
೧೮ಗಿಲ್ಯಾದನ ತಂಗಿಯಾದ ಹಮ್ಮೋಲೆಕೆತಳು ಈಷ್ಹೋದ್, ಅಬೀಯೆಜೆರ್, ಮಹ್ಲ ಎಂಬವರನ್ನು ಹೆತ್ತಳು.
19 শমীদার ছেলেরা: অহিয়ন, শেখম, লিকহি ও অনীয়াম।
೧೯ಶೆಮೀದನ ಮಕ್ಕಳು ಅಹ್ಯಾನ್, ಶೆಕೆಮ್, ಲಿಕ್ಹೀ, ಅನೀಯಾಮ್.
20 ইফ্রয়িমের বংশধরেরা: শূথেলহ, তাঁর ছেলে বেরদ, তাঁর ছেলে তহৎ, তাঁর ছেলে ইলিয়াদা, তাঁর ছেলে তহৎ,
೨೦ಎಫ್ರಾಯೀಮನ ಸಂತಾನದವರು: ಎಫ್ರಾಯೀಮನ ಮಗ ಶೂತೆಲಹ, ಇವನ ಮಗ ಬೆರೆದ್. ಬೆರೆದನ ಮಗ ತಹತ್; ಇವನ ಮಗ ಎಲ್ಲಾದ್. ಎಲ್ಲಾದನ ಮಗ ತಹತ್;
21 তাঁর ছেলে সাবদ এবং তাঁর ছেলে শূথেলহ। (জন্মসূত্রে যারা গাত দেশীয় লোক ছিল, তাদের গবাদি পশুপাল দখল করতে গিয়ে এৎসর ও ইলিয়াদা তাদের হাতেই নিহত হলেন।
೨೧ತಹತನ ಮಗ ಜಾಬಾದ್, ಜಾಬಾದನ ಮಕ್ಕಳು ಶೂತೆಲಹ, ಏಜೆರ್ ಮತ್ತು ಎಲ್ಲಾದ್. ಇವರು ಗತ್ ಊರಿನವರ ದನಕುರಿಗಳನ್ನು ಸುಲಿಗೆ ಮಾಡುವುದಕ್ಕೋಸ್ಕರ ಗಟ್ಟಾ ಇಳಿದು ಅವರ ದೇಶಕ್ಕೆ ಹೋದುದರಿಂದ ಆ ದೇಶದ ಮೂಲ ನಿವಾಸಿಗಳು ಇವರನ್ನು ಕೊಂದುಹಾಕಿದರು.
22 তাদের বাবা ইফ্রয়িম অনেক দিন ধরে তাদের জন্য শোক করলেন, এবং তাঁর আত্মীয়স্বজন তাঁকে সান্তনা দিতে এসেছিল।
೨೨ಆದುದರಿಂದ ಇವರ ತಂದೆಯಾದ ಎಫ್ರಾಯೀಮನು ಬಹುದಿನಗಳವರೆಗೂ ದುಃಖಪಡುತ್ತಿದ್ದನು. ಅವನ ಸಹೋದರರು ಅವನನ್ನು ಸಂತೈಸುವುದಕ್ಕೋಸ್ಕರ ಬಂದರು.
23 পরে আরেকবার তিনি তাঁর স্ত্রীর সাথে সহবাস করলেন: ও তাঁর স্ত্রী গর্ভবতী হয়ে এক ছেলের জন্ম দিলেন। ইফ্রয়িম তাঁর নাম রেখেছিলেন বরিয়, কারণ তাঁর পরিবারে অমঙ্গল নেমে এসেছিল।
೨೩ಅವನು ತನ್ನ ಹೆಂಡತಿಯನ್ನು ಸಂಗಮಿಸಲು, ಆಕೆಯು ಗರ್ಭಿಣಿಯಾಗಿ ಮಗನನ್ನು ಹೆತ್ತಳು. ಇದು ಅವನ ಕುಟುಂಬಕ್ಕೆ ಒದಗಿದ ಆಪತ್ತಿನಲ್ಲಿ ಸಂಭವಿಸಿದ್ದರಿಂದ ಆ ಮಗನಿಗೆ ಬೆರೀಯ ಎಂದು ಹೆಸರಿಟ್ಟನು.
24 তাঁর মেয়ের নাম শীরা, যিনি নিম্নতর ও উচ্চতর বেথ-হোরোণ তথা উষেণ-শীরা গেঁথে তুলেছিলেন)
೨೪ಶೇರ ಎಂಬವಳು ಅವನ ಮಗಳು. ಈಕೆಯು ಮೇಲಣ ಮತ್ತು ಕೆಳಗಣ ಬೇತ್ ಹೊರೋನ್ ಎಂಬ ಪಟ್ಟಣಗಳನ್ನು ಮತ್ತು ಉಜ್ಜೀನ್ ಶೇರ ಎಂಬ ಪಟ್ಟಣಗಳನ್ನೂ ಕಟ್ಟಿಸಿದಳು.
25 তাঁর ছেলে ছিলেন রেফহ, তাঁর ছেলে রেশফ, তাঁর ছেলে তেলহ, তাঁর ছেলে তহন,
೨೫ಬೆರೀಯ ಮಗ ರೆಫಹ. ಇವನ ಮಗ ರೆಷೆಫ್, ಇವನ ಮಗ ತೆಲಹ, ಇವನ ಮಗ ತಹಾನ್.
26 তাঁর ছেলে লাদন, তাঁর ছেলে অম্মীহূদ, তাঁর ছেলে ইলীশামা,
೨೬ತಹಾನನ ಮಗ ಲದ್ದಾನ್, ಇವನ ಮಗ ಅಮ್ಮೀಹೂದ್, ಇವನ ಮಗ ಎಲೀಷಾಮ.
27 তাঁর ছেলে নূন এবং তাঁর ছেলে যিহোশূয়।
೨೭ಎಲೀಷಾಮ ಮಗ ನೋನ್, ಇವನ ಮಗ ಯೆಹೋಷುವ.
28 তাদের জমি ও উপনিবেশে বেথেল ও তার চারপাশের গ্রামগুলি যুক্ত ছিল, পূর্বদিকে ছিল নারণ, পশ্চিমদিকে ছিল গেষর ও তার কাছাকাছি থাকা গ্রামগুলি, এবং শিখিম ও সেখানকার গ্রামগুলি থেকে শুরু করে সুদূর অয়া ও সেখানকার গ্রামগুলি পর্যন্ত ছড়িয়ে পড়েছিল তাদের জমিজায়গা।
೨೮ಅವರು ವಾಸಿಸುವ ಸ್ವತ್ತಿನ ಮೇರೆಗಳು ದಕ್ಷಿಣ ದಿಕ್ಕಿನಲ್ಲಿ ಬೇತೇಲ್ ಪಟ್ಟಣ, ಅದರ ಗ್ರಾಮಗಳೂ ಪೂರ್ವ ದಿಕ್ಕಿನಲ್ಲಿ ನಾರಾನ್, ಪಶ್ಚಿಮ ದಿಕ್ಕಿನಲ್ಲಿ ಗೆಜೆರ್ ಪಟ್ಟಣವೂ ಅದರ ಗ್ರಾಮಗಳೂ; ಉತ್ತರ ದಿಕ್ಕಿನಲ್ಲಿ ಶೆಕೆಮ್ ಮತ್ತು ಆಯಾ ಪಟ್ಟಣಗಳೂ ಅವುಗಳ ಗ್ರಾಮಗಳು.
29 মনঃশির সীমানা বরাবর ছিল বেথ-শান, তানক, মগিদ্দো ও দোর তথা সেই নগরগুলির সঙ্গে থাকা গ্রামগুলি। ইস্রায়েলের ছেলে যোষেফের বংশধরেরা এইসব নগরে বসবাস করত।
೨೯ಬೇತ್ಷಾನ್, ತಾನಾಕ್, ಮೆಗಿದ್ದೋ, ದೋರ್ ಎಂಬ ಪಟ್ಟಣಗಳೂ, ಅವುಗಳ ಗ್ರಾಮಗಳೂ ಮನಸ್ಸೆ ಕುಲದವರ ವಶದಲ್ಲಿದ್ದವು. ಈ ಊರುಗಳಲ್ಲಿ ಇಸ್ರಾಯೇಲನ ಮಗನಾದ ಯೋಸೇಫನ ಸಂತಾನದವರು ವಾಸಿಸುತ್ತಿದ್ದರು.
30 আশেরের ছেলেরা: যিম্ন, যিশ্বা, যিশ্বী ও বরিয়। সেরহ ছিলেন তাদের বোন।
೩೦ಅಶೇರನ ಸಂತಾನದವರು: ಇಮ್ನ, ಇಷ್ವ, ಇಷ್ವೀ, ಬೆರೀಯ ಎಂಬವರೂ ಸೆರಹಳೆಂಬ ಇವರ ತಂಗಿ.
31 বরিয়ের ছেলেরা: হেবর ও মল্কীয়েল, যিনি বির্ষোতের বাবা।
೩೧ಬೆರೀಯನ ಮಕ್ಕಳು ಹೆಬೆರ್, ಬಿರ್ಜೈತ್ ಊರಿನವರ ಮೂಲಪುರುಷನಾದ ಮಲ್ಕೀಯೇಲ್.
32 হেবর যফলেট, শোমের ও হোথমের এবং তাদের বোন শূয়ার বাবা।
೩೨ಹೆಬೆರನು ಯಫ್ಲೇಟ್, ಶೋಮೇರ್, ಹೋತಾಮ್ ಇವರನ್ನೂ ಇವರ ತಂಗಿಯಾದ ಶೂವಳನ್ನೂ ಪಡೆದನು.
33 যফলেটের ছেলেরা: পাসক, বিমহল ও অশ্বৎ। এরাই যফলেটের ছেলেসন্তান।
೩೩ಪಾಸಕ್, ಬಿಮ್ಹಾಲ್, ಅಶ್ವಾತ್ ಇವರು ಯಫ್ಲೇಟನ ಮಕ್ಕಳು.
34 শেমরের ছেলেরা: অহি, রোগহ, যিহুব্ব ও অরাম।
೩೪ಅಹೀ, ರೋಹ್ಗ, ಹುಬ್ಬ, ಅರಾಮ್ ಎಂಬುವವರು ಶಮೆರನ ಮಕ್ಕಳು.
35 তাঁর ভাই হেলমের ছেলেরা: শোফহ, যিম্ন, শেলশ ও আমল।
೩೫ಇವನ ತಮ್ಮನಾದ ಹೆಲೆಮನ ಮಕ್ಕಳು, ಚೋಫಹ, ಇಮ್ನ, ಶೇಲೆಷ್, ಆಮಾಲ್ ಇವರೇ.
36 শোফহের ছেলেরা: সূহ, হর্ণেফর, শূয়াল, বেরী, যিম্র,
೩೬ಚೋಫಹನ ಮಕ್ಕಳು ಸೂಹ, ಹರ್ನೇಫೆರ್, ಶೂಗಾಲ್, ಬೇರೀ, ಇಮ್ರ,
37 বেৎসর, হোদ, শম্ম, শিলশ, যিত্রণ ও বেরা।
೩೭ಬೆಚೆರ್, ಹೋದ್, ಶಮ್ಮ, ಶಿಲ್ಷನು, ಇತ್ರಾನ್, ಬೇರ.
38 যেথরের ছেলেরা: যিফুন্নি, পিস্প ও অরা।
೩೮ಯೆಫುನ್ನೆ, ಪಿಸ್ಪ, ಅರಾ ಎಂಬುವವರು ಯೆತೆರನ ಮಕ್ಕಳು.
39 উল্লের ছেলেরা: আরহ, হন্নীয়েল ও রিৎসিয়।
೩೯ಆರಹ, ಹನ್ನಿಯೇಲ, ರಿಚ್ಯ ಇವರು ಉಲ್ಲನ ಮಕ್ಕಳು.
40 এরা সবাই আশেরের বংশধর—পরিবারের কর্তা, বাছাই করা লোকজন, সাহসী যোদ্ধা ও অসামান্য নেতা। তাদের বংশতালিকায় যুদ্ধে যাওয়ার জন্য প্রস্তুত 26,000 জন যোদ্ধা নথিভুক্ত হল।
೪೦ಇವರೆಲ್ಲರು ಆಶೇರ್ಯರಲ್ಲಿ ಗೋತ್ರಪ್ರಧಾನರೂ, ಯುದ್ಧಪ್ರವೀಣರಾದ ರಣವೀರರೂ ಮತ್ತು ಶ್ರೇಷ್ಠ ನಾಯಕರೂ ಆಗಿದ್ದರು. ಇವರ ವಂಶಾವಳಿಯ ಪಟ್ಟಿಯ ಪ್ರಕಾರ ಯುದ್ಧ ಪ್ರವೀಣರಾದ ಭಟರ ಸಂಖ್ಯೆ ಇಪ್ಪತ್ತಾರು ಸಾವಿರ.