< Louma 2 >
1 Na na: iyado! Di da eno dunu amo ea wadela: i hou dawa: lalu ema fofada: musa: dawa: bala? Di da amo dunu ilia wadela: i hou defele hamobeba: le, ilima fofada: sea, di gobele dima se dabe lama: ne fofada: nana.
೧ಆದ್ದರಿಂದ ಎಲೈ ಮನುಷ್ಯನೇ, ಮತ್ತೊಬ್ಬರಲ್ಲಿ ದೋಷ ಹುಡುಕುವ ನೀನು ಯಾವನಾದರೂ ಸರಿಯೇ, ನಿನಗೆ ಅದರಿಂದ ಕ್ಷಮೆಯಿಲ್ಲ. ಯಾಕೆಂದರೆ, ಮತ್ತೊಬ್ಬರಲ್ಲಿ ದೋಷ ಹುಡುಕುವುದರಿಂದ ನಿನ್ನನ್ನು ನೀನೇ ದೋಷಿಯೆಂದು ತೀರ್ಪುಮಾಡಿಕೊಂಡ ಹಾಗಾಯಿತು. ಮತ್ತೊಬ್ಬರಲ್ಲಿ ದೋಷವೆಣಿಸುವ ನೀನು ಆ ದೋಷಗಳನ್ನೇ ಮಾಡುತ್ತೀಯಲ್ಲಾ.
2 Gode da wadela: i hamosu dunuma fofada: sea, Ea hou da moloidafa. Amo ninia noga: le dawa:
೨ಅಂಥವುಗಳನ್ನು ಅನುಸರಿಸುವವರ ವಿಷಯದಲ್ಲಿ ದೇವರು ಕೊಡುವ ತೀರ್ಪು ಸತ್ಯಕ್ಕನುಸಾರವಾಗಿಯೇ ಇರುವುದೆಂದು ನಾವು ಬಲ್ಲೆವು.
3 Di da eno dunuma ilia wadela: i hou hamoiba: le fofada: sa. Be di da ili hou defele hamobeba: le, Godema fofada: su amo yolesima: ne, hobeamu logo hamedafa ba: mu.
೩ಇದನ್ನು ಪರಿಗಣಿಸು ಎಲೈ ಮನುಷ್ಯನೇ, ಅಂಥವುಗಳನ್ನು ಅನುಸರಿಸುವವರಲ್ಲಿ ದೋಷಹುಡುಕಿ, ನೀನು ಅವುಗಳನ್ನೇ ಮಾಡುತ್ತಿರುವಲ್ಲಿ ದೇವರ ದಂಡನೆಯ ತೀರ್ಪನ್ನು ತಪ್ಪಿಸಿಕೊಂಡೇನೆಂದು ಯೋಚಿಸುತ್ತೀಯೋ?
4 Di da Gode Ea asigidafa hou, hahawane hou amola hedolo hame se dabe iasu hou amo higabela: ? Gode da di Ema sinidigima: ne logo olelesa. Di da amo dawa: bela: ?
೪ಅಥವಾ ಆತನ ಅಪಾರವಾದ ದಯೆ, ಸಹನೆ, ದೀರ್ಘಶಾಂತಿಗಳನ್ನು ಕೇವಲವಾಗಿ ಯೋಚಿಸಿ, ನಿನ್ನ ಮನಸ್ಸು ಮಾರ್ಪಡಿಸಿಕೊಳ್ಳುವಂತೆ ಪ್ರೆರೇಪಿಸುವ ದೇವರ ಒಳ್ಳೆತನದ ಅರಿವು ನಿನಗಿಲ್ಲವೋ?
5 Be dia ge da ga: i dagoi amola dia dogo da ga: nasi hamoi dagoi. Amaiba: le, Gode Ea ougiwane moloidafa fofada: su Esoha, disu gobele dia se dabe iasu baligiliwane hahamoi dagoi ba: mu.
೫ನೀನು ನಿನ್ನ ಮೊಂಡತನವನ್ನೂ, ಪಶ್ಚಾತ್ತಾಪವಿಲ್ಲದ ಮನಸ್ಸನ್ನೂ ಅನುಸರಿಸಿ ನ್ಯಾಯತೀರ್ಪಿನ ದಿನದವರೆಗೂ ನಿನಗಾಗಿ ದೇವರ ಕೋಪವನ್ನು ಸಂಗ್ರಹಿಸಿಕೊಳ್ಳುತ್ತಾ ಇದ್ದೀ.
6 Gode da dunu huluane afae afae ea hawa: hamosu amo defele bidi imunu.
೬ದೇವರು ಪ್ರತಿಯೊಬ್ಬರಿಗೆ ಅವರವರ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುವನು,
7 Dunu mogili ilia da eso huluane hawa: moloidafa hamonana. Ilia hadigi hou, Godema nodosu hou amola eso huluane mae bogole Fifi Ahoanusu hogoi helesa. Gode da ilima eso huluane mae bogole Fifi Ahoanusu imunu. (aiōnios )
೭ಯಾರು ಪ್ರಶಂಸೆ, ಗೌರವ, ಮತ್ತು ಭ್ರಷ್ಟರಹಿತ ಜೀವನ ಹೊಂದಬೇಕೆಂದು ಒಳ್ಳೆಯದನ್ನು ಬೇಸರಗೊಳ್ಳದೆ ಮಾಡುತ್ತಾರೋ, ಅವರಿಗೆ ನಿತ್ಯಜೀವವನ್ನು ಕೊಡುವನು. (aiōnios )
8 Be eno dunu da ilisu hanai hou hamonana. Ilia hou moloidafa higale, wadela: i hou fawane fa: no bobogesa. Fedege agoane, Gode da Ea ougi se dabe iasu ilima sogadigimu.
೮ಯಾರು ಸ್ವಾರ್ಥಸಾಧಕರಾಗಿದ್ದು, ಸತ್ಯವನ್ನು ಅನುಸರಿಸದೆ ಅನ್ಯಾಯವನ್ನು ಅನುಸರಿಸುತ್ತಾರೋ, ಅವರ ಮೇಲೆ ದೇವರ ಕೋಪ ಮತ್ತು ರೌದ್ರಗಳು ಬರುವವು.
9 Wadela: i hamosu dunu, Yu dunu hidadea amola Dienadaile dunu huluane da se bagade nabimu.
೯ಯೆಹೂದ್ಯರಿಗೆ ಮೊದಲು ಅನಂತರ ಗ್ರೀಕರಿಗೆ, ಕೆಟ್ಟದ್ದನ್ನು ಅನುಸರಿಸುವ ಪ್ರತಿಯೊಬ್ಬ ಮನುಷ್ಯನ ಮೇಲೂ ಸಂಕಟವೂ, ಯಾತನೆಯೂ ಬರುವವು.
10 Be hou moloidafa hamosu dunu, Yu dunu hidadea amola Dienadaile dunu, ilima Gode da Ea hadigi, nodosu amola olofosu imunu.
೧೦ಯೆಹೂದ್ಯರಿಗೆ ಮೊದಲು, ಅನಂತರ ಗ್ರೀಕರಿಗೆ, ಒಳ್ಳೆಯದನ್ನು ಅನುಸರಿಸುವ ಪ್ರತಿಯೊಬ್ಬನಿಗೆ ಗೌರವವೂ, ಮಾನವೂ, ಮನಶಾಂತಿಯೂ ಉಂಟಾಗುವವು.
11 Gode da dunu huluanedafa defele ilima fofada: sa.
೧೧ದೇವರಲ್ಲಿ ಪಕ್ಷಪಾತವಿಲ್ಲ.
12 Dienadaile dunu da Mousese ea Sema hame dawa: Ilia da Sema giadofaiba: le hame, be wadela: i hou hamobeba: le Godema afafane, yolesi dagoi ba: sa. Be Yu dunu ilia Mousese ea Sema dawa: Amaiba: le, amo Sema ilegei defele, Gode da ilima fofada: mu.
೧೨ಧರ್ಮಶಾಸ್ತ್ರವಿಲ್ಲದೆ ಪಾಪಮಾಡಿದವರು ಧರ್ಮಶಾಸ್ತ್ರವಿಲ್ಲದವರಾಗಿ ನಾಶಹೊಂದುವರು; ಮತ್ತು ಧರ್ಮಶಾಸ್ತ್ರಕ್ಕನುಸಾರವಾಗಿದ್ದು ಪಾಪಮಾಡಿದವರು ಧರ್ಮಶಾಸ್ತ್ರಕ್ಕನುಸಾರವಾಗಿ ತೀರ್ಪನ್ನು ಹೊಂದುವರು.
13 Gode Ea Sema gega nababeba: le, dunu da bu afadenene moloidafa hamoi hame ba: sa. Be dunu da Sema nababeba: le, noga: le defele hamosea, amo dunu Gode da hahawane ba: mu.
೧೩ಧರ್ಮಶಾಸ್ತ್ರವನ್ನು ಕೇಳಿದ ಮಾತ್ರದಿಂದಲೇ ಯಾರೂ ದೇವರ ಸನ್ನಿಧಿಯಲ್ಲಿ ನೀತಿವಂತರಾಗುವುದಿಲ್ಲ; ಅದನ್ನು ಅನುಸರಿಸುವವರೇ ನೀತಿವಂತರೆಂದು ನಿರ್ಣಯಿಸಲ್ಪಡುವರು.
14 Dienadaile dunu da Sema hame dawa: Be ilia asigi dawa: su ganodini hanaiba: le, Sema sia: defele hamosea, ilia hou moloidafa amola hou wadela: iwane, amo da hisu hisu ilia dawa: , amo olelesa. Be Mousese ea Sema dedei ilia hame dawa:
೧೪ಧರ್ಮಶಾಸ್ತ್ರವಿಲ್ಲದ ಅನ್ಯಜನರು ಸ್ವಾಭಾವಿಕವಾಗಿ ಧರ್ಮಶಾಸ್ತ್ರದಲ್ಲಿ ಹೇಳಿದಂತೆ ನಡೆದುಕೊಂಡರೆ ಅವರು ಧರ್ಮಶಾಸ್ತ್ರವಿಲ್ಲದವರಾಗಿದ್ದರೂ, ತಮಗೆ ತಾವೇ ಧರ್ಮಶಾಸ್ತ್ರವಾಗಿದ್ದಾರೆ.
15 Ilia hou hamobeba: le, Sema da fedege agoane ilia dogo ganodini dedene legei dagoi olelesa. Ilia asigi dawa: su amo ganodini dawa: beba: le, amo hou da dafawane ilia da olelesa. Hou afae hamobeba: le, ilia asigi dawa: su da ilima diwaneya udidisa. Hou eno hamobeba: le, ilia asigi dawa: su da ilima abalomu.
೧೫ಇದರಿಂದ ಅವರು ಧರ್ಮಶಾಸ್ತ್ರದ ಮುಖ್ಯ ತಾತ್ಪರ್ಯ ತಮ್ಮ ಹೃದಯದಲ್ಲಿ ಬರೆದಿದೆ ಎಂಬುದನ್ನು ತೋರ್ಪಡಿಸುತ್ತಾರೆ. ಇದಕ್ಕೆ ಅವರ ಮನಸ್ಸು ಸಹ ಸಾಕ್ಷಿ ನುಡಿಯುತ್ತದೆ; ಅವರ ಆಲೋಚನೆಗಳು ವಾದಿಪ್ರತಿವಾದಿಗಳಂತೆ, ಇದು ತಪ್ಪೆಂದು ಅದು ತಪ್ಪಲ್ಲವೆಂದು ಹೇಳುತ್ತದೆ.
16 Fofada: su Esoga, Gode da Ea Sia: Ida: iwane defele, Yesu Gelesu Ea lafidili dunu huluane ilia asigi dawa: su ilia dogo ganodini wamo sali, amoma fofada: sea, amo hou defele da ba: mu. Na da Gode Ea Sia: Ida: iwane Gala agoane olelesa.
೧೬ನಾನು ಸಾರುವ ಸುವಾರ್ತೆಯಲ್ಲಿ ಬೋಧಿಸಿರುವ ಪ್ರಕಾರ ದೇವರು ಯೇಸು ಕ್ರಿಸ್ತನ ಮೂಲಕವಾಗಿ ಮನುಷ್ಯರ ಗುಟ್ಟುಗಳನ್ನು ಹಿಡಿದು ವಿಚಾರಿಸುವ ದಿನದಂದು ಸೂಚಿಸುತ್ತದೆ. ಆ ದಿನದಲ್ಲಿ ಇದೆಲ್ಲಾ ತಿಳಿದು ಬರುವುದು.
17 Di amola! Di da Yu dunu! Di da amane sia: sa, “Na da Yu dunu”! Di da Sema dafawaneyale dawa: sa. Di hidale Gode noga: le dawa: sia: sa.
೧೭ನೀನು ಯೆಹೂದ್ಯನೆನಸಿಕೊಂಡು, ಧರ್ಮಶಾಸ್ತ್ರದಲ್ಲಿ ಭರವಸವಿಟ್ಟು, ದೇವರಲ್ಲಿ ಹೆಮ್ಮೆಯಿಂದ ಸಂತೋಷಿಸಿ,
18 Di da Gode Ea hanai hamoma: ne liligi dawa: Di da Gode Ea Sema dawa: beba: le, hou moloidafa ilegemusa: dawa:
೧೮ಧರ್ಮಶಾಸ್ತ್ರದಿಂದ ಉಪದೇಶವನ್ನು ಹೊಂದಿ, ಆತನ ಚಿತ್ತವನ್ನು ಬಲ್ಲವನೂ, ಇದು ತಕ್ಕದ್ದು ಅದು ತಕ್ಕದ್ದಲ್ಲವೆಂದು ವಿವೇಚಿಸುವವನೂ ಆಗಿದ್ದೀಯೆ.
19 Di da si dofoi dunuma logo olelemusa: defele esala, amo dawa: lala. Dia da dunu gasi ganodini esala, ilima hadigi olelemusa: defele esala, amo di dawa: lala.
೧೯ಧರ್ಮಶಾಸ್ತ್ರದಲ್ಲಿ ಜ್ಞಾನಸತ್ಯಗಳ ಸ್ವರೂಪವೇ ನಿನಗೆ ತಿಳಿದಿರುವುದರಿಂದ ಕುರುಡರಿಗೆ ದಾರಿತೋರಿಸುವವನೂ, ಕತ್ತಲೆಯಲ್ಲಿರುವವರಿಗೆ ಬೆಳಕೂ,
20 Dia da gagaoui dunu amola hame dawa: su dunu, ilima houdafa olelemusa: defele esala, amo dawa: lala. Dia da Sema amo ganodini da dawa: su hou huluanedafa amola dafawane hou huluanedafa dialebe, amo dawa: lala.
೨೦ತಿಳಿವಳಿಕೆಯಿಲ್ಲದವರಿಗೆ ಶಿಕ್ಷಕನೂ, ಬಾಲಕರಿಗೆ ಉಪಾಧ್ಯಾಯನೂ, ಆಗಿದ್ದೇನೆಂದು ನಂಬಿಕೊಂಡಿದ್ದಿಯೇ,
21 Dia da eno dunuma olelebeba: le, abuliba: le dima di gobele hame olelesala: ? Dia eno dunuma, “Mae wamolama!” sia: sa. Be dia da wamolasu dawa: bela: ?
೨೧ಮತ್ತೊಬ್ಬನಿಗೆ ಉಪದೇಶ ಮಾಡುವ ನಿನಗೆ ನೀನೇ ಉಪದೇಶಮಾಡಿಕೊಳ್ಳದೆ ಇದ್ದೀಯೋ? ಕದಿಯಬಾರದೆಂದು ಬೋಧಿಸುವ ನೀನೇ ಕಳ್ಳತನ ಮಾಡುತ್ತಿಯೇನು?
22 Dia eno dunuma, “Inia uda mae adole lama!” sia: sa. Be dia da inia uda adole lasu hou dawa: bela: ? Dia loboga hamoi ogogosu ‘gode’ higasa. Be dia Debolo Diasu liligi wamolasala: ?
೨೨ಹಾದರ ಮಾಡಬಾರದೆಂದು ಹೇಳುವ ನೀನೇ ವ್ಯಭಿಚಾರ ಮಾಡುತ್ತೀಯೋ? ವಿಗ್ರಹಗಳನ್ನು ವಿರೋಧಿಸುವ ನೀನು ದೇವಾಲಯವನ್ನೇ ದೋಚುತ್ತಿಯೇನು?
23 Dia da hidale Gode Ea Sema lalegagui dagoi sia: sa. Be dia da Gode Ea Sema wadela: beba: le, dia Gode Ea Dio wadela: sa.
೨೩ಧರ್ಮಶಾಸ್ತ್ರದಲ್ಲಿ ಹೆಮ್ಮೆಯಿಂದ ಹೆಚ್ಚಳಪಡುವ ನೀನು ಧರ್ಮಶಾಸ್ತ್ರವನ್ನು ಮೀರಿ ನಡೆದು ದೇವರನ್ನು ಅವಮಾನಪಡಿಸುತ್ತೀಯೋ?
24 Gode Sia: da agoane dedei diala, “Dilia Yu dunu da wadela: i hou hamonanebeba: le, Dienadaile dunu da Godema lasogole sia: sa!”
೨೪“ನಿಮ್ಮ ದೆಸೆಯಿಂದ ಅನ್ಯಜನರ ಮಧ್ಯದಲ್ಲಿ ದೇವರ ನಾಮವು ದೂಷಣೆಗೆ ಗುರಿಯಾಗುತ್ತಿದೆಂದು” ಬರೆದಿದೆಯಲ್ಲಾ.
25 Dia da Sema mae giadofale hamonana ganiaba, dia gadofo damui da bai galebe ba: la: loba. Be dia Sema hame naba ganiaba, dia gadofo hame damumu da defea galula: loba.
೨೫ನೀನು ಧರ್ಮಶಾಸ್ತ್ರಕ್ಕನುಸಾರವಾಗಿ ನಡೆಯುವವನಾದರೆ ಸುನ್ನತಿಯೆಂಬ ಸಂಸ್ಕಾರವು ನಿನಗೆ ಪ್ರಯೋಜನಕರವಾಗಿದೆ; ಆದರೆ ನೀನು ಧರ್ಮಶಾಸ್ತ್ರವನ್ನು ಮೀರಿ ನಡೆಯುವವನಾಗಿದ್ದರೆ ನಿನಗೆ ಸುನ್ನತಿಯಿದ್ದರೂ ಇಲ್ಲದಂತಾಯಿತು.
26 Adi dawa: bela: ? Dienadaile gadofo hame damui dunu da Sema huluane mae giadofale hamosea, Gode da amo dunu gadofo damui dunu defele ba: ma: bela: ?
೨೬ಹೀಗಿರಲಾಗಿ ಸುನ್ನತಿಯಿಲ್ಲದವನು ಧರ್ಮಶಾಸ್ತ್ರದ ನೇಮಗಳ ಪ್ರಕಾರ ನಡೆದರೆ ಸುನ್ನತಿಯಿಲ್ಲದವನಾಗಿದ್ದರೂ ಸುನ್ನತಿಯಿದ್ದವನಂತೆ ಎಣಿಸಲ್ಪಡುವುದಿಲ್ಲವೇ?
27 Dilia Yu dunu da Sema dedei gala amola dilia gadofo damui gala. Be dilia da Sema giadofabeba: le, Gode da amo mae dawa: le., dilima Sema defele medoma: ne fofada: mu. Be Dienadaile dunu, ilia Sema hame dawa: amola gadofo hame damui. Be ilia hou da dilia hou baligiwane ba: mu. Bai mogili ilia Sema udigili nabawane hamosa.
೨೭ನೀವು ಸುನ್ನತಿ ಮಾಡಿಸಿಕೊಂಡಿದ್ದಿರಿ; ಧರ್ಮಶಾಸ್ತ್ರವನ್ನು ಇಟ್ಟುಕೊಂಡಿದ್ದೀರಿ; ಆದರೂ ಅದನ್ನು ಮೀರಿ ನಡೆಯುತ್ತೀರಿ. ಹೀಗಿರಲಾಗಿ, ಶಾರೀರಿಕವಾಗಿ ಸುನ್ನತಿಯನ್ನು ಮಾಡಿಸಿಕೊಳ್ಳದಿದ್ದರೂ ಸ್ವಾಭಾವಿಕವಾಗಿ ಧರ್ಮಶಾಸ್ತ್ರವನ್ನು ಅನುಸರಿಸಿ ನಡೆಯುವವರು ಸುನ್ನತಿ ಮಾಡಿಸಿಕೊಂಡಿರುವ ನಿಮಗೆ ತೀರ್ಪುಕೊಡುತ್ತಾರೆ.
28 Dunu da ea gadofo damui dagoiba: le, Yudafa dunu hame hamosa. E da gadofo damui dagoiba: le, dabuagado fawane Yu dunu hamoi.
೨೮ಹೊರಗೆ ಮಾತ್ರ ಯೆಹೂದ್ಯನಾಗಿರುವವನು ಯೆಹೂದ್ಯನಲ್ಲ; ಮತ್ತು ಹೊರಗೆ ಶರೀರದಲ್ಲಿ ಮಾತ್ರ ಮಾಡಿರುವ ಸುನ್ನತಿಯು ಸುನ್ನತಿಯಲ್ಲ.
29 Be Yu dunudafa da ea dogo ganodini Yu dunu hamoi. Fedege agoane, ea dogo gadofo damui dagoiba: le, Yu dunudafa hamosa. Amo da Sema dedei amoga hame hamosa, be Gode Ea A: silibu Hadigidafa Gala amoga hamosa. Agoaiwane dunu da dunuma nodosu mae lale, Gode Ea nodosu fawane ba: sa.
೨೯ಆದರೆ ಆಂತರಿಕವಾಗಿ ಯೆಹೂದ್ಯನಾಗಿರುವವನೇ ಯೆಹೂದ್ಯನು; ಮತ್ತು ಸುನ್ನತಿಯನ್ನು ಹೃದಯದಲ್ಲಿ ಹೊಂದಿರುವವನೇ ಸುನ್ನತಿಯುಳ್ಳವನು. ಇದು ಬಾಹ್ಯಾಚಾರಕ್ಕೆ ಸಂಬಂಧಪಟ್ಟದ್ದಲ್ಲ, ಆತ್ಮಸಂಬಂಧಪಟ್ಟದ್ದೇ; ಇಂಥ ಮನುಷ್ಯನಿಗೆ ಬರುವ ಪ್ರಶಂಸೆಯು, ದೇವರಿಂದಲೇ ಹೊರತು ಮನುಷ್ಯರಿಂದ ಬರುವುದಿಲ್ಲ.