< 1 Sa:miuele 15 >
1 Sa: miuele da Soloma amane sia: i, “Hina Gode da na amo dia Isala: ili dunu ilia hina bagade mogiligale ilegei da susuligi sogadigima: ne asunasi. Waha, dia Hina Gode Bagadedafa Ea adobe nabima!
೧ಸಮುವೇಲನು ಸೌಲನಿಗೆ, “ಯೆಹೋವನು ನಿನ್ನನ್ನು ತನ್ನ ಪ್ರಜೆಗಳಾದ ಇಸ್ರಾಯೇಲರ ಮೇಲೆ ಅರಸನನ್ನಾಗಿ ಅಭಿಷೇಕಿಸುವುದಕ್ಕೋಸ್ಕರ ನನ್ನನ್ನೇ ಕಳುಹಿಸಿದನಲ್ಲಾ; ಆತನು ಈಗ ಹೇಳುವುದನ್ನು ಕೇಳು.
2 Hina Gode da A: malege dunuma se dabe imunu. Bai Isala: ili dunu da Idibidi soge fisili, gadili ahoanoba, A:malege ilia aowalali da ilima gegei.
೨ಸೇನಾಧೀಶ್ವರನಾದ ಯೆಹೋವನು ನಿನಗೆ, ‘ಇಸ್ರಾಯೇಲರು ಐಗುಪ್ತದಿಂದ ಬರುತ್ತಿರುವಾಗ ದಾರಿಯಲ್ಲಿ ಅಮಾಲೇಕ್ಯರು ಅವರಿಗೆ ವಿರೋಧವಾಗಿ ನಿಂತು ತೊಂದರೆಪಡಿಸಿದ್ದನ್ನು ನೆನಪುಮಾಡಿಕೊಂಡು ನಾನು ಅವರಿಗೆ ಮುಯ್ಯಿತೀರಿಸುವೆನು.
3 Dilia! Asili, A:malege dunuma doagala: le, liligi ilia galebe amo huluane wadela: lesima. Liligi afae mae yolesili, dunu amola uda, mano, mano dudubu, bulamagau, sibi, ga: mele amola dougi, huluanedafa fane lelegele ebelema!”
೩ಈಗ ನೀನು ಹೋಗಿ ಅವರನ್ನು ಸೋಲಿಸಿ ಅವರಿಗಿರುವುದನ್ನೆಲ್ಲಾ ಸಂಪೂರ್ಣವಾಗಿ ಹಾಳುಮಾಡು. ಗಂಡಸರನ್ನೂ, ಹೆಂಗಸರನ್ನೂ, ಮಕ್ಕಳನ್ನೂ, ಶಿಶುಗಳನ್ನೂ, ಎತ್ತು, ಕುರಿ, ಕತ್ತೆ, ಒಂಟೆ, ಇವುಗಳನ್ನೂ ಕನಿಕರವಿಲ್ಲದೆ ಕೊಂದುಹಾಕು ಎಂದು ಹೇಳುತ್ತಾನೆ’” ಅಂದನು.
4 Solo da ea dadi gagui dunu huluane Dileme moilaiga wele sia: ne guda: le, abedei. Isala: ili dadi gagui dunu da 200,000 agoane ba: i, amola Yuda dadi gagui dunu da 10,000 agoane ba: i.
೪ಸೌಲನು ತೆಲಾಯೀಮಿನಲ್ಲಿ ಸೈನ್ಯವನ್ನು ಕೂಡಿಸಿ ಲೆಕ್ಕಿಸಲು ಎರಡು ಲಕ್ಷ ಕಾಲಾಳುಗಳು ಇದ್ದರು; ಯೆಹೂದ್ಯರು ಹತ್ತು ಸಾವಿರ ಜನರು ಇದ್ದರು.
5 Amalalu, Solo amola ea dunu da A: malege moilai afae amoga hano hai logoga asili, logoa legei dialu.
೫ಅವನು ಇವರೊಡನೆ ಅಮಾಲೇಕ್ಯರ ರಾಜಧಾನಿಯ ಬಳಿಗೆ ಹೋಗಿ ಅಲ್ಲಿನ ಒಂದು ತಗ್ಗಿನಲ್ಲಿ ಹೊಂಚುಹಾಕುತ್ತಿದ್ದನು.
6 Ginaide dunu da A: malege dunu gilisibi ba: i. Be Isala: ili dunu da Idibidi fisili ga ahoanoba, Ginaide ilia aowalali da ilima asigiba: le, fidi. Amaiba: le, Solo da ilima sisane sia: i, “Na da dili amola A: malege dunu gilisili fane legesa: besa: le, ili yolesima!” Amaiba: le, Ginaide dunu da A: malege dunu yolesili, asi.
೬ಆದರೆ ಅವನು ಕೇನ್ಯರಿಗೆ, “ನೀವು ಅಮಾಲೇಕ್ಯರನ್ನು ಬಿಟ್ಟುಹೋಗಿರಿ; ಇಲ್ಲವಾದರೆ ನೀವೂ ಅವರೊಡನೆ ನಾಶವಾದೀರಿ. ಇಸ್ರಾಯೇಲರು ಐಗುಪ್ತದಿಂದ ಬರುತ್ತಿದ್ದಾಗ ನೀವು ಅವರಿಗೆ ದಯೆತೋರಿಸಿದಿರಲ್ಲಾ” ಎಂದು ಹೇಳಿಕಳುಹಿಸಿದನು. ಅದರಂತೆಯೇ ಅವರು ಅಮಾಲೇಕ್ಯರನ್ನು ಬಿಟ್ಟುಹೋದರು.
7 Solo da A: malege dunu hasali. Ilia gegesu da Ha: fila sogega muni gegegena ahoana, Sioua hafoga: i sogega doaga: i. (Sioua da Idibidi sogega gusudili ba: i).
೭ಆಗ ಸೌಲನು ಅಮಾಲೇಕ್ಯರನ್ನು ಹವೀಲಾ ಪ್ರಾಂತ್ಯದಿಂದ ಐಗುಪ್ತದ ಪೂರ್ವದಿಕ್ಕಿನಲ್ಲಿರುವ ಶೂರಿನವರೆಗೆ ಅವರನ್ನು ಸಂಹರಿಸುತ್ತಾ ಹೋದನು.
8 E da A: malege hina bagade A: iga: ge mae medole legele gagui, be ea fi dunu eno huluane medole lelegei.
೮ಅವರ ಅರಸನಾದ ಅಗಾಗನನ್ನು ಜೀವಂತವಾಗಿ ಹಿಡಿದು, ಎಲ್ಲಾ ಜನರನ್ನು ಕತ್ತಿಯಿಂದ ಸಂಹರಿಸಿದನು.
9 Be Solo amola ea dunu da A: iga: ge hame medole legei amola ilia da noga: idafa sibi, bulamagau, bulamagau mano amola sibi mano hame medole legei. Amola liligi noga: idafa ilia hame wadela: lesi. Ilia wadela: i amola hamedei liligi fawane wadela: lesisi.
೯ಸೌಲನೂ ಮತ್ತು ಇಸ್ರಾಯೇಲರೂ ಅಗಾಗನನ್ನೂ, ಉತ್ತಮವಾದ ಕುರಿದನಗಳನ್ನೂ, ಕುರಿಮರಿಗಳನ್ನೂ, ಕೊಬ್ಬಿದ ಪಶುಗಳನ್ನೂ, ಶ್ರೇಷ್ಠವಾದ ಎಲ್ಲಾ ಪದಾರ್ಥಗಳನ್ನೂ ನಾಶಮಾಡಲು ಮನಸ್ಸಿಲ್ಲದೆ ಉಳಿಸಿ ಪ್ರಯೋಜನವಿಲ್ಲದಂಥ ಹೀನವಾದವುಗಳನ್ನೆಲ್ಲಾ ನಾಶಮಾಡಿಬಿಟ್ಟರು.
10 Hina Gode da Sa: miuelema amane sia: i,
೧೦ಯೆಹೋವನು ಸಮುವೇಲನಿಗೆ, “ಸೌಲನನ್ನು ಅರಸನನ್ನಾಗಿ ಮಾಡಿದ್ದಕ್ಕೆ ಈಗ ವಿಷಾದಿಸುತ್ತೇನೆ. ಅವನು ನನ್ನನ್ನು ಬಿಟ್ಟುಬಿಟ್ಟನು; ನನ್ನ ಆಜ್ಞೆಗಳನ್ನು ನೆರವೇರಿಸಲಿಲ್ಲ” ಎಂದು ಹೇಳಿದನು.
11 “Na da Soloma hina hawa: hamosu iabeba: le higasa. E da Nama baligi fa: i amola Na hamoma: ne sia: i huluane giadofai.” Sa: miuele da ougi bagade ba: i. E da gasia Godema dini iana hadigi.
೧೧ಸಮುವೇಲನು ಕೋಪಗೊಂಡು ರಾತ್ರಿಯೆಲ್ಲಾ ಯೆಹೋವನಿಗೆ ಮೊರೆಯಿಟ್ಟನು.
12 Golale, hahabedafa, e da Solo hogola asi. Be Solo da Gamele Goumi amoga asi sia: be, e da nabi. Amogawi, Solo da ea hamoi dawa: loma: ne igi wanonesilalu, Giliga: le moilaiga asi.
೧೨ಸಮುವೇಲನು ಬೆಳಿಗ್ಗೆ ಎದ್ದು ಸೌಲನನ್ನು ನೋಡುವುದಕ್ಕೆ ಹೊರಟಾಗ ಅವನಿಗೆ, “ಸೌಲನು ಕರ್ಮೆಲಿಗೆ ಹೋಗಿ ಅಲ್ಲಿ ತನಗೋಸ್ಕರ ಒಂದು ಜ್ಞಾಪಕಸ್ತಂಭವನ್ನು ನಿಲ್ಲಿಸಿ, ಅಲ್ಲಿಂದ ಗಟ್ಟಾ ಇಳಿದು ಗಿಲ್ಗಾಲಿಗೆ ಹೋದನು” ಎಂಬ ವರ್ತಮಾನವು ಬಂದದ್ದರಿಂದ
13 Amoga asili, Sa: miuele da Soloma heda: le, Solo da ema amane sia: i, “Sa: miuele! Hina Gode da dima hahawane dogolegele hamomu da defea! Na da Hina Gode Ea sia: defele hamoi!”
೧೩ಸಮುವೇಲನು ಅಲ್ಲಿಗೆ ಹೋದನು. ಸೌಲನು ಅವನನ್ನು ಕಂಡು, “ಯೆಹೋವನು ನಿನ್ನನ್ನು ಆಶೀರ್ವದಿಸಲಿ; ನಾನು ಆತನ ಅಪ್ಪಣೆಯನ್ನು ನೆರವೇರಿಸಿದೆನು” ಅಂದನು.
14 Sa: miuele da adole ba: i, “Amaiba: le, abuliba: le na da bulamagau gona: be amola sibi ga: ga: be nabasala: ?
೧೪ಅದಕ್ಕೆ ಸಮುವೇಲನು, “ಹಾಗಾದರೆ ಇದೇನು? ಕುರಿಗಳ ಕೂಗು ನನ್ನ ಕಿವಿಗೆ ಬೀಳುತ್ತದೆ, ದನಗಳ ಶಬ್ದವು ನನಗೆ ಕೇಳಿಸುತ್ತದೆ” ಎನ್ನಲು
15 Solo da dabe adole i, “Na dunu ilia da amo liligi A: malege dunu ilima samogele lai. Ilia da sibi amola bulamagau noga: idafa amo dia Hina Godema gobele salimusa: modalesili, oda amo huluane gugunufinisi dagoi.”
೧೫ಸೌಲನು, “ಜನರು ನಿನ್ನ ದೇವರಾದ ಯೆಹೋವನಿಗೆ ಯಜ್ಞವನ್ನು ಅರ್ಪಿಸುವುದಕ್ಕಾಗಿ ಅಮಾಲೇಕ್ಯರ ಕುರಿದನಗಳಲ್ಲಿ ಉತ್ತಮವಾದವುಗಳನ್ನು ಉಳಿಸಿ ತಂದಿದ್ದಾರೆ; ಮಿಕ್ಕಾದವುಗಳನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡಿದೆವು” ಎಂದು ಉತ್ತರಕೊಟ್ಟನು.
16 Sa: miuele da amane sia: i, “Yolema! Amalu, na da dima Hina Gode Ea nama gasia adoi amo na dima adomu.” Solo e amane sia: i, “Nama adole ima!”
೧೬ಆಗ ಸಮುವೇಲನು ಅವನಿಗೆ, “ಅದಿರಲಿ; ಯೆಹೋವನು ಕಳೆದ ರಾತ್ರಿಯಲ್ಲಿ ನನಗೆ ಹೇಳಿದ್ದನ್ನು ತಿಳಿಸುತ್ತೇನೆ ಕೇಳು” ಎನ್ನಲು ಅವನು, “ಹೇಳು” ಅಂದನು.
17 Sa: miuele da bu adole i, “Di da musa: hamedei dunu disu dawa: lalu. Be di da wali Isala: ili fi dunu huluane ilima ouligisu dunu esala. Hina Gode da dima Isala: ili dunu ilia hina bagade hamoma: ne, susuligi sogagala: le, mogili gagai.
೧೭ಸಮುವೇಲನು, “ನೀನು ನಿನ್ನ ದೃಷ್ಟಿಯಲ್ಲಿ ಅಲ್ಪನಾಗಿದ್ದರೂ ಯೆಹೋವನು ನಿನಗೆ ಇಸ್ರಾಯೇಲ್ಯರಲ್ಲಿ ರಾಜ್ಯಾಭಿಷೇಕ ಮಾಡಿದ್ದರಿಂದ ನೀನು ಎಲ್ಲಾ ಕುಲಗಳಿಗೆ ಶಿರಸ್ಸನ್ನಾಗಿ ಮಾಡಿದನು.
18 Amola E da dia wadela: idafa A: malege dunu huluane amo gugunufinisima: ne sia: si.
೧೮ಆತನು ನಿನಗೆ, ‘ಹೊರಟು ಹೋಗಿ ದುಷ್ಟರಾದ ಅಮಾಲೇಕ್ಯರೊಡನೆ ಯುದ್ಧಮಾಡಿ ಅವರೆಲ್ಲರನ್ನೂ ಸಂಪೂರ್ಣವಾಗಿ ನಾಶಮಾಡು’ ಎಂದು ಹೇಳಿದನು.
19 Amaiba: le, dia da abuliba: le Ea sia: hame nababela: ? Dia da abuliba: le momabo nagoma: ia asili liligi uasuli lidibala: ? Dia da abuliba: le Hina Gode Ea hahawane hame ba: ma: ne hamobela: ?”
೧೯ಆದರೆ ನೀನು ಯೆಹೋವನ ಮಾತನ್ನು ಕೇಳದೆ ಕೊಳ್ಳೆಗಾಗಿ ಮನಸೋತು ಆತನಿಗೆ ದ್ರೋಹಮಾಡಿದ್ದೇಕೆ?” ಅಂದನು.
20 Solo da bu adole i, “Na da Hina Gode Ea sia: i defele hamoi. Na da Ea sia: i defele asili, hina bagade A: iga: ge goeguda: oule misini amola A: malege dunu huluane fane lelegei.
೨೦ಆಗ ಸೌಲನು ಸಮುವೇಲನಿಗೆ, “ಏನು? ನಾನು ಯೆಹೋವನ ಮಾತನ್ನು ಕೇಳಲಿಲ್ಲವೋ? ಆತನು ಕಳುಹಿಸಿದಲ್ಲಿಗೆ ಹೋಗಿ ಅಮಾಲೇಕ್ಯರನ್ನೆಲ್ಲಾ ಸಂಹರಿಸಿ ಅವರ ಅರಸನಾದ ಅಗಾಗನನ್ನು ಹಿಡಿದು ತಂದೆನು.
21 Be na dunu ilia da sibi amola bulamagau noga: idafa, ilia samogele hame medole legei. Be ilia da amo dia Hina Godema gobele salimusa: , Giliga: lega goeguda: oule misi.”
೨೧ಆದರೆ ಜನರು ಸಂಪೂರ್ಣವಾಗಿ ಸಂಹರಿಸಬೇಕಾದ ಕೊಳ್ಳೆಯಲ್ಲಿ ಉತ್ತಮವಾದ ಕುರಿದನಗಳನ್ನು ನಿನ್ನ ದೇವರಾದ ಯೆಹೋವನಿಗೆ ಗಿಲ್ಗಾಲಿನಲ್ಲಿ ಯಜ್ಞಸಮರ್ಪಣೆಮಾಡುವುದಕ್ಕಾಗಿ ಉಳಿಸಿ ತಂದರು” ಎಂದು ಉತ್ತರಕೊಟ್ಟನು.
22 Sa: miuele da amane sia: i. “Hina Gode Ea baligisu hamoma: ne hanai amo da habola: ? Nabasu hou o Godema iasu amola gobele salasu hou amola: ? Hina Godema nabasu hou da ema noga: idafa sibi gobele salasu hou baligisa.
೨೨ಅದಕ್ಕೆ ಸಮುವೇಲನು, “ಯೆಹೋವನು ವಿಧೇಯತ್ವವನ್ನು ಮೆಚ್ಚುವಷ್ಟು ಯಜ್ಞಹೋಮಗಳಿಗೆ ಮೆಚ್ಚುತ್ತಾನೋ? ಯಜ್ಞವನ್ನರ್ಪಿಸುವುದಕ್ಕಿಂತ ಆತನ ಆಜ್ಞಾಪಾಲನೆ ಉತ್ತಮವಾಗಿದೆ; ಟಗರುಗಳ ಕೊಬ್ಬಿಗಿಂತ ವಿಧೇಯತೆ ವಿಶಿಷ್ಟವಾದುದು.
23 Ema odaga: su hou da wadela: i gabi dawa: su hou defele gala. Amola dodona: gi hou da wadela: idafa loboga hamoi ogogosu ‘gode’ ilima nodone sia: ne gadosu hou defele gala. Di da Hina Gode Ea sia: i higale, amo hame nababeba: le, E da di hina bagade hamomu logo hedofai dagoi.”
೨೩ಅವಿಧೇಯತ್ವವು ಮಂತ್ರತಂತ್ರಗಳಷ್ಟೇ ಕೆಟ್ಟದ್ದಾಗಿರುವುದು. ಹಟವು ಮಿಥ್ಯಾಭಕ್ತಿಗೂ, ವಿಗ್ರಹಾರಾಧನೆಗೂ ಸಮಾನವಾಗಿರುವುದು. ನೀನು ಯೆಹೋವನ ಮಾತಿನಂತೆ ಅನುಸರಿಸಿ ನಡೆಯದೆ ಇದ್ದುದರಿಂದ ಆತನು ನಿನ್ನನ್ನು ಅರಸುತನದಿಂದ ನಿವಾರಿಸಿಬಿಟ್ಟಿದ್ದಾನೆ” ಎಂದು ಹೇಳಿದನು.
24 Solo da bu adole i, “Dafawane! Na da wadela: le hamoi dagoi. Na da Hina Gode Ea hamoma: ne sia: i amola dia nama adoi amo giadofai dagoi. Na da nama fa: no bobogei dunu ilima beda: iba: le, ilia hanaiga fawane hamoi.
೨೪ಸೌಲನು ಸಮುವೇಲನಿಗೆ, “ನಾನು ಯೆಹೋವನ ಮತ್ತು ನಿನ್ನ ಆಜ್ಞೆಗಳನ್ನು ಮೀರಿ ಪಾಪಮಾಡಿದ್ದೇನೆ; ಜನರಿಗೆ ಹೆದರಿ ಅವರ ಮಾತನ್ನು ಕೇಳಿದೆನು.
25 Be waha! Na dima edegesa! Na wadela: i hou gogolema: ne olofoma. Amola na da Hina Godema nodone sia: ne gadomusa: , dia na Giliga: lega sigi masa.”
೨೫ನೀನು ದಯವಿಟ್ಟು ನನ್ನ ಪಾಪವನ್ನು ಕ್ಷಮಿಸು; ನಾನು ಯೆಹೋವನನ್ನು ಆರಾಧಿಸುವಂತೆ ಹಿಂದಿರುಗಿ ನನ್ನ ಜೊತೆಯಲ್ಲಿ ಬಾ” ಎಂದು ಅವನನ್ನು ಬೇಡಿಕೊಂಡನು.
26 Be Sa: miuele da bu adole i, “Na da ani hame buhagimu. Bai di da Hina Gode Ea sia: i higale, hame nababeba: le, E da di hina bagade hamomu logo hedofai dagoi.”
೨೬ಅದಕ್ಕೆ ಸಮುವೇಲನು, “ನಾನು ಹಿಂದಿರುಗಿ ನಿನ್ನ ಜೊತೆಯಲ್ಲಿ ಬರುವುದಿಲ್ಲ; ನೀನು ಯೆಹೋವನ ಮಾತನ್ನು ಅನುಸರಿಸಿ ನಡೆಯದೆ ಇದ್ದುದರಿಂದ ಆತನು ನಿನ್ನನ್ನು ಇಸ್ರಾಯೇಲರ ಅರಸುತನದಿಂದ ನಿವಾರಿಸಿದ್ದಾನೆ” ಎಂದು ಹೇಳಿ ತಿರುಗಿಕೊಂಡು ಹೊರಡಲು
27 Amalalu, Sa: miuele da masusa: delegiagaloba, Solo da ea abulaga gagulaligili, ea abula gadelai.
೨೭ಸೌಲನು ಅವನ ಮೇಲಂಗಿಯ ಅಂಚನ್ನು ಹಿಡಿದು ಎಳೆದನು; ಅದು ಹರಿದುಹೋಯಿತು.
28 Sa: miuele da ema amane sia: i, “Wali Hina Gode da Isala: ili fi hina bagade hou amo dima dialu amo dusa: le, eno dunu dia hou baligi ema i dagoi.
೨೮ಆಗ ಸಮುವೇಲನು ಅವನಿಗೆ, “ಯೆಹೋವನು ಈ ಹೊತ್ತು ಇಸ್ರಾಯೇಲಿನ ರಾಜ್ಯವನ್ನು ನಿನ್ನಿಂದ ಕಿತ್ತುಕೊಂಡು ನಿನಗಿಂತ ಉತ್ತಮನಾದ ಇನ್ನೊಬ್ಬನಿಗೆ ಕೊಟ್ಟಿದ್ದಾನೆ.
29 Isala: ili ilia Hina Gode Hadigidafa da ogogosu hame dawa: , amola Ea asigi dawa: su hame afadenesa. E da dunu hame. E da Ea asigi dawa: su hamedafa afadenesa.”
೨೯ಇಸ್ರಾಯೇಲರ ನಿರಂತರ ಆಧಾರವಾಗಿ ಇರುವವನು ಸುಳ್ಳಾಡುವವನಲ್ಲ; ಪಶ್ಚಾತ್ತಾಪಪಡುವವನಲ್ಲ; ಏಕೆಂದರೆ ವಾಗ್ದಾನ ಮಾಡಿದ ಮಾತನ್ನು ನಡೆಸದೆ ಬಿಡುವವನಲ್ಲ” ಎಂದು ಹೇಳಿದನು.
30 Solo da adole i, “Na da wadela: le hamoi dagoi. Be Isala: ili fi asigilai dunu amola dunu huluane da nama nodoma: ne, nama asigima. Na da dia Hina Godema nodone sia: ne gadomusa: , dia na buhagima: ne sigi masa.”
೩೦ಅದಕ್ಕೆ ಸೌಲನು, “ನಾನು ಪಾಪಮಾಡಿದ್ದೇನೆ; ದಯವಿಟ್ಟು ಇಸ್ರಾಯೇಲರ ಮುಂದೆಯೂ, ಜನರ ಮುಂದೆಯೂ ಹಿರಿಯರ ಮುಂದೆಯೂ ನನ್ನ ಮಾನವನ್ನುಳಿಸು. ನಾನು ನಿನ್ನ ದೇವರಾದ ಯೆಹೋವನನ್ನು ಆರಾಧಿಸುವಂತೆ ಹಿಂದಿರುಗಿ ನನ್ನ ಜೊತೆಯಲ್ಲಿ ಬಾ” ಎಂದು ಬೇಡಿಕೊಂಡನು.
31 Amaiba: le, Sa: miuele ele galu Giliga: le moilaiga buhagi. Amola Solo da Hina Godema nodone sia: ne gadoi.
೩೧ಸಮುವೇಲನು ಹಿಂದಿರುಗಿ ಸೌಲನ ಜೊತೆಯಲ್ಲಿ ಹೋದನು. ಆಗ ಸೌಲನು ದೇವರನ್ನು ಆರಾಧಿಸಿದನು.
32 Sa: miuele da amane sia: i, “A: malege ilia hina bagade A: iga: ge nama goeguda: oule misa.” A: iga: ge da beda: ga iagugusa ema misi. E agoane dawa: i, “Na bogoma: beya: le dawa: i amo da baligi dagoi.”
೩೨ತರುವಾಯ ಸಮುವೇಲನು, “ಅಮಾಲೇಕ್ಯರ ಅರಸನಾದ ಅಗಾಗನನ್ನು ನನ್ನ ಬಳಿಗೆ ಕರೆತನ್ನಿರಿ” ಎಂದನು. ಅಗಾಗನು ಮರಣಭಯ ತಪ್ಪಿತೆಂದು ನೆನಪಿಸಿಕೊಂಡು ಸಂತೋಷದಿಂದ ಅವನ ಹತ್ತಿರ ಬಂದನು.
33 Be Sa: miuele da amane sia: i, “Dia gegesu gobihei da uda bagohame ilia mano medole legei dagoi. Waha dia: me ea mano da medole legei dagoi ba: mu.” Amalalu, e da Giliga: le gobele salasu fafai (oloda) midadi, A:iga: ge fane, heda: sini fofonobone fasi.
೩೩ಆದರೆ ಸಮುವೇಲನು ಅವನಿಗೆ, “ನಿನ್ನ ಕತ್ತಿಯು ಅನೇಕ ಸ್ತ್ರೀಯರಿಗೆ ಪುತ್ರಶೋಕವನ್ನುಂಟುಮಾಡಿದೆ; ಅದರಂತೆ ನಿನ್ನ ತಾಯಿಯು ಎಲ್ಲರಿಗಿಂತಲೂ ಹೆಚ್ಚಾಗಿ ಪುತ್ರಶೋಕವನ್ನು ಅನುಭವಿಸಲಿ” ಎಂದು ಹೇಳಿ ಅವನನ್ನು ಗಿಲ್ಗಾಲಿನಲ್ಲಿ ಯೆಹೋವನ ಸನ್ನಿಧಿಯಲ್ಲೇ ಕಡಿದುಹಾಕಿದನು.
34 Amalalu, Sa: miuele da La: ima moilaiga asi. Amola hina bagade Solo da hi moilai Gibiaga asi.
೩೪ಅನಂತರ ಸಮುವೇಲನು ರಾಮಕ್ಕೆ ಹೋದನು; ಸೌಲನು ತನ್ನ ಊರಾದ ಗಿಬೆಯದಲ್ಲಿರುವ ಮನೆಗೆ ಹೋದನು.
35 Sa: miuele ea esalusu amogalu, Solo bu hame ba: i. Be e da eha fofagisu. Amola Hina Gode da musa: Solo Isala: ili ouligima: ne ilegeiba: le, da: i dioi galu.
೩೫ಸಮುವೇಲನು ಜೀವದಿಂದ ಇರುವವರೆಗೂ ಸೌಲನನ್ನು ನೋಡಲಿಲ್ಲ; ಆದರೆ ಯೆಹೋವನು ಸೌಲನನ್ನು ಇಸ್ರಾಯೇಲರ ಅರಸನನ್ನಾಗಿ ಮಾಡಿದ್ದಕ್ಕಾಗಿ ವಿಷಾದಪಟ್ಟನು. ಸಮುವೇಲನು ಅವನ ಕುರಿತು ದುಃಖಪಡುತ್ತಿದ್ದನು.