< اَلْعَدَد 6 >
وَكَلَّمَ ٱلرَّبُّ مُوسَى قَائِلًا: | ١ 1 |
ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
«كَلِّمْ بَنِي إِسْرَائِيلَ وَقُلْ لَهُمْ: إِذَا ٱنْفَرَزَ رَجُلٌ أَوِ ٱمْرَأَةٌ لِيَنْذُرَ نَذْرَ ٱلنَّذِيرِ، لِيَنْتَذِرَ لِلرَّبِّ، | ٢ 2 |
“ನೀನು ಇಸ್ರಾಯೇಲರ ಸಂಗಡ ಮಾತನಾಡಿ ಹೇಳಬೇಕಾದದ್ದೇನೆಂದರೆ: ‘ಪುರುಷನಾದರೂ, ಸ್ತ್ರೀಯಾದರೂ ಯೆಹೋವ ದೇವರಿಗೆ ಪ್ರತ್ಯೇಕಿಸಿಕೊಳ್ಳುವ ಹಾಗೆ ನಾಜೀರ ವ್ರತ ಕೈಗೊಂಡರೆ,
فَعَنِ ٱلْخَمْرِ وَٱلْمُسْكِرِ يَفْتَرِزُ، وَلَا يَشْرَبْ خَلَّ ٱلْخَمْرِ وَلَا خَلَّ ٱلْمُسْكِرِ، وَلَا يَشْرَبْ مِنْ نَقِيعِ ٱلْعِنَبِ، وَلَا يَأْكُلْ عِنَبًا رَطْبًا وَلَا يَابِسًا. | ٣ 3 |
ದ್ರಾಕ್ಷಾರಸಕ್ಕೂ ಮದ್ಯಪಾನಕ್ಕೂ ದೂರವಾಗಿದ್ದು, ದ್ರಾಕ್ಷಾರಸದ ಹುಳಿಯನ್ನೂ ಮದ್ಯಪಾನದ ಹುಳಿಯನ್ನೂ ಕುಡಿಯದೆ, ದ್ರಾಕ್ಷಿಯಿಂದ ಮಾಡಿದ ಯಾವ ಪಾನವನ್ನಾದರೂ ಕುಡಿಯದೆ ಹಸಿಯದಾಗಲಿ, ಒಣಗಿದ್ದಾಗಲಿ ದ್ರಾಕ್ಷಿಹಣ್ಣನ್ನು ತಿನ್ನದೆ ಇರಬೇಕು.
كُلَّ أَيَّامِ نَذْرِهِ لَا يَأْكُلْ مِنْ كُلِّ مَا يُعْمَلُ مِنْ جَفْنَةِ ٱلْخَمْرِ مِنَ ٱلْعَجَمِ حَتَّى ٱلْقِشْرِ. | ٤ 4 |
ತಮ್ಮ ನಾಜೀರತನದ ದಿವಸಗಳಲ್ಲೆಲ್ಲಾ ದ್ರಾಕ್ಷಿ ಬೀಜ ಮೊದಲುಗೊಂಡು ಸಿಪ್ಪೆಯವರೆಗೂ, ದ್ರಾಕ್ಷಿಬಳ್ಳಿಯಲ್ಲಿ ಬೆಳೆದದ್ದು ಯಾವುದನ್ನಾದರೂ ತಿನ್ನಬಾರದು.
كُلَّ أَيَّامِ نَذْرِ ٱفْتِرَازِهِ لَا يَمُرُّ مُوسَى عَلَى رَأْسِهِ. إِلَى كَمَالِ ٱلْأَيَّامِ ٱلَّتِي ٱنْتَذَرَ فِيهَا لِلرَّبِّ يَكُونُ مُقَدَّسًا، وَيُرَبِّي خُصَلَ شَعْرِ رَأْسِهِ. | ٥ 5 |
“‘ಅವರ ನಾಜೀರ ವ್ರತದ ದಿನಗಳಲ್ಲೆಲ್ಲಾ ಕ್ಷೌರಮಾಡಿಸಿಕೊಳ್ಳಬಾರದು. ಅವರು ಯೆಹೋವ ದೇವರಿಗೆ ತಮ್ಮನ್ನು ಪ್ರತ್ಯೇಕಿಸಿಕೊಂಡ ದಿವಸಗಳು ಪೂರ್ತಿಯಾಗುವವರೆಗೆ ಅವರು ಪರಿಶುದ್ಧರಾಗಿರುವರು, ಅವರು ತಮ್ಮ ತಲೆಗೂದಲನ್ನು ಕತ್ತರಿಸದೇ ಬೆಳೆಯಬಿಡಬೇಕು.
كُلَّ أَيَّامِ ٱنْتِذَارِهِ لِلرَّبِّ لَا يَأْتِي إِلَى جَسَدِ مَيْتٍ. | ٦ 6 |
“‘ಅವರು ಯೆಹೋವ ದೇವರಿಗೆ ತಮ್ಮನ್ನು ಪ್ರತ್ಯೇಕಿಸಿಕೊಂಡ ದಿವಸಗಳಲ್ಲೆಲ್ಲಾ ಸತ್ತವರ ಬಳಿಗೆ ಬರಬಾರದು.
أَبُوهُ وَأُمُّهُ وَأَخُوهُ وَأُخْتُهُ لَا يَتَنَجَّسْ مِنْ أَجْلِهِمْ عِنْدَ مَوْتِهِمْ، لِأَنَّ ٱنْتِذَارَ إِلَهِهِ عَلَى رَأْسِهِ. | ٧ 7 |
ಅವರು ತಂದೆತಾಯಿ, ಸಹೋದರ ಸಹೋದರಿ ಸತ್ತರೂ ಅವರು ಅವರಿಗೋಸ್ಕರ ಅಪವಿತ್ರರಾಗಬಾರದು. ಏಕೆಂದರೆ ದೇವರಿಗೆ ಅವರ ಸಮರ್ಪಣೆಯ ಸಂಕೇತವು ಅವರ ತಲೆಯ ಮೇಲೆ ಇದೆ.
إِنَّهُ كُلَّ أَيَّامِ ٱنْتِذَارِهِ مُقَدَّسٌ لِلرَّبِّ. | ٨ 8 |
ಅವರ ಸಮರ್ಪಣೆಯ ದಿವಸಗಳಲ್ಲೆಲ್ಲಾ ಅವರು ಯೆಹೋವ ದೇವರಿಗೆ ಮೀಸಲಾಗಿರಬೇಕು.
وَإِذَا مَاتَ مَيْتٌ عِنْدَهُ بَغْتَةً عَلَى فَجْأَةٍ فَنَجَّسَ رَأْسَ ٱنْتِذَارِهِ، يَحْلِقُ رَأْسَهُ يَوْمَ طُهْرِهِ. فِي ٱلْيَوْمِ ٱلسَّابِعِ يَحْلِقُهُ. | ٩ 9 |
“‘ಅವರ ಬಳಿಯಲ್ಲಿ ಯಾರಾದರೂ ಆಕಸ್ಮಿಕವಾಗಿ ಸತ್ತದ್ದರಿಂದ ಅವರ ತಲೆಯ ಕೂದಲು ಅಶುದ್ಧವಾದರೆ, ಅವರು ಶುದ್ಧರಾಗುವ ದಿವಸದಲ್ಲಿ ಅಂದರೆ ಏಳನೆಯ ದಿವಸದಲ್ಲಿ ತಮ್ಮ ತಲೆಯನ್ನು ಬೋಳಿಸಬೇಕು.
وَفِي ٱلْيَوْمِ ٱلثَّامِنِ يَأْتِي بِيَمَامَتَيْنِ أَوْ بِفَرْخَيْ حَمَامٍ إِلَى ٱلْكَاهِنِ إِلَى بَابِ خَيْمَةِ ٱلِٱجْتِمَاعِ، | ١٠ 10 |
ಎಂಟನೆಯ ದಿವಸದಲ್ಲಿ ಅವರು ಯಾಜಕನ ಬಳಿಗೆ ಸಭೆಯ ಗುಡಾರದ ಬಾಗಿಲಿಗೆ ಎರಡು ಬೆಳವಕ್ಕಿಗಳನ್ನು ಇಲ್ಲವೆ ಎರಡು ಪಾರಿವಾಳದ ಮರಿಗಳನ್ನು ತರಬೇಕು.
فَيَعْمَلُ ٱلْكَاهِنُ وَاحِدًا ذَبِيحَةَ خَطِيَّةٍ، وَٱلْآخَرَ مُحْرَقَةً وَيُكَفِّرُ عَنْهُ مَا أَخْطَأَ بِسَبَبِ ٱلْمَيْتِ، وَيُقَدِّسُ رَأْسَهُ فِي ذَلِكَ ٱلْيَوْمِ. | ١١ 11 |
ಯಾಜಕನು ಒಂದನ್ನು ದೋಷಪರಿಹಾರಕ ಬಲಿಯಾಗಿಯೂ, ಇನ್ನೊಂದನ್ನು ದಹನಬಲಿಯಾಗಿ ಅರ್ಪಿಸಿ, ಅವರು ಶವದ ಹತ್ತಿರವಿದ್ದು ಪಾಪಮಾಡಿದ್ದರಿಂದ, ಅವರಿಗೋಸ್ಕರ ಆ ದಿವಸದಲ್ಲಿ ಅವರ ತಲೆಯನ್ನು ಪ್ರತಿಷ್ಠಿಸಬೇಕು.
فَمَتَى نَذَرَ لِلرَّبِّ أَيَّامَ ٱنْتِذَارِهِ يَأْتِي بِخَرُوفٍ حَوْلِيٍّ ذَبِيحَةَ إِثْمٍ، وَأَمَّا ٱلْأَيَّامُ ٱلْأُولَى فَتَسْقُطُ لِأَنَّهُ نَجَّسَ ٱنْتِذَارَهُ. | ١٢ 12 |
ಎಷ್ಟು ದಿನಗಳವರೆಗೆ ತಮ್ಮನ್ನು ಪ್ರತಿಷ್ಠಿಸಿಕೊಂಡಿದ್ದಾರೋ, ಅಷ್ಟು ದಿನಗಳವರೆಗೆ ಹೊಸದಾಗಿ ತಮ್ಮನ್ನು ಯೆಹೋವ ದೇವರಿಗೆ ಪ್ರತಿಷ್ಠಿಸಿಕೊಳ್ಳಬೇಕು ಮತ್ತು ಪ್ರಾಯಶ್ಚಿತ್ತ ಬಲಿಯಾಗಿ ಒಂದು ವರ್ಷದ ಕುರಿಮರಿಯನ್ನು ಸಮರ್ಪಿಸಬೇಕು. ಅವರ ಸಮರ್ಪಣೆಯ ಅವಧಿಯಲ್ಲಿ ಅವರು ಅಶುದ್ಧವಾದುದರಿಂದ ಮೊದಲಿನ ದಿವಸಗಳು ವ್ಯರ್ಥವಾದುವೆಂದು ಪರಿಗಣಿಸಬೇಕು.
«وَهَذِهِ شَرِيعَةُ ٱلنَّذِيرِ: يَوْمَ تَكْمُلُ أَيَّامُ ٱنْتِذَارِهِ يُؤْتَى بِهِ إِلَى بَابِ خَيْمَةِ ٱلِٱجْتِمَاعِ، | ١٣ 13 |
“‘ಇದು ನಾಜೀರ ವ್ರತವು. ಅವರ ಸಮರ್ಪಣೆಯ ದಿವಸಗಳು ಪೂರ್ಣವಾದ ಮೇಲೆ ಅವರನ್ನು ದೇವದರ್ಶನ ಗುಡಾರದ ಬಾಗಿಲಿನ ಬಳಿಗೆ ತರಬೇಕು.
فَيُقَرِّبُ قُرْبَانَهُ لِلرَّبِّ خَرُوفًا وَاحِدًا حَوْلِيًّا صَحِيحًا مُحْرَقَةً، وَنَعْجَةً وَاحِدَةً حَوْلِيَّةً صَحِيحَةً ذَبِيحَةَ خَطِيَّةٍ، وَكَبْشًا وَاحِدًا صَحِيحًا ذَبِيحَةَ سَلَامَةٍ، | ١٤ 14 |
ಅವರು ಯೆಹೋವ ದೇವರಿಗೆ ತಮ್ಮ ಅರ್ಪಣೆಗಳನ್ನು ಅರ್ಪಿಸಬೇಕು. ಅದೇನೆಂದರೆ, ದಹನಬಲಿಗಾಗಿ ಒಂದು ವರ್ಷದ ಕಳಂಕವಿಲ್ಲದ ಒಂದು ಟಗರಿನ ಮರಿಯನ್ನೂ, ಪಾಪ ಪರಿಹಾರದ ಬಲಿಗಾಗಿ ಒಂದು ವರ್ಷದ ಕಳಂಕವಿಲ್ಲದ ಒಂದು ಹೆಣ್ಣು ಕುರಿಮರಿಯನ್ನೂ, ಸಮಾಧಾನದ ಬಲಿಗಾಗಿ ಒಂದು ಕಳಂಕವಿಲ್ಲದ ಟಗರನ್ನೂ ತರಬೇಕು.
وَسَلَّ فَطِيرٍ مِنْ دَقِيقٍ أَقْرَاصًا مَلْتُوتَةً بِزَيْتٍ، وَرِقَاقَ فَطِيرٍ مَدْهُونَةً بِزَيْتٍ مَعَ تَقْدِمَتِهَا وَسَكَائِبِهَا. | ١٥ 15 |
ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ಮಾಡಿದ ಹುಳಿಯಿಲ್ಲದ ರೊಟ್ಟಿಗಳ ಒಂದು ಬುಟ್ಟಿಯನ್ನೂ, ಎಣ್ಣೆ ಹಚ್ಚಿದ ಹುಳಿಯಿಲ್ಲದ ರೊಟ್ಟಿಯ ದೋಸೆಗಳನ್ನೂ, ಧಾನ್ಯದ್ರವ್ಯ ಪಾನದ್ರವ್ಯ ಇವುಗಳನ್ನೆಲ್ಲಾ ಅರ್ಪಣೆಯಾಗಿ ತರಬೇಕು.
فَيُقَدِّمُهَا ٱلْكَاهِنُ أَمَامَ ٱلرَّبِّ وَيَعْمَلُ ذَبِيحَةَ خَطِيَّتِهِ وَمُحْرَقَتَهُ. | ١٦ 16 |
“‘ಇವುಗಳನ್ನು ಯಾಜಕನು ಯೆಹೋವ ದೇವರ ಎದುರಿನಲ್ಲಿ ತಂದು, ಅವರ ದೋಷಪರಿಹಾರಕ ಬಲಿಯನ್ನೂ ಅವರ ದಹನಬಲಿಯನ್ನೂ ಅರ್ಪಿಸಬೇಕು.
وَٱلْكَبْشُ يَعْمَلُهُ ذَبِيحَةَ سَلَامَةٍ لِلرَّبِّ مَعَ سَلِّ ٱلْفَطِيرِ، وَيَعْمَلُ ٱلْكَاهِنُ تَقْدِمَتَهُ وَسَكِيبَهُ. | ١٧ 17 |
ಆ ಟಗರನ್ನು ಹುಳಿಯಿಲ್ಲದ ರೊಟ್ಟಿಯ ಬುಟ್ಟಿಯ ಸಂಗಡ ಯೆಹೋವ ದೇವರಿಗೆ ಸಮಾಧಾನದ ಬಲಿಯಾಗಿ ಅರ್ಪಿಸಬೇಕು. ಇದಲ್ಲದೆ ಯಾಜಕನು ಅವರ ಧಾನ್ಯವನ್ನೂ, ಪಾನದ್ರವ್ಯವನ್ನೂ ಅರ್ಪಿಸಬೇಕು.
وَيَحْلِقُ ٱلنَّذِيرُ لَدَى بَابِ خَيْمَةِ ٱلِٱجْتِمَاعِ رَأْسَ ٱنْتِذَارِهِ، وَيَأْخُذُ شَعْرَ رَأْسِ ٱنْتِذَارِهِ وَيَجْعَلُهُ عَلَى ٱلنَّارِ ٱلَّتِي تَحْتَ ذَبِيحَةِ ٱلسَّلَامَةِ. | ١٨ 18 |
“‘ಇದಲ್ಲದೆ ನಾಜೀರರು ತಮ್ಮ ಸಮರ್ಪಣೆಯನ್ನು ಸಂಕೇತಿಸುವ ಕೂದಲನ್ನು ದೇವದರ್ಶನದ ಗುಡಾರದ ಬಾಗಿಲಿನ ಬಳಿಯಲ್ಲಿ ಕ್ಷೌರಮಾಡಿಸಿಕೊಂಡು, ಪ್ರತ್ಯೇಕಿಸಿದ ತಮ್ಮ ತಲೆಗೂದಲನ್ನು ತೆಗೆದುಕೊಂಡು, ಸಮಾಧಾನದ ಬಲಿಗಳ ಬಲಿಯ ಕೆಳಗಿರುವ ಬೆಂಕಿಯಲ್ಲಿ ಹಾಕಬೇಕು.
وَيَأْخُذُ ٱلْكَاهِنُ ٱلسَّاعِدَ مَسْلُوقًا مِنَ ٱلْكَبْشِ، وَقُرْصَ فَطِيرٍ وَاحِدًا مِنَ ٱلسَّلِّ، وَرُقَاقَةَ فَطِيرٍ وَاحِدَةً، وَيَجْعَلُهَا فِي يَدَيِ ٱلنَّذِيرِ بَعْدَ حَلْقِهِ شَعْرَ ٱنْتِذَارِهِ، | ١٩ 19 |
“‘ಯಾಜಕನು ಬೇಯಿಸಿದ ಆ ಟಗರಿನ ಮುಂದೊಡೆಯನ್ನೂ, ಆ ಪುಟ್ಟಿಯೊಳಗಿಂದ ಹುಳಿಯಿಲ್ಲದ ಒಂದು ರೊಟ್ಟಿಯನ್ನೂ, ಹುಳಿಯಿಲ್ಲದ ಒಂದು ದೋಸೆಯನ್ನೂ, ಆ ನಾಜೀರರ ಪ್ರತ್ಯೇಕಿಸಿದ ಕೂದಲನ್ನು ಕ್ಷೌರಮಾಡಿಸಿದ ತರುವಾಯ ಅವರ ಕೈಗಳಲ್ಲಿ ಕೊಡಬೇಕು.
وَيُرَدِّدُهَا ٱلْكَاهِنُ تَرْدِيدًا أَمَامَ ٱلرَّبِّ. إِنَّهُ قُدْسٌ لِلْكَاهِنِ مَعَ صَدْرِ ٱلتَّرْدِيدِ وَسَاقِ ٱلرَّفِيعَةِ. وَبَعْدَ ذَلِكَ يَشْرَبُ ٱلنَّذِيرُ خَمْرًا. | ٢٠ 20 |
ಯಾಜಕನು ಅವುಗಳನ್ನು ನೈವೇದ್ಯವಾಗಿ ನಿವಾಳಿಸುವ ಅರ್ಪಣೆಗಾಗಿ ಯೆಹೋವ ದೇವರ ಎದುರಿನಲ್ಲಿ ಸಮರ್ಪಿಸಬೇಕು. ನೈವೇದ್ಯ ಮಾಡುವ ಎದೆಯ ಸಂಗಡ ಅದು ಯಾಜಕನಿಗೆ ಪರಿಶುದ್ಧವಾಗಿದೆ. ಆಮೇಲೆ ನಾಜೀರರು ದ್ರಾಕ್ಷಾರಸವನ್ನು ಕುಡಿಯಬಹುದು.
هَذِهِ شَرِيعَةُ ٱلنَّذِيرِ ٱلَّذِي يَنْذُرُ، قُرْبَانُهُ لِلرَّبِّ عَنِ ٱنْتِذَارِهِ فَضْلًا عَمَّا تَنَالُ يَدُهُ. حَسَبَ نَذْرِهِ ٱلَّذِي نَذَرَ كَذَلِكَ يَعْمَلُ حَسَبَ شَرِيعَةِ ٱنْتِذَارِهِ». | ٢١ 21 |
“‘ಪ್ರಮಾಣ ಮಾಡಿಕೊಂಡ ನಾಜೀರರ ನಿಯಮವು ಇದೇ. ಸಂಬಂಧಪಟ್ಟದ್ದರೊಂದಿಗೆ ತಮ್ಮ ಕೈಲಾದ ಮಟ್ಟಿಗೆ ಅವರು ತಮ್ಮ ಪ್ರತ್ಯೇಕಿಸುವಿಕೆಗಾಗಿ ಯೆಹೋವ ದೇವರಿಗೆ ಕಾಣಿಕೆ ಅರ್ಪಿಸತಕ್ಕದ್ದು. ನಾಜೀರ ವ್ರತದ ಕ್ರಮದ ಪ್ರಕಾರ, ನೀವು ಮಾಡಿದ ಪ್ರಮಾಣಕ್ಕನುಸಾರವಾಗಿ ತಮ್ಮ ವ್ರತದ ಕ್ರಮಗಳನ್ನು ನೆರವೇರಿಸಬೇಕು.’”
وَكَلَّمَ ٱلرَّبُّ مُوسَى قَائِلًا: | ٢٢ 22 |
ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
«كَلِّمْ هَارُونَ وَبَنِيهِ قَائِلًا: هَكَذَا تُبَارِكُونَ بَنِي إِسْرَائِيلَ قَائِلِينَ لَهُمْ: | ٢٣ 23 |
“ನೀನು ಆರೋನನಿಗೆ ಮತ್ತು ಅವನ ಪುತ್ರರಿಗೆ ಹೀಗೆ ಆಜ್ಞಾಪಿಸು, ‘ನೀವು ಇಸ್ರಾಯೇಲರನ್ನು ಆಶೀರ್ವದಿಸುವಾಗ ಈ ಪ್ರಕಾರ ಅವರಿಗೆ ಹೇಳಬೇಕು:
يُبَارِكُكَ ٱلرَّبُّ وَيَحْرُسُكَ. | ٢٤ 24 |
“‘“ಯೆಹೋವ ದೇವರು ನಿಮ್ಮನ್ನು ಆಶೀರ್ವದಿಸಲಿ, ನಿಮ್ಮನ್ನು ಕಾಪಾಡಲಿ.
يُضِيءُ ٱلرَّبُّ بِوَجْهِهِ عَلَيْكَ وَيَرْحَمُكَ. | ٢٥ 25 |
ಯೆಹೋವ ದೇವರು ತಮ್ಮ ಮುಖವನ್ನು ನಿಮ್ಮ ಕಡೆಗೆ ಪ್ರಕಾಶಿಸುವಂತೆ ಮಾಡಿ, ನಿಮಗೆ ಕೃಪೆ ತೋರಿಸಲಿ.
يَرْفَعُ ٱلرَّبُّ وَجْهَهُ عَلَيْكَ وَيَمْنَحُكَ سَلَامًا. | ٢٦ 26 |
ಯೆಹೋವ ದೇವರು ತಮ್ಮ ಮುಖವನ್ನು ನಿಮ್ಮ ಕಡೆಗೆ ಎತ್ತಿ, ನಿಮಗೆ ಸಮಾಧಾನ ಅನುಗ್ರಹಿಸಲಿ.”’
فَيَجْعَلُونَ ٱسْمِي عَلَى بَنِي إِسْرَائِيلَ، وَأَنَا أُبَارِكُهُمْ». | ٢٧ 27 |
“ಹೀಗೆ ಅವರು ನನ್ನ ಹೆಸರನ್ನು ಇಸ್ರಾಯೇಲರ ಮೇಲೆ ಉಚ್ಛರಿಸುವರು. ನಾನೇ ಅವರನ್ನು ಆಶೀರ್ವದಿಸುವೆನು.”