< ૧ તીમથિયઃ 5 >

1 ત્વં પ્રાચીનં ન ભર્ત્સય કિન્તુ તં પિતરમિવ યૂનશ્ચ ભ્રાતૃનિવ
ವೃದ್ಧರನ್ನು ಗದರಿಸದೆ ತಂದೆಯೆಂದು ಭಾವಿಸಿ ಬುದ್ಧಿಹೇಳು. ಯೌವನಸ್ಥರನ್ನು ಅಣ್ಣತಮ್ಮಂದಿರೆಂದೂ,
2 વૃદ્ધાઃ સ્ત્રિયશ્ચ માતૃનિવ યુવતીશ્ચ પૂર્ણશુચિત્વેન ભગિનીરિવ વિનયસ્વ|
ವೃದ್ಧಸ್ತ್ರೀಯರನ್ನು ತಾಯಿಯಂತೆಯೂ, ಯೌವನಸ್ತ್ರೀಯರನ್ನು ಪೂರ್ಣ ಶುದ್ಧಭಾವದಿಂದ ಅಕ್ಕತಂಗಿಯರೆಂದೂ ಎಣಿಸಿ ಅವರವರಿಗೆ ತಕ್ಕ ಹಾಗೆ ಬುದ್ಧಿಹೇಳು.
3 અપરં સત્યવિધવાઃ સમ્મન્યસ્વ|
ದಿಕ್ಕಿಲ್ಲದ ವಿಧವೆಯರನ್ನು ಸಂರಕ್ಷಿಸು. ಆದರೆ ಒಬ್ಬ ವಿಧವೆಗೆ ಮಕ್ಕಳಾಗಲಿ ಮೊಮ್ಮಕ್ಕಳಾಗಲಿ ಇದ್ದರೆ ಅವರೇ ಮೊದಲು ತಮ್ಮ ಮನೆಯವರಿಗೆ ಭಕ್ತಿತೋರಿಸುವುದಕ್ಕೂ ತಂದೆತಾಯಿಗಳಿಗೆ ಪ್ರತ್ಯುಪಕಾರ ಮಾಡುವುದಕ್ಕೂ ಕಲಿತುಕೊಳ್ಳಲಿ. ಇದು ದೇವರ ದೃಷ್ಟಿಯಲ್ಲಿ ಮೆಚ್ಚಿಕೆಯಾಗಿದೆ.
4 કસ્યાશ્ચિદ્ વિધવાયા યદિ પુત્રાઃ પૌત્રા વા વિદ્યન્તે તર્હિ તે પ્રથમતઃ સ્વીયપરિજનાન્ સેવિતું પિત્રોઃ પ્રત્યુપકર્ત્તુઞ્ચ શિક્ષન્તાં યતસ્તદેવેશ્વરસ્ય સાક્ષાદ્ ઉત્તમં ગ્રાહ્યઞ્ચ કર્મ્મ|
5 અપરં યા નારી સત્યવિધવા નાથહીના ચાસ્તિ સા ઈશ્વરસ્યાશ્રયે તિષ્ઠન્તી દિવાનિશં નિવેદનપ્રાર્થનાભ્યાં કાલં યાપયતિ|
ದಿಕ್ಕಿಲ್ಲದೆ ಒಬ್ಬೊಂಟಿಗಳಾಗಿರುವ ವಿಧವೆಯು, ದೇವರ ಮೇಲೆ ನಿರೀಕ್ಷೆಯನ್ನಿಟ್ಟು, ಹಗಲಿರುಳು ವಿಜ್ಞಾಪನೆಗಳಲ್ಲಿಯೂ ಪ್ರಾರ್ಥನೆಗಳಲ್ಲಿಯೂ ನೆಲೆಗೊಂಡಿರುವಳು.
6 કિન્તુ યા વિધવા સુખભોગાસક્તા સા જીવત્યપિ મૃતા ભવતિ|
ಆದರೆ ಸುಖಭೋಗದಲ್ಲಿರುವ ವಿಧವೆಯು ಬದುಕಿದ್ದರೂ ಸತ್ತಂತೆಯೇ.
7 અતએવ તા યદ્ અનિન્દિતા ભવેયૂસ્તદર્થમ્ એતાનિ ત્વયા નિદિશ્યન્તાં|
ವಿಧವೆಯರು ನಿಂದೆಗೆ ಗುರಿಯಾಗದಂತೆ ಈ ವಿಷಯಗಳನ್ನು ಆಜ್ಞಾಪಿಸು.
8 યદિ કશ્ચિત્ સ્વજાતીયાન્ લોકાન્ વિશેષતઃ સ્વીયપરિજનાન્ ન પાલયતિ તર્હિ સ વિશ્વાસાદ્ ભ્રષ્ટો ઽપ્યધમશ્ચ ભવતિ|
ಯಾವನಾದರೂ ಸ್ವಂತ ಜನರನ್ನು, ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆ ಹೋದರೆ ಅವನು ಕ್ರಿಸ್ತ ನಂಬಿಕೆಯನ್ನು ತಿರಸ್ಕರಿಸಿದವನೂ ನಂಬದವನಿಗಿಂತ ಕೀಳಾದವನೂ ಆಗಿದ್ದಾನೆ.
9 વિધવાવર્ગે યસ્યા ગણના ભવતિ તયા ષષ્ટિવત્સરેભ્યો ન્યૂનવયસ્કયા ન ભવિતવ્યં; અપરં પૂર્વ્વમ્ એકસ્વામિકા ભૂત્વા
ವಯಸ್ಸಿನಲ್ಲಿ ಅರುವತ್ತು ವರ್ಷ ಮೇಲ್ಪಟ್ಟ, ವಿಧವೆಯನ್ನು ವಿಧವೆಯರ ಪಟ್ಟಿಯಲ್ಲಿ ಸೇರಿಸಬಹುದು. ಅಂಥವಳಾದರೂ ಒಬ್ಬ ಗಂಡನಿಗೆ ಮಾತ್ರ ಹೆಂಡತಿಯಾಗಿದ್ದವಳಾಗಿ,
10 સા યત્ શિશુપોષણેનાતિથિસેવનેન પવિત્રલોકાનાં ચરણપ્રક્ષાલનેન ક્લિષ્ટાનામ્ ઉપકારેણ સર્વ્વવિધસત્કર્મ્માચરણેન ચ સત્કર્મ્મકરણાત્ સુખ્યાતિપ્રાપ્તા ભવેત્ તદપ્યાવશ્યકં|
೧೦ಸತ್ಕ್ರಿಯೆಗಳನ್ನು ಮಾಡುವವಳೆಂದು ಹೆಸರುಗೊಂಡವಳೂ ಆಗಿದ್ದಲ್ಲಿ, ಅವರು ಮಕ್ಕಳನ್ನು ಸಾಕಿಕೊಂಡು, ಅತಿಥಿಸತ್ಕಾರವನ್ನು ಮಾಡುತ್ತಾ, ದೇವಜನರಿಗೆ ಉಪಚಾರಮಾಡಿದವಳಾಗಲಿ, ಸಂಕಟದಲ್ಲಿ ಬಿದ್ದವರಿಗೆ ಸಹಾಯಮಾಡುತ್ತಾ ಎಲ್ಲಾ ಸತ್ಕಾರ್ಯಗಳಲ್ಲಿ ಆಸಕ್ತಿಯುಳ್ಳವಳಾಗಿರಲಿ.
11 કિન્તુ યુવતી ર્વિધવા ન ગૃહાણ યતઃ ખ્રીષ્ટસ્ય વૈપરીત્યેન તાસાં દર્પે જાતે તા વિવાહમ્ ઇચ્છન્તિ|
೧೧ಯೌವನ ಪ್ರಾಯದ ವಿಧವೆಯರನ್ನು ಪಟ್ಟಿಯಲ್ಲಿ ಸೇರಿಸಬೇಡ, ಅವರು ದೈಹಿಕ ಆಸೆಗಳಿಂದ ಸೋಲಿಸಲ್ಪಟ್ಟು, ಕ್ರಿಸ್ತನಿಗೆ ವಿಮುಖರಾಗಿ ಮದುವೆಮಾಡಿಕೊಳ್ಳಬೇಕೆಂದು ಇಷ್ಟಪಟ್ಟಾರು.
12 તસ્માચ્ચ પૂર્વ્વધર્મ્મં પરિત્યજ્ય દણ્ડનીયા ભવન્તિ|
೧೨ಅಂಥವರು ತಾವು ಮೊದಲು ಮಾಡಿದ ಪ್ರತಿಜ್ಞೆಯನ್ನು ಉಲ್ಲಂಘಿಸಿ ತೀರ್ಪಿಗೆ ಗುರಿಯಾಗಿರುವರು.
13 અનન્તરં તા ગૃહાદ્ ગૃહં પર્ય્યટન્ત્ય આલસ્યં શિક્ષન્તે કેવલમાલસ્યં નહિ કિન્ત્વનર્થકાલાપં પરાધિકારચર્ચ્ચાઞ્ચાપિ શિક્ષમાણા અનુચિતાનિ વાક્યાનિ ભાષન્તે|
೧೩ಇದಲ್ಲದೆ ಅವರು ಮನೆಮನೆಗೆ ತಿರುಗಾಡುತ್ತಾ ಮೈಗಳ್ಳತನವನ್ನು ಕಲಿಯುತ್ತಾರೆ. ಮೈಗಳ್ಳರಾಗುವುದಲ್ಲದೆ, ಹರಟೆಮಾತನಾಡುವವರೂ, ಇತರರ ವಿಷಯಗಳಲ್ಲಿ ತಲೆ ಹಾಕುವವರೂ ಆಗಿ ಆಡಬಾರದ ಮಾತುಗಳನ್ನಾಡುತ್ತಾರೆ.
14 અતો મમેચ્છેયં યુવત્યો વિધવા વિવાહં કુર્વ્વતામ્ અપત્યવત્યો ભવન્તુ ગૃહકર્મ્મ કુર્વ્વતાઞ્ચેત્થં વિપક્ષાય કિમપિ નિન્દાદ્વારં ન દદતુ|
೧೪ಆದ್ದರಿಂದ ಯೌವನ ಪ್ರಾಯದ ವಿಧವೆಯರು ಮದುವೆಮಾಡಿಕೊಂಡು ಮಕ್ಕಳನ್ನು ಹೆತ್ತು ಮನೆಯನ್ನು ನಿರ್ವಹಿಸುವವರಾಗಿರುವುದು ನನಗೆ ಒಳ್ಳೆಯದಾಗಿ ತೋಚುತ್ತದೆ. ಹಾಗೆ ಮಾಡುವುದರಿಂದ ವಿರೋಧಿಗಳ ನಿಂದೆಗೆ ಆಸ್ಪದಕೊಡದೆ ಇರುವರು.
15 યત ઇતઃ પૂર્વ્વમ્ અપિ કાશ્ચિત્ શયતાનસ્ય પશ્ચાદ્ગામિન્યો જાતાઃ|
೧೫ಇಷ್ಟರೊಳಗೆ ಕೆಲವರು ಅಡ್ಡದಾರಿ ಹಿಡಿದು ಸೈತಾನನನ್ನು ಹಿಂಬಾಲಿಸಿದ್ದಾರೆ.
16 અપરં વિશ્વાસિન્યા વિશ્વાસિનો વા કસ્યાપિ પરિવારાણાં મધ્યે યદિ વિધવા વિદ્યન્તે તર્હિ સ તાઃ પ્રતિપાલયતુ તસ્માત્ સમિતૌ ભારે ઽનારોપિતે સત્યવિધવાનાં પ્રતિપાલનં કર્ત્તું તયા શક્યતે|
೧೬ನಂಬುವವಳಾದ ಸ್ತ್ರೀಯ ಬಂಧುಭಾಂಧವರಲ್ಲಿ ವಿಧವೆಯರಿದ್ದರೆ ಆಕೆಯೇ ಅವರನ್ನು ಸಂರಕ್ಷಿಸಲಿ. ಸಭೆಯು ದಿಕ್ಕಿಲ್ಲದ ವಿಧವೆಯರಿಗೆ ಸಹಾಯ ಮಾಡಬೇಕಾಗಿರುವುದರಿಂದ ಆಕೆಯು ಆ ಭಾರವನ್ನು ಸಭೆಯ ಮೇಲೆ ಹಾಕಬಾರದು.
17 યે પ્રાઞ્ચઃ સમિતિં સમ્યગ્ અધિતિષ્ઠન્તિ વિશેષત ઈશ્વરવાક્યેનોપદેશેન ચ યે યત્નં વિદધતે તે દ્વિગુણસ્યાદરસ્ય યોગ્યા માન્યન્તાં|
೧೭ಚೆನ್ನಾಗಿ ಅಧಿಕಾರ ನಡಿಸುವ ಸಭೆಯ ಹಿರಿಯರನ್ನು, ಅವರೊಳಗೆ ವಿಶೇಷವಾಗಿ ದೇವರ ವಾಕ್ಯವನ್ನು ಸಾರುವುದರಲ್ಲಿಯೂ ಉಪದೇಶಿಸುವುದರಲ್ಲಿಯೂ ಕಷ್ಟಪಡುವವರನ್ನು ಎರಡುಪಟ್ಟು ಗೌರವಕ್ಕೆ ಯೋಗ್ಯರೆಂದು ಎಣಿಸಬೇಕು.
18 યસ્માત્ શાસ્ત્રે લિખિતમિદમાસ્તે, ત્વં શસ્યમર્દ્દકવૃષસ્યાસ્યં મા બધાનેતિ, અપરમપિ કાર્ય્યકૃદ્ વેતનસ્ય યોગ્યો ભવતીતિ|
೧೮“ಕಣತುಳಿಯುವ ಎತ್ತಿನ ಬಾಯಿ ಕಟ್ಟಬಾರದು,” ಮತ್ತು “ಆಳು ತನ್ನ ಕೂಲಿಗೆ ಯೋಗ್ಯನಾಗಿದ್ದಾನೆ” ಎಂದು ಶಾಸ್ತ್ರದಲ್ಲಿ ಹೇಳಿದೆಯಲ್ಲಾ.
19 દ્વૌ ત્રીન્ વા સાક્ષિણો વિના કસ્યાચિત્ પ્રાચીનસ્ય વિરુદ્ધમ્ અભિયોગસ્ત્વયા ન ગૃહ્યતાં|
೧೯ಸಭೆಯ ಹಿರಿಯನ ಮೇಲೆ ಯಾರಾದರೂ ದೂರು ಹೇಳಿದರೆ ಇಬ್ಬರು ಮೂವರು ಸಾಕ್ಷಿಗಳಿದ್ದ ಹೊರತಾಗಿ ಅದನ್ನು ಒಪ್ಪಿಕೊಳ್ಳಬೇಡ.
20 અપરં યે પાપમાચરન્તિ તાન્ સર્વ્વેષાં સમક્ષં ભર્ત્સયસ્વ તેનાપરેષામપિ ભીતિ ર્જનિષ્યતે|
೨೦ಪಾಪದಲ್ಲಿ ನಡೆಯುವವರನ್ನು ಎಲ್ಲರ ಮುಂದೆಯೇ ಗದರಿಸು. ಇವರಿಂದ ಉಳಿದವರಿಗೂ ಭಯವುಂಟಾಗುವುದು.
21 અહમ્ ઈશ્વરસ્ય પ્રભો ર્યીશુખ્રીષ્ટસ્ય મનોનીતદિવ્યદૂતાનાઞ્ચ ગોચરે ત્વામ્ ઇદમ્ આજ્ઞાપયામિ ત્વં કસ્યાપ્યનુરોધેન કિમપિ ન કુર્વ્વન વિનાપક્ષપાતમ્ એતાન વિધીન્ પાલય|
೨೧ನೀನು ವಿಚಾರಿಸುವುದಕ್ಕೆ ಮೊದಲೇ ತಪ್ಪುಹೊರಿಸದೆಯೂ, ಪಕ್ಷಪಾತದಿಂದ ಏನೂ ಮಾಡದೆಯೂ, ನಾನು ಹೇಳಿರುವ ಮಾತುಗಳ ಪ್ರಕಾರವೇ ನಡೆಯಬೇಕೆಂದು ದೇವರ ಮುಂದೆಯೂ, ಕ್ರಿಸ್ತ ಯೇಸುವಿನ ಮುಂದೆಯೂ, ಆರಿಸಲ್ಪಟ್ಟಿರುವ ದೇವದೂತರ ಮುಂದೆಯೂ ಖಂಡಿತವಾಗಿ ಹೇಳುತ್ತೇನೆ.
22 કસ્યાપિ મૂર્દ્ધિ હસ્તાપર્ણં ત્વરયા માકાર્ષીઃ| પરપાપાનાઞ્ચાંશી મા ભવ| સ્વં શુચિં રક્ષ|
೨೨ಅವಸರದಿಂದ ಯಾರ ತಲೆಯ ಮೇಲೆಯಾದರೂ ಹಸ್ತವನ್ನಿಟ್ಟು ಸಭೆಯ ನಾಯಕತ್ವಕ್ಕೆ ನೇಮಿಸಬೇಡ. ಮತ್ತೊಬ್ಬರು ಮಾಡಿದ ಪಾಪದಲ್ಲಿ ನೀನು ಪಾಲುಗಾರನಾಗದೆ, ನೀನು ಶುದ್ಧನಾಗಿರುವ ಹಾಗೆ ನೋಡಿಕೋ.
23 અપરં તવોદરપીડાયાઃ પુનઃ પુન દુર્બ્બલતાયાશ્ચ નિમિત્તં કેવલં તોયં ન પિવન્ કિઞ્ચિન્ મદ્યં પિવ|
೨೩ಇನ್ನು ಮೇಲೆ ನೀರನ್ನು ಮಾತ್ರ ಕುಡಿಯುವವನಾಗಿರದೆ, ನಿನ್ನ ಅಜೀರ್ಣದ ಮತ್ತು ನಿನಗೆ ಆಗಾಗ್ಗೆ ಉಂಟಾಗುವ ಅಸ್ವಸ್ಥತೆಯ ಪರಿಹಾರಕ್ಕಾಗಿ ದ್ರಾಕ್ಷಾರಸವನ್ನು ಸ್ವಲ್ಪವಾಗಿ ತೆಗೆದುಕೊ.
24 કેષાઞ્ચિત્ માનવાનાં પાપાનિ વિચારાત્ પૂર્વ્વં કેષાઞ્ચિત્ પશ્ચાત્ પ્રકાશન્તે|
೨೪ಕೆಲವರ ಪಾಪಕೃತ್ಯಗಳು ತೀರ್ಪಿಗೆ ಮುಂಚೆಯೇ ಬಯಲಾಗುತ್ತವೆ, ಬೇರೆ ಕೆಲವರ ಪಾಪಕೃತ್ಯಗಳು ಮರೆಯಾಗಿದ್ದು ತರುವಾಯ ತಿಳಿದುಬರುತ್ತವೆ.
25 તથૈવ સત્કર્મ્માણ્યપિ પ્રકાશન્તે તદન્યથા સતિ પ્રચ્છન્નાનિ સ્થાતું ન શક્નુવન્તિ|
೨೫ಹಾಗೆಯೇ ಕೆಲವು ಸತ್ಕ್ರಿಯೆಗಳು ಪ್ರಸಿದ್ಧವಾಗಿವೆ, ಬೇರೆ ಕೆಲವು ಸತ್ಕ್ರಿಯೆಗಳು ಬೆಳಕಿಗೆ ಬಾರದ್ದಿದ್ದರೂ ಮರೆಯಾಗಿರಲಾರವು.

< ૧ તીમથિયઃ 5 >