< मथिः 20 >
1 स्वर्गराज्यम् एतादृशा केनचिद् गृहस्येन समं, योऽतिप्रभाते निजद्राक्षाक्षेत्रे कृषकान् नियोक्तुं गतवान्।
“ಪರಲೋಕ ರಾಜ್ಯವನ್ನು ತನ್ನ ದ್ರಾಕ್ಷಿಯ ತೋಟಕ್ಕೆ ಕೂಲಿಯಾಳುಗಳನ್ನು ಕರೆಯುವುದಕ್ಕಾಗಿ ಬೆಳಿಗ್ಗೆ ಹೊರಟ ಒಬ್ಬ ಯಜಮಾನನಿಗೆ ಹೋಲಿಸಲಾಗಿದೆ.
2 पश्चात् तैः साकं दिनैकभृतिं मुद्राचतुर्थांशं निरूप्य तान् द्राक्षाक्षेत्रं प्रेरयामास।
ಅವನು ದಿನಕ್ಕೆ ಒಂದು ಬೆಳ್ಳಿನಾಣ್ಯ ಕೂಲಿಯಾಳುಗಳೊಂದಿಗೆ ಒಪ್ಪಂದ ಮಾಡಿಕೊಂಡು ತನ್ನ ದ್ರಾಕ್ಷಿಯ ತೋಟಕ್ಕೆ ಅವರನ್ನು ಕಳುಹಿಸಿಕೊಟ್ಟನು.
3 अनन्तरं प्रहरैकवेलायां गत्वा हट्टे कतिपयान् निष्कर्म्मकान् विलोक्य तानवदत्,
“ಅವನು ಸುಮಾರು ಒಂಬತ್ತು ಗಂಟೆಗೆ ಹೊರಗೆ ಹೋಗಿ ಇನ್ನು ಕೆಲವರು ಸಂತೆಯ ಸ್ಥಳದಲ್ಲಿ ಕೆಲಸವಿಲ್ಲದೆ ನಿಂತಿರುವುದನ್ನು ಕಂಡು,
4 यूयमपि मम द्राक्षाक्षेत्रं यात, युष्मभ्यमहं योग्यभृतिं दास्यामि, ततस्ते वव्रजुः।
ಅವರಿಗೆ, ‘ನೀವು ಸಹ ದ್ರಾಕ್ಷಿಯ ತೋಟಕ್ಕೆ ಹೋಗಿರಿ; ಸರಿಯಾದ ಕೂಲಿಯನ್ನು ನಾನು ನಿಮಗೆ ಕೊಡುತ್ತೇನೆ,’ ಎಂದು ಹೇಳಿದನು.
5 पुनश्च स द्वितीयतृतीययोः प्रहरयो र्बहि र्गत्वा तथैव कृतवान्।
ಆಗ ಅವರು ಹೊರಟು ಹೋದರು. “ಅವನು ಸುಮಾರು ಹನ್ನೆರಡು ಗಂಟೆಗೂ ಅನಂತರ ಮೂರು ಗಂಟೆಗೂ ತಿರುಗಿ ಹೋಗಿ ಹಾಗೆಯೇ ಮಾಡಿದನು.
6 ततो दण्डद्वयावशिष्टायां वेलायां बहि र्गत्वापरान् कतिपयजनान् निष्कर्म्मकान् विलोक्य पृष्टवान्, यूयं किमर्थम् अत्र सर्व्वं दिनं निष्कर्म्माणस्तिष्ठथ?
ತರುವಾಯ ಸುಮಾರು ಐದು ಗಂಟೆಗೆ ಅವನು ಹೊರಗೆ ಹೋಗಿ ಬೇರೆ ಕೆಲವರು ಕೆಲಸವಿಲ್ಲದೆ ನಿಂತಿರುವುದನ್ನು ಕಂಡು, ‘ನೀವು ದಿನವೆಲ್ಲಾ ಇಲ್ಲಿ ಕೆಲಸವಿಲ್ಲದೆ ನಿಂತಿರುವುದೇಕೆ?’ ಎಂದು ಕೇಳಿದನು.
7 ते प्रत्यवदन्, अस्मान् न कोपि कर्ममणि नियुंक्ते। तदानीं स कथितवान्, यूयमपि मम द्राक्षाक्षेत्रं यात, तेन योग्यां भृतिं लप्स्यथ।
“ಅವರು, ‘ಯಾರೂ ನಮ್ಮನ್ನು ಕೂಲಿಗೆ ಕರೆಯಲಿಲ್ಲ,’ ಎಂದರು. “ಆಗ ಅವನು, ‘ನೀವು ಸಹ ದ್ರಾಕ್ಷಿಯ ತೋಟಕ್ಕೆ ಹೋಗಿರಿ,’ ಎಂದು ಹೇಳಿದನು.
8 तदनन्तरं सन्ध्यायां सत्यां सएव द्राक्षाक्षेत्रपतिरध्यक्षं गदिवान्, कृषकान् आहूय शेषजनमारभ्य प्रथमं यावत् तेभ्यो भृतिं देहि।
“ಸಂಜೆಯಾದಾಗ, ದ್ರಾಕ್ಷಿಯ ತೋಟದ ಯಜಮಾನನು ತನ್ನ ಮೇಸ್ತ್ರಿಗೆ, ‘ಕೂಲಿಯಾಳುಗಳನ್ನು ಕರೆದು, ಕೊನೆಯವನಿಂದ ಪ್ರಾರಂಭಿಸಿ ಮೊದಲನೆಯವನವರೆಗೆ ಕೂಲಿಯನ್ನು ಕೊಡು,’ ಎಂದು ಹೇಳಿದನು.
9 तेन ये दण्डद्वयावस्थिते समायातास्तेषाम् एकैको जनो मुद्राचतुर्थांशं प्राप्नोत्।
“ಆಗ ಐದು ಗಂಟೆಗೆ ಕರೆದವರು ಬಂದಾಗ ಪ್ರತಿಯೊಬ್ಬನಿಗೂ ಒಂದೊಂದು ಬೆಳ್ಳಿನಾಣ್ಯ ಸಿಕ್ಕಿತು.
10 तदानीं प्रथमनियुक्ता जना आगत्यानुमितवन्तो वयमधिकं प्रप्स्यामः, किन्तु तैरपि मुद्राचतुर्थांशोऽलाभि।
ಆಗ ಮೊದಲು ಬಂದವರು, ತಮಗೆ ಹೆಚ್ಚು ದೊರೆಯುವುದೆಂದು ನೆನಸಿದರು. ಆದರೆ ಅವರಲ್ಲಿ ಪ್ರತಿಯೊಬ್ಬನಿಗೂ ಅದೇ ರೀತಿಯಲ್ಲಿ ಒಂದೊಂದೇ ಬೆಳ್ಳಿನಾಣ್ಯ ಸಿಕ್ಕಿತು.
11 ततस्ते तं गृहीत्वा तेन क्षेत्रपतिना साकं वाग्युद्धं कुर्व्वन्तः कथयामासुः,
ಅವರು ಅದನ್ನು ತೆಗೆದುಕೊಂಡಾಗ, ಯಜಮಾನನ ವಿರೋಧವಾಗಿ ಗೊಣುಗುಟ್ಟುತ್ತಾ,
12 वयं कृत्स्नं दिनं तापक्लेशौ सोढवन्तः, किन्तु पश्चाताया से जना दण्डद्वयमात्रं परिश्रान्तवन्तस्तेऽस्माभिः समानांशाः कृताः।
‘ಕಡೆಯವರಾದ ಇವರು ಒಂದೇ ತಾಸು ಕೆಲಸಮಾಡಿದ್ದಾರೆ, ಆದರೆ ದಿನವೆಲ್ಲಾ ಬಿಸಿಲಿನಲ್ಲಿ ಭಾರ ಹೊತ್ತು ಕೆಲಸಮಾಡಿದ ನಮ್ಮನ್ನು ನೀನು ಇವರಿಗೆ ಸಮಮಾಡಿದ್ದಿ,’ ಎಂದರು.
13 ततः स तेषामेकं प्रत्युवाच, हे वत्स, मया त्वां प्रति कोप्यन्यायो न कृतः किं त्वया मत्समक्षं मुद्राचतुर्थांशो नाङ्गीकृतः?
“ಆದರೆ ಯಜಮಾನನು ಅವರಲ್ಲಿ ಒಬ್ಬನಿಗೆ ಉತ್ತರವಾಗಿ, ‘ಸ್ನೇಹಿತನೇ, ನಾನು ನಿನಗೆ ಅನ್ಯಾಯ ಮಾಡಲಿಲ್ಲ. ಒಂದು ಬೆಳ್ಳಿ ನಾಣ್ಯಕ್ಕೆ ನೀನು ನನ್ನೊಂದಿಗೆ ಒಪ್ಪಂದ ಮಾಡಿಕೊಳ್ಳಲಿಲ್ಲವೇ?
14 तस्मात् तव यत् प्राप्यं तदादाय याहि, तुभ्यं यति, पश्चातीयनियुक्तलोकायापि तति दातुमिच्छामि।
ನಿನ್ನ ಕೂಲಿ ತೆಗೆದುಕೊಂಡು ಹೋಗು. ನಿನಗೆ ನಾನು ಕೊಟ್ಟಂತೆಯೇ ಈ ಕಡೆಯವನಿಗೂ ಕೊಡುವುದು ನನ್ನ ಇಷ್ಟ.
15 स्वेच्छया निजद्रव्यव्यवहरणं किं मया न कर्त्तव्यं? मम दातृत्वात् त्वया किम् ईर्ष्यादृष्टिः क्रियते?
ನನ್ನದನ್ನು ನನ್ನ ಇಷ್ಟಬಂದಂತೆ ಕೊಡುವುದಕ್ಕೆ ನನಗೆ ಹಕ್ಕಿಲ್ಲವೇ? ನಾನು ಔದಾರ್ಯವುಳ್ಳವನಾದ್ದರಿಂದ, ನಿನಗೆ ಹೊಟ್ಟೆಯುರಿಯೋ?’ ಎಂದನು.
16 इत्थम् अग्रीयलोकाः पश्चतीया भविष्यन्ति, पश्चातीयजनाश्चग्रीया भविष्यन्ति, अहूता बहवः किन्त्वल्पे मनोभिलषिताः।
“ಹೀಗೆ ಕಡೆಯವರು ಮೊದಲನೆಯವರಾಗುವರು, ಮೊದಲನೆಯವರು ಕಡೆಯವರಾಗುವರು,” ಎಂದು ಹೇಳಿದರು.
17 तदनन्तरं यीशु र्यिरूशालम्नगरं गच्छन् मार्गमध्ये शिष्यान् एकान्ते वभाषे,
ಯೇಸು ಯೆರೂಸಲೇಮಿಗೆ ಹೋಗುತ್ತಿರುವಾಗ ಹನ್ನೆರಡು ಮಂದಿ ಶಿಷ್ಯರನ್ನು ದಾರಿಯಲ್ಲಿ ಪ್ರತ್ಯೇಕವಾಗಿ ಕರೆದು ಅವರಿಗೆ,
18 पश्य वयं यिरूशालम्नगरं यामः, तत्र प्रधानयाजकाध्यापकानां करेषु मनुष्यपुत्रः समर्पिष्यते;
“ಇಗೋ, ನಾವು ಯೆರೂಸಲೇಮಿಗೆ ಹೋಗುತ್ತಿದ್ದೇವೆ. ಅಲ್ಲಿ ಮನುಷ್ಯಪುತ್ರನಾದ ನನ್ನನ್ನು ಮುಖ್ಯಯಾಜಕರ ಮತ್ತು ನಿಯಮ ಬೋಧಕರ ಕೈಗೆ ಒಪ್ಪಿಸಿಕೊಡುವರು. ಅವರು ನನಗೆ ಮರಣದಂಡನೆಯನ್ನು ವಿಧಿಸುವರು.
19 ते च तं हन्तुमाज्ञाप्य तिरस्कृत्य वेत्रेण प्रहर्त्तुं क्रुशे धातयितुञ्चान्यदेशीयानां करेषु समर्पयिष्यन्ति, किन्तु स तृतीयदिवसे श्मशानाद् उत्थापिष्यते।
ಇದಲ್ಲದೆ ನನ್ನನ್ನು ಹಾಸ್ಯಮಾಡುವುದಕ್ಕೂ ಕೊರಡೆಗಳಿಂದ ಹೊಡೆಯುವುದಕ್ಕೂ ಶಿಲುಬೆಗೆ ಹಾಕುವುದಕ್ಕೂ ಯೆಹೂದ್ಯರಲ್ಲದವರ ಕೈಗೆ ಒಪ್ಪಿಸಿಕೊಡುವರು. ನಾನಾದರೋ ಮೂರು ದಿನದ ಮೇಲೆ ಜೀವಿತನಾಗಿ ಎದ್ದು ಬರುವೆನು,” ಎಂದು ಹೇಳಿದರು.
20 तदानीं सिवदीयस्य नारी स्वपुत्रावादाय यीशोः समीपम् एत्य प्रणम्य कञ्चनानुग्रहं तं ययाचे।
ಜೆಬೆದಾಯನ ಮಕ್ಕಳ ತಾಯಿ ತನ್ನ ಪುತ್ರರ ಸಮೇತ ಯೇಸುವಿನ ಬಳಿಗೆ ಬಂದು, ಅವರ ಮುಂದೆ ಮೊಣಕಾಲೂರಿ ಬೇಡಿಕೊಂಡಳು.
21 तदा यीशुस्तां प्रोक्तवान्, त्वं किं याचसे? ततः सा बभाषे, भवतो राजत्वे ममानयोः सुतयोरेकं भवद्दक्षिणपार्श्वे द्वितीयं वामपार्श्व उपवेष्टुम् आज्ञापयतु।
ಯೇಸು, “ನಿನ್ನ ಬೇಡಿಕೆ ಏನು?” ಎಂದು ಕೇಳಿದರು. “ನಿಮ್ಮ ರಾಜ್ಯದಲ್ಲಿ ಈ ನನ್ನ ಇಬ್ಬರು ಪುತ್ರರಲ್ಲಿ ಒಬ್ಬನು ನಿಮ್ಮ ಬಲಗಡೆಯಲ್ಲೂ ಇನ್ನೊಬ್ಬನು ನಿಮ್ಮ ಎಡಗಡೆಯಲ್ಲೂ ಕುಳಿತುಕೊಳ್ಳುವಂತೆ ಅನುಗ್ರಹಿಸಬೇಕು,” ಎಂದು ಬೇಡಿಕೊಂಡಳು.
22 यीशुः प्रत्युवाच, युवाभ्यां यद् याच्यते, तन्न बुध्यते, अहं येन कंसेन पास्यामि युवाभ्यां किं तेन पातुं शक्यते? अहञ्च येन मज्जेनेन मज्जिष्ये, युवाभ्यां किं तेन मज्जयितुं शक्यते? ते जगदुः शक्यते।
ಯೇಸು ಉತ್ತರವಾಗಿ, “ನೀವು ಬೇಡಿಕೊಂಡದ್ದು ಏನೆಂದು ನಿಮಗೆ ತಿಳಿಯದು. ನಾನು ಕುಡಿಯಲಿರುವ ಪಾತ್ರೆಯಿಂದ ಕುಡಿಯಲು ನಿಮ್ಮಿಂದಾದೀತೇ?” ಎಂದು ಕೇಳಿದರು. ಅವರು, “ಹೌದು, ನಮ್ಮಿಂದಾಗುವುದು,” ಎಂದು ಹೇಳಿದರು.
23 तदा स उक्तवान्, युवां मम कंसेनावश्यं पास्यथः, मम मज्जनेन च युवामपि मज्जिष्येथे, किन्तु येषां कृते मत्तातेन निरूपितम् इदं तान् विहायान्यं कमपि मद्दक्षिणपार्श्वे वामपार्श्वे च समुपवेशयितुं ममाधिकारो नास्ति।
ಅದಕ್ಕೆ ಯೇಸು, “ನನ್ನ ಪಾತ್ರೆಯಿಂದ ನೀವು ಕುಡಿಯುವಿರಿ, ಆದರೆ ನನ್ನ ಬಲಗಡೆಯಲ್ಲಾಗಲಿ ಎಡಗಡೆಯಲ್ಲಾಗಲಿ ಕುಳಿತುಕೊಳ್ಳುವಂತೆ ಅನುಗ್ರಹಿಸುವುದು ನನ್ನದಲ್ಲ, ನನ್ನ ತಂದೆಯಿಂದ ಅದು ಯಾರಿಗೋಸ್ಕರ ಸಿದ್ಧವಾಗಿದೆಯೋ ಅವರಿಗೇ ಕೊಡಲಾಗುವುದು,” ಎಂದು ಹೇಳಿದರು.
24 एतां कथां श्रुत्वान्ये दशशिष्यास्तौ भ्रातरौ प्रति चुकुपुः।
ಬೇರೆ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿದಾಗ, ಆ ಇಬ್ಬರು ಸಹೋದರರ ಮೇಲೆ ಸಿಟ್ಟುಗೊಂಡರು.
25 किन्तु यीशुः स्वसमीपं तानाहूय जगाद, अन्यदेशीयलोकानां नरपतयस्तान् अधिकुर्व्वन्ति, ये तु महान्तस्ते तान् शासति, इति यूयं जानीथ।
ಆದರೆ ಯೇಸು ಶಿಷ್ಯರನ್ನು ತಮ್ಮ ಹತ್ತಿರಕ್ಕೆ ಕರೆದು, “ಯೆಹೂದ್ಯರಲ್ಲದವರ ಅಧಿಪತಿಗಳು ತಮ್ಮ ಪ್ರಜೆಗಳ ಮೇಲೆ ದೊರೆತನ ಮಾಡುತ್ತಾರೆಂದೂ ಉನ್ನತ ಅಧಿಕಾರಿಗಳು ಅವರ ಮೇಲೆ ಅಧಿಕಾರವನ್ನು ನಡೆಸುತ್ತಾರೆಂದೂ ನಿಮಗೆ ತಿಳಿದಿದೆ.
26 किन्तु युष्माकं मध्ये न तथा भवेत्, युष्माकं यः कश्चित् महान् बुभूषति, स युष्मान् सेवेत;
ಆದರೆ ನೀವು ಹಾಗಿರಬಾರದು. ನಿಮ್ಮಲ್ಲಿ ದೊಡ್ಡವನಾಗಿರಬೇಕೆಂದಿರುವವನು ನಿಮ್ಮ ಸೇವಕನಾಗಿರಲಿ.
27 यश्च युष्माकं मध्ये मुख्यो बुभूषति, स युष्माकं दासो भवेत्।
ನಿಮ್ಮಲ್ಲಿ ಯಾವನಾದರೂ ಪ್ರಮುಖನಾಗಬೇಕೆಂದಿದ್ದರೆ, ಅವನು ನಿಮ್ಮ ಆಳಾಗಿರಲಿ.
28 इत्थं मनुजपुत्रः सेव्यो भवितुं नहि, किन्तु सेवितुं बहूनां परित्राणमूल्यार्थं स्वप्राणान् दातुञ्चागतः।
ಮನುಷ್ಯಪುತ್ರನಾದ ನಾನು ಸಹ ಸೇವೆಮಾಡಿಸಿಕೊಳ್ಳುವುದಕ್ಕಾಗಿ ಅಲ್ಲ, ಸೇವೆಮಾಡುವುದಕ್ಕಾಗಿಯೂ ಅನೇಕರಿಗಾಗಿ ನನ್ನ ಪ್ರಾಣವನ್ನೇ ಈಡಾಗಿ ಕೊಡುವುದಕ್ಕಾಗಿಯೂ ಬಂದಿದ್ದೇನೆ,” ಎಂದು ಹೇಳಿದರು.
29 अनन्तरं यिरीहोनगरात् तेषां बहिर्गमनसमये तस्य पश्चाद् बहवो लोका वव्रजुः।
ಯೇಸು ಮತ್ತು ಅವರ ಶಿಷ್ಯರು ಯೆರಿಕೋವಿನಿಂದ ಹೊರಟು ಹೋಗುತ್ತಿರುವಾಗ, ಜನರು ದೊಡ್ಡ ಸಮೂಹವಾಗಿ ಯೇಸುವನ್ನು ಹಿಂಬಾಲಿಸಿದರು.
30 अपरं वर्त्मपार्श्व उपविशन्तौ द्वावन्धौ तेन मार्गेण यीशो र्गमनं निशम्य प्रोच्चैः कथयामासतुः, हे प्रभो दायूदः सन्तान, आवयो र्दयां विधेहि।
ದಾರಿಯ ಮಗ್ಗುಲಲ್ಲಿ ಕೂತಿದ್ದ ಇಬ್ಬರು ಕುರುಡರು ಯೇಸು ಹಾದು ಹೋಗುತ್ತಿದ್ದಾರೆಂದು ಕೇಳಿ, “ಕರ್ತನೇ, ದಾವೀದನ ಪುತ್ರನೇ, ನಮ್ಮ ಮೇಲೆ ಕರುಣೆಯಿಡು!” ಎಂದು ಕೂಗಿ ಹೇಳಿದರು.
31 ततो लोकाः सर्व्वे तुष्णीम्भवतमित्युक्त्वा तौ तर्जयामासुः; तथापि तौ पुनरुच्चैः कथयामासतुः हे प्रभो दायूदः सन्तान, आवां दयस्व।
ಅವರು ಸುಮ್ಮನಿರುವಂತೆ ಜನರ ಸಮೂಹವು ಅವರನ್ನು ಗದರಿಸಿತು. ಆದರೂ ಅವರು, “ಕರ್ತನೇ, ದಾವೀದನ ಪುತ್ರನೇ, ನಮ್ಮ ಮೇಲೆ ಕರುಣೆಯಿಡು!” ಎಂದು ಇನ್ನೂ ಗಟ್ಟಿಯಾಗಿ ಕೂಗಿಕೊಂಡರು.
32 तदानीं यीशुः स्थगितः सन् तावाहूय भाषितवान्, युवयोः कृते मया किं कर्त्तर्व्यं? युवां किं कामयेथे?
ಆಗ ಯೇಸು ನಿಂತು, ಅವರನ್ನು ಕರೆದು, “ನಾನು ನಿಮಗೆ ಏನು ಮಾಡಬೇಕೆಂದು ಅಪೇಕ್ಷಿಸುತ್ತೀರಿ?” ಎಂದು ಕೇಳಿದರು.
33 तदा तावुक्तवन्तौ, प्रभो नेत्राणि नौ प्रसन्नानि भवेयुः।
ಅವರು ಯೇಸುವಿಗೆ, “ಕರ್ತದೇವರೇ, ನಮಗೆ ಕಣ್ಣು ಕಾಣುವಂತೆ ಮಾಡು,” ಎಂದರು.
34 तदानीं यीशुस्तौ प्रति प्रमन्नः सन् तयो र्नेत्राणि पस्पर्श, तेनैव तौ सुवीक्षाञ्चक्राते तत्पश्चात् जग्मुतुश्च।
ಯೇಸು ಅವರ ಮೇಲೆ ಕನಿಕರಪಟ್ಟು ಅವರ ಕಣ್ಣುಗಳನ್ನು ಮುಟ್ಟಿದರು. ಕೂಡಲೇ ಅವರ ಕಣ್ಣುಗಳು ದೃಷ್ಟಿಯನ್ನು ಪಡೆದವು. ಅವರೂ ಯೇಸುವನ್ನು ಹಿಂಬಾಲಿಸಿದರು.