< यर्मिया 41 >
1 सातौँ महिनामा एलीशामाको नाति, नतन्याहको छोरो इश्माएल, जो राजकीय घरानाका थिए, तिनी राजाका दस जना अधिकारीसँगै मिस्पामा अहीकामका छोरा गदल्याहकहाँ आए । मिस्पामा तिनीहरूले सँगसँगै खानपान गरे ।
೧ಏಳನೆಯ ತಿಂಗಳಿನಲ್ಲಿ ರಾಜವಂಶದವನೂ ಎಲೀಷಾಮನ ಮೊಮ್ಮಗನೂ ನೆತನ್ಯನ ಮಗನೂ ಅರಸನ ಪ್ರಧಾನರಲ್ಲಿ ಒಬ್ಬನೂ ಆದ ಇಷ್ಮಾಯೇಲನು ಹತ್ತು ಮಂದಿಯೊಂದಿಗೆ ಅಹೀಕಾಮನ ಮಗನಾದ ಗೆದಲ್ಯನು ವಾಸವಾಗಿದ್ದ ಮಿಚ್ಪಕ್ಕೆ ಬಂದನು; ಅಲ್ಲಿ ಅವನೊಂದಿಗೆ ಊಟಮಾಡಿದರು.
2 तर नतन्याहको छोरो इश्माएल र तिनीसित भएका दस जना मानिस उठे, र शापानका नाति, अहीकामका छोरा गदल्याहलाई तरवारले आक्रमण गरे । इश्माएलले गदल्याहलाई मारे, जसलाई बेबिलोनका राजाले देशको गभर्नर नियुक्त गरेका थिए ।
೨ಆಗ ನೆತನ್ಯನ ಮಗನಾದ ಇಷ್ಮಾಯೇಲನೂ ಅವನೊಂದಿಗಿದ್ದ ಹತ್ತು ಜನರೂ ಎದ್ದು ಅಹೀಕಾಮನ ಮಗ ಶಾಫಾನನ ಮೊಮ್ಮಗ ಬಾಬೆಲಿನ ಅರಸನಿಂದ ದೇಶಾಧಿಪತಿಯಾಗಿ ನೇಮಿಸಲ್ಪಟ್ಟವನೂ ಆದ ಗೆದಲ್ಯನನ್ನು ಕತ್ತಿಯಿಂದ ಹೊಡೆದು ಕೊಂದರು.
3 त्यसपछि इश्माएलले मिस्पामा गदल्याहसित भएका सबै यहूदी र त्यहाँ भेट्टाइएका कल्दी योद्धाहरूलाई मारे ।
೩ಇದಲ್ಲದೆ ಇಷ್ಮಾಯೇಲನು ಗೆದಲ್ಯನ ಸಂಗಡ ಮಿಚ್ಪದಲ್ಲಿದ್ದ ಯೆಹೂದ್ಯರೆಲ್ಲರನ್ನೂ, ಅಲ್ಲಿ ಸಿಕ್ಕಿದ ಕಸ್ದೀಯರಾದ ಸೈನಿಕರನ್ನೂ ಹತ್ಯೆಮಾಡಿದನು.
4 तब गदल्याह मारिएको दोस्रो दिन भएको थयो तर पनि कसैलाई थाहा थिएन ।
೪ಅವನು ಗೆದಲ್ಯನನ್ನು ಕೊಂದ ಎರಡನೆಯ ದಿನದಲ್ಲಿ ಆ ಸಂಗತಿಯು ಇನ್ನೂ ಯಾರಿಗೂ ತಿಳಿಯದಿರಲು,
5 शकेम, शीलो र सामरियाबाट आ-आफ्ना दारी खौरेका, लुगा च्यातेका र शरीर चिरै-चिरा पारेका असी जना मानिस आ-आफ्ना हातमा खानाका भेटीहरू र धुप लिएर परमप्रभुको मन्दिरमा जानलाई आए ।
೫ಗಡ್ಡಬೋಳಿಸಿ, ಬಟ್ಟೆಹರಿದು ಗಾಯ ಮಾಡಿಕೊಂಡಿದ್ದ ಎಂಭತ್ತು ಜನರು ಶೆಕೆಮ್, ಶಿಲೋ, ಸಮಾರ್ಯ ಎಂಬ ಊರುಗಳಿಂದ ಬಂದು ಕೈಯಲ್ಲಿ ಧೂಪ ಮತ್ತು ನೈವೇದ್ಯದ್ರವ್ಯಗಳನ್ನು ತೆಗೆದುಕೊಂಡು ಯೆಹೋವನ ಆಲಯಕ್ಕೆ ಹೋಗುತ್ತಿದ್ದರು.
6 तिनीहरू रुँदै जाँदै गर्दा नतन्याहको छोरो इश्माएल मिस्पाबाट तिनीहरूलाई भेट्न निस्के । तिनीहरूसित तिनको भेट हुँदा तिनले तिनीहरूलाई भने, “अहीकामका छोरा गदल्याहकहाँ आओ ।”
೬ಆಗ ನೆತನ್ಯನ ಮಗನಾದ ಇಷ್ಮಾಯೇಲನು ಮಿಚ್ಪದಿಂದ ಅವರ ಕಡೆಗೆ ಹೊರಟು ದಾರಿಯುದ್ದಕ್ಕೂ ಅಳುತ್ತಾ ನಡೆದು ಅವರನ್ನು ಎದರುಗೊಂಡು, “ಅಹೀಕಾಮನ ಮಗನಾದ ಗೆದಲ್ಯನ ಬಳಿಗೆ ಬನ್ನಿರಿ” ಎಂದು ಹೇಳಿದನು.
7 जब तिनीहरू सहरभित्र प्रवेश गरे, तब नतन्याहको छोरो इश्माएलले तिनीहरूको हत्या गरे, तिनी र तिनका मानिसहरूका लाशलाई एउटा खाडलमा फाले ।
೭ಅವರು ಊರೊಳಕ್ಕೆ ಬಂದ ಮೇಲೆ ನೆತನ್ಯನ ಮಗನಾದ ಇಷ್ಮಾಯೇಲನೂ ಮತ್ತು ಅವನ ಸಂಗಡಿಗರೂ ಅವರನ್ನು ಕೊಲ್ಲಿಸಿ ಬಾವಿಯಲ್ಲಿ ಹಾಕಿದರು.
8 तर तिनीहरूका बिचमा भएका दस जना यस्ता मानिस थिए जसले इश्माएललाई भने, “हामीलाई नमार्नुहोस्, किनकि हामीसित खेतमा लुकाइएका हाम्रा खाद्यपदार्थहरू अर्थात् गहूँ, जौ, तेल र मह छन् ।” त्यसैले तिनले तिनीहरू र तिनका साथीहरूलाई मारेनन् ।
೮ಆದರೆ ಆ ಎಂಭತ್ತು ಮಂದಿಯಲ್ಲಿ ಹತ್ತು ಜನರು ಇಷ್ಮಾಯೇಲನಿಗೆ, “ನಮ್ಮನ್ನು ಕೊಲ್ಲಬೇಡ; ಗೋದಿ, ಜವೆಗೋದಿ, ಎಣ್ಣೆ, ಜೇನುತುಪ್ಪ, ಇವುಗಳನ್ನು ಕಾಡಿನಲ್ಲಿ ಬಹಳವಾಗಿ ಬಚ್ಚಿಟ್ಟಿದ್ದೇವೆ” ಎಂದು ಬಿನ್ನೈಸಲು ಅವನು ಅವರನ್ನು ಅವರ ಜೊತೆಯವರಂತೆ ಕೊಲ್ಲದೆ ಬಿಟ್ಟನು.
9 इश्माएलले हत्या गरी जुन इनारमा ती लाशहरू फलेका थिए, त्यो एउटा ठुलो इनार थियो जसलाई आसा राजाले इस्राएलका राजा बाशाको विरुद्धमा सुरक्षाको निम्ति खनेका थिए । नतन्याहको छोरो इश्माएलले यसलाई लाशहरूले भरे ।
೯ಇಷ್ಮಾಯೇಲನು ತಾನು ಗೆದಲ್ಯನ ಸಂಗಡ ಕೊಂದ ಇತರರ ಶವಗಳನ್ನು ಹಾಕಿದ ಬಾವಿಯು, ಇಸ್ರಾಯೇಲಿನ ಅರಸನಾದ ಬಾಷನ ಭಯದಿಂದ ಅರಸನಾದ ಆಸನು ತೋಡಿಸಿದ್ದ ಬಾವಿಯೇ. ಆ ಬಾವಿಯನ್ನು ನೆತನ್ಯನ ಮಗನಾದ ಇಷ್ಮಾಯೇಲನು ಹತರಾದವರ ಶವಗಳಿಂದ ತುಂಬಿಸಿಬಿಟ್ಟನು.
10 त्यसपछि इश्माएलले मिस्पामा भएका अरू सबै मानिस, राजाका छोरीहरू र अहीकामका छोरा गदल्याहको जिम्मामा अङ्गरक्षकका कप्तान नबूजरदानले मिस्पामा छाडेका सबै मानिसलाई समाते । यसरी नतन्याहको छोरो इश्माएलले तिनीहरूलाई कैद गरे र सिमाना पार गरेर अम्मोनका मानिसहरूकहाँ गए ।
೧೦ಆ ಮೇಲೆ ನೆತನ್ಯನ ಮಗನಾದ ಇಷ್ಮಾಯೇಲನು ರಾಜಕುಮಾರ್ತೆಯರನ್ನು, ಕಾವಲುದಂಡಿನ ಅಧಿಪತಿಯಾದ ನೆಬೂಜರದಾನನು ಅಹೀಕಾಮನ ಮಗನಾದ ಗೆದಲ್ಯನಿಗೆ ಒಪ್ಪಿಸಿ, ಮಿಚ್ಪದ ಉಳಿದ ಜನರನ್ನು ಸೆರೆಹಿಡಿದು ಅಮ್ಮೋನ್ಯರ ಸೀಮೆಗೆ ಹೊರಟನು.
11 तर कारेहका छोरा योहानान र तिनीसित भएका सबै सेनाका कप्तानले नतन्याहको छोरो इश्माएलले ल्याएका सबै हानिको विषयमा सुने ।
೧೧ಕಾರೇಹನ ಮಗನಾದ ಯೋಹಾನಾನನೂ ಅವನೊಂದಿಗಿದ್ದ ಸಕಲ ಸೇನಾಪತಿಗಳೂ ನೆತನ್ಯನ ಮಗನಾದ ಇಷ್ಮಾಯೇಲನು ಮಾಡಿದ ಎಲ್ಲಾ ಕೆಡುಕನ್ನು ಕೇಳಿ,
12 त्यसैले तिनीहरूले आफ्ना सबै मानिसलाई लिए र नतन्याहको छोरो इश्माएलको विरुद्धमा युद्ध गर्न गए । तिनीहरूले तिनलाई गिबोनको ठुलो तलाउमा फेला पारे ।
೧೨ತಮ್ಮ ಸೈನಿಕರನ್ನೆಲ್ಲಾ ಕರೆದುಕೊಂಡು, ನೆತನ್ಯನ ಮಗನಾದ ಇಷ್ಮಾಯೇಲನ ಮೇಲೆ ಯುದ್ಧಕ್ಕೆ ಹೊರಟು, ಗಿಬ್ಯೋನಿನ ದೊಡ್ಡ ಕೆರೆಯ ಹತ್ತಿರ ಅವನನ್ನು ಕಂಡರು.
13 जब इश्माएलसित भएका सबै मानिसले कारेहका छोरा योहानान र तिनीसित भएका सबै सेनाका कप्तानलाई देखे, तब तिनीहरू साह्रै खुसी भए ।
೧೩ಆಗ ಇಷ್ಮಾಯೇಲನ ಸಂಗಡ ಇದ್ದ ಎಲ್ಲಾ ಜನರು ಕಾರೇಹನ ಮಗನಾದ ಯೋಹಾನಾನನನ್ನೂ ಅವನೊಂದಿಗಿದ್ದ ಸಮಸ್ತ ಸೇನಾಪತಿಗಳನ್ನೂ ನೋಡಿ ಸಂತೋಷಪಟ್ಟರು.
14 इश्माएलले मिस्पामा समातेका सबै मानिस फर्के र कारेहका छोरा योहानानकहाँ गए ।
೧೪ಇಷ್ಮಾಯೇಲನು ಮಿಚ್ಪದಿಂದ ಸೆರೆಯಾಗಿ ಒಯ್ದಿದ್ದ ಸಕಲ ಜನರು ಹಿಂದಿರುಗಿ ಹೋಗಿ ಕಾರೇಹನ ಮಗನಾದ ಯೋಹಾನಾನನ ಬಳಿಗೆ ಸೇರಿದರು.
15 तर नतन्याहको छोरो इश्माएल आठ जना मानिससँगै योहानानबाट भागे । तिनी अम्मेनका मानिसहरूकहाँ गए ।
೧೫ನೆತನ್ಯನ ಮಗನಾದ ಇಷ್ಮಾಯೇಲನೋ ಎಂಟು ಮಂದಿಯ ಸಂಗಡ ಯೋಹಾನಾನನಿಂದ ತಪ್ಪಿಸಿಕೊಂಡು ಅಮ್ಮೋನ್ಯರನ್ನು ಮೊರೆಹೊಕ್ಕನು.
16 कारेहका छोरा योहानान र तिनीसित भएका सबै सेनाका कप्तानले नतन्याहको छोरो इश्माएलबाट उद्धार गरिएका सबै मानिसलाई मिस्पाबाट लगे । यो इश्माएलले अहीकामका छोरा गदल्याहलाई मारेपछिको कुरो थियो । योहानान र तिनका साथीहरूले गिबोनमा उद्धार गरिएका बलिया पुरुषहरू, योद्धाहरू, स्त्रीहरू, बालबालिका र नपुंसकहरूलाई लगे ।
೧೬ಆಗ ಕಾರೇಹನ ಮಗನಾದ ಯೋಹಾನಾನನೂ ಅವನೊಂದಿಗಿದ್ದ ಸಮಸ್ತ ಸೇನಾಧಿಪತಿಗಳೂ ತಾವು ನೆತನ್ಯನ ಮಗನಾದ ಇಷ್ಮಾಯೇಲನ ಕೈಯಿಂದ ತಪ್ಪಿಸಿ ಗಿಬ್ಯೋನಿನಿಂದ ತಂದಿದ್ದ ಭಟರು, ಹೆಂಗಸರು, ಮಕ್ಕಳು, ಕಂಚುಕಿಗಳು, ಅಂತು ಇಷ್ಮಾಯೇಲನು ಅಹೀಕಾಮನ ಮಗನಾದ ಗೆದಲ್ಯನನ್ನು ಕೊಂದ ಮೇಲೆ ಮಿಚ್ಪದಿಂದ ಒಯ್ದ ಉಳಿದ ಜನರನ್ನೆಲ್ಲಾ ಕರೆದುಕೊಂಡು ಹೋದರು.
17 त्यसपछि तिनीहरू गए, र केही समय बेथलेहेम नजिकै गेरूथ-किम्हाममा बसे ।
೧೭ಅವರು ಕಸ್ದೀಯರ ಭಯದಿಂದ ಐಗುಪ್ತಕ್ಕೆ ವಲಸೆಹೋಗಬೇಕೆಂದು ಬೇತ್ಲೆಹೇಮಿನ ಸಮೀಪವಾಗಿರುವ ಗೇರುಥ್ ಕಿಮ್ಹಾಮಿನಲ್ಲಿ ಇಳಿದುಕೊಂಡರು.
18 कल्दीहरूको कारणले तिनीहरू मिश्रदेश जाँदै थिए । तिनीहरू उनीहरूदेखि डराएका थिए, किनकि नतन्याहको छोरो इश्माएलले अहीकामका छोरा गदल्याहलाई मारेका थिए, जसलाई बेबिलोनका राजाले देशको गभर्नर बनाएका थिए ।
೧೮ಬಾಬೆಲಿನ ಅರಸನಿಂದ ದೇಶಕ್ಕೆ ಅಧಿಪತಿಯಾಗಿ ನೇಮಿಸಲ್ಪಟ್ಟವನೂ ಅಹೀಕಾಮನ ಮಗನೂ ಆದ ಗೆದಲ್ಯನನ್ನು ನೆತನ್ಯನ ಮಗನಾದ ಇಷ್ಮಾಯೇಲನು ಕೊಂದುಹಾಕಿದ್ದರಿಂದ ಕಸ್ದೀಯರಿಗೆ ಅಂಜಿದರು.