< २ राजाहरू 5 >
1 अरामका राजाका सेनापति नामान आफ्ना मालिकको दृष्टिमा महान् र इज्जतदार मानिस थिए किनकि तिनीद्वारा परमप्रभुले अरामलाई विजय दिनुभएको थियो । तिनी बलिया र साहसी मानिस पनि थिए, तर तिनी कुष्ठरोगी थिए ।
೧ಅರಾಮ್ಯರ ಅರಸನಿಗೆ ನಾಮಾನನೆಂಬ ಒಬ್ಬ ಸೇನಾಧಿಪತಿಯಿದ್ದನು. ಯೆಹೋವನು ಇವನ ಮುಖಾಂತರವಾಗಿ ಅರಾಮ್ಯರಿಗೆ ಜಯವನ್ನು ಅನುಗ್ರಹಿಸಿದ್ದದರಿಂದ ಅರಸನು ಇವನನ್ನು ಮಹಾ ಪುರುಷನೆಂದೂ ಸನ್ಮಾನಯೋಗ್ಯನೆಂದೂ ಗೌರವಿಸುತ್ತಿದ್ದನು. ಆದರೆ ಪರಾಕ್ರಮಶಾಲಿಯಾದ ಇವನು ಕುಷ್ಠರೋಗಿಯಾಗಿದ್ದನು.
2 अरामीहरू दलहरूमा मिलेर हमला गर्न गएका थिए, र तिनीहरूले इस्राएल देशबाट एउटी सानी केटीलाई ल्याएका थिए । त्यसले नामानकी पत्नीको सेवा गर्थी ।
೨ಅರಾಮ್ಯರು ಒಂದು ಸಾರಿ ಸುಲಿಗೆ ಮಾಡುವುದಕ್ಕೋಸ್ಕರ ಇಸ್ರಾಯೇಲರ ಪ್ರಾಂತ್ಯಕ್ಕೆ ಹೋಗಿ ಬರುವಾಗ ಅಲ್ಲಿನ ಒಬ್ಬ ಹುಡುಗಿಯನ್ನು ಹಿಡಿದುಕೊಂಡು ಬಂದಿದ್ದರು. ಆಕೆಯು ನಾಮಾನನ ಹೆಂಡತಿಗೆ ಸೇವಕಿಯಾದಳು.
3 केटीले आफ्नी मालिक्नीलाई भनी, “मेरा मालिक सामरियामा भएका अगमवक्ताको साथमा भएको भए हुन्थ्यो! तब उहाँले मेरा मालिकलाई कुष्ठरोगबाट निको पार्नुहुन्थ्यो ।”
೩ಆಕೆಯು ಒಂದು ದಿನ ತನ್ನ ಯಜಮಾನಿಯ ಬಳಿ, “ನಮ್ಮ ದಣಿಯು ಸಮಾರ್ಯದಲ್ಲಿರುವ ಪ್ರವಾದಿಯ ಹತ್ತಿರ ಇದ್ದಿದ್ದರೆ ಎಷ್ಟೋ ಒಳ್ಳೆಯದಾಗುತ್ತಿತ್ತು. ಅವನು ನನ್ನ ಯಜಮಾನನನ್ನು ಕುಷ್ಠರೋಗದಿಂದ ವಾಸಿಮಾಡುತ್ತಿದ್ದನು” ಎಂದು ಹೇಳಿದಳು.
4 त्यसैले नामान भित्र प्रवेश गरे, र इस्राएल देशबाट ल्याइएकी त्यो केटीले के भनेकी थई त्यो राजालाई भने ।
೪ನಾಮಾನನು ಅರಸನ ಸನ್ನಿಧಿಗೆ ಹೋಗಿ ಇಸ್ರಾಯೇಲ್ ದೇಶದ ಹುಡುಗಿಯು ಹೇಳಿದ್ದನ್ನು ತಿಳಿಸಿದನು.
5 त्यसैले अरामका राजाले भने, “अब जाऊ, र म इस्राएलका राजालाई एउटा चिठी पठाउनेछु ।” नामान गए र तिन सय चालिस किलो चाँदी, सत्तरी किलो सुन र दस जोर लुगा तिनले आफूसितै लगे ।
೫ಅರಾಮ್ಯರ ಅರಸನು ಅವನಿಗೆ, “ನೀನು ಅಲ್ಲಿಗೆ ಹೋಗಿ ಬಾ. ನಾನು ನಿನ್ನ ಕೈಯಲ್ಲಿ ಇಸ್ರಾಯೇಲರ ಅರಸನಿಗೆ ಒಂದು ಪತ್ರವನ್ನು ಕೊಡುತ್ತೇನೆ” ಎಂದನು. ನಾಮಾನನು ಹತ್ತು ತಲಾಂತು ಬೆಳ್ಳಿ, (ಮೂವತ್ತು ಸಾವಿರ) ಆರು ಸಾವಿರ ತೊಲೆ ಬಂಗಾರ, ಹತ್ತು ಜೊತೆ ಬಟ್ಟೆಗಳು ಇವುಗಳನ್ನು ತೆಗೆದುಕೊಂಡು ಸಮಾರ್ಯಕ್ಕೆ ಹೋಗಿ,
6 तिनले इस्राएलका राजाको निम्ति चिठी पनि लिएर गए जसमा लेखिएको थियो, “जब यो चिठी तपाईंकहाँ ल्याइन्छ मैले तपाईंकहाँ आफ्नो सेवकलाई पठाएको तपाईंले देख्नुहुनेछ, ताकि तपाईंले तिनको कुष्ठरोगबाट तिनलाई निको पारिदिनुहोस् ।”
೬ಪತ್ರವನ್ನು ಇಸ್ರಾಯೇಲರ ಅರಸನಿಗೆ ಕೊಟ್ಟನು. ಅದರಲ್ಲಿ, “ನನ್ನ ಸೇವಕನಾದ ನಾಮಾನನನ್ನು ನಿನ್ನ ಬಳಿಗೆ ಕಳುಹಿಸಿದ್ದೇನೆ, ನೀನು ಅವನ ಕುಷ್ಠರೋಗವನ್ನು ವಾಸಿಮಾಡತಕ್ಕದ್ದೆಂದು ಈ ಪತ್ರದಿಂದ ತಿಳಿದುಕೋ” ಎಂಬುದಾಗಿ ಬರೆದಿತ್ತು.
7 जब इस्राएलका राजाले चिठी पढेका थिए, तब तिनले आफ्ना लुगा च्याते र भने, “आफैमा कुष्ठरोग भएको मानिसलाई मैले निको पारोस् भनी यो मानिसले इच्छा गर्नलाई मार्न र जिउँदो पार्न के म परमेश्वर हुँ र? उसले मसित झगडाको निहुँ खोजेको जस्तो पो लाग्दैछ ।”
೭ಇಸ್ರಾಯೇಲರ ಅರಸನು ಪತ್ರವನ್ನು ಓದಿದ ಕೂಡಲೆ ಬಟ್ಟೆಗಳನ್ನು ಹರಿದುಕೊಂಡು, ತನ್ನ ಪರಿವಾರದವರಿಗೆ, “ಅವನು ಕಳುಹಿಸಿದ ಮನುಷ್ಯನನ್ನು ಕುಷ್ಠರೋಗದಿಂದ ವಾಸಿಮಾಡಬೇಕಂತೆ. ಇದು ಎಂಥ ಅಪ್ಪಣೆ! ನಾನೇನು ದೇವರೋ? ಜೀವದಾನಮಾಡುವುದಕ್ಕಾಗಲಿ, ಸಾಯಿಸುವುದಕ್ಕಾಗಲಿ ನನಗೆ ಸಾಮರ್ಥ್ಯ ಉಂಟೋ? ಇವನು ನನ್ನೊಡನೆ ಜಗಳವಾಡುವುದಕ್ಕೆ ಕಾರಣ ಹುಡುಕುತ್ತಿದ್ದಾನಲ್ಲವೇ ನೀವೇ ಆಲೋಚಿಸಿ ನೋಡಿರಿ” ಎಂದು ಹೇಳಿದನು.
8 त्यसैले इस्राएलका राजालले आफ्ना लुगा च्याते भनी जब परमेश्वरका मानिस एलीशाले सुने, तब तिनले राजालाई यसो भनी समाचार पठाए, “किन तपाईंले आफ्नो लुगा च्यात्नुभएको? अब ऊ मकहाँ आओस्, र इस्राएलमा अगमवक्ता रहेछन् भनी उसले थाहा पाउनेछ ।”
೮ಇಸ್ರಾಯೇಲರ ಅರಸನು ತನ್ನ ಬಟ್ಟೆಗಳನ್ನು ಹರಿದುಕೊಂಡನೆಂಬುದನ್ನು ದೇವರ ಮನುಷ್ಯನಾದ ಎಲೀಷನು ಕೇಳಿ ದೂತರ ಮುಖಾಂತರವಾಗಿ ಅವನಿಗೆ, “ನೀನು, ನಿನ್ನ ಬಟ್ಟೆಗಳನ್ನು ಹರಿದುಕೊಂಡದ್ದೇಕೆ? ಅವನನ್ನು ನನ್ನ ಬಳಿಗೆ ಕಳುಹಿಸು, ಇಸ್ರಾಯೇಲರಲ್ಲಿ ಒಬ್ಬ ಪ್ರವಾದಿಯಿದ್ದಾನೆಂಬುದು ಅವನಿಗೆ ಗೊತ್ತಾಗಲಿ” ಎಂದು ಹೇಳಿ ಕಳುಹಿಸಿದನು.
9 त्यसैले नामान आफ्ना घोडाहरू र रथहरू लिएर आए र एलीशाको घरको ढोकामा उभिए ।
೯ನಾಮಾನನು ರಥಾಶ್ವಗಳೊಡನೆ ಎಲೀಷನ ಮನೆಗೆ ಹೋಗಿ ಬಾಗಿಲಿನ ಮುಂದೆ ನಿಂತನು.
10 एलीशाले तिनीकहाँ यसो भनेर एक जना सन्देशवाहक पठाए, “जानुहोस् र यर्दनमा आफूलाई सातपल्ट डुबुल्की लगाउनुहोस् र तपाईंको देह पहिलेको जस्तै हुनेछ । तपाईं शुद्ध बन्नुहुनेछ ।”
೧೦ಎಲೀಷನು ಅವನಿಗೆ, “ಹೋಗಿ ಯೊರ್ದನ್ ನದಿಯಲ್ಲಿ ಏಳು ಸಾರಿ ಮುಳುಗಿ ಬಾ, ಆಗ ನಿನ್ನ ದೇಹವು ಮೊದಲಿನಂತಾಗುವುದು; ನೀನು ಶುದ್ಧನಾಗುವಿ” ಎಂದು ಹೇಳಿ ಕಳುಹಿಸಿದನು.
11 तर नामान रिसाए र यसो भन्दै गए, “हेर, निश्चय नै तिनी मकहाँ बाहिर आउँनेछन् र खडा हुनेछन् अनि तिनले आफ्ना परमप्रभु परमेश्वरको नाउँ पुकार्नेछन् र मेरो कुष्ठरोगमाथि आफ्ना हात हल्लाउँनेछन् र मेरो कुष्टरोग निको पार्नेछन् भनी मैले सोचेको थिएँ ।
೧೧ನಾಮಾನನು ಇದನ್ನು ಕೇಳಿ ಕೋಪಗೊಂಡು, “ಇದೇನು? ಅವನು ಹೊರಗೆ ಬಂದು ತನ್ನ ದೇವರಾದ ಯೆಹೋವನ ಹೆಸರನ್ನು ಹೇಳಿ ನನ್ನ ಕುಷ್ಠದ ಮೇಲೆ ಕೈಯಾಡಿಸಿ ವಾಸಿಮಾಡುವನೆಂದು ನೆನಸಿದೆನು.
12 के दमस्कसका अबाना र फारपर नदीहरू इस्राएलका सबै पानीभन्दा असल छैनन् र? के म तिनमा नुहाएर शुद्ध हुन सक्दिनँ र?” त्यसैले तिनी फर्के र क्रुद्ध हुँदै आफ्नो बाटो लागे ।
೧೨ದಮಸ್ಕದ ಅಬಾನಾ ಮತ್ತು ಪರ್ಪರ್ ಎಂಬ ನದಿಗಳು ಇಸ್ರಾಯೇಲರ ಎಲ್ಲಾ ನದಿ ಹೊಳೆಹಳ್ಳಗಳಿಗಿಂತ ಉತ್ತಮವಾಗಿವೆಯಲ್ಲವೋ? ಸ್ನಾನದಿಂದ ಶುದ್ಧನಾಗುವ ಹಾಗಿದ್ದರೆ ನಾನು ಅವುಗಳಲ್ಲಿಯೇ ಸ್ನಾನಮಾಡಬಹುದಲ್ಲವೇ?” ಎಂದು ಹೇಳಿ, ಬಲು ಸಿಟ್ಟಿನಿಂದ ಹೊರಟುಹೋದನು.
13 तब नामानका सेवकहरू नजिक आए, र तिनलाई भने, “हे मेरा पिता, अगमवक्ताले तपाईंलाई कुनै कठिन कुरो गर्न लगाएको भए के तपाईंले त्यो गर्नुहुने थिएन र? त्यसको बदलामा 'आफैलाई डुबुल्की लगाउन र शुद्ध हुन' भन्दा झन् किन नगर्ने त?”
೧೩ಆಗ ಅವನ ಸೇವಕರು ಹತ್ತಿರ ಬಂದು ಅವನಿಗೆ, “ಸ್ವಾಮೀ, ಪ್ರವಾದಿಯು ಒಂದು ಕಠಿಣವಾದ ಕೆಲಸ ಹೇಳಿದ್ದರೆ, ಅದನ್ನು ನೀವು ಮಾಡುತ್ತಿದ್ದಿರಲ್ಲವೇ? ಹಾಗಾದರೆ ‘ಸ್ನಾನಮಾಡಿ ಶುದ್ಧನಾಗು’ ಎಂದು ಹೇಳಿದರೆ ಯಾಕೆ ಅದರಂತೆ ಮಾಡಬಾರದು” ಎಂದು ಹೇಳಿದರು.
14 तब तिनी तल गए र परमेश्वरका मानिसको सल्लाह मानेर यर्दमा आफैलाई सात पल्ट डुबुल्की लगाए । तिनको देह बच्चाको झैँ पहिलेजस्तै भयो र तिनी निको भए ।
೧೪ಅವನು ಯೊರ್ದನ್ ನದಿಗೆ ಹೋಗಿ ಏಳು ಸಾರಿ ಅದರಲ್ಲಿ ಮುಳುಗಿ ಎದ್ದನು. ಕೂಡಲೆ ದೇವರ ಮನುಷ್ಯನ ಮಾತಿಗನುಸಾರವಾಗಿ ಅವನ ದೇಹವು ಕೂಸಿನ ದೇಹದಂತೆ ಶುದ್ಧವಾಯಿತು.
15 नामान र तिनको दल परमेश्वरका मानिसकहाँ फर्केर आए र तिनको सामु खडा भए । तिनले भने, “हेर्नुहोस्, सारा पृथ्वीमा इस्राएलमा बाहेक अन्त कतै परमेश्वर हुनुहुन्न रहेछ भनी अब मलाई थाहा भयो । त्यसकारण तपाईंको दासबाट उपहार ग्रहण गर्नुहोस् ।”
೧೫ಅನಂತರ, ನಾಮಾನನು ತನ್ನ ಪರಿವಾರದವರೊಡನೆ, ಹಿಂದಿರುಗಿ ದೇವರ ಮನುಷ್ಯನ ಹತ್ತಿರ ಹೋಗಿ, ಅವನ ಮುಂದೆ ನಿಂತು, “ಇಸ್ರಾಯೇಲ್ ದೇಶದಲ್ಲಿರುವ ದೇವರ ಹೊರತಾಗಿ ಲೋಕದಲ್ಲಿ ಬೇರೆ ದೇವರು ಇರುವುದೇ ಇಲ್ಲವೆಂಬುದು ಈಗ ನನಗೆ ಗೊತ್ತಾಯಿತು. ನೀನು ದಯವಿಟ್ಟು ಕಾಣಿಕೆಯನ್ನು ಅಂಗೀಕರಿಸಬೇಕು” ಎಂದು ಹೇಳಿದನು.
16 तर एलीशाले जावाफ दिए, “परमप्रभु जसको सामु म खडा हुन्छु, उहाँको नाउँमा शपथ खाएर भन्छु, म केही लिने छैनँ ।” नामानले एलीशालाई उपहार लिन बिन्ती गरे तर तिनले इन्कार गरे ।
೧೬ಅದಕ್ಕೆ ಎಲೀಷನು, “ನಾನು ಸೇವೆಮಾಡುತ್ತಿರುವ ನನ್ನ ದೇವರು ನಿಜವಾಗಿಯೂ ಜೀವಿಸುವ ದೇವರಾದದರಿಂದ ನಿನ್ನಿಂದ ಏನೂ ತೆಗೆದುಕೊಳ್ಳುವುದಿಲ್ಲ” ಎಂದನು. ನಾಮಾನನು ಎಷ್ಟು ಒತ್ತಾಯಪಡಿಸಿದರೂ ಅವನು ಕಾಣಿಕೆಯನ್ನು ತೆಗೆದುಕೊಳ್ಳಲೇ ಇಲ್ಲ.
17 त्यसैले नामानले भने, “तपाईं लिनुहुन्न भने तपाईंका दासलाई दुईवटा खच्चरले बोक्न सक्ने माटो लान दिनुहोस् । किनकि अबदेखि तपाईंका दासले परमप्रभुबाहेक अन्य कुनै ईश्वरलाई न त होमबलि न बलिदान चढाउनेछ ।
೧೭ಆಗ ನಾಮಾನನು ಎಲೀಷನಿಗೆ, “ನೀನು ನನ್ನ ಕಾಣಿಕೆಯನ್ನು ಸ್ವೀಕರಿಸದಿದ್ದರೆ, ನಿನ್ನ ಸೇವಕನಾದ ನನಗೆ ಎರಡು ಹೇಸರಗತ್ತೆಯ ಹೊರುವಷ್ಟು ಮಣ್ಣನ್ನು ಕೊಡಿಸಬೇಕೆಂದು ಬೇಡಿಕೊಳ್ಳುತ್ತೇನೆ. ನಾನು ಇನ್ನು ಮುಂದೆ ಎಲ್ಲಾ ದೇವತೆಗಳನ್ನು ಬಿಟ್ಟು ಯೆಹೋವನೊಬ್ಬನಿಗೇ ಸರ್ವಾಂಗಹೋಮಯಜ್ಞಗಳನ್ನು ಸಮರ್ಪಿಸಬೇಕೆಂದಿದ್ದೇನೆ.
18 यो एउटा कुरामा परमप्रभुले तपाईंको दासलाई क्षमा गरून्, त्यो हो, जब मेरा राजा रिम्मोनको मन्दिरमा पुजा गर्न जान्छन् अनि मेरो हातमा भर पर्छन्, अनि रिम्मोनको मन्दिरमा म पनि निहुरिन्छु, तब यस विषयमा परमप्रभुले हजुरको दासलाई क्षमा गरून् ।”
೧೮ಆದರೆ ಈ ವಿಷಯದಲ್ಲಿ ಯೆಹೋವನು ನನ್ನನ್ನು ಕ್ಷಮಿಸಲಿ, ನನ್ನ ಒಡೆಯನು ಆರಾಧನೆಗೋಸ್ಕರ ರಿಮ್ಮೋನನ ದೇವಸ್ಥಾನಕ್ಕೆ ಹೋಗಿ ನನ್ನ ಕೈಹಿಡಿದು ಆ ದೇವತೆಗೆ ನಮಸ್ಕಾರ ಮಾಡುವಾಗ ನಾನೂ ನಮಸ್ಕಾರ ಮಾಡಬೇಕಾಗುವುದು. ಈ ಒಂದು ವಿಷಯದಲ್ಲಿ ಮಾತ್ರ ಯೆಹೋವನು ನನಗೆ ಕ್ಷಮೆಯನ್ನು ಅನುಗ್ರಹಿಸಬೇಕು” ಎಂದನು.
19 एलीशाले तिनलाई भने, “शान्तिसित जाऊ ।” यसरी नामान फर्केर गए ।
೧೯ಎಲೀಷನು ಅವನಿಗೆ, “ಸಮಾಧಾನದಿಂದ ಹೋಗು” ಎಂದು ಉತ್ತರ ಕೊಟ್ಟನು. ಅವನು ಹೊರಟುಹೋದನು.
20 तिनी अलि पर मात्र पुगेका थिए, परमेश्वरका मानिस एलीशाको सेवक गेहजीले आफ्नो मनमा भन्यो, “मेरा मालिकले यी अरामी नामानको हातबाट तिनले ल्याएका उपहारहरू ग्रहण नगरी तिनको बचत गर्नुभएको छ । परमप्रभुको नाउँमा शपथ खाएर म भन्छु, म तिनको पछि दौडेर जानेछु, र तिनीबाट केही लिनेछु ।”
೨೦ನಾಮಾನನು ಸ್ವಲ್ಪ ದೂರಕ್ಕೆ ಹೋದ ನಂತರ ದೇವರ ಮನುಷ್ಯನಾದ ಎಲೀಷನ ಸೇವಕನಾದ ಗೇಹಜಿಯು ಮನಸ್ಸಿನಲ್ಲಿ, “ನೋಡು, ನನ್ನ ಯಜಮಾನನು ಆ ಅರಾಮ್ಯನಾದ ನಾಮಾನನಿಂದ ಏನೂ ತೆಗೆದುಕೊಳ್ಳದೆ ಅವನನ್ನು ಹಾಗೆಯೇ ಕಳುಹಿಸಿಬಿಟ್ಟನಲ್ಲಾ, ಯೆಹೋವನಾಣೆ, ನಾನು ಅವನ ಹಿಂದೆ ಓಡುತ್ತಾ ಹೋಗಿ ಅವನಿಂದ ಸ್ವಲ್ಪವನ್ನಾದರೂ ತೆಗೆದುಕೊಂಡು ಬರುವೆನು” ಅಂದುಕೊಂಡು ಹೊರಟನು.
21 त्यसैले गेहजी नामानको पछि गयो । जब नामानले तिनको पछि कोही दौडेर आएको देखे, तब आफ्नो रथबाट त्यसलाई भेट्न तिनी ओर्ले र भने, “के सबै कुरा ठिकै छ?”
೨೧ನಾಮಾನನು ತನ್ನ ಹಿಂದೆ ಓಡುತ್ತಾ ಬರುವ ಗೇಹಜಿಯನ್ನು ಕಂಡು ರಥದಿಂದ ಇಳಿದು ಅವನನ್ನು ಎದುರುಗೊಂಡು, “ಎಲ್ಲಾ ಕ್ಷೇಮವೋ?” ಎಂದು ಕೇಳಿದನು.
22 गेहजीले भन्यो, “सबै ठिकै कुरा छ । मेरा मालिकले मलाई यसो भनेर पठाउनुभएको छ, 'हेर, एफ्राइमको पहाडी देशबाट अगमवक्ताहरूका छोराहरूमध्ये दुई जना युवा मकहाँ आएका छन् । कृपया, तिनीहरूलाई एक तोडा चाँदी र दुई जोर लुगा दिनुहोस् ।”
೨೨ಅದಕ್ಕೆ ಗೇಹಜಿಯು, “ಕ್ಷೇಮ, ಎಫ್ರಾಯೀಮ್ ಪರ್ವತ ಪ್ರದೇಶದಿಂದ ಪ್ರವಾದಿಮಂಡಳಿಯವರಾದ ಇಬ್ಬರು ಯೌವನಸ್ಥರು ಬಂದಿರುತ್ತಾರೆ. ಆದುದರಿಂದ ಅವರಿಗೋಸ್ಕರ ಬೇಗನೇ ಒಂದು ತಲಾಂತು ಬೆಳ್ಳಿಯನ್ನೂ, ಎರಡು ಜೋಡಿ ಬಟ್ಟೆಗಳನ್ನೂ ತೆಗೆದುಕೊಂಡು ಬರಬೇಕೆಂದು ನನ್ನ ಯಜಮಾನನು ನನ್ನನ್ನು ನಿನ್ನ ಬಳಿಗೆ ಕಳುಹಿಸಿದನು” ಎಂದು ಉತ್ತರ ಕೊಟ್ಟನು.
23 नामानले भने, “म तिमीलाई दुई तोडा चाँदी दिन अत्यन्तै खुसी छु ।” नामानले गेहजीलाई जिद्दी गरे र दुईवटा थैलामा दुई तोडा चाँदी र दुई जोर लुगा राखिदिए, अनि तिनले आफ्ना दुई जना सेवक दिए जसले ती थैलाहरू बोकेर गेहजीको अगि लागे ।
೨೩ನಾಮಾನನು, “ಎರಡು ತಲಾಂತನ್ನಾದರೂ ತೆಗೆದುಕೊಳ್ಳಬಾರದೆ?” ಎಂದು ಅವನನ್ನು ಒತ್ತಾಯಪಡಿಸಿ ಎರಡು ಚೀಲಗಳಲ್ಲಿ ಬೆಳ್ಳಿ ನಾಣ್ಯಗಳನ್ನು ತುಂಬಿಸಿ, ಆ ಚೀಲಗಳಲ್ಲಿ ಎರಡು ಜೋಡಿ ಬಟ್ಟೆಗಳನ್ನೂ ಇಟ್ಟು ಇಬ್ಬರು ಸೇವಕರ ಮೇಲೆ ಹೊರಿಸಿ ಅವರನ್ನು ಗೇಹಜಿಯ ಸಂಗಡ ಕಳುಹಿಸಿದನು. ಅವರು ಹೊತ್ತುಕೊಂಡು ಅವನ ಮುಂದೆ ನಡೆದರು.
24 जब गेहजी डाँडामा आइपुग्यो त्यसले तिनीहरूका हातबाट चाँदीका थैलाहरू लियो र ती घरमा लुकायो । त्यसले ती मानिसहरूलाई पठायो र उनीहरू गए ।
೨೪ಗೇಹಜಿಯು ಗುಡ್ಡವನ್ನು ಮುಟ್ಟಿದಾಗ, ಎರಡು ಚೀಲ ಬೆಳ್ಳಿಯನ್ನು ತೆಗೆದುಕೊಂಡು ಮನೆಯಲ್ಲಿ ಅಡಗಿಸಿಟ್ಟು, ಆಳುಗಳನ್ನು ಕಳುಹಿಸಿಬಿಟ್ಟನು, ಅವರು ಹೊರಟು ಹೋದರು.
25 जब गेहजी भित्र गयो र आफ्ना मालिकको अघि खडा भयो, तब एलीशाले भने, “ए गेहजी, तँ कहाँबाट आएको?” त्यसले जवाफ दियो, “तपाईंको दास कतै गएन ।”
೨೫ನಂತರ ಗೇಹಜಿಯು ತನ್ನ ಯಜಮಾನನ ಬಳಿಗೆ ಬಂದನು. ಎಲೀಷನು ಅವನನ್ನು, “ಗೇಹಜಿಯೇ, ಎಲ್ಲಿಗೆ ಹೋಗಿ ಬಂದಿರುವೆ?” ಎಂದು ಕೇಳಿದನು. ಅದಕ್ಕೆ ಅವನು, “ನಿನ್ನ ಸೇವಕನಾದ ನಾನು ಎಲ್ಲಿಯೂ ಹೋಗಲಿಲ್ಲ” ಎಂದು ಉತ್ತರಕೊಟ್ಟನು.
26 एलीशाले गेहजीलाई भने, “ती मानिसले तँलाई भेट्न आफ्नो रथ घुमाउँदा के मेरो आत्मा तँसितै थिएन र? के यो रुपियाँ-पैसा र लत्ता कपडा, भद्राक्षका बोटहरू र दाखबारीहरू, भेडा-बाख्रा र गाई-गोरुहरू अनि कमारा-कमारीहरू ग्रहण गर्ने समय हो र?
೨೬ಆಗ ಎಲೀಷನು ಗೇಹಜಿಗೆ, “ಒಬ್ಬನು ರಥದಿಂದ ಇಳಿದು ಬಂದು, ನಿನ್ನನ್ನು ಎದುರುಗೊಂಡದ್ದು ನನ್ನ ಜ್ಞಾನದೃಷ್ಟಿಗೆ ಕಾಣಲಿಲ್ಲವೆಂದು ತಿಳಿದಿರುವೆಯಾ? ದ್ರವ್ಯ, ಬಟ್ಟೆಗಳು, ಎಣ್ಣೇ ಮರದ ತೋಪುಗಳು, ದ್ರಾಕ್ಷಿತೋಟಗಳು, ಕುರಿದನಗಳು, ದಾಸದಾಸಿಯರು, ಜನರೂ ಇವುಗಳನ್ನು ಸಂಪಾದಿಸುವುದಕ್ಕೆ ಇದು ಸಮಯವೋ?
27 त्यसैले नामानको कुष्ठरोग तँ र तेरा सन्तानमाथि सधैँभरि रहनेछ ।” त्यसैले गेहजी हिउँजस्तै सेतो कुष्ठरोगी बनेर तिनको उपस्थितिबाट बाहिर गयो ।
೨೭ನಾಮಾನನ ಕುಷ್ಠವು ನಿನ್ನನ್ನೂ, ನಿನ್ನ ಸಂತಾನದವರನ್ನೂ ಸದಾಕಾಲ ಹಿಡಿದಿರುವುದು” ಎಂದನು. ಕೂಡಲೆ ಅವನಿಗೆ ಕುಷ್ಠ ಹತ್ತಿತು. ಗೇಹಜಿ ಹಿಮದಂತೆ ಬಿಳುಪಾಗಿ ಎಲೀಷನ ಸನ್ನಿಧಿಯಿಂದ ಹೊರಟುಹೋದನು.