< २ राजाहरू 14 >
1 इस्राएलका राजा यहोआहाजको छोरा यहोआशको दोस्रो वर्षमा यहूदाका राजा योआशका छोरा अमस्याहले राज्य गर्न थाले ।
೧ಇಸ್ರಾಯೇಲರ ಅರಸನಾದ ಯೆಹೋವಾಹಾಜನ ಮಗನಾದ ಯೋವಾಷನ ಆಳ್ವಿಕೆಯ ಎರಡನೆಯ ವರ್ಷದಲ್ಲಿ ಯೆಹೂದದ ಅರಸನಾದ ಯೆಹೋವಾಷನ ಮಗ ಅಮಚ್ಯ ಎಂಬವನು ಅರಸನಾದನು.
2 तिनले राज्य गर्न सुरु गर्दा तिनी पच्चिस वर्षका थिए । तिनले यरूशलेममा उनन्तिस वर्ष राज्य गरे । तिनकी आमाको नाउँ यहोअदीन थियो जो यरूशलेमकी थिइन् ।
೨ಅವನು ಪಟ್ಟಕ್ಕೆ ಬಂದಾಗ ಇಪ್ಪತ್ತೈದು ವರ್ಷದವನಾಗಿದ್ದು ಯೆರೂಸಲೇಮಿನಲ್ಲಿ ಇಪ್ಪತ್ತೊಂಬತ್ತು ವರ್ಷ ಆಳಿದನು. ಯೆರೂಸಲೇಮಿನವಳಾದ ಯೆಹೋವದ್ದೀನ್ ಎಂಬಾಕೆಯು ಇವನ ತಾಯಿ.
3 परमप्रभुको दृष्टिमा जे ठिक थियो, तिनले त्यही गरे, तापनि तिनका पुर्खा दाऊदले गरेझैँ भने होइन । आफ्ना पिता योआशले गरेका हरेक काम तिनले गरे ।
೩ಇವನು ತನ್ನ ತಂದೆಯಾದ ಯೆಹೋವಾಷನ ಮಾರ್ಗದಲ್ಲಿ ತಪ್ಪದೆ ನಡೆದು ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾದನು, ಆದರೂ ತನ್ನ ಪೂರ್ವಿಕನಾದ ದಾವೀದನಷ್ಟು ಉತ್ತಮನಾಗಿರಲಿಲ್ಲ.
4 तर डाँडाका थानहरू हटाइएनन् । मानिसहरूले अझै पनि डाँडाका थानहरूमा बलि चढाए र धूप बाले ।
೪ಇವನ ಕಾಲದಲ್ಲಿ ಪೂಜಾಸ್ಥಳಗಳು ಇನ್ನೂ ತೆಗೆಯಲ್ಪಟ್ಟಿರಲಿಲ್ಲ, ಆದ್ದರಿಂದ ಜನರು ಅವುಗಳಲ್ಲಿ ಯಜ್ಞಧೂಪಗಳನ್ನು ಅರ್ಪಿಸುತ್ತಿದ್ದರು.
5 तिनको शासन सुदृढ हुनेबित्तिकै आफ्ना पिताको अर्थात् राजाको हत्या गर्ने सेवकहरूलाई तिनले मारे ।
೫ಅವನು ರಾಜ್ಯವನ್ನು ಭದ್ರಪಡಿಸಿಕೊಂಡ ಕೂಡಲೇ ತನ್ನ ತಂದೆಯನ್ನು ಕೊಂದ ಸೇವಕರಿಗೆ ಮರಣದಂಡನೆ ವಿಧಿಸಿದನು.
6 तापनि तिनले हत्याराहरूका छोराहरूलाई भने मारेनन् । बरु, तिनले मोशाको व्यवस्थामा लेखिएअनुसार काम गरे, जस्तो परमप्रभुले यसो भनेर आज्ञा दिनुभएको थियो, “बुबाहरूलाई छोराछोरीका कारणले अनि छोराछोरीलाई बुबाहरूका कारणले मार्नुहुँदैन । बरु, हरेक व्यक्तिलाईउसको आफ्नै पापको कारणले मार्नुपर्छ ।”
೬ಮೋಶೆಯ ಧರ್ಮನಿಯಮಗ್ರಂಥದಲ್ಲಿರುವ ಯೆಹೋವನ ಅಪ್ಪಣೆಯಂತೆ, “ಮಕ್ಕಳ ಪಾಪದ ದೆಸೆಯಿಂದ ತಂದೆಗೂ, ತಂದೆಯ ಪಾಪದ ದೆಸೆಯಿಂದ ಮಕ್ಕಳಿಗೂ ಮರಣಶಿಕ್ಷೆಯಾಗಬಾರದು; ಪ್ರತಿಯೊಬ್ಬನೂ ತನ್ನ ಪಾಪಫಲವನ್ನು ತಾನೇ ಅನುಭವಿಸಬೇಕು” ಎಂಬುದನ್ನು ನೆನಪುಮಾಡಿಕೊಂಡು ಅವರ ಮಕ್ಕಳನ್ನು ಕೊಲ್ಲಿಸಲಿಲ್ಲ.
7 नुनको उपत्यकामा एदोमका दस हजार सिपाहीलाई तिनले मारे । तिनले युद्धमा सेलालाई जिते त्यसको नाउँ योक्तेल राखे जसको नाउँ आजको दिनसम्म पनि त्यही छ ।
೭ಇದಲ್ಲದೆ ಉಪ್ಪಿನ ತಗ್ಗಿನಲ್ಲಿ ಎದೋಮ್ಯರ ಹತ್ತು ಸಾವಿರ ಮಂದಿ ಸೈನಿಕರನ್ನು ಸದೆಬಡಿದು, ಅವರಿಂದ ಸೆಲ ದುರ್ಗವನ್ನು ಕಿತ್ತುಕೊಂಡು ಅದಕ್ಕೆ ಯೊಕ್ತೆಯೇಲ್ ಎಂಬ ಹೆಸರಿಟ್ಟನು. ಅದಕ್ಕೆ ಇಂದಿನವರೆಗೂ ಇದೇ ಹೆಸರಿರುತ್ತದೆ.
8 तब अमस्याहले इस्राएलका राजा येहूका नाति, यहोआहाजका छोरा यहोआशकहाँ यसो भनी सन्देशवाहकहरू पठाए, “आउनुहोस्, हामी युद्धमा एक-अर्कालाई आमनेसामने भेटौँ ।”
೮ಅನಂತರ ಅಮಚ್ಯನು ಯೇಹುವಿನ ಮೊಮ್ಮಗನೂ, ಯೆಹೋವಾಹಾಜನ ಮಗನೂ, ಇಸ್ರಾಯೇಲರ ಅರಸನಾದ ಯೆಹೋವಾಷನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ, “ನಾವು ಒಬ್ಬರನ್ನೊಬ್ಬರು ಒಂದು ಕೈ ನೋಡೋಣ ಬಾ” ಎಂದು ಹೇಳಿದನು.
9 तर इस्राएलका राजा यहोआशले यहूदाका राजा अमस्याहलाई यसो भनी सन्देशवाहकहरू पठाए, “लेबनानको एउटा सिउँडीले लेबनानकै एउटा देवदारुलाई यसो भनेर सन्देश पठायो, 'तिम्री छोरी मेरा छोरासित विवाह गरिदेऊ ।' तर लेबनानमा भएको जङ्गली जनावर त्यताबाट हिंड्यो र सिउँडीलाई कुल्च्यो ।
೯ಆಗ ಇಸ್ರಾಯೇಲರ ಅರಸನಾದ ಯೆಹೋವಾಷನು ಯೆಹೂದದ ಅರಸನಾದ ಅಮಚ್ಯನಿಗೆ, “ಲೆಬನೋನಿನ ಮುಳ್ಳು ಗಿಡವು ಅಲ್ಲಿನ ದೇವದಾರುಮರಕ್ಕೆ, ‘ನನ್ನ ಮಗನಿಗೆ ನಿನ್ನ ಮಗಳನ್ನು ಕೊಡು’ ಎಂದು ಹೇಳಿ ಕಳುಹಿಸಿತು. ಸ್ವಲ್ಪ ಹೊತ್ತಾದ ಮೇಲೆ ಲೆಬನೋನಿನ ಒಂದು ಕಾಡು ಮೃಗವು ಅಲ್ಲಿಂದ ಹಾದುಹೋಗುತ್ತಿರುವಾಗ ಅದನ್ನು ತುಳಿದುಬಿಟ್ಟಿತು.
10 तिमीले साँच्चै एदोमलाई आक्रमण गर्यौ, र तिम्रो शेखी बढेको छ । आफ्नो विजयमा गर्व गर, तर घरमै बस किनकि तिमीले किन आफैलाई सङ्कष्टमा पार्ने अनि तिमी र यहूदा पनि दुवै किन पतन हुने?”
೧೦ನೀನು ಎದೋಮ್ಯರನ್ನು ಸೋಲಿಸಿದರಿಂದ ಬಹಳವಾಗಿ ಉಬ್ಬಿಕೊಂಡಿದ್ದೀ; ಆ ಕೀರ್ತಿಯು ಸಾಕೆಂದು ನೆನದು ಸುಮ್ಮನೆ ಮನೆಯಲ್ಲಿ ಕುಳಿತುಕೋ. ನನ್ನನ್ನು ಕೆಣಕಿ ನಿನ್ನ ಮೇಲೆಯೂ, ನಿನ್ನ ರಾಜ್ಯವಾದ ಯೆಹೂದದ ಮೇಲೆಯೂ ಯಾಕೆ ಕೇಡನ್ನು ಬರಮಾಡಿಕೊಳ್ಳುತ್ತೀ?” ಎಂದು ಉತ್ತರ ಕೊಟ್ಟುಕಳುಹಿಸಿದನು.
11 तर अमस्याहले यो कुरा सुनेनन् । त्यसैले इस्राएलका राजा यहोआशले आक्रमण गरे, अनि तिनी र यहूदाका राजा अमस्याह यहूदाको बेथ-शेमेशमा एक-अर्कासित आमनेसामने भेटे ।
೧೧ಅಮಚ್ಯನು ಇದನ್ನು ಗಮನಕ್ಕೆ ತೆಗೆದುಕೊಳ್ಳದೆ ಇದ್ದುದರಿಂದ ಇಸ್ರಾಯೇಲರ ಅರಸನಾದ ಯೆಹೋವಾಷನು ಯುದ್ಧಕ್ಕೆ ಹೊರಟನು. ಅವರು ಯೆಹೂದ ಪ್ರಾಂತ್ಯದ ಬೇತ್ಷೆಮೆಷಿನಲ್ಲಿ ಒಬ್ಬರನ್ನೊಬ್ಬರು ಎದುರುಗೊಂಡರು.
12 इस्राएलद्वारा यहूदा पराजित भयो, र हरेक मानिस घर भाग्यो ।
೧೨ಯೆಹೂದ್ಯರು ಇಸ್ರಾಯೇಲರಿಂದ ಸೋಲಿಸಲ್ಪಟ್ಟು ತಮ್ಮ ತಮ್ಮ ನಿವಾಸಗಳಿಗೆ ಓಡಿಹೋದರು.
13 बेथ-शेमेशमा इस्राएलका राजा यहोआशले अहज्याहका नाति, योआशका छोरा यहूदाका राजा अमस्याहलाई समाते । तिनी यरूशलेममा आए र तिनले एफ्राइमको ढोकादेखि कुने ढोकासम्म लगभग दुई सय मिटर लामो यरूशलेमको पर्खाल भत्काइदिए ।
೧೩ಇಸ್ರಾಯೇಲರ ಅರಸನಾದ ಯೋವಾಷನೂ, ಅಹಜ್ಯನ ಮೊಮ್ಮಗನೂ, ಯೆಹೋವಾಷನ ಮಗನೂ ಯೆಹೂದದ ಅರಸನೂ ಆದ ಅಮಚ್ಯನನ್ನು ಇಸ್ರಾಯೇಲರ ಅರಸನಾದ ಯೆಹೋವಾಷನು ಬೇತ್ಷೆಮೆಷಿನಲ್ಲಿ ಹಿಡಿದು ಅವನನ್ನು ಯೆರೂಸಲೇಮಿಗೆ ಕರೆದುಕೊಂಡು ಬಂದು, ಎಫ್ರಾಯೀಮ್ ಬಾಗಿಲಿನಿಂದ ಮೂಲೆಯ ಬಾಗಿಲಿನವರೆಗೂ ಇದ್ದ ಯೆರೂಸಲೇಮಿನ ನಾನೂರು ಮೊಳ ಗೋಡೆಯನ್ನು ಕೆಡವಿ ಬಿಟ್ಟನು.
14 तिनले परमप्रभुको मन्दिरमा भेट्टाइएका सबै सुन र राजदरबारका मुल्यवान् थोकहरूका साथमा केही बन्दीहरूलाई समेत लगे र सामरिया फर्के ।
೧೪ಇದಲ್ಲದೆ ಅವನು ಯೆಹೋವನ ಆಲಯದ ಮತ್ತು ರಾಜನ ಅರಮನೆಯ ಭಂಡಾರಗಳಲ್ಲಿ ಸಿಕ್ಕಿದ ಎಲ್ಲಾ ಬೆಳ್ಳಿ ಬಂಗಾರವನ್ನೂ, ಪಾತ್ರೆಗಳನ್ನೂ ತೆಗೆದುಕೊಂಡು ಒತ್ತೆಯಾಳಾಗಿ ಕೆಲವರನ್ನು ಸೆರೆಹಿಡಿದು ಸಮಾರ್ಯಕ್ಕೆ ಹಿಂದಿರುಗಿದನು.
15 यहोआश, तिनले गरेका सबै काम, तिनको शक्ति र कसरी तिनले यहूदाका राजा अमस्याहसित लडे भन्ने बारेमा इस्राएलका राजाहरूको इतिहासको पुस्तकमा लेखिएका छैनन् र?
೧೫ಯೆಹೋವಾಷನ ಉಳಿದ ಚರಿತ್ರೆಯೂ, ಅವನ ಶೂರ ಕೃತ್ಯಗಳೂ ಮತ್ತು ಯೆಹೂದ ರಾಜನಾದ ಅಮಚ್ಯನೊಡನೆ ನಡಿಸಿದ ಯುದ್ಧದ ವಿವರವೂ ಇಸ್ರಾಯೇಲರ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಬರೆದು ದಾಖಲಿಸಿದೆ.
16 तब यहोआश आफ्ना पुर्खाहरूसित सुते, र इस्राएलका राजाहरूसँगै सामरियाम गाडिए, अनि तिनको ठाउँमा तिनका छोरा यारोबाम राजा भए ।
೧೬ಯೆಹೋವಾಷನು ಪೂರ್ವಿಕರ ಬಳಿಗೆ ಸೇರಲು ಅವನ ಶವವನ್ನು ಸಮಾರ್ಯದೊಳಗೆ ಇಸ್ರಾಯೇಲರ ರಾಜಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು. ಅವನ ನಂತರ ಅವನ ಮಗನಾದ ಯಾರೊಬ್ಬಾಮನು ಅರಸನಾದನು.
17 इस्राएलका राजा यहोआहाजका छोरा येहोआशको मृत्युपछि यहूदाका राजा योआशका छोरा अमस्याह पन्ध्र वर्ष बाँचे ।
೧೭ಇಸ್ರಾಯೇಲರ ಅರಸನೂ, ಯೆಹೋವಾಹಾಜನ ಮಗನೂ ಆದ ಯೋವಾಷನು ಸತ್ತನಂತರ ಯೆಹೂದದ ಅರಸನೂ ಯೆಹೋವಾಷನ ಮಗನೂ ಆದ ಅಮಚ್ಯನು ಇನ್ನೂ ಹದಿನೈದು ವರ್ಷ ಬದುಕಿದ್ದನು.
18 अमस्याहका विषयमाभएका अन्य कुराहरूका बारेमा यहूदाका राजाहरूको इतिहासको पुस्तकमा लेखिएका छैनन् र?
೧೮ಅಮಚ್ಯನ ಉಳಿದ ಚರಿತ್ರೆಯು ಯೆಹೂದ್ಯರ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಬರೆದಿರುತ್ತದೆ.
19 तिनीहरूले यरूशलेममा अमस्याहको विरुद्धमा षड्यन्त्र रचे र तिनी लाकीशमा भागे । तिनी लाकीशमा भागे तर तिनीहरूले तिनको पिछा गर्न लाकीशमा मानिसहरू पठाए, र तिनलाई त्यहीँ मारे ।
೧೯ಯೆರೂಸಲೇಮಿನವರು ಅವನಿಗೆ ವಿರೋಧವಾಗಿ ಒಳಸಂಚು ಮಾಡಿದ್ದರಿಂದ ಅವನು ಲಾಕೀಷಿಗೆ ಓಡಿಹೋದನು. ಆದರೆ ಅವರು ಅಲ್ಲಿಗೆ ಆಳುಗಳನ್ನು ಕಳುಹಿಸಿ ಅವನನ್ನು ಕೊಲ್ಲಿಸಿದರು.
20 तिनीहरूको तिनको लाशलाई घोडाहरूमा राखेर ल्याए र दाऊदको सहरमा तिनी आफ्ना पुर्खाहरूसितै गाडिए ।
೨೦ಅವನ ಜನರು ಅವನ ಶವವನ್ನು ಕುದುರೆಗಳ ಮೇಲೆ ಯೆರೂಸಲೇಮಿಗೆ ತಂದು ದಾವೀದನಗರದೊಳಗೆ ಅವನ ಪೂರ್ವಿಕರ ಸ್ಮಶಾನಭೂಮಿಯಲ್ಲಿ ಸಮಾಧಿ ಮಾಡಿದರು.
21 यहूदाका सारा मानिसले सोह्र वर्षका अजर्याहलाई लिए र तिनलाई आफ्ना पिता अमस्याहको ठाउँमा राजा बनाए ।
೨೧ಅಮಚ್ಯನ ಮರಣದ ನಂತರ ಎಲ್ಲಾ ಯೆಹೂದ್ಯರು ಸೇರಿ ಹದಿನಾರು ವರ್ಷದವನಾದ ಅಜರ್ಯನನ್ನು ಅರಸನನ್ನಾಗಿ ಮಾಡಿದರು.
22 राजा अमस्याह आफ्ना पुर्खाहरूसित सुतेपछि अजर्याहले नै एलात सहरलाई पुनर्निर्माण गरे र त्यसलाई यहूदामा फिर्ता दिए ।
೨೨ಅರಸನಾದ ಅಮಚ್ಯನು ಪೂರ್ವಿಕರ ಬಳಿಗೆ ಸೇರಿದ ಮೇಲೆ ಉಜ್ಜೀಯನು ಏಲತ್ ಎಂಬ ಪಟ್ಟಣವನ್ನು ಪುನಃ ಯೆಹೂದರಾಜ್ಯಕ್ಕೆ ಸೇರಿಸಿ ಭದ್ರಪಡಿಸಿದನು.
23 यहूदाका राजा योआशका छोरा अमस्याहको पन्ध्रौँ वर्षमा इस्राएलका राजा येहोआशका छोरा यारोबामले सामरियामा राज्य गर्न थाले । तिनले एकचालिस वर्ष राज्य गरे ।
೨೩ಯೆಹೂದದ ಅರಸನೂ, ಯೆಹೋವಾಷನ ಮಗನೂ ಆದ ಅಮಚ್ಯನ ಆಳ್ವಿಕೆಯ ಹದಿನೈದನೆಯ ವರ್ಷದಲ್ಲಿ ಇಸ್ರಾಯೇಲರ ಅರಸನಾದ ಯೋವಾಷನ ಮಗನಾದ ಯಾರೊಬ್ಬಾಮನು ಅರಸನಾಗಿ ಸಮಾರ್ಯದಲ್ಲಿ ನಲ್ವತ್ತೊಂದು ವರ್ಷ ಆಳಿದನು.
24 परमप्रभुको दृष्टिमा जे खराब थियो, तिनले त्यही गरे । इस्राएललाई पाप गर्न लगाउने नबातका छोरा यारोबामको कुनै पनि पापबाट तिनी फर्केनन् ।
೨೪ಇವನು ಇಸ್ರಾಯೇಲರನ್ನು ಪಾಪಕ್ಕೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಮಾರ್ಗವನ್ನು ಬಿಡದೆ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು.
25 इस्राएलका परमप्रभु परमेश्वरले आफ्ना सेवक गात-हेपेरका अमित्तैका छोरा योना अगमवक्ताद्वारा बोल्नुभएको वचनअनुसार लेबोहमातदेखि अराबाको समुद्रसम्म इस्राएलका सिमानालाई तिनले पुनर्स्थापित गरे ।
೨೫ಇಸ್ರಾಯೇಲರ ದೇವರಾದ ಯೆಹೋವನ ವಾಕ್ಯದ ಮೂಲಕ ತನ್ನ ಸೇವಕನೂ ಗತ್ ಹೇಫೆರಿನವನಾದ ಅಮಿತ್ತೈಯನ ಮಗನೂ ಆದ ಯೋನಾ ಎಂಬ ಪ್ರವಾದಿಯ ಮುಖಾಂತರವಾಗಿ ಮುಂತಿಳಿಸಿದಂತೆ ಹಮಾತಿನ ದಾರಿಯಿಂದ ಅರಾಬಾ ತಗ್ಗಿನ ಸಮುದ್ರದವರೆಗಿದ್ದ ಇಸ್ರಾಯೇಲರ ಮೇರೆಯನ್ನು ಪುನಃ ವಶಪಡಿಸಿಕೊಂಡವನು ಇವನೇ ಆಗಿದ್ದನು.
26 किनकि फुक्का र स्वतन्त्र हरेक इस्राएलीले कष्ट भोगिरहेको परमप्रभुले देख्नुभयो, र इस्राएलको लागि कुनै उद्धारक थिएन ।
೨೬ಇಸ್ರಾಯೇಲರು ಯೆಹೋವನಿಗೆ ಅವಿಧೇಯರಾಗಿ ಘೋರಕಷ್ಟವನ್ನು ಅನುಭವಿಸುತ್ತಿದ್ದರು. ಅವರಲ್ಲಿ ಸ್ವತಂತ್ರರೂ, ಪರತಂತ್ರರೂ ನಾಶವಾಗುತ್ತಿದ್ದರೆ, ಅವರನ್ನು ರಕ್ಷಿಸುವವನು ಒಬ್ಬನೂ ಇರಲಿಲ್ಲ.
27 त्यसैले आकाशमुनि इस्राएलको नाउँ परमप्रभुले मेट्नुहुनेछैन भनी उहाँले भन्नुभयो । बरु उहाँले तिनीहरूलाई येहोआशका छोरा यारोबामको हातबाट बचाउनुभयो ।
೨೭ಯೆಹೋವನು ಇದನ್ನು ನೋಡಿ ಇಸ್ರಾಯೇಲರನ್ನು ಭೂಲೋಕದಿಂದ ನಿರ್ನಾಮ ಮಾಡುವುದಕ್ಕೆ ಮನಸ್ಸಿಲ್ಲದೆ ಯೋವಾಷನ ಮಗನಾದ ಯಾರೊಬ್ಬಾಮನ ಮುಖಾಂತರವಾಗಿ ಅವರನ್ನು ರಕ್ಷಿಸಿದನು.
28 यारोबाम, तिनले गरेका सबै काम, तिनको शक्ति, कसरी तिनले युद्ध गरे र यहूदाको अधीनमा रहेका दमस्कस र हमातलाई इस्राएललाई फिर्ता गराए भन्ने बारेमा इस्राएलका राजाहरूको इतिहासको पुस्तकमा लेखिएका छैनन् र?
೨೮ಯಾರೊಬ್ಬಾಮನ ಉಳಿದ ಚರಿತ್ರೆಯೂ ಅವನು ಯುದ್ಧದಲ್ಲಿ ನಡಿಸಿದ ಶೂರಕೃತ್ಯಗಳೂ, ಯೆಹೂದ್ಯರ ಸ್ವಾಧೀನದಲ್ಲಿದ್ದ ದಮಸ್ಕ, ಹಮಾತ್ ಎಂಬ ಪಟ್ಟಣಗಳು ಅವನಿಂದ ಇಸ್ರಾಯೇಲ್ ರಾಜ್ಯಕ್ಕೆ ಸೇರಿಸಲ್ಪಟ್ಟ ವಿವರಗಳೆಲ್ಲವೂ ಇಸ್ರಾಯೇಲರ ರಾಜಕಾಲವೃತ್ತಾಂತ ಇತಿಹಾಸ ಎಂಬ ಗ್ರಂಥದಲ್ಲಿ ಬರೆದು ದಾಖಲಿಸಲಾಗಿದೆ.
29 यारोबाम आफ्ना पुर्खाहरू इस्राएलका राजाहरूसित सुते, र तिनको ठाउँमा तिनका छोरा जकरिया राजा भए ।
೨೯ಯಾರೊಬ್ಬಾಮನು ಇಸ್ರಾಯೇಲರ ರಾಜರಾಗಿದ್ದ ತನ್ನ ಪೂರ್ವಿಕರ ಬಳಿಗೆ ಸೇರಲು ಅವನ ನಂತರ ಅವನ ಮಗನಾದ ಜೆಕರ್ಯನು ಅರಸನಾದನು.