< ယေဇကျေလ 12 >
1 ၁ ထာဝရဘုရား၏နှုတ်ကပတ်တော်သည် ငါ့ထံသို့ရောက်လာ၏။-
೧ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
2 ၂ ကိုယ်တော်က``အချင်းလူသား၊ သင်သည်ပုန်ကန် တတ်သည့်လူမျိုးအထဲမှာနေရ၏။ သူတို့သည် မျက်စိရှိလျက်နှင့်အဘယ်အရာကိုမျှမမြင် ကြ။ နားရှိလျက်နှင့်အဘယ်အရာကိုမျှမ ကြားကြ။ အဘယ်ကြောင့်ဆိုသော်သူတို့သည် ပုန်ကန်တတ်သူများဖြစ်သောကြောင့်တည်း။''
೨“ನರಪುತ್ರನೇ, ನೀನು ದ್ರೋಹಿ ವಂಶದ ಮಧ್ಯದಲ್ಲಿ ವಾಸಿಸುತ್ತಿರುವೆ. ಆ ವಂಶದವರು ದ್ರೋಹಿಗಳಾಗಿರುವುದರಿಂದ ಕಣ್ಣಿದ್ದರೂ ಕಾಣರು, ಕಿವಿಯಿದ್ದರೂ ಕೇಳರು.
3 ၃ ``အချင်းလူသား၊ ယခုသင်သည်ဒုက္ခသည် တစ်ဦးကဲ့သို့ အထုပ်အပိုးကိုယူ၍နေ့ အချိန်၌ထွက်ခွာသွားလော့။ ယင်းသို့သင် အရပ်တစ်ပါးသို့ထွက်ခွာသွားသည်ကို လူတိုင်းမြင်ပါစေ။ ပုန်ကန်တတ်သူတို့သည် လည်းသင့်အားနားလည်ကောင်းနားလည် ကြလိမ့်မည်။-
೩“ನರಪುತ್ರನೇ, ವಲಸೆಹೋಗುವುದಕ್ಕೆ ಬೇಕಾದ ಸಾಮಗ್ರಿಗಳನ್ನು ನೀನು ಕೂಡಿಸಿಕೊಂಡು ಹಗಲಿನಲ್ಲಿ ಅವರ ಕಣ್ಣೆದುರಿಗೆ ಹೊರಡು ಅಂದರೆ ನಿನ್ನ ವಾಸಸ್ಥಳವನ್ನು ಬಿಟ್ಟು ಅವರು ನೋಡುವ ಹಾಗೆ ಬೇರೊಂದು ಸ್ಥಳಕ್ಕೆ ಹೋಗು. ಅವರು ದ್ರೋಹಿ ವಂಶದವರಾಗಿದ್ದರೂ ಒಂದು ವೇಳೆ ತಮ್ಮ ದ್ರೋಹವನ್ನು ಮನಸ್ಸಿಗೆ ತಂದುಕೊಳ್ಳಬಹುದು.
4 ၄ သူတို့မြင်နိုင်စေရန်နေ့အချိန်၌ သင်သည် အရပ်တစ်ပါးသို့ပြောင်းရွှေ့မည့်အမူအရာ ဖြင့်အထုပ်အပိုးပြင်ဆင်၍ ညနေချိန်၌ သူတို့၏မျက်မှောက်တွင်ဒုက္ခသည်ကဲ့သို့ ထွက်ခွာသွားလော့။-
೪ನೀನು ನಿನ್ನ ಸಾಮಗ್ರಿಗಳನ್ನು, ವಲಸೆಯ ಸಾಮಗ್ರಿಗಳನ್ನೋ ಎಂಬಂತೆ ಹಗಲಿನಲ್ಲಿ ಅವರ ಕಣ್ಣೆದುರಿಗೆ ಮನೆಯೊಳಗಿಂದ ಆಚೆಗೆ ಹಾಕಿ, ವಲಸೆ ಹೋಗುವವನಂತೆ ಸಾಯಂಕಾಲ ಅವರ ಸಮಕ್ಷಮದಲ್ಲಿ ಹೊರಟು ಹೋಗು.
5 ၅ သူတို့ရှေ့မှောက်၌ပင်သင်သည်မိမိ၏အိမ် နံရံတွင်အပေါက်ဖောက်၍ ထိုအပေါက်မှ သင်၏အထုပ်အပိုးကိုထုတ်ယူလော့။-
೫ಅವರು ನೋಡುತ್ತಿರುವಾಗ, ನೀನು ಗೋಡೆಯನ್ನು ತೋಡಿ, ಕಿಂಡಿಯ ಮೂಲಕ ನಿನ್ನ ಸಾಮಗ್ರಿಗಳನ್ನು ಸಾಗಿಸಿಕೊಂಡು ಹೋಗು.
6 ၆ ထိုအထုပ်အပိုးကိုပခုံးပေါ်သို့တင်သည် ကိုလည်းကောင်း၊ မိမိသွားမည့်လမ်းကိုမမြင် နိုင်စေရန်မျက်နှာကိုဖုံး၍မှောင်ထဲတွင် သင် ထွက်ခွာသည်ကိုလည်းကောင်းထိုသူတို့မြင် ကြပါစေ။ သင်ပြုသောအမှုသည်ဣသရေ လအမျိုးသားတို့အတွက် သတိပေးသည့် နိမိတ်လက္ခဏာဖြစ်လိမ့်မည်'' ဟုမိန့်တော် မူ၏။
೬ಅವರ ಕಣ್ಣ ಮುಂದೆ, ಅದನ್ನು ಹೆಗಲ ಮೇಲೆ ಹಾಕಿ, ಕತ್ತಲಲ್ಲಿ ಹೊತ್ತುಕೊಂಡು ಹೋಗು; ನೆಲವನ್ನು ನೋಡದಂತೆ ಮುಖವನ್ನು ಮುಚ್ಚಿಕೋ; ನಾನು ನಿನ್ನನ್ನು ಇಸ್ರಾಯೇಲ್ ವಂಶದವರಿಗೆ ಗುರುತನ್ನಾಗಿ ಮಾಡಿದ್ದೇನೆ.”
7 ၇ ငါသည်ထာဝရဘုရားမိန့်တော်မူသည်အတိုင်း ပြု၏။ ထိုနေ့၌ဒုက္ခသည်တစ်ဦးကဲ့သို့ငါသည် အထုပ်အပိုးကိုယူပြီးနောက်ညနေချိန်မှောင် စပြုသောအခါ အိမ်နံရံကိုလက်ဖြင့်တူး ဖောက်ကာထိုသူတို့၏ရှေ့တွင်အထုပ်ကို ပခုံးပေါ်သို့တင်၏။
೭ಆಗ ನಾನು ನನಗಾದ ಅಪ್ಪಣೆಯನ್ನು ನೆರವೇರಿಸಿದೆನು; ಹಗಲಿನಲ್ಲಿ ನನ್ನ ಸಾಮಗ್ರಿಗಳನ್ನು, ವಲಸೆಯ ಸಾಮಗ್ರಿಯನ್ನೋ ಎಂಬಂತೆ ಮನೆಯೊಳಗಿಂದ ಆಚೆಗೆ ಹಾಕಿ, ಸಾಯಂಕಾಲ ನನ್ನ ಕೈಯಿಂದಲೇ ಗೋಡೆಯಲ್ಲಿ ಕಿಂಡಿಯನ್ನು ಮಾಡಿ, ಕತ್ತಲಲ್ಲಿ ಆ ಸಾಮಾನನ್ನು ಆಚೆಗೆ ಸಾಗಿಸಿ, ಅವರ ಕಣ್ಣ ಮುಂದೆ ಹೆಗಲ ಮೇಲೆ ಹೊತ್ತುಕೊಂಡು ಹೋದೆನು.
8 ၈ နောက်တစ်နေ့နံနက်၌ ထာဝရဘုရား၏ နှုတ်ကပတ်တော်သည် ငါ့ထံသို့ရောက်လာ၏။-
೮ಬೆಳಿಗ್ಗೆ ಯೆಹೋವನು ಈ ಮಾತನ್ನು ನನಗೆ ದಯಪಾಲಿಸಿದನು,
9 ၉ ကိုယ်တော်က``အချင်းလူသား၊ ပုန်ကန်တတ် သောဣသရေလအမျိုးသားတို့သည်ယခု သင်အဘယ်အမှုကိုပြုလျက်နေသည်ကို မေးမြန်းနေကြပြီဖြစ်၍။-
೯“ನರಪುತ್ರನೇ, ದ್ರೋಹಿ ವಂಶದವರಾದ ಇಸ್ರಾಯೇಲರು, ‘ನೀನು ಏನು ಮಾಡುತ್ತಿರುವೆ?’ ಎಂದು ನಿನ್ನನ್ನು ಕೇಳಿದ್ದಾರಲ್ಲವೆ?
10 ၁၀ သူတို့အားငါအရှင်ထာဝရဘုရားအဘယ် သို့မိန့်ဆိုတော်မူသည်ကိုဆင့်ဆိုလော့။ ဤ မိန့်ဆိုချက်သည်ယေရုရှလင်မြို့ကိုအုပ် စိုးလျက်ရှိသောမင်းနှင့်ထိုမြို့ရှိလူတို့ အတွက်ဖြစ်၏။-
೧೦ನೀನು ಅವರಿಗೆ ಹೀಗೆ ನುಡಿ, ‘ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ಈ ಹೊರೆಯು ಯೆರೂಸಲೇಮಿನಲ್ಲಿರುವ ರಾಜನಿಗೂ, ಅಲ್ಲಿನ ಇಸ್ರಾಯೇಲ್ ವಂಶದವರೆಲ್ಲರಿಗೂ ಸಂಬಂಧಪಟ್ಟಿದೆ.’
11 ၁၁ သင်ပြုသောအမှုများသည်သူတို့တွေ့ကြုံ ရကြမည့်အမှုအရာများ၏ရှေ့ပြေး နိမိတ်ဖြစ်၍သူတို့သည်ဒုက္ခသည်များ၊ သုံ့ပန်းများဖြစ်ရကြမည်ဖြစ်ကြောင်း ဆင့်ဆိုလော့။-
೧೧ಇದನ್ನೂ ನುಡಿ, ‘ನಾನು ನಿಮಗೆ ಗುರುತಾಗಿದ್ದೇನೆ; ನಾನು ಮಾಡಿದಂತೆಯೇ ಅವರಿಗಾಗುವುದು; ಅವರು ವಲಸೆಯಾಗಿ ಸೆರೆ ಹೋಗುವರು.
12 ၁၂ သူတို့အားအုပ်စိုးလျက်ရှိသောမင်းသည်မိမိ အထုပ်ကိုထမ်း၍အုတ်တံတိုင်းတွင်သူတို့တူး ဖောက်ပေးသည့်အပေါက်မှထွက်ပြေးရလိမ့်မည်။ သူ၏မျက်စိများကိုဖုံး၍ထားသဖြင့်သူသည် မိမိသွားရာလမ်းကိုမြင်ရလိမ့်မည်မဟုတ်။-
೧೨ಅವರಲ್ಲಿನ ರಾಜನು ಹೆಗಲ ಮೇಲೆ ಹೊರೆಯನ್ನು ಹೊತ್ತುಕೊಂಡು ಕತ್ತಲಲ್ಲಿ ಹೊರಟು ಹೋಗುವನು; ಅವರು ಗೋಡೆಯನ್ನು ತೋಡಿ, ಕಿಂಡಿಯ ಮೂಲಕ ತಮ್ಮ ಸಾಮಗ್ರಿಗಳನ್ನು ಆಚೆಗೆ ಸಾಗಿಸುವರು; ಅವನು ಮುಖವನ್ನು ಮುಚ್ಚಿಕೊಳ್ಳುವನು, ಭೂಮಿಯು ಅವನ ಕಣ್ಣಿಗೆ ಕಾಣಿಸುವುದಿಲ್ಲ.’
13 ၁၃ ငါသည်ပိုက်ကွန်ကိုဖြန့်၍သူ့အားအုပ်မိကာ ငါ၏ထောင်ချောက်တွင်မိစေလျက်ခါလဒဲ ပြည်ဗာဗုလုန်မြို့သို့ခေါ်ဆောင်သွားမည်။ သူသည်ထိုမြို့ကိုမမြင်ရဘဲထိုမြို့၌ ပင်သေရလိမ့်မည်။-
೧೩ನಾನು ಅವನಿಗೆ ನನ್ನ ಬಲೆಯೊಡ್ಡುವೆನು, ನಾನು ಹಾಕಿದ ಉರುಲಿನಲ್ಲಿ ಸಿಕ್ಕಿಬೀಳುವನು; ಕಸ್ದೀಯರ ದೇಶವಾದ ಬಾಬಿಲೋನಿಗೆ ಅವನನ್ನು ಒಯ್ಯುವೆನು, ಅಲ್ಲೇ ಇದ್ದು ಸಾಯುವನು, ಆದರೂ ಆ ದೇಶವನ್ನು ನೋಡುವುದಿಲ್ಲ.
14 ၁၄ ငါသည်သူ၏မှူးမတ်များ၊ အကြံပေးအရာ ရှိများနှင့်ကိုယ်ရံတော်တပ်သားများအား အရပ်တကာသို့ပျံ့လွင့်သွားစေမည်။ လူ တို့သည်သူတို့ကိုဋ္ဌားဖြင့်သတ်ဖြတ်ရန် လိုက်လံရှာဖွေကြလိမ့်မည်။
೧೪ಅವನ ಸುತ್ತಲಿನ ಸಕಲ ಸಹಾಯಕರನ್ನೂ, ಅವನ ಸಮಸ್ತ ವ್ಯೂಹಗಳವರನ್ನೂ ನಾನು ಎಲ್ಲಾ ಕಡೆಯ ಗಾಳಿಗೂ ತೂರಿ ಅವರ ಹಿಂದೆ ಕತ್ತಿಯನ್ನು ಬೀಸುವೆನು.
15 ၁၅ ``ငါသည်သူတို့အားအတိုင်းတိုင်းအပြည် ပြည်နှင့်လူမျိုးတကာတို့ထံသို့ပျံ့လွင့် စေသောအခါ သူတို့သည်ငါကားထာဝရ ဘုရားဖြစ်တော်မူကြောင်းကိုသိရှိကြ လိမ့်မည်။-
೧೫“ನಾನು ಅವರನ್ನು ಜನಾಂಗಗಳೊಳಗೆ ಚದರಿಸಿಬಿಟ್ಟು ಅನ್ಯದೇಶಗಳಲ್ಲಿ ಚೆಲ್ಲಾಪಿಲ್ಲಿ ಮಾಡುವಾಗ ನಾನೇ ಯೆಹೋವನು ಎಂದು ಅವರಿಗೆ ಗೊತ್ತಾಗುವುದು.
16 ၁၆ သူတို့အနက်အနည်းငယ်အားစစ်ဘေး၊ ငတ်မွတ်ခေါင်းပါးခြင်းဘေးနှင့်အနာရောဂါ ဘေးတို့မှငါချမ်းသာပေးမည်။ သို့မှသာ လျှင်လူမျိုးတကာတို့တွင်ရောက်ရှိနေသော သူတို့သည် မိမိတို့ပြုခဲ့သောအမှုများကို စက်ဆုပ်ဖွယ်ဖြစ်ကြောင်းနားလည်သဘော ပေါက်၍ငါသည်ထာဝရဘုရားဖြစ်တော် မူကြောင်းကိုသိကြလိမ့်မည်'' ဟုမိန့်တော် မူ၏။
೧೬ನಾನು ಕೆಲವರನ್ನು ಖಡ್ಗ, ಕ್ಷಾಮ, ವ್ಯಾಧಿಗಳಿಂದ ಉಳಿಸಿ ಅವರು ತಮ್ಮ ಅಸಹ್ಯ ಕಾರ್ಯಗಳ ವಿಷಯವನ್ನು ತಾವು ಸೇರಿದ ಜನಾಂಗಗಳಲ್ಲಿ ತಿಳಿಸುವುದಕ್ಕೆ ಅವಕಾಶ ಮಾಡುವೆನು; ನಾನೇ ಯೆಹೋವನು ಎಂದು ಆ ಜನಾಂಗಗಳಿಗೂ ಗೊತ್ತಾಗುವುದು.”
17 ၁၇ ထာဝရဘုရား၏နှုတ်ကပတ်တော်သည်ငါ့ ထံသို့ရောက်လာ၏။-
೧೭ಇದಲ್ಲದೆ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
18 ၁၈ ကိုယ်တော်က``အချင်းလူသား၊ သင်သည် တုန်လှုပ်လျက်အစားအစာကိုစားလော့။ ကြောက်လန့်တုန်လှုပ်လျက်ရေကိုသောက် လော့။-
೧೮“ನರಪುತ್ರನೇ, ನೀನು ಅನ್ನವನ್ನು ನಡುಗುತ್ತಾ ತಿನ್ನು ಮತ್ತು ನೀರನ್ನು ಹೆದರಿಕೆಯಿಂದ ಕುಡಿ.
19 ၁၉ အရှင်ထာဝရဘုရားပေးတော်မူသောဤ ဗျာဒိတ်တော်ကိုဣသရေလပြည်ယေရု ရှလင်မြို့တွင် ယခုနေထိုင်လျက်ရှိသော လူတို့အတွက်ဖြစ်ကြောင်းပြောကြားလော့။ ထိုသူတို့သည်တုန်လှုပ်လျက်အစားအစာ ကိုစားရကြလိမ့်မည်။ ကြောက်လန့်တုန်လှုပ် လျက်ရေကိုသောက်ရကြလိမ့်မည်။ လူတိုင်း ပင်တရားလက်လွတ်ပြုကျင့်ကြသည်ဖြစ် ၍ သူတို့၏ပြည်ကိုငါသည်ပြောင်တလင်း ဖြစ်စေမည်။-
೧೯ಆ ದೇಶದಲ್ಲಿರುವ ಜನರಿಗೆ ಹೀಗೆ ಹೇಳು, ‘ಕರ್ತನಾದ ಯೆಹೋವನು ಇಸ್ರಾಯೇಲ್ ದೇಶದ ಯೆರೂಸಲೇಮಿನ ನಿವಾಸಿಗಳ ವಿಷಯವಾಗಿ ಇಂತೆನ್ನುತ್ತಾನೆ, ಅವರು ಅನ್ನವನ್ನು ನಡಗುತ್ತಾ ತಿನ್ನುವರು ಮತ್ತು ನೀರನ್ನು ಹೆದರಿಕೆಯಿಂದ ಕುಡಿಯುವರು; ಏಕೆಂದರೆ ಆ ದೇಶದವರೆಲ್ಲರು ಬಲಾತ್ಕಾರಿಗಳಾಗಿರುವುದರಿಂದ ಅಲ್ಲಿನ ಸೊತ್ತೆಲ್ಲಾ ಸೂರೆಯಾಗಿ, ದೇಶವು ಬರಿದಾಗುವುದು.
20 ၂၀ လူနေစည်ကားသည့်မြို့ကြီးတို့ကိုဖြို ဖျက်ကာ တစ်ပြည်လုံးကိုလူသူကင်းမဲ့စေ မည်။ ထိုအခါငါသည်ထာဝရဘုရား ဖြစ်တော်မူကြောင်း သူတို့သိရှိကြလိမ့် မည်'' ဟုမိန့်တော်မူ၏။
೨೦ಆಗ ಜನ ತುಂಬಿದ ಊರುಗಳು ಹಾಳಾಗಿ ದೇಶವು ಬೀಡುಬೀಳುವುದು; ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವುದು.’”
21 ၂၁ ထာဝရဘုရား၏နှုတ်ကပတ်တော်သည် ငါ့ထံသို့ရောက်လာ၏။-
೨೧ಆಮೇಲೆ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
22 ၂၂ ကိုယ်တော်က``အချင်းလူသား၊ အဘယ်ကြောင့် ဣသရေလအမျိုးသားတို့သည်`အချိန်သာ ကုန်လွန်၍ဗျာဒိတ်ရူပါရုံများကားအ ကောင်အထည်မပေါ်လာ' ဟူသောစကားပုံ ကိုအဖန်တလဲလဲသုံးစွဲနေကြသနည်း။-
೨೨“ನರಪುತ್ರನೇ, ಕ್ಲುಪ್ತಕಾಲವು ದೂರ ಹೋಗುತ್ತಲಿದೆ; ದಿವ್ಯದರ್ಶನಗಳೆಲ್ಲಾ ನಿರರ್ಥಕ ಎಂಬುದಾಗಿ ಇಸ್ರಾಯೇಲ್ ದೇಶದವರು ಆಡಿಕೊಳ್ಳುವ ಈ ಗಾದೆ ಮಾತು ಎಂಥದ್ದು?”
23 ၂၃ ထိုစကားပုံနှင့်ပတ်သက်၍ငါအရှင်ထာဝရ ဘုရားအဘယ်သို့မိန့်တော်မူသည်ကိုသူတို့ အား ယခုပြောကြားလော့။ ငါသည်ထိုစကား ပုံကိုပပျောက်စေမည်။ ဣသရေလပြည် တွင်အဘယ်အခါ၌မျှထပ်မံ၍သုံးစွဲရ ကြမည်မဟုတ်။ အချိန်ကာလကျရောက်လာ ပြီဖြစ်၍ဗျာဒိတ်ရူပါရုံများသည် အကောင် အထည်ပေါ်လာမည်ဖြစ်ကြောင်းထိုသူတို့ အားဆင့်ဆိုလော့။''
೨೩ಅವರಿಗೆ ಹೀಗೆ ಹೇಳು, “ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ನಾನು ಈ ಗಾದೆಯನ್ನು ಬಳಸುವುದನ್ನು ನಿಲ್ಲಿಸಿಬಿಡುವೆನು, ಅದು ಇಸ್ರಾಯೇಲಿನಲ್ಲಿ ಇನ್ನು ಸಲ್ಲದು; ನಾನು ನುಡಿಯುವ ಈ ಮಾತನ್ನು ಕೇಳಿರಿ, ‘ಕ್ಲುಪ್ತಕಾಲವು ಸಮೀಪಿಸಿದೆ, ದಿವ್ಯದರ್ಶನಗಳೆಲ್ಲಾ ಸಾರ್ಥಕವಾಗುವ ಕಾಲ ಸಮೀಪಿಸಿದೆ.
24 ၂၄ ``ဣသရေလအမျိုးသားတို့တွင်ဗျာဒိတ် ရူပါရုံအတုများ၊ မှားယွင်းသောဗျာဒိတ် များ၊ နောက်ထပ်မပေါ်ပေါက်ရ။-
೨೪ಇನ್ನು ಮೇಲೆ ಇಸ್ರಾಯೇಲ್ ವಂಶದವರಲ್ಲಿ ಯಾರಿಗೂ ಸುಳ್ಳು ದರ್ಶನವಾಗದು, ಮೋಸದ ಕಣಿಯೂ ಇರದು.
25 ၂၅ ငါထာဝရဘုရားသည်သူတို့အားဗျာဒိတ် ပေးတော်မူသည်အတိုင်းပြုရမည်။ ကြန့်ကြာ မှုရှိတော့မည်မဟုတ်။ အချင်းပုန်ကန်တတ်သူ တို့၊ သင်တို့အားငါသတိပေးခဲ့သည့်အတိုင်း သင်တို့လက်ထက်၌ပင်ငါပြုမည်။ ဤကားငါ မိန့်မြွက်တော်မူသည့်စကားဖြစ်၏'' ဟု အရှင်ထာဝရဘုရားမိန့်တော်မူ၏။
೨೫ನಾನೇ ಯೆಹೋವನು; ನಾನು ನುಡಿದೇ ನುಡಿಯುವೆನು; ನಾನು ನುಡಿದ ಮಾತು ನೆರವೇರುವುದು, ಇನ್ನು ನಿಧಾನವಾಗದು; ದ್ರೋಹಿ ವಂಶದವರೇ, ನಾನು ನಿಮ್ಮ ಕಾಲದಲ್ಲಿ ನುಡಿಯುವುದು ಮಾತ್ರವಲ್ಲದೆ ನುಡಿದದ್ದನ್ನು ನೆರವೇರಿಸುವೆನು’” ಇದು ಕರ್ತನಾದ ಯೆಹೋವನ ವಾಕ್ಯ.
26 ၂၆ ထာဝရဘုရား၏နှုတ်ကပတ်တော်သည် ငါ့ထံရောက်လာ၏။-
೨೬ಮತ್ತು ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
27 ၂၇ ``အချင်းလူသား၊ ဣသရေလအမျိုးသားတို့ ကသင်မြင်သောဗျာဒိတ်ရူပါရုံများနှင့် သင် ဟောကြားသောဗျာဒိတ်စကားများသည် ဝေး ကွာသည့်အနာဂတ်ကာလနှင့်ဆိုင်သည်ဟု ထင်မှတ်ကြ၏။-
೨೭“ನರಪುತ್ರನೇ, ಇಗೋ, ಇಸ್ರಾಯೇಲ್ ವಂಶದವರು, ‘ಇವನಿಗಾದ ದಿವ್ಯದರ್ಶನವು ಮುಂದೆ ಬಹುದೂರ ಕಾಲಕ್ಕೆ ಸಂಬಂಧಪಟ್ಟದ್ದು; ಬಹಳ ದಿನಗಳ ಮೇಲೆ ಆಗತಕ್ಕದ್ದನ್ನು ಮುಂತಿಳಿಸುತ್ತಾನೆ’ ಎಂದು ಹೇಳುತ್ತಾರೆ.
28 ၂၈ သို့ဖြစ်၍ကြန့်ကြာမှုရှိတော့မည်မဟုတ်။ ငါ ဖော်ပြခဲ့သည့်အတိုင်းဖြစ်လိမ့်မည်ဟု ငါ အရှင်ထာဝရဘုရားမိန့်တော်မူပြီဖြစ် ကြောင်း ထိုသူတို့အားဆင့်ဆိုလော့။ ဤကား ငါအရှင်ထာဝရဘုရားမိန့်မြွက်တော်မူ သည့်စကားဖြစ်၏'' ဟုမိန့်တော်မူ၏။
೨೮“ಆದಕಾರಣ ನೀನು ಅವರಿಗೆ ಹೀಗೆ ಹೇಳು, ‘ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ಇನ್ನು ಮೇಲೆ ನನ್ನ ಮಾತುಗಳಲ್ಲಿ ಯಾವುದೂ ನೆರವೇರದೆ ಇರದು; ನಾನಾಡುವ ಮಾತು ನೆರವೇರುವುದು ಖಂಡಿತ’ ಇದು ಕರ್ತನಾದ ಯೆಹೋವನ ನುಡಿ.”