< ಕೀರ್ತನೆಗಳು 92 >
1 ಕೀರ್ತನೆ. ಸಬ್ಬತ್ ದಿನದ ಗೀತೆ. ಯೆಹೋವ ದೇವರೇ, ನಿಮ್ಮನ್ನು ಕೊಂಡಾಡುವುದು ಒಳ್ಳೆಯದು. ಮಹೋನ್ನತರೇ, ನಿಮ್ಮ ಹೆಸರನ್ನು ಕೀರ್ತಿಸುವುದು ಒಳ್ಳೆಯದು.
Psalam. Pjesma. Za dan subotnji. Dobro je slaviti Jahvu, pjevati imenu tvome, Svevišnji;
2 ಬೆಳಿಗ್ಗೆ ನಿಮ್ಮ ಪ್ರೀತಿ ಕರುಣೆಯನ್ನೂ ಪ್ರತಿ ರಾತ್ರಿ ನಿಮ್ಮ ನಂಬಿಕೆಯನ್ನೂ ಸಾರುವುದು ಒಳ್ಳೆಯದು.
naviještati jutrom ljubav tvoju i noću vjernost tvoju,
3 ಹತ್ತು ತಂತಿವಾದ್ಯದಿಂದಲೂ ವೀಣೆಯಿಂದಲೂ ಕಿನ್ನರಿಯ ಘನಸ್ವರದಿಂದಲೂ ಬಾರಿಸುವುದು ಒಳ್ಳೆಯದು.
uz harfu od deset žica i liru, s pjesmom uz citaru.
4 ಯೆಹೋವ ದೇವರೇ, ನಿಮ್ಮ ಕ್ರಿಯೆಯಿಂದ ನನ್ನನ್ನು ಸಂತೋಷಪಡಿಸಿದ್ದೀರಿ. ನಿಮ್ಮ ಕೈಕೆಲಸಗಳಲ್ಲಿ ಜಯಧ್ವನಿಗೈಯುತ್ತೇನೆ.
Obradovao si me djelima svojim, o Jahve, kličem zbog djela ruku tvojih.
5 ಯೆಹೋವ ದೇವರೇ, ನಿಮ್ಮ ಕೃತ್ಯಗಳು ಎಷ್ಟೋ ಮಹತ್ತಾದದ್ದು. ನಿಮ್ಮ ಯೋಚನೆಗಳು ಬಹು ಆಳವಾಗಿವೆ.
Kako su silna djela tvoja, o Jahve, i duboki naumi tvoji!
6 ಇದನ್ನು ಬುದ್ಧಿಹೀನ ಮನುಷ್ಯನು ತಿಳಿದುಕೊಳ್ಳನು. ಮೂರ್ಖನು ಇದನ್ನು ಗ್ರಹಿಸನು.
Bezuman čovjek ne spoznaje, luđak ne shvaća.
7 ದುಷ್ಟರು ಹುಲ್ಲಿನ ಹಾಗೆ ಚಿಗುರಿದರೂ ಅಕ್ರಮ ಮಾಡುವವರೆಲ್ಲರು ವೃದ್ಧಿ ಆದರೂ ಅವರು ನಿತ್ಯ ದಂಡನೆಗೆ ಗುರಿಯಾಗುವರು.
Sve ako bi bezbošci nicali k'o trava i cvali svi što zlo čine, određeni su za vječnu propast;
8 ಯೆಹೋವ ದೇವರೇ, ನೀವಾದರೋ ಎಂದೆಂದಿಗೂ ಉನ್ನತರಾಗಿದ್ದೀರಿ.
a ti, Jahve, dovijeka uzvišen ostaješ.
9 ನಿಜವಾಗಿಯೂ ನಿಮ್ಮ ಶತ್ರುಗಳು ಯೆಹೋವ ದೇವರೇ, ನಿಮ್ಮ ಶತ್ರುಗಳು ನಾಶವಾಗುವರು. ಕೇಡು ಮಾಡುವವರೆಲ್ಲರು ಚದರಿಹೋಗುವರು.
Doista, dušmani tvoji, o Jahve, tvoji će dušmani propasti; raspršit će se svi što čine zlo.
10 ಆದರೆ ನೀವು ನನ್ನ ಬಲವನ್ನು ಕಾಡುಕೋಣದ ಕೊಂಬಿನ ಹಾಗೆ ಬಲಪಡಿಸುವಿರಿ. ನಾನು ನೂತನ ತೈಲದಿಂದ ಅಭಿಷಿಕ್ತನಾಗುವೆನು.
Rog si mi digao k'o u bivola, pomazao me uljem prečistim;
11 ನನ್ನ ಕಣ್ಣು ನನ್ನ ವಿರೋಧಿಗಳ ಸೋಲನ್ನು ದೃಷ್ಟಿಸುವುದು. ನನಗೆ ವಿರೋಧವಾಗಿ ಏಳುವ ದುರ್ಮಾರ್ಗಿಗಳ ವಿಪತ್ತನ್ನು ಕುರಿತು ನಾನು ಕೇಳಿಸಿಕೊಳ್ಳುವೆ.
i oko mi s visoka gleda dušmane i uho mirno sluša o onima što na me ustaju.
12 ನೀತಿವಂತರು ಖರ್ಜೂರ ಮರದ ಹಾಗೆ ವೃದ್ಧಿಯಾಗುವರು. ಅವರು ಲೆಬನೋನಿನಲ್ಲಿರುವ ದೇವದಾರಿನ ಹಾಗೆ ಬೆಳೆಯುವರು.
K'o palma cvate pravednik i raste k'o cedar libanonski.
13 ಅವರು ಯೆಹೋವ ದೇವರ ಆಲಯದಲ್ಲಿ ನೆಟ್ಟ ಸಸಿಗಳಂತಿರುವರು. ನಮ್ಮ ದೇವರ ಅಂಗಳಗಳಲ್ಲಿ ಅವರು ವೃದ್ಧಿ ಆಗುವರು.
Zasađeni u Domu Jahvinu, cvatu u dvorima Boga našega.
14 ಮುದಿಪ್ರಾಯದಲ್ಲಿಯೂ ಫಲ ಕೊಡುವರು. ಅವರು ಹಸಿರಾಗಿ ಶೋಭಿಸುವರು.
Rod donose i u starosti, sočni i puni svježine:
15 “ಯೆಹೋವ ದೇವರು ಯಥಾರ್ಥವಂತರೂ ನನ್ನ ಬಂಡೆಯೂ ಆಗಿದ್ದಾರೆ. ಅವರಲ್ಲಿ ಅನೀತಿ ಇರುವುದಿಲ್ಲ,” ಎಂದು ನೀತಿವಂತರು ಘೋಷಿಸುವರು.
da navijeste kako je pravedan Jahve, Hrid moja, onaj na kome nema nepravde.