< ಕೀರ್ತನೆಗಳು 6 >

1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ತಂತಿವಾದ್ಯದೊಡನೆ ಶೆಮಿನಿಥ್ ಸ್ವರದೊಂದಿಗೆ ಹಾಡತಕ್ಕದ್ದು. ದಾವೀದನ ಕೀರ್ತನೆ. ಯೆಹೋವ ದೇವರೇ, ನೀವು ಬೇಸರದಿಂದ ನನ್ನನ್ನು ಗದರಿಸಬೇಡಿರಿ, ರೋಷದಿಂದಲೂ ನನ್ನನ್ನು ದಂಡಿಸಬೇಡಿರಿ.
En Psalm Davids, till att föresjunga på åtta stränger. Ack! Herre, straffa mig icke i dina vrede, och näps mig icke i dine grymhet.
2 ಯೆಹೋವ ದೇವರೇ, ನನ್ನನ್ನು ಕರುಣಿಸಿರಿ, ನಾನು ಬಲಹೀನನಾಗಿದ್ದೇನೆ; ಯೆಹೋವ ದೇವರೇ, ನನ್ನನ್ನು ಸ್ವಸ್ಥಮಾಡಿರಿ, ನನ್ನ ಎಲುಬುಗಳು ಬಹು ವ್ಯಥೆಗೊಳಗಾಗಿವೆ.
Herre, var mig nådelig, ty jag är svag; hela mig, Herre, ty mine ben äro förskräckte;
3 ನನ್ನ ಪ್ರಾಣವು ಬಹು ಸಂಕಟದಲ್ಲಿದೆ. ಎಲ್ಲಿಯತನಕ, ಯೆಹೋವ ದೇವರೇ, ಇನ್ನೂ ಎಲ್ಲಿಯತನಕ?
Och min själ är svårliga förskräckt; ack! Herre, huru länge?
4 ಯೆಹೋವ ದೇವರೇ, ನನ್ನ ಕಡೆಗೆ ಹಿಂದಿರುಗಿರಿ, ನನ್ನನ್ನು ಬಿಡುಗಡೆ ಮಾಡಿರಿ; ನಿಮ್ಮ ಒಡಂಬಡಿಕೆಯ ಪ್ರೀತಿಯ ನಿಮಿತ್ತ ನನ್ನನ್ನು ರಕ್ಷಿಸಿರಿ.
Vänd dig, Herre, och undsätt mina själ; hjelp mig för dina mildhets skull.
5 ಸತ್ತವರಲ್ಲಿ ನಿಮ್ಮನ್ನು ಸ್ಮರಿಸುವವರಿಲ್ಲ. ಪಾತಾಳದಲ್ಲಿ ನಿಮ್ಮನ್ನು ಸ್ತುತಿಸುವವರು ಯಾರು? (Sheol h7585)
Ty i döden tänker man intet på dig; ho vill tacka dig i helvete? (Sheol h7585)
6 ನನ್ನ ನರಳಾಟದಿಂದ ದಣಿದು ಹೋಗಿದ್ದೇನೆ. ರಾತ್ರಿಯೆಲ್ಲಾ ನಾನು ಅಳುವುದರಿಂದ ನನ್ನ ಹಾಸಿಗೆಯು ಕಣ್ಣೀರಿನ ಪ್ರವಾಹದಿಂದ ತೇಲಾಡುತ್ತದೆ, ಕಣ್ಣೀರಿನಿಂದ ನನ್ನ ಮಂಚವನ್ನು ತೊಯಿಸಿದ್ದೇನೆ.
Jag är så trött af suckande; jag gör mina säng flytande i hela nattene, och väter mitt lägre med mina tårar.
7 ದುಃಖದಿಂದ ನನ್ನ ಕಣ್ಣುಗಳು ಬಲಹೀನವಾಗಿವೆ, ನನ್ನ ಸಕಲ ವೈರಿಗಳಿಂದ ಅವು ಮೊಬ್ಬಾಗಿವೆ.
Mitt ansigte är förfallet af sorg, och är gammalt vordet; ty jag varder trängd på alla sidor.
8 ಕೆಟ್ಟದ್ದನ್ನು ಮಾಡುವವರೇ, ನೀವೆಲ್ಲರು ನನ್ನಿಂದ ತೊಲಗಿಹೋಗಿರಿ, ಏಕೆಂದರೆ ಯೆಹೋವ ದೇವರು ನನ್ನ ಗೋಳಾಟವನ್ನು ಕೇಳಿದ್ದಾರೆ.
Viker ifrå mig, alle ogerningsmän; ty Herren hörer min gråt.
9 ಯೆಹೋವ ದೇವರು ನಾನು ಕರುಣೆಗಾಗಿ ಕೇಳಿದ ನನ್ನ ಮೊರೆಯನ್ನು ಆಲಿಸಿದ್ದಾರೆ; ಯೆಹೋವ ದೇವರು ನನ್ನ ಪ್ರಾರ್ಥನೆಯನ್ನು ಸ್ವೀಕರಿಸುವರು.
Herren hörer mina bön; mina bön anammar Herren.
10 ನನ್ನ ಶತ್ರುಗಳೆಲ್ಲರೂ ನಾಚಿಕೆಪಟ್ಟು ತತ್ತರಿಸುವರು; ಕ್ಷಣಮಾತ್ರದಲ್ಲಿ ಅವರು ಅವಮಾನಗೊಂಡು ಹಿಂದಿರುಗಿ ಹೋಗುವರು.
Alle mine fiender komme på skam, och förskräckes svårliga; vände sig tillbaka, och komme på skam hasteliga.

< ಕೀರ್ತನೆಗಳು 6 >