< ಅರಣ್ಯಕಾಂಡ 19 >
1 ಯೆಹೋವ ದೇವರು ಮೋಶೆ ಹಾಗೂ ಆರೋನನ ಸಂಗಡ ಮಾತನಾಡಿ,
耶和华晓谕摩西、亚伦说:
2 “ಯೆಹೋವ ದೇವರಾದ ನಾನು ಆಜ್ಞಾಪಿಸಿದ ನಿಯಮದ ಕಟ್ಟಳೆ ಏನೆಂದರೆ, ಎಂದೂ ನೊಗವನ್ನು ಹೊರದಂಥ, ಮಚ್ಚೆ ಇಲ್ಲದಂಥ ಮತ್ತು ಕಳಂಕವಿಲ್ಲದ ಕೆಂದಾಕಳನ್ನು ನಿಮಗೆ ತಂದು ಕೊಡುವಂತೆ ಇಸ್ರಾಯೇಲರಿಗೆ ಹೇಳು.
“耶和华命定律法中的一条律例乃是这样说:你要吩咐以色列人,把一只没有残疾、未曾负轭、纯红的母牛牵到你这里来,
3 ನೀವು ಅದನ್ನು ಯಾಜಕನಾದ ಎಲಿಯಾಜರನಿಗೆ ಕೊಡಬೇಕು. ಅವನು ಅದನ್ನು ಪಾಳೆಯದ ಹೊರಗೆ ತೆಗೆದುಕೊಂಡುಹೋಗಿ, ತನ್ನ ಮುಂದೆ ವಧೆಮಾಡಿಸಬೇಕು.
交给祭司以利亚撒;他必牵到营外,人就把牛宰在他面前。
4 ಯಾಜಕನಾದ ಎಲಿಯಾಜರನು ತನ್ನ ಬೆರಳಿನಿಂದ ಅದರ ರಕ್ತವನ್ನು ತೆಗೆದುಕೊಂಡು, ಅದನ್ನು ಏಳು ಸಾರಿ ದೇವದರ್ಶನ ಗುಡಾರದ ಮುಂಭಾಗಕ್ಕೆ ನೇರವಾಗಿ ಚಿಮುಕಿಸಬೇಕು.
祭司以利亚撒要用指头蘸这牛的血,向会幕前面弹七次。
5 ಹಸುವನ್ನು ಅವನ ಎದುರಿನಲ್ಲಿಯೇ ಸುಡಿಸಬೇಕು. ಅದರ ತೊಗಲನ್ನೂ ಮಾಂಸವನ್ನೂ ರಕ್ತವನ್ನೂ ಮತ್ತು ಅದರ ಸಗಣಿಯ ಕೂಡ ಸುಡಬೇಕು.
人要在他眼前把这母牛焚烧;牛的皮、肉、血、粪都要焚烧。
6 ಯಾಜಕನು ದೇವದಾರು ಕಟ್ಟಿಗೆಯನ್ನೂ ಹಿಸ್ಸೋಪನ್ನೂ ರಕ್ತವರ್ಣವುಳ್ಳ ದಾರವನ್ನೂ ತೆಗೆದುಕೊಂಡು ಹಸುವಿನ ದಹನದಲ್ಲಿ ಹಾಕಬೇಕು.
祭司要把香柏木、牛膝草、朱红色线都丢在烧牛的火中。
7 ಆಗ ಯಾಜಕನು ತನ್ನ ವಸ್ತ್ರಗಳನ್ನು ತೊಳೆದುಕೊಂಡು, ತನ್ನ ಶರೀರವನ್ನು ನೀರಿನಲ್ಲಿ ತೊಳೆದುಕೊಂಡ ನಂತರ ಪಾಳೆಯದೊಳಗೆ ಬರಬಹುದು. ಆದರೂ ಯಾಜಕನು ಸಂಜೆಯವರೆಗೂ ಅಶುದ್ಧನಾಗಿರುವನು.
祭司必不洁净到晚上,要洗衣服,用水洗身,然后可以进营。
8 ಅದನ್ನು ಸುಡುವವನು ತನ್ನ ವಸ್ತ್ರಗಳನ್ನು ನೀರಿನಲ್ಲಿ ತೊಳೆದುಕೊಂಡು, ಸ್ನಾನಮಾಡಬೇಕು. ಅವನೂ ಸಹ ಆ ದಿನದ ಸಂಜೆಯವರೆಗೆ ಅಶುದ್ಧನಾಗಿರುವನು.
烧牛的人必不洁净到晚上,也要洗衣服,用水洗身。
9 “ಶುದ್ಧನಾದವನೊಬ್ಬನು ಆ ಆಕಳಿನ ಬೂದಿಯನ್ನು ಕೂಡಿಸಿ, ಪಾಳೆಯದ ಹೊರಗೆ ಶುದ್ಧವಾದ ಒಂದು ಸ್ಥಳದಲ್ಲಿ ಇಡಬೇಕು. ಅದನ್ನು ಇಸ್ರಾಯೇಲ್ ಸಮೂಹದವರ ಉಪಯೋಗಕ್ಕಾಗಿ ನೀವು ಜೋಪಾನವಾಗಿಡಬೇಕು. ಅದು ದೋಷಪರಿಹಾರಕವಾದುದು. ಆದ್ದರಿಂದ ಶುದ್ಧೀಕರಣ ನೀರನ್ನು ಸಿದ್ಧಪಡಿಸುವುದಕ್ಕಾಗಿ ಅಲ್ಲೇ ಇಟ್ಟಿರಬೇಕು.
必有一个洁净的人收起母牛的灰,存在营外洁净的地方,为以色列会众调做除污秽的水。这本是除罪的。
10 ಹಸುವಿನ ಬೂದಿಯನ್ನು ಕೂಡಿಸಿದವನು ತನ್ನ ವಸ್ತ್ರಗಳನ್ನು ತೊಳೆದುಕೊಳ್ಳಬೇಕು, ಸಂಜೆಯವರೆಗೆ ಅಶುದ್ಧನಾಗಿರಬೇಕು. ಇದು ಇಸ್ರಾಯೇಲರಿಗೂ ಅವರ ಮಧ್ಯದಲ್ಲಿ ಪ್ರವಾಸಿಯಾಗಿರುವ ಪರಕೀಯನಿಗೂ ಶಾಶ್ವತ ಕಟ್ಟಳೆಯಾಗಿದೆ.
收起母牛灰的人必不洁净到晚上,要洗衣服。这要给以色列人和寄居在他们中间的外人作为永远的定例。”
11 “ಮನುಷ್ಯನ ಶವವನ್ನು ಮುಟ್ಟಿದವನು ಏಳು ದಿನಗಳವರೆಗೆ ಅಶುದ್ಧನಾಗಿರುವನು.
“摸了人死尸的,就必七天不洁净。
12 ಅವನು ಇದರಿಂದ ಮೂರನೆಯ ದಿವಸದಲ್ಲಿ ತನ್ನನ್ನು ಶುದ್ಧೀಕರಿಸಿಕೊಂಡು ಏಳನೆಯ ದಿವಸದಲ್ಲಿ ಶುದ್ಧನಾಗಬೇಕು. ಆದರೆ ಅವನು ಮೂರನೆಯ ದಿವಸದಲ್ಲಿ ತನ್ನನ್ನು ಶುದ್ಧಮಾಡಿಕೊಳ್ಳದಿದ್ದರೆ, ಏಳನೆಯ ದಿವಸದಲ್ಲಿ ಶುದ್ಧನಾಗಲಾರನು.
那人到第三天要用这除污秽的水洁净自己,第七天就洁净了。他若在第三天不洁净自己,第七天就不洁净了。
13 ಸತ್ತ ಮನುಷ್ಯನ ಶವವನ್ನು ಮುಟ್ಟಿ, ಶುದ್ಧಮಾಡಿಕೊಳ್ಳದವನು ಯೆಹೋವ ದೇವರ ಗುಡಾರವನ್ನು ಅಪವಿತ್ರಪಡಿಸುತ್ತಾನೆ, ಅಂಥವನನ್ನು ಇಸ್ರಾಯೇಲಿನವರೊಳಗಿಂದ ತೆಗೆದುಹಾಕಬೇಕು, ಶುದ್ಧೀಕರಣದ ನೀರು ಅವನ ಮೇಲೆ ಚಿಮುಕಿಸದ ಕಾರಣ ಅವನು ಅಶುದ್ಧನಾಗಿದ್ದಾನೆ. ಅವನ ಅಶುದ್ಧತ್ವವು ಇನ್ನೂ ಅವನ ಮೇಲೆ ಇರುವುದು.
凡摸了人死尸、不洁净自己的,就玷污了耶和华的帐幕,这人必从以色列中剪除;因为那除污秽的水没有洒在他身上,他就为不洁净,污秽还在他身上。
14 “ಒಬ್ಬ ಮನುಷ್ಯನು ಡೇರೆಯಲ್ಲಿ ಸತ್ತರೆ, ಅವನ ವಿಷಯವಾದ ನಿಯಮವೇನೆಂದರೆ: ಆ ಡೇರೆಯೊಳಗೆ ಪ್ರವೇಶಿಸುವವರೆಲ್ಲರೂ, ಡೇರೆಯಲ್ಲಿರುವವರೆಲ್ಲರೂ ಏಳು ದಿವಸಗಳವರೆಗೆ ಅಶುದ್ಧರಾಗಿರುವರು.
“人死在帐棚里的条例乃是这样:凡进那帐棚的,和一切在帐棚里的,都必七天不洁净。
15 ಮುಚ್ಚಳ ಹಾಕದೆ ತೆರೆದಿರುವ ಸಾಮಾನುಗಳೆಲ್ಲಾ ಅಶುದ್ಧವಾಗಿರುವುವು.
凡敞口的器皿,就是没有扎上盖的,也是不洁净。
16 “ಇದಲ್ಲದೆ ಬಯಲಿನಲ್ಲಿ ಖಡ್ಗದಿಂದ ಹತನಾದ ವ್ಯಕ್ತಿಯನ್ನು ಮುಟ್ಟಿದವರೂ ಅಥವಾ ಬೇರೆ ಯಾವ ಮನುಷ್ಯನ ಶವವಾಗಲಿ, ಮನುಷ್ಯನ ಎಲುಬನ್ನಾಗಲಿ, ಸಮಾಧಿಯನ್ನಾಗಲಿ ಮುಟ್ಟಿದವರೆಲ್ಲರೂ ಏಳು ದಿವಸ ಅಪವಿತ್ರರಾಗಿರುವರು.
无论何人在田野里摸了被刀杀的,或是尸首,或是人的骨头,或是坟墓,就要七天不洁净。
17 “ಅಪವಿತ್ರನಾದವನನ್ನು ಶುದ್ಧಪಡಿಸಬೇಕಾದರೆ ಆ ದೋಷಪರಿಹಾರಕವಾದ ಬೂದಿಯನ್ನು ತೆಗೆದುಕೊಂಡು, ಒಂದು ಪಾತ್ರೆಯೊಳಗಿಟ್ಟು, ಅದರ ಮೇಲೆ ಹರಿಯುವ ನೀರನ್ನು ಹಾಕಬೇಕು.
要为这不洁净的人拿些烧成的除罪灰放在器皿里,倒上活水。
18 ಪವಿತ್ರನಾದವನೊಬ್ಬನು ಹಿಸ್ಸೋಪನ್ನು ತೆಗೆದುಕೊಂಡು ನೀರಿನಲ್ಲಿ ಅದ್ದಿ, ಆ ಡೇರೆಯ ಮೇಲೆಯೂ, ಸಮಸ್ತ ಸಲಕರಣೆಗಳ ಮೇಲೆಯೂ, ಅದರಲ್ಲಿರುವ ಜನರ ಮೇಲೆಯೂ ಚಿಮುಕಿಸಬೇಕು. ಹಾಗೆಯೇ ಎಲುಬನ್ನಾಗಲಿ, ಹತನಾದವನ ಅಥವಾ ಬೇರೆ ಮನುಷ್ಯನ ಶವವಾಗಲಿ, ಸಮಾಧಿಯನ್ನಾಗಲಿ ಮುಟ್ಟಿದವರ ಮೇಲೆಯೂ ಚಿಮುಕಿಸಬೇಕು.
必当有一个洁净的人拿牛膝草蘸在这水中,把水洒在帐棚上,和一切器皿并帐棚内的众人身上,又洒在摸了骨头,或摸了被杀的,或摸了自死的,或摸了坟墓的那人身上。
19 ಪವಿತ್ರನಾದವನು ಅಪವಿತ್ರನಾದವನ ಮೇಲೆ ಮೂರನೆಯ ದಿವಸದಲ್ಲಿಯೂ, ಏಳನೆಯ ದಿವಸದಲ್ಲಿಯೂ ಅದನ್ನು ಚಿಮುಕಿಸಲಿ. ಏಳನೆಯ ದಿವಸದಲ್ಲಿ ಅವನು ತನ್ನನ್ನು ಪವಿತ್ರ ಮಾಡಿಕೊಂಡು, ತನ್ನ ವಸ್ತ್ರಗಳನ್ನು ತೊಳೆದುಕೊಂಡು, ನೀರಿನಲ್ಲಿ ಸ್ನಾನ ಮಾಡಲಿ. ಹೀಗೆ ಸಂಜೆಯಲ್ಲಿ ಪವಿತ್ರನಾಗುವನು.
第三天和第七天,洁净的人要洒水在不洁净的人身上,第七天就使他成为洁净。那人要洗衣服,用水洗澡,到晚上就洁净了。
20 ಆದರೆ ಅಪವಿತ್ರನಾಗಿದ್ದು, ತನ್ನನ್ನು ಶುದ್ಧಪಡಿಸಿಕೊಳ್ಳದವನು ಸಭೆಯ ಮಧ್ಯದಿಂದ ತೆಗೆದುಹಾಕಬೇಕು ಏಕೆಂದರೆ ಅವನು ಯೆಹೋವ ದೇವರ ಪರಿಶುದ್ಧ ಸ್ಥಳವನ್ನು ಅಪವಿತ್ರ ಮಾಡಿದ್ದಾನೆ. ನೀರು ಅವನ ಮೇಲೆ ಚಿಮಿಕಿಸಿಕೊಳ್ಳದ ಕಾರಣ ಅವನು ಅಪವಿತ್ರನೇ.
“但那污秽而不洁净自己的,要将他从会中剪除,因为他玷污了耶和华的圣所。除污秽的水没有洒在他身上,他是不洁净的。
21 ಇದು ಅವರಿಗೆ ಶಾಶ್ವತ ಕಟ್ಟಳೆಯಾಗಿರಬೇಕು. “ಶುದ್ಧೀಕರಣದ ನೀರನ್ನು ಚಿಮುಕಿಸುವವನು ತನ್ನ ವಸ್ತ್ರಗಳನ್ನು ತೊಳೆದುಕೊಳ್ಳಬೇಕು ಮತ್ತು ಆ ನೀರು ಯಾರಿಗೆ ಸೋಂಕುವುದೋ ಅವನು ಆ ದಿನದ ಸಂಜೆಯವರೆಗೆ ಅಪವಿತ್ರನಾಗಿರುವನು.
这要给你们作为永远的定例。并且那洒除污秽水的人要洗衣服。凡摸除污秽水的,必不洁净到晚上。
22 ಇದಲ್ಲದೆ ಅಪವಿತ್ರನಾದವನು ಮುಟ್ಟುವಂಥಾದ್ದೆಲ್ಲ ಅಪವಿತ್ರವಾಗುವುದು, ಅವನನ್ನು ಮುಟ್ಟಿದವನು ಸಂಜೆಯವರೆಗೆ ಅಪವಿತ್ರನಾಗಿರುವನು,” ಎಂದು ಹೇಳಿದರು.
不洁净人所摸的一切物就不洁净;摸了这物的人必不洁净到晚上。”