< ಮತ್ತಾಯನು 25 >
1 “ಪರಲೋಕ ರಾಜ್ಯವು ತಮ್ಮ ದೀಪಗಳನ್ನು ತೆಗೆದುಕೊಂಡು ಮದುಮಗನನ್ನು ಎದುರುಗೊಳ್ಳುವುದಕ್ಕಾಗಿ ಹೊರಟುಹೋದ ಹತ್ತು ಮಂದಿ ಕನ್ಯೆಯರಿಗೆ ಹೋಲಿಕೆಯಾಗಿರುವುದು.
Panguva iyo ushe hwekumatenga huchava hwakafananidzwa nevasikana gumi vakatora marambi avo vakabuda kunochingamidza muwani.
2 ಅವರಲ್ಲಿ ಐದು ಮಂದಿ ಬುದ್ಧಿವಂತೆಯರೂ ಐದು ಮಂದಿ ಬುದ್ಧಿಹೀನರೂ ಇದ್ದರು.
Zvino vashanu vavo vakange vakachenjera, uye vashanu vari mapenzi.
3 ಬುದ್ಧಿಹೀನರು, ತಮ್ಮ ದೀಪಗಳನ್ನು ತೆಗೆದುಕೊಂಡರು, ಆದರೆ ತಮ್ಮೊಂದಿಗೆ ಎಣ್ಣೆಯನ್ನು ತೆಗೆದುಕೊಳ್ಳಲಿಲ್ಲ.
Avo vari mapenzi vakatora marambi avo, vakasatora mafuta pamwe navo.
4 ಬುದ್ಧಿವಂತೆಯರೋ, ತಮ್ಮ ದೀಪಗಳೊಂದಿಗೆ ಪಾತ್ರೆಯಲ್ಲಿ ಎಣ್ಣೆಯನ್ನೂ ತೆಗೆದುಕೊಂಡರು.
Asi vakachenjera vakatora mafuta mumidziyo yavo nemarambi avo.
5 ಮದುಮಗನು ತಡಮಾಡಿದಾಗ ಅವರೆಲ್ಲರೂ ತೂಕಡಿಸುತ್ತಾ ನಿದ್ರೆ ಹೋದರು.
Zvino muwani wakati achinonoka, vese vakatsumwaira vakarara.
6 “ಮಧ್ಯರಾತ್ರಿಯಲ್ಲಿ, ‘ನೋಡಿರಿ, ಮದುಮಗನು ಬರುತ್ತಿದ್ದಾನೆ, ಅವನನ್ನು ಎದುರುಗೊಳ್ಳುವುದಕ್ಕಾಗಿ ಹೊರಡಿರಿ,’ ಎಂಬ ಕೂಗಾಯಿತು.
Asi pakati peusiku kwakadanidzirwa: Tarirai, muwani ouya, budai munomuchingamidza!
7 “ಆಗ ಆ ಕನ್ಯೆಯರೆಲ್ಲರೂ ಎದ್ದು ತಮ್ಮ ದೀಪಗಳನ್ನು ಸರಿಪಡಿಸಿಕೊಂಡರು.
Zvino vasikana avo vese vakamuka, vakagadzira marambi avo.
8 ಬುದ್ಧಿಹೀನರು ಬುದ್ಧಿವಂತೆಯರಿಗೆ, ‘ನಿಮ್ಮ ಎಣ್ಣೆಯಲ್ಲಿ ನಮಗೂ ಕೊಂಚ ಕೊಡಿರಿ, ಏಕೆಂದರೆ ನಮ್ಮ ದೀಪಗಳು ಆರಿಹೋಗುತ್ತವೆ,’ ಎಂದರು.
Mapenzi akati kune vakachenjera: Tipei pamafuta enyu nokuti marambi edu odzima.
9 “ಆದರೆ ಬುದ್ಧಿವಂತೆಯರು ಉತ್ತರವಾಗಿ, ‘ಹಾಗಲ್ಲ, ಅದು ನಮಗೂ ಸಾಲದೆ ಹೋದೀತು. ಆದ್ದರಿಂದ ನೀವು ಮಾರುವವರ ಬಳಿಗೆ ಹೋಗಿ ನಿಮಗೋಸ್ಕರ ಕೊಂಡುಕೊಳ್ಳಿರಿ,’ ಎಂದರು.
Asi vakachenjera vakapindura vachiti: Zvimwe haangakwaniri isu nemwi; asi zviri nani endai kune vanotengesa munozvitengera.
10 “ಅವರು ಕೊಂಡುಕೊಳ್ಳುವುದಕ್ಕೆ ಹೋದಾಗ, ಮದುಮಗನು ಬಂದನು. ಆಗ ಸಿದ್ಧವಾಗಿದ್ದವರು ಆತನೊಂದಿಗೆ ಮದುವೆಯ ಔತಣಕ್ಕೆ ಒಳಗೆ ಹೋದರು. ತರುವಾಯ ಬಾಗಿಲು ಮುಚ್ಚಲಾಯಿತು.
Vakati vachienda kunotenga, muwani akasvika. Zvino vakange vakagadzirira vakapinda naye mumuchato, mukova ukapfigwa.
11 “ಇದಾದ ಮೇಲೆ ಆ ಬೇರೆ ಕನ್ಯೆಯರು ಸಹ ಬಂದು, ‘ಕರ್ತನೇ, ಕರ್ತನೇ, ನಮಗೆ ಬಾಗಿಲನ್ನು ತೆರೆಯಿರಿ,’ ಎಂದರು.
Zvino pashure kwakauyawo vamwe vasikana, vachiti: Ishe, ishe, tizarurirei!
12 “ಆದರೆ ಆತನು ಉತ್ತರವಾಗಿ, ‘ನಾನು ನಿಮ್ಮನ್ನು ಅರಿಯೆನು ಎಂದು ನಿಮಗೆ ನಿಜವಾಗಿ ಹೇಳುತ್ತೇನೆ,’ ಎಂದನು.
Asi wakapindura akati: Zvirokwazvo ndinoti kwamuri: Handikuziviyi imwi.
13 “ಆದ್ದರಿಂದ ಎಚ್ಚರವಾಗಿರಿ, ಏಕೆಂದರೆ ಮನುಷ್ಯಪುತ್ರನಾದ ನನ್ನ ಬರುವ ದಿನವನ್ನಾಗಲಿ ಗಳಿಗೆಯನ್ನಾಗಲಿ ನೀವು ಅರಿಯದವರಾಗಿದ್ದೀರಿ, ಎಂದರು.
Naizvozvo rindai, nokuti hamuzivi zuva kana awa Mwanakomana wemunhu raachauya mariri.
14 “ಪರಲೋಕ ರಾಜ್ಯವು ದೂರದೇಶಕ್ಕೆ ಪ್ರಯಾಣ ಮಾಡುವ ಒಬ್ಬ ಮನುಷ್ಯನು ತನ್ನ ಸೇವಕರನ್ನು ಕರೆದು ಅವರಿಗೆ ತನ್ನ ಆಸ್ತಿಯನ್ನು ಒಪ್ಪಿಸಿದಂತೆ ಇದೆ.
Nokuti zvakaita semunhu wakafamba rwendo, akadana varanda vake, akavapa zvaaiva nazvo.
15 ಅವನು ಒಬ್ಬನಿಗೆ ಐದು ಚಿನ್ನದ ನಾಣ್ಯಗಳನ್ನು, ಇನ್ನೊಬ್ಬನಿಗೆ ಎರಡು, ಮತ್ತೊಬ್ಬನಿಗೆ ಒಂದು; ಹೀಗೆ ಅವನವನ ಸಾಮರ್ಥ್ಯದ ಪ್ರಕಾರ ಕೊಟ್ಟು ಕೂಡಲೇ ಪ್ರಯಾಣಮಾಡಿದನು.
Uye kune umwe wakapa matarenda mashanu, umwe maviri, umwe rimwe, umwe neumwe zvakakwanirana nesimba rake; pakarepo akafamba rwendo.
16 ಐದು ಚಿನ್ನದ ನಾಣ್ಯಗಳನ್ನು ಹೊಂದಿದವನು ಹೋಗಿ ಅವುಗಳಿಂದ ವ್ಯಾಪಾರಮಾಡಿ ಬೇರೆ ಐದು ಚಿನ್ನದ ನಾಣ್ಯಗಳನ್ನು ಸಂಪಾದಿಸಿದನು.
Uye wakagamuchira matarenda mashanu akaenda akaita mhindu nawo, akaita mamwe matarenda mashanu.
17 ಅದೇ ಪ್ರಕಾರ, ಎರಡು ಚಿನ್ನದ ನಾಣ್ಯಗಳನ್ನು ಹೊಂದಿದವನು ಸಹ ಇನ್ನು ಬೇರೆ ಎರಡು ಚಿನ್ನದ ನಾಣ್ಯಗಳನ್ನು ಸಂಪಾದಿಸಿದನು.
Saizvozvowo wemaviri, iye akawanawo mamwe maviri.
18 ಆದರೆ ಒಂದು ಚಿನ್ನದ ನಾಣ್ಯವನ್ನು ಹೊಂದಿದವನು ಹೋಗಿ ಭೂಮಿಯನ್ನು ಅಗೆದು, ತನ್ನ ಯಜಮಾನನ ಹಣವನ್ನು ಬಚ್ಚಿಟ್ಟನು.
Asi wakagamuchira rimwe wakaenda akachera pasi, akaviga mari yaishe wake.
19 “ಬಹುಕಾಲವಾದ ಮೇಲೆ ಆ ಸೇವಕರ ಯಜಮಾನನು ಬಂದು ಅವರಿಂದ ಲೆಕ್ಕ ಕೇಳಿದನು.
Shure kwenguva refu, ishe wevaranda avo wakasvika, akagadzira zvemari navo.
20 ಆಗ ಐದು ಚಿನ್ನದ ನಾಣ್ಯಗಳನ್ನು ಹೊಂದಿದ್ದವನು ಬಂದು ಬೇರೆ ಐದು ಚಿನ್ನದ ನಾಣ್ಯಗಳನ್ನು ತಂದು, ‘ಒಡೆಯನೇ, ನೀನು ನನಗೆ ಐದು ಚಿನ್ನದ ನಾಣ್ಯಗಳನ್ನು ಒಪ್ಪಿಸಿದ್ದೆ. ನೋಡು, ಅವುಗಳಲ್ಲದೆ ಇನ್ನೂ ಬೇರೆ ಐದು ಚಿನ್ನದ ನಾಣ್ಯಗಳನ್ನು ನಾನು ಸಂಪಾದಿಸಿದ್ದೇನೆ,’ ಎಂದನು.
Kwakauya wakange agamuchira matarenda mashanu akauisa mamwe matarenda mashanu achiti: Ishe, makandikumikidza matarenda mashanu; tarirai, ndawana pamusoro pawo mamwe matarenda mashanu.
21 “ಆಗ ಅವನ ಯಜಮಾನನು ಅವನಿಗೆ, ‘ಭಲಾ, ನಂಬಿಗಸ್ತನಾದ ಒಳ್ಳೆಯ ಸೇವಕನೇ, ಒಳ್ಳೆಯದನ್ನು ಮಾಡಿದ್ದಿ. ಚಿಕ್ಕ ಕಾರ್ಯದಲ್ಲಿ ನೀನು ನಂಬಿಗಸ್ತನಾದದ್ದರಿಂದ ನಾನು ನಿನ್ನನ್ನು ದೊಡ್ಡ ಕಾರ್ಯಗಳ ಮೇಲೆ ಅಧಿಕಾರಿಯನ್ನಾಗಿ ನೇಮಿಸುವೆನು. ನೀನು ನಿನ್ನ ಯಜಮಾನನ ಸಂತೋಷದಲ್ಲಿ ಭಾಗಿಯಾಗು,’ ಎಂದನು.
Ishe wake akati kwaari: Zvakanaka, muranda wakanaka uye wakatendeka, wakange wakatendeka pazvishoma, ndichakuisa pamusoro pezvizhinji; pinda mumufaro waishe wako.
22 “ಎರಡು ಚಿನ್ನದ ನಾಣ್ಯಗಳನ್ನು ಹೊಂದಿದ್ದವನು ಸಹ ಬಂದು, ‘ಒಡೆಯನೇ, ನೀನು ನನಗೆ ಎರಡು ಚಿನ್ನದ ನಾಣ್ಯಗಳನ್ನು ಒಪ್ಪಿಸಿದ್ದೆ. ನೋಡು, ಇನ್ನೂ ಎರಡು ಚಿನ್ನದ ನಾಣ್ಯಗಳನ್ನು ನಾನು ಸಂಪಾದಿಸಿದ್ದೇನೆ,’ ಎಂದನು.
Wakange agamuchira matarenda maviri akauyawo akati: Ishe, makandikumikidza matarenda maviri; tarirai, ndawana mamwe matarenda maviri pamusoro pawo.
23 “ಆಗ ಯಜಮಾನನು ಅವನಿಗೆ, ‘ಭಲಾ, ನಂಬಿಗಸ್ತನಾದ ಒಳ್ಳೆಯ ಸೇವಕನೇ, ಒಳ್ಳೆಯದನ್ನು ಮಾಡಿದ್ದಿ. ಚಿಕ್ಕ ಕಾರ್ಯದಲ್ಲಿ ನೀನು ನಂಬಿಗಸ್ತನಾದದ್ದರಿಂದ, ನಾನು ನಿನ್ನನ್ನು ದೊಡ್ಡ ಕಾರ್ಯಗಳ ಮೇಲೆ ಅಧಿಕಾರಿಯನ್ನಾಗಿ ನೇಮಿಸುವೆನು. ನೀನು ನಿನ್ನ ಯಜಮಾನನ ಸಂತೋಷದಲ್ಲಿ ಭಾಗಿಯಾಗು,’ ಎಂದನು.
Ishe wake akati kwaari: Zvakanaka, muranda wakanaka uye wakatendeka, wakange wakatendeka pazvishoma, ndichakuisa pamusoro pezvizhinji; pinda mumufaro waishe wako.
24 “ಆಗ ಒಂದು ಚಿನ್ನದ ನಾಣ್ಯ ಹೊಂದಿದ್ದವನು ಬಂದು, ‘ಒಡೆಯನೇ, ನೀನು ಬಿತ್ತದಿರುವಲ್ಲಿ ಕೊಯ್ಯುವವನೂ ತೂರದಿರುವಲ್ಲಿ ಕೂಡಿಸುವವನೂ ಆಗಿರುವ ಕಠಿಣ ಮನುಷ್ಯನೆಂದು ನಾನು ಬಲ್ಲೆನು.
Asi wakange agamuchira tarenda rimwe naiye wakauya akati: Ishe, ndakange ndichikuzivai imwi kuti muri munhu wakawoma, munokohwa pamusina kudzvara, munounganidza pamusina kukusha;
25 ಆದ್ದರಿಂದ ನಾನು ಭಯಪಟ್ಟು ಹೋಗಿ ನಿನ್ನ ಚಿನ್ನದ ನಾಣ್ಯವನ್ನು ಭೂಮಿಯಲ್ಲಿ ಬಚ್ಚಿಟ್ಟೆನು. ನೋಡು, ನೀನು ಕೊಟ್ಟಿದ್ದನ್ನು ನಿನಗೇ ಕೊಡುತ್ತೇನೆ,’ ಎಂದನು.
zvino ndakatya, ndikaenda ndikanoviga tarenda renyu muvhu; tarirai, mava nechenyu!
26 “ಅದಕ್ಕೆ ಅವನ ಯಜಮಾನನು ಉತ್ತರವಾಗಿ, ‘ಮೈಗಳ್ಳನಾದ ದುಷ್ಟ ಸೇವಕನೇ, ನಾನು ಬಿತ್ತದಿರುವಲ್ಲಿ ಕೊಯ್ಯುವವನೆಂತಲೂ ತೂರದಿರುವಲ್ಲಿ ಕೂಡಿಸುವವನೆಂತಲೂ ನೀನು ತಿಳಿದಿದ್ದೀಯಲ್ಲಾ.
Ishe wake akapindura akati kwaari: Muranda wakaipa une usimbe, wakange uchiziva kuti ndinokohwa pandisina kudzvara, ndichiunganidza pandisina kukusha.
27 ಹಾಗಿದ್ದರೆ, ನೀನು ನನ್ನ ಹಣವನ್ನು ಬಡ್ಡಿ ಅಂಗಡಿಯಲ್ಲಿ ಕೊಡಬೇಕಾಗಿತ್ತು; ನಾನು ಬಂದಾಗ ಹಣವನ್ನು ಬಡ್ಡಿ ಸಮೇತವಾಗಿ ಪಡೆದುಕೊಳ್ಳುತ್ತಿದ್ದೆನು,’ ಎಂದು ಹೇಳಿ,
Saka waifanira kuisa mari yangu kuvatsinhanisi vemari, neni pakusvika ndingadai ndagamuchira zvangu nezvibereko.
28 “ತನ್ನ ಸೇವಕರಿಗೆ, ‘ಅವನಿಂದ ಆ ಚಿನ್ನದ ನಾಣ್ಯವನ್ನು ತೆಗೆದುಕೊಂಡು ಹತ್ತು ಚಿನ್ನದ ನಾಣ್ಯಗಳು ಇದ್ದವನಿಗೆ ಕೊಡಿರಿ.
Naizvozvo mutorerei tarenda, mupe kune ane matarenda gumi.
29 ಇದ್ದವರಿಗೆ ಇನ್ನೂ ಹೆಚ್ಚಾಗಿ ಕೊಡಲಾಗುವುದು, ಅವರಿಗೆ ಹೆಚ್ಚು ಸಮೃದ್ಧಿಯಾಗುವುದು. ಇಲ್ಲದವರ ಕಡೆಯಿಂದ ಇದ್ದ ಅಲ್ಪವನ್ನೂ ತೆಗೆದುಕೊಳ್ಳಲಾಗುವುದು.
Nokuti wese anazvo achapiwa ave nezvakawandisa; asi kubva kune asina kuchatorwa nechaanacho.
30 ನಿಷ್ಪ್ರಯೋಜಕನಾದ ಆ ಸೇವಕನನ್ನು ನೀವು ಹೊರಗೆ ಕತ್ತಲೆಯಲ್ಲಿ ಹಾಕಿರಿ. ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು,’ ಎಂದನು.
Uye muranda pasina murasirei kurima rekunze kwekupedzisira; ipapo pachava nekuchema nekugeda-geda kwemeno.
31 “ಮನುಷ್ಯಪುತ್ರನಾದ ನಾನು ಮಹಿಮೆಯಲ್ಲಿ ಎಲ್ಲಾ ಪರಿಶುದ್ಧ ದೂತರೊಂದಿಗೆ ಬರುವಾಗ, ನನ್ನ ಮಹಿಮೆಯ ಸಿಂಹಾಸನದ ಮೇಲೆ ಕುಳಿತುಕೊಳ್ಳುವೆನು.
Zvino kana Mwanakomana wemunhu achiuya mukubwinya kwake, nevatumwa vatsvene vese vanaye, ipapo achagara pachigaro cheushe chekubwinya kwake.
32 ನನ್ನ ಮುಂದೆ ಎಲ್ಲಾ ಜನಾಂಗದವರನ್ನು ಒಟ್ಟುಗೂಡಿಸಲಾಗುವುದು. ಆಗ ಕುರುಬನು ತನ್ನ ಕುರಿಗಳನ್ನು ಆಡುಗಳಿಂದ ಪ್ರತ್ಯೇಕಿಸುವಂತೆಯೇ ನಾನು ಅವರನ್ನು ಪ್ರತ್ಯೇಕಿಸುವೆನು.
Zvino pamberi pake pachaunganidzwa ndudzi dzese; uye achadziparadzanisa vamwe kubva kune vamwe, semufudzi anoparadzanisa makwai kubva kumbudzi.
33 ನಾನು ಕುರಿಗಳನ್ನು ನನ್ನ ಬಲಗಡೆಯಲ್ಲಿಯೂ ಆಡುಗಳನ್ನು ಎಡಗಡೆಯಲ್ಲಿಯೂ ನಿಲ್ಲಿಸುವೆನು.
Achamisa makwai kuruoko rwake rwerudyi, asi mbudzi kuruboshwe.
34 “ಆಗ ನಾನು ನನ್ನ ಬಲಗಡೆಯಲ್ಲಿರುವವರಿಗೆ, ‘ನನ್ನ ತಂದೆಯಿಂದ ಆಶೀರ್ವಾದ ಹೊಂದಿದವರೇ, ಬನ್ನಿರಿ, ಭೂಲೋಕಕ್ಕೆ ಅಸ್ತಿವಾರ ಹಾಕಿದ ದಿನದಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಆಸ್ತಿಯನ್ನಾಗಿ ಹೊಂದಿರಿ.
Zvino Mambo achati kune vari kuruoko rwake rwerudyi: Uyai, imwi makaropafadzwa naBaba vangu, mugare nhaka yeushe hwakagadzirirwa imwi kubva pakuvamba kwenyika.
35 ನಾನು ಹಸಿದಿದ್ದೆನು, ನೀವು ನನಗೆ ಊಟವನ್ನು ಕೊಟ್ಟಿರಿ. ನಾನು ಬಾಯಾರಿದ್ದೆನು, ನೀವು ನನಗೆ ಕುಡಿಯುವುದಕ್ಕೆ ಕೊಟ್ಟಿರಿ. ನಾನು ಪರದೇಶಿಯಾಗಿದ್ದೆನು, ನೀವು ನನಗೆ ಆಶ್ರಯ ಕೊಟ್ಟಿರಿ.
Nokuti ndakange ndine nzara, mukandipa chekudya; ndakange ndine nyota, mukandipa chekunwa; ndakange ndiri mweni, mukandigamuchira;
36 ನಾನು ಬಟ್ಟೆಯಿಲ್ಲದವನಾಗಿದ್ದೆನು, ನೀವು ನನಗೆ ಉಡಿಸಿದಿರಿ. ನಾನು ಅಸ್ವಸ್ಥನಾಗಿದ್ದೆನು, ನೀವು ನನ್ನನ್ನು ಉಪಚರಿಸಿದಿರಿ. ನಾನು ಸೆರೆಯಲ್ಲಿದ್ದೆನು, ನೀವು ನನ್ನ ಬಳಿಗೆ ಬಂದಿರಿ,’ ಎಂದು ಹೇಳುವೆನು.
ndakashama, mukandipfekedza; ndakange ndichirwara, mukandishanyira; ndakange ndiri mutirongo, mukauya kwandiri.
37 “ಆಗ ಆ ನೀತಿವಂತರು ಉತ್ತರವಾಗಿ ನನಗೆ, ‘ಕರ್ತನೇ, ನೀನು ಯಾವಾಗ ಹಸಿದದ್ದನ್ನು ನೋಡಿ ನಾವು ನಿನಗೆ ಉಣಿಸಿದೆವು? ಇಲ್ಲವೆ ಬಾಯಾರಿದ್ದಾಗ ನಿನಗೆ ಕುಡಿಯುವುದಕ್ಕೆ ಕೊಟ್ಟೆವು?
Ipapo vakarurama vachamupindura vachiti: Ishe, takakuonai rinhi mune nzara, tikakupai chekudya, kana mune nyota, tikapa chekunwa?
38 ನೀನು ಪರದೇಶಿಯಾಗಿರುವುದನ್ನು ನಾವು ಯಾವಾಗ ಕಂಡು ನಿನಗೆ ಆಶ್ರಯ ಕೊಟ್ಟೆವು? ಇಲ್ಲವೆ ಬಟ್ಟೆಯಿಲ್ಲದಿರುವಾಗ ನಿನಗೆ ಉಡಿಸಿದೆವು?
Takakuonai rinhi muri mweni, tikakugamuchirai, kana makashama, tikapfekedza?
39 ಯಾವಾಗ ನೀನು ಅಸ್ವಸ್ಥನಾಗಿ ಇಲ್ಲವೆ ಸೆರೆಯಲ್ಲಿದ್ದಾಗ ನಾವು ನಿನ್ನ ಬಳಿಗೆ ಬಂದೆವು?’ ಎಂದು ಕೇಳುವರು.
Takakuonai rinhi muchirwara, kana mutirongo, tikauya kwamuri?
40 “ಅದಕ್ಕೆ ನಾನು ಉತ್ತರವಾಗಿ ಅವರಿಗೆ, ‘ನಾನು ನಿಮಗೆ ನಿಜವಾಗಿ ಹೇಳುತ್ತೇನೆ: ನೀವು ಈ ನನ್ನ ಸಹೋದರರಲ್ಲಿ ಅತ್ಯಲ್ಪನಾದವನೊಬ್ಬನಿಗೆ, ಮಾಡಿದ್ದು ನನಗೇ ಮಾಡಿದಂತಾಯಿತು,’ ಎನ್ನುವೆನು.
Uye Mambo achapindura ati kwavari: Zvirokwazvo ndinoti kwamuri: Sezvamakaitira umwe wehama dzangu idzi mudikisa, makaitira ini.
41 “ನಾನು ಎಡಗಡೆಯಲ್ಲಿರುವವರಿಗೆ, ‘ಶಾಪಗ್ರಸ್ತರೇ, ನೀವು ನನ್ನಿಂದ ತೊಲಗಿ ಸೈತಾನನಿಗೂ ಅವನ ದೂತರಿಗೂ ಸಿದ್ಧಮಾಡಿರುವ ನಿತ್ಯ ಬೆಂಕಿಯೊಳಕ್ಕೆ ಹೋಗಿರಿ. (aiōnios )
Ipapo uchatiwo kune vari kuruoko rweruboshwe: Ibvai kwandiri, imwi makatukwa, muende kumoto usingaperi, wakagadzirirwa dhiabhorosi nevatumwa vake. (aiōnios )
42 ನಾನು ಹಸಿದಿದ್ದೆನು, ನೀವು ನನಗೆ ಊಟ ಕೊಡಲಿಲ್ಲ. ನಾನು ಬಾಯಾರಿದವನಾಗಿದ್ದೆನು, ನೀವು ನನಗೆ ಕುಡಿಯುವುದಕ್ಕೆ ಕೊಡಲಿಲ್ಲ.
Nokuti ndakange ndine nzara, mukasandipa chekudya; ndakange ndine nyota, mukasandipa chekunwa;
43 ನಾನು ಪರದೇಶಿಯಾಗಿದ್ದೆನು, ನೀವು ನನ್ನನ್ನು ಒಳಕ್ಕೆ ಸೇರಿಸಿಕೊಳ್ಳಲಿಲ್ಲ. ಬಟ್ಟೆಯಿಲ್ಲದವನಾಗಿದ್ದಾಗ ನೀವು ನನಗೆ ಉಡಿಸಲಿಲ್ಲ. ಅಸ್ವಸ್ಥನಾಗಿದ್ದೆನು, ಸೆರೆಮನೆಯಲ್ಲಿದ್ದೆನು, ನೀವು ನನ್ನನ್ನು ಸಂದರ್ಶಿಸಲಿಲ್ಲ,’ ಎಂದು ಹೇಳುವೆನು.
ndakange ndiri mweni, mukasandigamuchira; ndakashama, mukasandipfekedza; ndichirwara, nemutirongo, mukasandishanyira.
44 “ಆಗ ಅವರು ಸಹ ಉತ್ತರವಾಗಿ ನನಗೆ, ‘ಕರ್ತನೇ, ನೀನು ಹಸಿದಿದ್ದನ್ನೂ ಬಾಯಾರಿದ್ದನ್ನೂ ಪರದೇಶಿಯಾದದ್ದನ್ನೂ ಬಟ್ಟೆಯಿಲ್ಲದವನಾಗಿದ್ದದ್ದನ್ನೂ ಅಸ್ವಸ್ಥನಾಗಿದ್ದದ್ದನ್ನೂ ಸೆರೆಯಲ್ಲಿದ್ದದ್ದನ್ನೂ ನಾವು ಯಾವಾಗ ನೋಡಿ ನಿನಗೆ ಉಪಚಾರಮಾಡಲಿಲ್ಲ?’ ಎಂದು ಕೇಳುವರು.
Ipapo avawo vachamupindura vachiti: Ishe, takakuonai rinhi mune nzara, kana mune nyota, kana muri mweni, kana makashama, kana muchirwara, kana muri mutirongo, tikasakushandirai?
45 “ಆಗ ನಾನು ಅವರಿಗೆ ಉತ್ತರವಾಗಿ, ‘ನಾನು ನಿಮಗೆ ಸತ್ಯವಾಗಿ ಹೇಳುವುದೇನೆಂದರೆ, ನೀವು ಇವರಲ್ಲಿ ಅತ್ಯಲ್ಪನಾದ ಒಬ್ಬನಿಗೆ ಏನೇನು ಮಾಡಲಿಲ್ಲವೋ ಅದನ್ನು ನನಗೂ ಮಾಡಲಿಲ್ಲ,’ ಎಂದು ಹೇಳುವೆನು.
Zvino achavapindura achiti: Zvirokwazvo ndinoti kwamuri: Pamusina kuitira umwe wevadikisa ava, hamuna kuitirawo ini.
46 “ಹೀಗೆ ಇವರು ನಿತ್ಯವಾದ ಶಿಕ್ಷೆಗೆ ಒಳಗಾಗುವರು. ಆದರೆ ನೀತಿವಂತರು ನಿತ್ಯಜೀವಕ್ಕೆ ಹೋಗುವರು,” ಎಂದು ಹೇಳುವೆನು. (aiōnios )
Ava vachaenda kukurangwa kusingaperi; asi vakarurama kuupenyu husingaperi. (aiōnios )