< ಮಾರ್ಕನು 3 >

1 ಇನ್ನೊಂದು ಸಾರಿ ಯೇಸು ಸಭಾಮಂದಿರಕ್ಕೆ ಹೋದರು. ಅಲ್ಲಿ ಕೈ ಬತ್ತಿದ ಒಬ್ಬ ಮನುಷ್ಯನಿದ್ದನು.
Ni iyeya ayingi nnyumba ya Lisinagogi ni omo abimundu abi Ni luboko lutombolwike.
2 ಕೆಲವರು ಯೇಸುವಿನ ಮೇಲೆ ತಪ್ಪು ಹೊರಿಸಬೇಕೆಂದು, ಸಬ್ಬತ್ ದಿನದಲ್ಲಿ ಅವನನ್ನು ಯೇಸು ಗುಣಪಡಿಸುವರೋ ಏನೋ ಎಂದು ಲಕ್ಷವಿಟ್ಟು ನೋಡುತ್ತಿದ್ದರು.
Bandu benge baikabankota kwa karibu kulola atamponya lisiku ya sabato ili basitaki.
3 ಯೇಸು ಕೈಬತ್ತಿದವನಿಗೆ, “ಎದ್ದು ಮುಂದೆ ಬಾ,” ಎಂದರು.
yesu kankokeya mundu mwene luboko lutombolwike”kagatuka ni uyeme, kati yabandu bano.”
4 ಆಗ ಯೇಸು ಅವರನ್ನು, “ಸಬ್ಬತ್ ದಿನದಲ್ಲಿ ಒಳ್ಳೆಯದನ್ನು ಮಾಡುವುದು ನಿಯಮಕ್ಕೆ ಸಮ್ಮತವೋ ಅಥವಾ ಕೆಟ್ಟದ್ದನ್ನು ಮಾಡುವುದೋ? ಪ್ರಾಣವನ್ನು ಉಳಿಸುವುದೋ ಅಥವಾ ತೆಗೆಯುವುದೋ?” ಎಂದು ಕೇಳಿದರು. ಅದಕ್ಕೆ ಅವರು ಸುಮ್ಮನಿದ್ದರು.
kisha kabakokeya bandu, “je ni halali kutwnda liyaulyo linoike lisiku ya sabato au kutenda yasio ya haki, kulopwa maisha gabandu au kubulaga? lakini batami poloi.
5 ಆಗ ಯೇಸು ಸುತ್ತಲೂ ಇದ್ದವರನ್ನು ಕೋಪದಿಂದ ನೋಡಿ, ಅವರ ಹೃದಯಕಾಠಿಣ್ಯಕ್ಕಾಗಿ ದುಃಖಪಟ್ಟು, ಆ ಮನುಷ್ಯನಿಗೆ, “ನಿನ್ನ ಕೈಚಾಚು,” ಎಂದು ಹೇಳಿದರು. ಅವನು ಕೈಚಾಚಿದಾಗ, ಅವನ ಕೈ ಸಂಪೂರ್ಣವಾಗಿ ಗುಣವಾಯಿತು.
kaabalola kwa hasira, kahuzunika mwalo wakunonopa iuba yabe, Ni kankokeya yeah mundu “Tondobeya luboko lwako.”katondobeya ni Yesu kaamponya luboko lwake.
6 ಫರಿಸಾಯರು ಅಲ್ಲಿಂದ ಹೊರಗೆ ಹೋಗಿ ಕೂಡಲೇ ಹೆರೋದ್ಯರೊಂದಿಗೆ ಸೇರಿಕೊಂಡು ಯೇಸುವನ್ನು ಹೇಗೆ ಕೊಲ್ಲಬೇಕೆಂದು ಅವರ ವಿರೋಧವಾಗಿ ಒಳಸಂಚು ಮಾಡಿದರು.
Mafarisayo bayei panza kabatenda nzama Ni maherode dhidi yake ili bambulage.
7 ಯೇಸು ತಮ್ಮ ಶಿಷ್ಯರೊಂದಿಗೆ ಸರೋವರದ ಬಳಿಗೆ ಹೊರಟು ಹೋದರು. ಗಲಿಲಾಯದಿಂದ ಬಂದ ಒಂದು ದೊಡ್ಡ ಜನರ ಗುಂಪು ಯೇಸುವನ್ನು ಹಿಂಬಾಲಿಸಿತು.
Kisha Yesu, pamwepe ni benepunzi bake bayei baharini, ni bndu banyansima kabankota kabapeta Galilaya ni Uyahudi.
8 ಯೇಸು ಮಾಡುತ್ತಿದ್ದ ಎಲ್ಲವನ್ನು ಕೇಳಿ, ಬಹುಜನರು ಯೂದಾಯದಿಂದಲೂ ಯೆರೂಸಲೇಮ್ ನಗರದಿಂದಲೂ ಇದುಮಾಯದಿಂದಲೂ ಯೊರ್ದನ್ ನದಿಯ ಆಚೆಕಡೆಯಿಂದಲೂ ಟೈರ್, ಸೀದೋನ್ ಪಟ್ಟಣಗಳ ಸುತ್ತಲಿನಿಂದಲೂ ಯೇಸುವಿನ ಬಳಿಗೆ ಬಂದರು.
Ni kuoma Yeruselemu ni kuoma Idumaya ni kulonge ya Yorodani ni jirani ya Tiro na Sidoni, bandubanyansima, ya kuyowa eso akitei kila mundu aisi kwake.
9 ಜನರ ಗುಂಪು ಹೆಚ್ಚಾಗುತ್ತಿದ್ದುದರಿಂದ ಅವರು ತಮ್ಮ ಮೈಮೇಲೆ ಬಿದ್ದಾರೆಂದು ಯೇಸು ತಮಗಾಗಿ ಒಂದು ಚಿಕ್ಕ ದೋಣಿಯನ್ನು ಸಿದ್ಧವಾಗಿಡಲು ತಮ್ಮ ಶಿಷ್ಯರಿಗೆ ಹೇಳಿದರು.
Nakabankokeya benepunzi bake kuandaa ngalaba nzunu mwalo wake, mwalo was kipenga za bandu, kana baise kumpuma.
10 ಯೇಸು ಅನೇಕರನ್ನು ಗುಣಪಡಿಸಿದ್ದರಿಂದ ರೋಗಿಗಳೆಲ್ಲರೂ ಯೇಸುವನ್ನು ಮುಟ್ಟಬೇಕೆಂದು ನುಗ್ಗುತ್ತಿದ್ದರು.
Kuba atekubalagwa bandubanyansima, lenga kilamundu jwabi Ni mateso abinishauku ya kuika palyo aabile ankamwe.
11 ದುರಾತ್ಮಗಳು ಯೇಸುವನ್ನು ಕಂಡಾಗಲೆಲ್ಲಾ ಅವರ ಮುಂದೆ ಬಿದ್ದು, “ನೀವು ದೇವರ ಪುತ್ರ,” ಎಂದು ಕಿರುಚಿದವು.
Palyo roho achafu bambweni, baatombwike pae kulonge yake kaba lela ni kukoya “Wenga was mwana wa Nnongo.”
12 ಆದರೆ ಯೇಸು, ತಾನು ಯಾರೆಂದು ಯಾರಿಗೂ ಪ್ರಕಟಿಸಬಾರದೆಂದು ಅವುಗಳಿಗೆ ಕಟ್ಟಪ್ಪಣೆ ಮಾಡಿದರು.
Kabaaking'india kanabatende atanganike.
13 ಯೇಸು ಬೆಟ್ಟವನ್ನೇರಿ ತಮಗೆ ಬೇಕಾದವರನ್ನು ಕರೆದರು. ಅವರು ಯೇಸುವಿನ ಬಳಿಗೆ ಬಂದರು.
Aayei kunani ya kitombe, kabayenda kwake.
14 ಯೇಸು ಹನ್ನೆರಡು ಮಂದಿಯನ್ನು ತಮ್ಮ ಸಂಗಡ ಇರಲು ಮತ್ತು ಅವರನ್ನು ಉಪದೇಶಮಾಡಲು ನೇಮಿಸಿ, ಅವರಿಗೆ “ಅಪೊಸ್ತಲರು” ಎಂದು ಕರೆದರು.
Kabatalanganya komi ni ibile (kabaakema mitume), ili babe pamwepe ni awese kubatuma kuhubiri.
15 ಅವರಿಗೆ ದೆವ್ವಗಳನ್ನು ಓಡಿಸುವ ಅಧಿಕಾರ ಕೊಟ್ಟರು.
Ni kuba ni mamlaka ya kupiya mahoka.
16 ಯೇಸು ನೇಮಿಸಿದ ಹನ್ನೆರಡು ಮಂದಿ ಅಪೊಸ್ತಲರ ಹೆಸರುಗಳು ಇಂತಿವೆ: ಸೀಮೋನನಿಗೆ ಯೇಸು “ಪೇತ್ರ” ಎಂಬ ಹೆಸರನ್ನು ಕೊಟ್ಟರು.
Na kaababagwa komi ni ibele: Simoni, kaampaya Lina lyango Petro,
17 ಜೆಬೆದಾಯನ ಮಗ ಯಾಕೋಬ ಮತ್ತು ಅವನ ತಮ್ಮ ಯೋಹಾನ ಇವರಿಗೆ ಯೇಸು “ಬೊವನೆರ್ಗೆಸ್” ಎಂದರೆ ಗುಡುಗಿನ ಪುತ್ರರು ಎಂಬ ಹೆಸರಿಟ್ಟರು.
Yakobo mwana wa Zebedayo, ni Yohana nnunawake Yakobo, aampai lina lya Bonagesi, abo ni bana ba Ngurumo,
18 ಅಂದ್ರೆಯ, ಫಿಲಿಪ್ಪ, ಬಾರ್ತೊಲೊಮಾಯ, ಮತ್ತಾಯ, ತೋಮ, ಅಲ್ಫಾಯನ ಮಗ ಯಾಕೋಬ, ತದ್ದಾಯ, ಕಾನಾನ್ಯನಾದ ಸೀಮೋನನು.
ni Andrea, Filipo, Bartholomayo, Mathayo, Tomaso, Yakobo mwana wa Alfayo, Thadayo, Simoni Mkananayo,
19 ಯೇಸುವಿಗೆ ದ್ರೋಹಮಾಡಿದ ಇಸ್ಕರಿಯೋತ ಯೂದ.
na Yuda Iskariote, ambaye aankana
20 ಯೇಸು ಒಂದು ಮನೆಯೊಳಗೆ ಹೋದಾಗ, ಜನರು ತಿರುಗಿ ಗುಂಪಾಗಿ ನೆರೆದು ಬಂದದ್ದರಿಂದ ಯೇಸುವಿಗೂ ಅವರ ಶಿಷ್ಯರಿಗೂ ಊಟಮಾಡುವುದಕ್ಕೂ ಸಾಧ್ಯವಾಗಲಿಲ್ಲ.
Kisha ayei ukaya, ni bandu banyansima bayei pamwepe, hata balyo bawesa kwaa kulyaa mkate.
21 ಯೇಸುವಿನ ಕುಟುಂಬದವರು ಇದನ್ನು ಕೇಳಿದಾಗ, “ಆತನಿಗೆ ಹುಚ್ಚುಹಿಡಿದಿದೆ,” ಎಂದು ಹೇಳಿ, ಯೇಸುವನ್ನು ಹಿಡಿದು ತರಲು ಹೊರಟರು.
Alongo bake bayowine habari eyo, kabayenda kumboywa, kabakoya”agolwike malango.”
22 ಯೆರೂಸಲೇಮಿನಿಂದ ಬಂದ ನಿಯಮ ಬೋಧಕರು, “ಈತನನ್ನು ಬೆಲ್ಜೆಬೂಲನು ಹಿಡಿದಿದ್ದಾನೆ! ದೆವ್ವಗಳ ಅಧಿಪತಿಯ ಸಹಾಯದಿಂದಲೇ ಈತನು ದೆವ್ವಗಳನ್ನು ಓಡಿಸುತ್ತಾನೆ,” ಎಂದರು.
Aandishi baisi kuoma Yerusalemu kabakoya, “Amepagawa na Beelzebuli,” na, “kwa ntawala was nsela ampiye nsela.”
23 ಆಗ ಯೇಸು ಅವರನ್ನು ಹತ್ತಿರಕ್ಕೆ ಕರೆದು ಸಾಮ್ಯರೂಪದಲ್ಲಿ ಹೇಳಿದ್ದೇನೆಂದರೆ: “ಸೈತಾನನು ಸೈತಾನನನ್ನು ಓಡಿಸುವುದು ಹೇಗೆ?
Yesu aakemike ukasake ni kulongela nabo kwa mifano, “ya nsela awesa kumpiya nsela?
24 ಒಂದು ರಾಜ್ಯ ತನಗೆ ವಿರೋಧವಾಗಿ ವಿಭಾಗಿಸಿಕೊಂಡರೆ ಆ ರಾಜ್ಯವು ನಿಲ್ಲುವುದಿಲ್ಲ.
Kama upwalume ubaganike wene, upwalme ogo uwesa kwaa kuyema.
25 ಒಂದು ಕುಟುಂಬ ತನಗೆ ವಿರೋಧವಾಗಿ ವಿಭಾಗಿಸಿಕೊಂಡರೆ ಆ ಕುಟುಂಬವು ನಿಲ್ಲುವುದಿಲ್ಲ.
Mananyumba ibaganike yene, nyumba eyo iwesa kwaa kuyema.
26 ಸೈತಾನನು ತನಗೆ ವಿರೋಧವಾಗಿ ತಾನೇ ಎದ್ದು ವಿಭಾಗಿಸಿಕೊಂಡರೆ, ಅವನು ನಿಲ್ಲಲಾರದೆ ನಾಶವಾಗುವನು.
Kati nsela akagatuka kiogo sake mwene ni kubaganika, awesa kwaa kuyema ni aba aike mwisho wake.
27 ಒಬ್ಬನು ಬಲಿಷ್ಠನ ಮನೆಗೆ ನುಗ್ಗಿ ಮೊದಲು ಅವನನ್ನು ಕಟ್ಟಿಹಾಕದೆ ಅವನ ಸೊತ್ತನ್ನು ಸೂರೆ ಮಾಡಲಾಗುವುದಿಲ್ಲ. ಮೊದಲು ಅವನನ್ನು ಕಟ್ಟಿದ ನಂತರ ಅವನ ಮನೆಯನ್ನು ಕೊಳ್ಳೆ ಹೊಡೆಯಬಹುದು.
Lakini ntopo hata yumo awesa kuyingya nnyumba ya mundu mwene ngupu kuyiba ilebe yake bila ya kuntaba mwene ngupu wete, kisha kutola ilebe yote ya nnyumba.
28 ನಾನು ನಿಮಗೆ ನಿಜವಾಗಿ ಹೇಳುವುದೇನೆಂದರೆ, ಮನುಷ್ಯರು ಮಾಡುವ ಎಲ್ಲಾ ಪಾಪಗಳಿಗೆ ಮತ್ತು ದೂಷಣೆಗಳಿಗೆ ಕ್ಷಮಾಪಣೆ ದೊರೆಯುವುದು.
kweli nando kuwakokeya, sambi sote za bana Baadam zitasamehewa, pamwepe nikufulueyo balongela.
29 ಆದರೆ ಪವಿತ್ರಾತ್ಮರನ್ನು ದೂಷಿಸುವವನಿಗೆ ಎಂದಿಗೂ ಕ್ಷಮಾಪಣೆ ದೊರೆಯುವುದಿಲ್ಲ. ಅವನು ನಿತ್ಯ ಪಾಪದ ಅಪರಾಧಿಯಾಗಿದ್ದಾನೆ,” ಎಂದರು. (aiōn g165, aiōnios g166)
Mundu yeyote ywa ankufuru Roho ntakatifu asamehewa kwa, bali abiniatia ya sambi za milele. (aiōn g165, aiōnios g166)
30 “ಆತನಲ್ಲಿ ಅಶುದ್ಧಾತ್ಮವಿದೆ,” ಎಂದು ಅವರು ಹೇಳುತ್ತಿದ್ದುದರಿಂದ ಯೇಸು ಹೀಗೆ ಹೇಳಿದರು.
Yesu akoiye yenu mwalo bayi kabalongela “abini Roho nchafu”
31 ಆಗ ಯೇಸುವಿನ ತಾಯಿ ಮತ್ತು ಸಹೋದರರು ಬಂದು ಹೊರಗೆ ನಿಂತುಕೊಂಡು, ಯೇಸುವನ್ನು ಕರೆಯಲು ಹೇಳಿ ಕಳುಹಿಸಿದರು.
Kisha mao bake anuna bake baisi nikuyema panza, kabankokeya mundu ankeme.
32 ಯೇಸುವಿನ ಸುತ್ತಲೂ ಗುಂಪಾಗಿ ಕುಳಿತಿದ್ದ ಜನರು ಅವರಿಗೆ, “ನಿಮ್ಮ ತಾಯಿಯೂ ಸಹೋದರರೂ ನಿಮಗಾಗಿ ಹೊರಗೆ ಕಾದಿದ್ದಾರೆ,” ಎಂದು ಹೇಳಿದರು.
Bandu banyansima bayii karibu yake batame kabankokeya “mao bako ni anuna bako babii panza, bakupala wenga”.
33 ಅದಕ್ಕೆ ಯೇಸು, “ನನ್ನ ತಾಯಿ ಮತ್ತು ಸಹೋದರರು ಯಾರು?” ಎಂದು ಕೇಳಿದರು.
Kaayangwa “nyai mao bango ni anuna bango?
34 ಅನಂತರ ತಮ್ಮ ಸುತ್ತಲೂ ಕುಳಿತ್ತಿದ್ದವರನ್ನು ನೋಡಿ, “ಇಗೋ, ಇವರೇ ನನ್ನ ತಾಯಿ ಮತ್ತು ನನ್ನ ಸಹೋದರರು!
Kabaalola balio batami bantetelike, kakoya “lola bano ni mao bango ni anuna bango!
35 ದೇವರ ಚಿತ್ತದಂತೆ ಮಾಡುವವರೇ ನನ್ನ ಸಹೋದರ, ಸಹೋದರಿ ಮತ್ತು ತಾಯಿ ಆಗಿದ್ದಾರೆ,” ಎಂದು ಹೇಳಿದರು.
Yeyote atenda mapenzi ya Nnongo, mundu woyo ni nlongo wango, nnombwango, ni mao bango.

< ಮಾರ್ಕನು 3 >