< ಯಾಜಕಕಾಂಡ 8 >
1 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ,
परमप्रभुले मोशालाई यसो भन्नुभयो,
2 “ಆರೋನನನ್ನೂ, ಅವನೊಂದಿಗೆ ಅವನ ಪುತ್ರರನ್ನೂ, ಉಡುಪುಗಳನ್ನೂ, ಅಭಿಷೇಕ ತೈಲವನ್ನೂ, ಪಾಪ ಪರಿಹಾರದ ಬಲಿಗಾಗಿ ಹೋರಿಯನ್ನೂ ಎರಡು ಟಗರುಗಳನ್ನೂ ಹುಳಿಯಿಲ್ಲದ ರೊಟ್ಟಿಯ ಬುಟ್ಟಿಯನ್ನೂ ತೆಗೆದುಕೋ.
“हारून र त्यसका छोराहरूलाई वस्त्रहरू र अभिषेक गर्ने तेल, पापबलिको साँढे, दुईवटा भेडा र अखमिरी रोटीको डालोसहित ल्याउनू ।
3 ಎಲ್ಲಾ ಸಭೆಯನ್ನು ದೇವದರ್ಶನದ ಗುಡಾರದ ಬಾಗಿಲ ಬಳಿಯಲ್ಲಿ ಒಟ್ಟಾಗಿ ಸೇರಿಸು,” ಎಂದರು.
भेट हुने पालको प्रवेशद्वारमा सबै समुदायलाई भेला गर्नू ।”
4 ಆಗ ಮೋಶೆಯು, ಯೆಹೋವ ದೇವರು ತನಗೆ ಆಜ್ಞಾಪಿಸಿದಂತೆಯೇ ಮಾಡಿದನು. ಸಭೆಯು ದೇವದರ್ಶನದ ಗುಡಾರದ ಬಾಗಿಲ ಬಳಿಯಲ್ಲಿ ಒಟ್ಟಾಗಿ ಕೂಡಿಬಂದಿತು.
परमप्रभुले मोशालाई आज्ञा गर्नुभएझैँ उनले गरे, र सबै समुदाय भेट हुने पालको प्रवेशद्वारमा भेला भए ।
5 ಮೋಶೆಯು ಸಭೆಗೆ, “ಯೆಹೋವ ದೇವರು ಮಾಡುವುದಕ್ಕೆ ಆಜ್ಞಾಪಿಸಿರುವುದು ಇದೇ.”
अनि मोशाले समुदायलाई भने, “परमप्रभुले गर्नू भनेर आज्ञा गर्नुभएको यही नै हो ।”
6 ಮೋಶೆಯು ಆರೋನನನ್ನೂ ಅವನ ಪುತ್ರರನ್ನೂ ಕರೆದುಕೊಂಡು ಬಂದು, ಸ್ನಾನಮಾಡಿಸಿ,
मोशाले हारून र तिनका छोराहरूलाई ल्याएर पानीले धोए ।
7 ಆರೋನನಿಗೆ ನಿಲುವಂಗಿಯನ್ನು ಹೊದಿಸಿ, ನಡುಕಟ್ಟಿನಿಂದ ಅವನ ನಡುವನ್ನು ಕಟ್ಟಿ, ಅವನಿಗೆ ಮೇಲಂಗಿಯನ್ನು ತೊಡಿಸಿ, ಅವನ ಮೇಲೆ ಏಫೋದನ್ನು ಹಾಕಿ, ಏಫೋದಿನ ಕಲಾತ್ಮಕವಾದ ನಡುಕಟ್ಟಿನಿಂದ ಅವನ ನಡುವನ್ನೂ ಕಟ್ಟಿ, ಅದರಿಂದ ಅವನನ್ನು ಬಿಗಿದನು.
उनले हारूनलाई दौरा लगाइदिए र तिनको कम्मरमा फिता लगाइदिए, अनि तिनलाई लबेदा पहिराइदिएर एपोद लगाइदिए, र असल प्रकारले बुनिएको पटुकाले एपोद कसे अनि बाँधिदिए ।
8 ಅವನ ಮೇಲೆ ಎದೆಪದಕವನ್ನು ಹಾಕಿ, ಆ ಎದೆಪದಕದಲ್ಲಿ ಊರೀಮ್ ಮತ್ತು ತುಮ್ಮೀಮ್ ಇವುಗಳನ್ನೂ ಸಹ ಹಾಕಿದನು.
उनले तिनलाई छाती-पाता लगाइदिए, र छाती-पातामा ऊरीम र तुम्मीम राखिदिए ।
9 ಅವನ ತಲೆಯ ಮೇಲೆ ಮುಂಡಾಸವನ್ನು ಇಟ್ಟು, ಆ ಮುಂಡಾಸದ ಮೇಲೆ ಅಂದರೆ ಅದರ ಮುಂಭಾಗದಲ್ಲಿ ಬಂಗಾರದ ಪಟ್ಟಿಯನ್ನೂ, ಪವಿತ್ರವಾದ ಕಿರೀಟವನ್ನೂ ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆಯೇ ಇಟ್ಟನು.
उनले तिनको शिरमा फेटा लगाइदिए, र परमप्रभुले उनलाई आज्ञा गर्नुभएझैँ त्यस फेटाको अगाडिपट्टि सुनको पाता, अर्थात् पवित्र मुकुट लगाइदिए ।
10 ಮೋಶೆಯು ಅಭಿಷೇಕ ತೈಲವನ್ನು ತೆಗೆದುಕೊಂಡು ಗುಡಾರವನ್ನೂ, ಅದರೊಳಗಿರುವುದೆಲ್ಲವನ್ನೂ ಅಭಿಷೇಕಿಸಿ, ಅವುಗಳನ್ನು ಪವಿತ್ರ ಮಾಡಿದನು.
मोशाले अभिषेक गर्ने तेल लिएर पवित्र वासस्थान र त्यसमा भएका सबै कुरालाई अभिषेक गरे र परमप्रभुको निम्ति ती अलग गरे ।
11 ಅವನು ಅದರಿಂದ ಬಲಿಪೀಠದ ಮೇಲೆ ಏಳು ಸಾರಿ ಚಿಮುಕಿಸಿ, ಬಲಿಪೀಠವನ್ನೂ, ಅದರ ಎಲ್ಲಾ ಪಾತ್ರೆಗಳನ್ನೂ, ಗಂಗಾಳವನ್ನೂ, ಅದರ ಕಾಲನ್ನೂ ಅಭಿಷೇಕಿಸಿ, ಅವುಗಳನ್ನು ಪವಿತ್ರ ಮಾಡಿದನು.
उनले सात पटक वेदीमा तेल छर्के, अनि वेदी र त्यसका सबै भाँडाकुँडाहरू, धुने बाटा र त्यसको फेदसमेत परमप्रभुको निम्ति अलग गर्नलाई अभिषेक गरे ।
12 ಅವನು ಅಭಿಷೇಕ ತೈಲದಿಂದ ಆರೋನನ ತಲೆಯ ಮೇಲೆ ಸುರಿದು, ಅವನನ್ನು ಪವಿತ್ರ ಮಾಡುವುದಕ್ಕಾಗಿ ಅವನನ್ನು ಅಭಿಷೇಕಿಸಿದನು.
उनले केही अभिषेक गर्ने तेल हारूनको शिरमा खन्याए र तिनलाई पनि परमप्रभुको निम्ति अलग गर्नलाई अभिषेक गरे ।
13 ಮೋಶೆಯು ಆರೋನನ ಪುತ್ರರನ್ನು ಕರೆದುಕೊಂಡು ಬಂದು ಅವರಿಗೆ ನಿಲುವಂಗಿಗಳನ್ನು ತೊಡಿಸಿ, ಅವರ ನಡುಗಳನ್ನು ನಡುಕಟ್ಟುಗಳಿಂದ ಕಟ್ಟಿ, ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆ ಅವರ ಮೇಲೆ ಕುಲಾಯಿಗಳನ್ನು ಹಾಕಿದನು.
मोशाले हारूनका छोराहरूलाई ल्याएर दौरा पहिराइदिए । परमप्रभुले उनलाई आज्ञा गर्नुभएअनुसार उनले तिनीहरूका कम्मरमा फिता लगाइदिए र तिनीहरूका शिरमा सुतीको कपडाको फेटा बेरिदिए ।
14 ಪಾಪ ಪರಿಹಾರದ ಬಲಿಗಾಗಿ ಅವನು ಹೋರಿಯನ್ನು ತಂದನು. ಆರೋನನೂ ಅವನ ಪುತ್ರರೂ ಪಾಪ ಪರಿಹಾರದ ಬಲಿಗಾಗಿ ಆ ಹೋರಿಯ ತಲೆಯ ಮೇಲೆ ತಮ್ಮ ಕೈಗಳನ್ನು ಇಟ್ಟರು.
मोशाले पापबलिको साँढे ल्याए, अनि हारून र तिनका छोराहरूले आफ्ना हात त्यस पापबलिको साँढेको टाउकोमाथि राखे ।
15 ಆಗ ಅವನು ಅದನ್ನು ವಧಿಸಿದನು. ಮೋಶೆಯು ಅದರ ರಕ್ತವನ್ನು ತೆಗೆದುಕೊಂಡು, ಬಲಿಪೀಠದ ಸುತ್ತಲೂ ಇರುವ ಕೊಂಬುಗಳ ಮೇಲೆ ತನ್ನ ಬೆರಳಿನಿಂದ ಹಚ್ಚಿ, ಬಲಿಪೀಠವನ್ನು ಶುದ್ಧೀಕರಿಸಿ, ಉಳಿದ ರಕ್ತವನ್ನು ಬಲಿಪೀಠದ ಅಡಿಯಲ್ಲಿ ಹೊಯ್ದನು. ಅದರ ಮೇಲೆ ಪ್ರಾಯಶ್ಚಿತ್ತ ಮಾಡುವುದಕ್ಕಾಗಿ ಅದನ್ನು ಪವಿತ್ರ ಮಾಡಿದನು.
उनले त्यो मारे, र रगत लिएर आफ्नो औँलाले वेदीका सिङहरूमा लगाए, अनि वेदीलाई पवित्र गराएर वेदीको फेदमा रगत खन्याए, र त्यसको निम्ति प्रायश्चित्त गर्नलाई वेदीलाई परमप्रभुको निम्ति अलग गरे ।
16 ಕರುಳುಗಳ ಮೇಲಿರುವ ಎಲ್ಲಾ ಕೊಬ್ಬನ್ನೂ ಕಾಳಿಜದ ಮೇಲಿರುವ ಕೊಬ್ಬನ್ನೂ ಎರಡು ಮೂತ್ರ ಜನಕಾಂಗಗಳನ್ನೂ ಅವುಗಳ ಕೊಬ್ಬನ್ನೂ ಮೋಶೆಯು ತೆಗೆದುಕೊಂಡು ಬಲಿಪೀಠದ ಮೇಲೆ ಸುಟ್ಟನು.
मोशाले भित्री भागहरूमा भएका सबै बोसो, कलेजोलाई ढाक्ने भाग, दुवै मृगौला र तिनका बोसो लिए र ती सबै वेदीमा जलाए ।
17 ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆಯೇ ಹೋರಿಯ ಮಾಂಸವನ್ನೂ, ಅದರ ಚರ್ಮವನ್ನೂ, ಅದರ ಸಗಣಿಯನ್ನೂ ಅವನು ಪಾಳೆಯದ ಹೊರಗೆ ಬೆಂಕಿಯಿಂದ ಸುಟ್ಟನು.
तर परमप्रभुले उनलाई आज्ञा गर्नुभएझैँ उनले त्यो साँढे, त्यसको छाला, त्यसको मासु, र गोबरलाई छाउनीबाहिर जलाए ।
18 ದಹನಬಲಿಗಾಗಿ ಟಗರನ್ನು ತಂದನು. ಆರೋನನು ಮತ್ತು ಅವನ ಪುತ್ರರು ಆ ಟಗರಿನ ತಲೆಯ ಮೇಲೆ ತಮ್ಮ ಕೈಗಳನ್ನು ಇಟ್ಟರು.
मोशाले होमबलिको निम्ति भेडालाई अर्पण गरे, अनि हारून र तिनका छोराहरूले आफ्ना हात त्यस भेडाको शिरमा राखे ।
19 ಅವನು ಅದನ್ನು ವಧಿಸಿದನು. ತರುವಾಯ ಮೋಶೆಯು ರಕ್ತವನ್ನು ಬಲಿಪೀಠದ ಮೇಲೆ ಸುತ್ತಲೂ ಚಿಮುಕಿಸಿದನು.
उनले त्यो मारे र त्यसको रगतलाई वेदीको सबैतिर छर्के ।
20 ಅವನು ಆ ಟಗರನ್ನು ತುಂಡುತುಂಡಾಗಿ ಮಾಡಿದನು. ಮೋಶೆಯು ತಲೆಯನ್ನು, ಆ ತುಂಡುಗಳನ್ನು, ಆ ಕೊಬ್ಬನ್ನು ಸುಟ್ಟನು.
उनले त्यस भेडालाई टुक्रा-टुक्रा गरी काटे र त्यसको टाउको, ती टुक्राहरू र बोसोलाई जलाए ।
21 ಅವನು ಕರುಳುಗಳನ್ನೂ, ಕಾಲುಗಳನ್ನೂ ನೀರಿನಲ್ಲಿ ತೊಳೆದನು. ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆಯೇ ಆ ಟಗರನ್ನು ಪೂರ್ಣವಾಗಿ ಬಲಿಪೀಠದ ಮೇಲೆ ಸುಟ್ಟನು. ಇದು ದಹನಬಲಿಯಾಗಿ ಯೆಹೋವ ದೇವರಿಗೆ ಬೆಂಕಿಯಿಂದ ಮಾಡಿದ ಸುವಾಸನೆಯ ಸಮರ್ಪಣೆಯಾಗಿತ್ತು.
उनले त्यसका भित्री भागहरू र खुट्टाहरूलाई पानीले पखाले, र पुरै भेडालाई वेदीमा जलाए । त्यो होमबलि थियो र परमप्रभुले मोशालाई आज्ञा गर्नुभएझैँ त्यसले परमप्रभुको निम्ति आगोद्वारा चढाइने बलिदानस्वरूप मिठो सुगन्ध दियो ।
22 ಅವನು ಪ್ರತಿಷ್ಠೆಯ ಟಗರಾದ ಇನ್ನೊಂದು ಟಗರನ್ನು ತಂದನು. ಆಗ ಆರೋನನೂ, ಅವನ ಪುತ್ರರೂ ಆ ಟಗರಿನ ತಲೆಯ ಮೇಲೆ ತಮ್ಮ ಕೈಗಳನ್ನು ಇಟ್ಟರು.
अनि मोशाले अर्को भेडा, अर्थात् पवित्रीकरणको भेडा पनि अर्पण गरे, अनि हारून र तिनका छोराहरूले आफ्ना हात त्यस भेडाको शिरमा राखे ।
23 ಮೋಶೆಯು ಅದನ್ನು ವಧಿಸಿ, ಅದರ ರಕ್ತವನ್ನು ತೆಗೆದುಕೊಂಡು ಅದನ್ನು ಆರೋನನ ಬಲಗಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೆಟ್ಟಿಗೂ ಹಚ್ಚಿದನು.
हारूनले त्यो मारे, र मोशाले त्यसको केही रगत लिएर हारूनको दाहिने कानको टुप्पो, दाहिने हातको बुढी औँला, र दाहिने खुट्टाको बुढी औँलामा लगाइदिए ।
24 ಮೋಶೆಯು ಆರೋನನ ಪುತ್ರರನ್ನು ಕರೆತಂದು ಅವರ ಬಲಗಿವಿಯ ತುದಿಯ ಮೇಲೆಯೂ, ಅವರವರ ಬಲಗೈಯ ಹೆಬ್ಬೆರಳಿಗೂ, ಅವರವರ ಬಲಗಾಲಿನ ಹೆಬ್ಬೆಟ್ಟಿಗೂ ಆ ರಕ್ತವನ್ನು ಹಚ್ಚಿ, ಆ ರಕ್ತವನ್ನು ಬಲಿಪೀಠದ ಸುತ್ತಲೂ ಚಿಮುಕಿಸಿದನು.
उनले हारूनका छोराहरूलाई ल्याए, र तिनीहरूका दाहिने कानको टुप्पो, दाहिने हातको बुढी औँला र दाहिने खुट्टाको बुढी औँलामा केही रगत लगाइदिए । त्यसपछि मोशाले त्यसको रगत वेदीको सबैतिर छर्के ।
25 ಅವನು ಕೊಬ್ಬನ್ನೂ ಬಾಲವನ್ನೂ ಕರುಳುಗಳ ಮೇಲಿರುವ ಎಲ್ಲಾ ಕೊಬ್ಬನ್ನೂ ಕಾಳಿಜದ ಮೇಲಿರುವ ಕೊಬ್ಬನ್ನೂ ಎರಡು ಮೂತ್ರ ಜನಕಾಂಗಗಳನ್ನೂ ಅವುಗಳ ಕೊಬ್ಬನ್ನೂ ಬಲದೊಡೆಯನ್ನೂ ತೆಗೆದುಕೊಂಡನು.
उनले बोसो, बोसे-पुच्छर, भित्री भागहरूमा भएका सबै बोसो, कलेजोलाई ढाक्ने भाग, दुवै मृगौला र त्यसको बोसो, र दाहिने फिला लिए ।
26 ಯೆಹೋವ ದೇವರ ಸನ್ನಿಧಿಯಲ್ಲಿರುವ ಹುಳಿಯಿಲ್ಲದ ರೊಟ್ಟಿಯ ಪುಟ್ಟಿಯೊಳಗಿಂದ ಒಂದು ರೊಟ್ಟಿಯನ್ನೂ ಎಣ್ಣೆಯ ಒಂದು ಹೋಳಿಗೆಯನ್ನೂ ಒಂದು ಪೂರಿಯನ್ನೂ ತೆಗೆದುಕೊಂಡು, ಅವುಗಳನ್ನು ಕೊಬ್ಬಿನ ಮೇಲೆಯೂ, ಬಲಭುಜದ ಮೇಲೆಯೂ ಇಟ್ಟನು.
परमप्रभुको सामु भएको अखमिरी रोटीको डालोबाट उनले एउटा अखमिरी रोटी, एउटा तेल मिसाइएको रोटी र एउटा पापड लिएर बोसो र दाहिने फिलामा राखे ।
27 ಅದೆಲ್ಲವನ್ನೂ ಆರೋನನ ಕೈಗಳಿಗೆ ಮತ್ತು ಅವನ ಪುತ್ರರ ಕೈಗಳಿಗೆ ಕೊಟ್ಟು, ಯೆಹೋವ ದೇವರ ಮುಂದೆ ಸಮರ್ಪಣೆಗಾಗಿ ಅವುಗಳನ್ನು ನೈವೇದ್ಯ ಮಾಡಿಸಿದನು.
उनले ती सबै हारून र तिनका छोराहरूका हातमा राखे र डोलाइने बलिस्वरूप परमप्रभुको अगि डोलाए ।
28 ಆಮೇಲೆ ಮೋಶೆಯು ಅವುಗಳನ್ನು ಅವರ ಕೈಗಳಿಂದ ತೆಗೆದುಕೊಂಡು, ಬಲಿಪೀಠದ ಮೇಲೆ ದಹನಬಲಿಯಾಗಿ ಅವುಗಳನ್ನು ಸುಟ್ಟನು. ಅವು ಯೆಹೋವ ದೇವರಿಗೆ ಬೆಂಕಿಯಿಂದ ಸಮರ್ಪಿಸಿದ ಸುಗಂಧಕರ ಪ್ರತಿಷ್ಠೆಯ ಬಲಿಯಾಗಿದ್ದವು.
त्यसपछि मोशाले ती सबै तिनीहरूका हातबाट लिए र होमबलिको निम्ति वेदीमा जलाए । मिठो सुगन्ध दिने अभिषेकको बलि यही थियो ।
29 ಮೋಶೆಯು ಟಗರಿನ ಎದೆಯ ಭಾಗವನ್ನು ತೆಗೆದುಕೊಂಡು ನೈವೇದ್ಯವಾಗಿ ಯೆಹೋವ ದೇವರ ಸನ್ನಿಧಿಯಲ್ಲಿ ನಿವಾಳಿಸಿದನು. ಏಕೆಂದರೆ ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆಯೇ ಪ್ರತಿಷ್ಠಿತ ಟಗರು ಮೋಶೆಯ ಪಾಲಾಗಿತ್ತು.
मोशाले रोटी लिए र परमप्रभुको निम्ति डोलाइने बलिको रूपमा डोलाए । परमप्रभुले मोशालाई आज्ञा गर्नुभएझैँ पुजारी-अर्पणको भेडा मोशाकै भाग थियो ।
30 ಮೋಶೆಯು ಅಭಿಷೇಕ ತೈಲವನ್ನೂ, ಬಲಿಪೀಠದ ಮೇಲಿರುವ ರಕ್ತವನ್ನೂ ತೆಗೆದುಕೊಂಡು, ಆರೋನನ ಮೇಲೆಯೂ, ಅವನ ಉಡುಪುಗಳ ಮೇಲೆಯೂ ಅವನೊಂದಿಗೆ ಅವನ ಪುತ್ರರ ಮೇಲೆಯೂ, ಅವರ ಉಡುಪುಗಳ ಮೇಲೆಯೂ ಚಿಮುಕಿಸಿದನು. ಆರೋನನನ್ನೂ, ಅವನ ಉಡುಪುಗಳನ್ನೂ, ಅವನೊಂದಿಗೆ ಅವನ ಪುತ್ರರನ್ನೂ, ಅವನ ಪುತ್ರರ ಉಡುಪುಗಳನ್ನೂ ಪವಿತ್ರ ಮಾಡಿದನು.
मोशाले वेदीमा भएको केही अभिषेक गर्ने तेल र रगत लिए, अनि हारून, तिनका वस्त्र, तिनका छोराहरू र तिनीसँगै तिनका छोराहरूका वस्त्रमा छर्किदिए । यसरी उनले हारून र तिनका वस्त्र, र तिनका छोराहरू र तिनीहरूका वस्त्र सबै परमप्रभुको निम्ति अलग गरे ।
31 ಮೋಶೆಯು ಆರೋನನಿಗೂ, ಅವನ ಪುತ್ರರಿಗೂ, “ದೇವದರ್ಶನದ ಗುಡಾರದ ಬಾಗಿಲ ಬಳಿಯಲ್ಲಿ ಆ ಮಾಂಸವನ್ನು ಬೇಯಿಸಿರಿ. ಅದನ್ನು ಪ್ರತಿಷ್ಠಿತ ಬುಟ್ಟಿಯೊಳಗಿರುವ ರೊಟ್ಟಿಯೊಡನೆ ತಿನ್ನಬೇಕು. ನಾನು ಆಜ್ಞಾಪಿಸಿ ಹೇಳಿದಂತೆ, ‘ಆರೋನನು ಮತ್ತು ಅವನ ಪುತ್ರರು ಅದನ್ನು ತಿನ್ನಬೇಕು.’
यसैकारण मोशाले हारून र तिनका छोराहरूलाई भने, “भेट हुने पालको प्रवेशद्वारमा मासुलाई उमाल्नू, र मैले ‘हारून र तिनका छोराहरूले खाऊन्’ भनेर आज्ञा गरेझैँ अभिषेकको डालोमा भएको रोटीसहित त्यसलाई त्यहीँ खाओ ।
32 ಮಾಂಸದಲ್ಲಿಯೂ, ರೊಟ್ಟಿಯಲ್ಲಿಯೂ ಉಳಿದದ್ದನ್ನು ನೀವು ಬೆಂಕಿಯಿಂದ ಸುಡಬೇಕು.
मासु र रोटीबाट जे बाँकी हुन्छ त्यसलाई जलाउनू ।
33 ಇದಲ್ಲದೆ ನಿಮ್ಮ ಪ್ರತಿಷ್ಠೆಯ ದಿನದ ಕೊನೆಗೊಳ್ಳುವುದಕ್ಕೆ ಏಳು ದಿವಸ ಹಿಡಿಯುವುದರಿಂದ ನೀವು ದೇವದರ್ಶನದ ಗುಡಾರದ ಬಾಗಿಲಿನಿಂದ ಹೊರಗೆ ಹೋಗಬಾರದು.
तिमीहरूको अर्पणको काम पुरा नभएसम्म अर्थात् सात दिनसम्म भेट हुने पालको प्रवेशद्वारभन्दा बाहिर नजानू । किनभने परमप्रभुले तिमीहरूलाई सात दिनसम्म अभिषेक गर्नुहुने छ ।
34 ನಿಮ್ಮ ದೋಷಪರಿಹಾರಕ್ಕಾಗಿ ಈ ಹೊತ್ತು ಏನೇನು ನಡೆಯಿತೋ ಅದನ್ನು ಏಳು ದಿನವೂ ನಡೆಸಬೇಕೆಂದು ಯೆಹೋವ ದೇವರು ಆಜ್ಞಾಪಿಸಿದ್ದಾರೆ.
आजको दिनमा जे गरियो, त्यो तिमीहरूको प्रायश्चित्तको निम्ति परमप्रभुले आज्ञा गर्नुभएको हो ।
35 ಆದ್ದರಿಂದ ಏಳು ದಿನಗಳವರೆಗೆ ನೀವು ಸಾಯದಂತೆ ಹಗಲೂ ರಾತ್ರಿ ದೇವದರ್ಶನದ ಗುಡಾರದ ಬಾಗಿಲ ಬಳಿಯಲ್ಲಿ ಯೆಹೋವ ದೇವರ ಆಜ್ಞೆಯನ್ನು ಕೈಗೊಳ್ಳಬೇಕು. ಏಕೆಂದರೆ ಹಾಗೆಯೇ ನನಗೆ ಅಪ್ಪಣೆಯಾಗಿದೆ,” ಎಂದನು.
तिमीहरू भेट हुने पालको प्रवेशद्वारमा सात दिनसम्म दिन र रात बस्नू, र परमप्रभुको आज्ञा मान्नू, अनि तिमीहरू मर्ने छैनौ, किनभने मलाई यस्तै आज्ञा भएको छ ।”
36 ಹೀಗೆ ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರವೇ ಎಲ್ಲವನ್ನೂ, ಆರೋನನೂ, ಅವನ ಪುತ್ರರೂ ಮಾಡಿದರು.
यसैकारण हारून र तिनका छोराहरूले परमप्रभुले मोशाद्वारा आज्ञा गर्नुभएका सबै कुरा गरे ।